Kitchen Hacks: ಅನ್ನ ಉಳಿಯಿತು ಅಂತ ಎಸೆಯಬೇಡಿ, ಹೊಸ ರೂಪ ಕೊಟ್ಟು ಮಕ್ಕಳ ಲಂಚ್‌ಬಾಕ್ಸ್‌ಗೆ ರುಚಿಯಾದ ಸ್ನಾಕ್ಸ್‌ ತಯಾರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Hacks: ಅನ್ನ ಉಳಿಯಿತು ಅಂತ ಎಸೆಯಬೇಡಿ, ಹೊಸ ರೂಪ ಕೊಟ್ಟು ಮಕ್ಕಳ ಲಂಚ್‌ಬಾಕ್ಸ್‌ಗೆ ರುಚಿಯಾದ ಸ್ನಾಕ್ಸ್‌ ತಯಾರಿಸಿ

Kitchen Hacks: ಅನ್ನ ಉಳಿಯಿತು ಅಂತ ಎಸೆಯಬೇಡಿ, ಹೊಸ ರೂಪ ಕೊಟ್ಟು ಮಕ್ಕಳ ಲಂಚ್‌ಬಾಕ್ಸ್‌ಗೆ ರುಚಿಯಾದ ಸ್ನಾಕ್ಸ್‌ ತಯಾರಿಸಿ

Leftover Rice Dishes: ಉಳಿದ ಅನ್ನ ಬಳಸಿಕೊಂಡು ಮಕ್ಕಳ ಊಟದ ಡಬ್ಬಿ ಅಥವಾ ಬೆಳಗ್ಗಿನ ಉಪಹಾರಕ್ಕೆ ಹೊಸರುಚಿ ತಯಾರಿಸಬಹುದು. ಇದನ್ನು ತಯಾರಿಸಲು ಬಹಳ ಸಮಯ ಬೇಕಿಲ್ಲ. ಕಡಿಮೆ ಸಮಯದಲ್ಲಿ ಮಕ್ಕಳ ರುಚಿಗೆ ಅನುಗುಣವಾಗಿ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇಲ್ಲಿ ಕೆಲವು ಪಾಕವಿಧಾನಗಳಿವೆ. ನಿಮ್ಮಿಷ್ಟದ ಹೊಸರುಚಿ ಇಂದೇ ಪ್ರಯತ್ನಿಸಿ. (ಬರಹ: ಅರ್ಚನಾ ವಿ. ಭಟ್‌)

Kitchen Hacks: ಅನ್ನ ಉಳಿದರೆ ಹೀಗೆ ಮಾಡಿ, ಮಕ್ಕಳಿಗೂ ಇಷ್ಟವಾಗುತ್ತೆ
Kitchen Hacks: ಅನ್ನ ಉಳಿದರೆ ಹೀಗೆ ಮಾಡಿ, ಮಕ್ಕಳಿಗೂ ಇಷ್ಟವಾಗುತ್ತೆ

ಮಕ್ಕಳ ಊಟದ ಡಬ್ಬಿಗೆ ಏನನ್ನು ಕಟ್ಟುವುದು, ಇದು ಕೆಲಸಕ್ಕೆ ಹೋಗುವವರ ಪ್ರತಿದಿನದ ಬಹಳ ದೊಡ್ಡ ಸಮಸ್ಯೆ. ಚಿಕ್ಕ ಮಕ್ಕಳಿಗೆ ಇಷ್ಟವಾಗುವ ಮತ್ತು ಅಷ್ಟೇ ಆರೋಗ್ಯ ಪೂರ್ಣವಾಗಿರುವ ತಿಂಡಿ ತಯಾರಿಸಿರುವುದು ಗೊಂದಲದ ವಿಷಯ. ನಿಮ್ಮ ಸಮಸ್ಯೆ ದೂರಮಾಡಲು ಇಲ್ಲಿ ಕೆಲವು ರುಚಿಕರ ಪಾಕವಿಧಾನಗಳಿವೆ. ಇದನ್ನು ಉಳಿದ ಅನ್ನ ಬಳಸಿ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಇಲ್ಲಿ ಹೇಳಿರುವ ಸುಲಭದ ಹೊಸರುಚಿ ಪ್ರಯತ್ನಿಸಿ, ನಿಮ್ಮ ಮಕ್ಕಳಿಗೆ ಇಷ್ಟವಾಗುವಂತೆ ಊಟದ ಡಬ್ಬಿ ತಯಾರಿಸಿ.

ಉಳಿದ ಅನ್ನದಿಂದ ತಯಾರಿಸಬಹುದಾದ ಹೊಸ ರುಚಿಗಳು

  • ತರಕಾರಿ ಫ್ರೈಡ್‌ ರೈಸ್‌

ಆರೋಗ್ಯಕರ ತರಕಾರಿ ಫ್ರೈಡ್‌ ರೈಸ್‌ ತಯಾರಿಸಲು ನಿಮ್ಮ ಮತ್ತು ನಿಮ್ಮ ಮಕ್ಕಳ ಇಷ್ಟದ ತರಕಾರಿ (ಬೀನ್ಸ್‌, ಕ್ಯಾರೆಟ್‌, ಆಲೂಗಡ್ಡೆ, ಬಟಾಣಿ, ಈರುಳ್ಳಿ) ಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಪ್ಯಾನ್‌ಗೆ ಅಡುಗೆ ಎಣ್ಣೆ ಹಾಕಿ ಹುರಿಯಿರಿ. ಅದಕ್ಕೆ ಮಸಾಲೆ ಸೇರಿಸಿ. ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು ಮತ್ತು ಸೋಯಾ ಸಾಸ್‌, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅನ್ನ ಸೇರಿಸಿ ಫ್ರೈ ಮಾಡಿ. ತರಕಾರಿ ಫ್ರೈಡ್‌ ರೈಸ್‌ ಸವಿಯಲು ಸಿದ್ಧ.

  • ಅನ್ನದ ಉಂಡೆ (ರೈಸ್‌ ಬಾಲ್ಸ್‌)

ಚಿಕ್ಕದಾಗಿ ಕತ್ತರಿಸಿದ ತರಕಾರಿ, ಮಸಾಲೆ ಪದಾರ್ಥಗಳು, ಸ್ವಲ್ಪ ಡ್ರೈ ಫ್ರೂಟ್ಸ್‌ ಸೇರಿಸಿ ಉಳಿದ ಅನ್ನದ ಜೊತೆ ಸೇರಿಸಿ, ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಸ್ವಲ್ಪ ಎಣ್ಣೆಯಲ್ಲಿ ಹುರಿದರೆ ರೈಸ್‌ ಬಾಲ್ಸ್‌ ರೆಡಿ.

  • ರೈಸ್‌ ಪುಡ್ಡಿಂಗ್‌

ಉಳಿದ ಅನ್ನಕ್ಕೆ ಹಾಲು, ಸಕ್ಕರೆ ಮತ್ತು ಸ್ವಲ್ಪ ವೆನಿಲ್ಲಾ ಎಸೆನ್ಸ್‌ ಸೇರಿಸಿ ಕುದಿಸಿ. ಪುಡ್ಡಿಂಗ್‌ ಗಟ್ಟಿಯಾದ ನಂತರ, ಅದಕ್ಕೆ ಚಕ್ಕೆ (ದಾಲ್ಚಿನ್ನಿ), ಜಾಯಿಕಾಯಿ ಪುಡಿ ಮತ್ತು ಒಣ ದ್ರಾಕ್ಷಿ ಬೆರೆಸಿ. ತಣ್ಣಗಾಗಲು ಬಿಡಿ. ಬೇಕಿದ್ದರೆ ಫ್ರಿಡ್ಜ್‌ನಲ್ಲಿಡಿ. ಮಕ್ಕಳಿಗೆ ಇಷ್ಟವಾಗುವ ರೈಸ್‌ ಪುಡ್ಡಿಂಗ್‌ ಸವಿಯಲು ರೆಡಿ

  • ರೈಸ್‌ ವೆಜಿಟೆಪಲ್‌ ಮಫಿನ್‌

ಈ ರುಚಿಯಾದ ಮಫಿನ್‌ ತಯಾರಿಸಲು, ಉಳಿದ ಅನ್ನಕ್ಕೆ ತುರಿದ ಚೀಸ್, ಚಿಕ್ಕದಾಗಿ ಕತ್ತರಿಸಿದ ತರಕಾರಿಗಳು ಮತ್ತು ಮೊಟ್ಟೆಯನ್ನು ಸೇರಿಸಿ ಮಿಶ್ರಣ ತಯಾರಿಸಿ. ಆ ಮಿಶ್ರಣವನ್ನು ಮಫಿನ್ ಟಿನ್‌ಗಳಿಗೆ ವರ್ಗಾಯಿಸಿ. ಅದು ಸೆಟ್ ಆಗುವವರೆಗೆ ಬೇಕ್‌ ಮಾಡಿ. ಈ ಖಾರದ ಮಫಿನ್‌ಗಳು ಉತ್ತಮ ತಿಂಡಿಯ ಜೊತೆಗೆ ಮಕ್ಕಳ ಊಟದ ಡಬ್ಬಿಗೂ ವಿಶೇಷವಾಗಿರುತ್ತದೆ.

  • ಅನ್ನದ ಸಲಾಡ್

ತರಕಾರಿ ಪ್ರಿಯ ಮಕ್ಕಳಿಗೆ ಸೌತೆಕಾಯಿ, ಟೊಮೆಟೊ, ದಪ್ಪ ಮೆಣಸಿಕಾಯಿ ಮುಂತಾದ ತರಕಾರಿಗಳ ಜೊತೆ ಉಳಿದ ಅನ್ನ ಸೇರಿಸಿ. ಅದಕ್ಕೆ ಮೊಸರು ಸೇರಿಸಿ ಸಲಾಡ್‌ ತಯಾರಿಸಿ. ಮಕ್ಕಳಿಗೆ ಇಷ್ಟವಾಗುವ ಡ್ರೈ ಫ್ರೂಟ್ಸ್‌ನಿಂದ ಅಲಂಕರಿಸಿ.

  • ರೈಸ್‌ ಪ್ಯಾನ್‌ಕೇಕ್‌

ರೈಸ್‌ ಪ್ಯಾನ್‌ಕೇಕ್‌ ತಯಾರಿಸಲು ಉಳಿದ ಅನ್ನವುನ್ನು ಹಿಟ್ಟು, ಮೊಟ್ಟೆ, ಹಾಲು ಮತ್ತು ಸಕ್ಕರೆಯ ಜೊತೆ ಸೇರಿಸಿ. ತವಾದಲ್ಲಿ ಪ್ಯಾನ್‌ ಕೇಕ್‌ ಮಾಡಿ ಜೇನುತುಪ್ಪ ಅಥವಾ ಹಣ್ಣುಗಳನ್ನು ಸೇರಿಸಿ ‌ಸರ್ವ್‌ ಮಾಡಿ.

  • ಸ್ಟಫ್ಡ್ ಪೆಪ್ಪರ್ಸ್

ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಮ್‌) ಅನ್ನು ಅರ್ಧದಷ್ಟು ಕತ್ತರಿಸಿ, ಬೀಜಗಳನ್ನು ತೆಗೆಯಿರಿ. ಅದಕ್ಕೆ ಉಳಿದ ಅನ್ನ, ಬೇಯಿಸಿದ ಚಿಕನ್ ತುಂಡುಗಳು ಮತ್ತು ಚೀಸ್ ಜೊತೆಗೆ ಪರಿಮಳ ಹೆಚ್ಚಿಸುವ ಓರೆಗಾನೊ, ಚಿಲ್ಲಿ ಫ್ಲೇಕ್ಸ್ ಮತ್ತು ಮಸಾಲೆಗಳನ್ನು ಸೇರಿಸಿ. ಅವುಗಳನ್ನು ದಪ್ಪ ಮೆಣಸಿನಕಾಯಿಯೊಳಗೆ ತುಂಬಿಸಿ. ಮೆಣಸಿನಕಾಯಿ ಮೃದುವಾಗುವವರೆಗೆ ಬೇಯಿಸಿ.

  • ಅನ್ನದ ಪರ್ಫೈಟ್

ಉಳಿದಿರುವ ಅನ್ನಕ್ಕೆ ಮೊಸರು ಮತ್ತು ಕತ್ತರಿಸಿದ ಬಾಳೆಹಣ್ಣು ಮತ್ತು ಚೌಕವಾಗಿ ಕತ್ತರಿಸಿದ ಮಾವಿನ ಹಣ್ಣುಗಳನ್ನು ಲೇಯರ್‌ನಂತೆ ಜೋಡಿಸಿ. ಚಿಕ್ಕದಾಗಿ ಕತ್ತರಿಸಿದ ಡ್ರೈ ಫ್ರೂಟ್‌ಗಳಿಂದ ಅಲಂಕರಿಸಿ.

(ಬರಹ: ಅರ್ಚನಾ ವಿ. ಭಟ್‌)

Whats_app_banner