ಮಳೆಗಾಲದಲ್ಲಿ ಕಾಫಿ ಪೌಡರ್‌ ಕೆಡದೆ, ತಾಜಾವಾಗಿರಬೇಕು ಅಂದ್ರೆ ಈ ಸಲಹೆ ಪಾಲಿಸಿ, ಫ್ರೆಶ್‌ ಕಾಫಿ ಕುಡಿಯಿರಿ-kitchen hacks follow these tips to keep your coffee powder fresh during monsoons kitchen tips monsoon tips ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲದಲ್ಲಿ ಕಾಫಿ ಪೌಡರ್‌ ಕೆಡದೆ, ತಾಜಾವಾಗಿರಬೇಕು ಅಂದ್ರೆ ಈ ಸಲಹೆ ಪಾಲಿಸಿ, ಫ್ರೆಶ್‌ ಕಾಫಿ ಕುಡಿಯಿರಿ

ಮಳೆಗಾಲದಲ್ಲಿ ಕಾಫಿ ಪೌಡರ್‌ ಕೆಡದೆ, ತಾಜಾವಾಗಿರಬೇಕು ಅಂದ್ರೆ ಈ ಸಲಹೆ ಪಾಲಿಸಿ, ಫ್ರೆಶ್‌ ಕಾಫಿ ಕುಡಿಯಿರಿ

ಮಳೆಗಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದೇ ಸಮಸ್ಯೆ ಯಾವ ಅಡುಗೆ ಪದಾರ್ಥಗಳೂ ತುಂಬಾ ದಿನ ಉಳಿಯುತ್ತಿಲ್ಲ ಎಂಬುದು. ಅದರಲ್ಲೂ ಕಾಫಿ ಹಾಗೂ ಟೀ ಪುಡಿಗಳು ಕೆಡದಂತೆ ನೋಡಿಕೊಳ್ಳುವುದು ಒಂದು ಸವಾಲು. ಆದರೆ ಅವುಗಳನ್ನು ಕೆಡದಂತೆ ಕಾಪಾಡಲು ನಾವು ನಿಮಗಿಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೇವೆ ಗಮನಿಸಿ.

ಟೀ ಅಥವಾ ಕಾಫಿ ಪುಡಿಯನ್ನು ಮಳೆಗಾಲದಲ್ಲಿ ತಾಜಾ ಇರುವಂತೆ ಮಾಡಿ
ಟೀ ಅಥವಾ ಕಾಫಿ ಪುಡಿಯನ್ನು ಮಳೆಗಾಲದಲ್ಲಿ ತಾಜಾ ಇರುವಂತೆ ಮಾಡಿ

ಮಳೆಗಾಲದಲ್ಲಿ ಕಾಫಿ ಮತ್ತು ಟೀ ಪುಡಿಗಳನ್ನು ತಾಜಾ ಇಡುವುದು ತುಂಬಾ ಕಷ್ಟ. ಯಾಕೆಂದರೆ ವಾತಾವರಣದಲ್ಲೇ ತೇವಾಂಶ ಇರುತ್ತದೆ. ಈ ರೀತಿ ತೇವಾಂಶ ಇದ್ದಾಗ ಅಕ್ಕಿ, ಜೋಳ, ಗೋಧಿ ಈ ಎಲ್ಲ ಹಿಟ್ಟುಗಳು ಸಹ ಮುದ್ದೆಯಾಗಿ ಕೆಡುತ್ತವೆ. ಇವೆಲ್ಲವನ್ನು ತಾಜಾ ಇಟ್ಟುಕೊಳ್ಳಲು ಮಹಿಳೆಯರು ತುಂಬಾ ಕಷ್ಟಪಡುತ್ತಾರೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ನೀವು ಯೋಚನೆ ಮಾಡುತ್ತಾ ಇದ್ದರೆ ನಾವು ನಿಮಗಿಲ್ಲಿ ಸಹಾಯವಾಗಬಲ್ಲ ಕೆಲವು ಸಲಹೆಗಳನ್ನು ನೀಡಿದ್ದೇವೆ ಗಮನಿಸಿ.

ಸಣ್ಣ ಡಬ್ಬಿ ಬಳಸಿ

ಮಳೆಯಲ್ಲಿ ಸ್ವಲ್ಪ ಚಳಿ ಜಾಸ್ತಿ ಇರುವ ಕಾರಣ ಎಲ್ಲರಿಗೂ ಬಿಸಿ ಬಿಸಿಯಾಗಿ ಟೀ ಅಥವಾ ಕಾಫಿ ಕುಡಿಯೋಣ ಎಂದು ಅನಿಸುತ್ತದೆ. ಅದೇ ಕಾರಣಕ್ಕೆ ಪದೇ ಪದೇ ಟೀ ಅಥವಾ ಕಾಫಿ ಪೌಡರ್‌ ಬಾಕ್ಸ್‌ಅನ್ನು ಓಪನ್‌ ಮಾಡಬೇಕಾಗುತ್ತದೆ. ಹೀಗೆ ಹಲವಾರು ಸಾರಿ ಮುಚ್ಚಳ ತೆಗೆದು, ಹಾಕಿ ಮಾಡುವುದರಿಂದ ಅದು ಕೆಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಿದ್ದಾಗ ನೀವು ಏನು ಮಾಡಬೇಕು ಎಂದರೆ ಒಂದು ಸಣ್ಣ ಡಬ್ಬಿಗೆ ಚಹಾ ಅಥವಾ ಕಾಫಿ ಪುಡಿಯನ್ನು ವರ್ಗಾವಣೆ ಮಾಡಿ. ಒಂದು ವಾರಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಿ.

ಒಂದು ತಿಂಗಳಿಗಾಗುವಷ್ಟು ಪುಡಿಯನ್ನು ದಿನ ನಿತ್ಯ ಬಳಸುವ ಬಾಕ್ಸ್‌ಗೆ ಹಾಕಬೇಡಿ ಅಥವಾ ನೀವು ತಂದ ಪ್ಯಾಕನ್ನೇ ಪದೇ ಪದೇ ಬಳಸಬೇಡಿ. ಹೀಗೆ ಮಾಡಿದರೆ ಎಲ್ಲ ಪುಡಿಯೂ ಹಾಳಾಗಿ ಹೋಗುತ್ತದೆ. ಅಗತ್ಯಕ್ಕೆ ತಕ್ಕಷ್ಟನ್ನು ಮಾತ್ರ ಹೊರಗಡೆ ತೆಗೆದುಕೊಂಡು ಅದನ್ನೇ ಉಪಯೋಗಿಸಿ.

ಸ್ವಲ್ಪ ಬೆಚ್ಚಗಿನ ಜಾಗ ಆರಿಸಿ

ನೀವು ಸ್ವಲ್ಪ ಬೆಚ್ಚಗಿನ ಜಾಗವನ್ನು ಆಯ್ಕೆ ಮಾಡಿ ಇನ್ನು ಮುಂದಿನ ದಿನಗಳಲ್ಲಿ ಅದೇ ಜಾಗದಲ್ಲಿ ಟೀ ಅಥವಾ ಕಾಫಿ ಪುಡಿಯನ್ನು ಇಡಲು ಆರಂಭಿಸಿ. ನೀವು ನಿತ್ಯ ಬಳಕೆ ಮಾಡುವ ಗ್ಯಾಸ್‌ ಕಟ್ಟೆಯ ಮೇಲ್ಬಾಗದಲ್ಲಿ ಜಾಗ ಇದ್ದರೆ ಅದನ್ನು ಅಲ್ಲೇ ಇಡಿ. ಹೀಗೆ ಮಾಡುವುದರಿಂದ ಅದು ಬಿಸಿಯಾಗಿ ತೇವಾಂಶ ಮುಕ್ತವಾಗಿರುತ್ತದೆ.

ಸಿಲಿಕಾ ಜೆಲ್ ಪ್ಯಾಕ್

ಸಿಲಿಕಾ ಜೆಲ್ ಪ್ಯಾಕ್ನಲ್ಲಿ ಕಾಫಿ ಪುಡಿಯನ್ನು ಸಂಗ್ರಹಿಸಲು ಉತ್ತಮ ಮಾರ್ಗವಾಗಿದೆ. ತೇವಾಂಶವನ್ನು ಹೀರಿಕೊಳ್ಳಲು ಇದು ಸಹಾಯ ಮಾಡುತ್ತದೆ. ಅಂದರೆ ಸಾಮಾನ್ಯವಾಗಿ ನೀವು ಇದನ್ನು ಆಫೀಸ್‌ ಹಾಗೂ ಹೊಟೆಲ್‌ಗಳಲ್ಲಿ ನೋಡಿರುತ್ತೀರಾ. ಇವುಗಳನ್ನು ಹೆಚ್ಚಾಗಿ ಟೀ ಪುಡಿಯ ಪೌಚ್‌ಗಳಲ್ಲಿ ಬಳಸಾಗುತ್ತದೆ. ಇದನ್ನು ನೀರಿನಲ್ಲಿ ಅದ್ದಿದ ನಂತರ ಅದು ತನ್ನ ಬಣ್ಣ ಹಾಗೂ ರುಚಿಯನ್ನು ಬಿಡುತ್ತದೆ. ಈ ರೀತಿಯ ಸಿಲಿಕಾ ಜೆಲ್ ಪ್ಯಾಕ್ನಲ್ಲಿ ಸಂಗ್ರಹಿಸುವುದು ಸಹ ಉತ್ತಮ.

ಈ ಪ್ಯಾಕ್ಗಳು ​​ಸಾಮಾನ್ಯವಾಗಿ ಎಲೆಕ್ಟ್ರಾನಿಕ್‌ ಐಟಮ್‌ಗಳಿರುವ ಬ್ಯಾಗ್‌ನಲ್ಲೂ ಕಂಡುಬರುತ್ತದೆ. ಕ್ಯಾಮರಾ ಬ್ಯಾಗ್‌, ಹಾಗೂ ಎಲೆಕ್ಟ್ರಾನಿಕ್‌ ಬ್ಯಾಟರಿ ಇರುವಲ್ಲಿಯೂ ಇವುಗಳನ್ನು ಬಳಸಲಾಗುತ್ತದೆ.

ಗಾಳಿಯಾಡದ ಡಬ್ಬಿ

ಗಾಳಿ ಆಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಡುವುದು ತುಂಬಾ ಮುಖ್ಯ. ಇನ್ನು ಮುಚ್ಚಳ ಮುಚ್ಚುವ ಸಂದರ್ಭದಲ್ಲಿ ಸರಿಯಾಗಿ ಮುಚ್ಚಿದ್ದೀರಾ ಅಥವಾ ಅರ್ಧ ತೆರೆದಿದ್ದೀರಾ ಎಂಬುದನ್ನು ಸರಿಯಾಗಿ ನೋಡಿ ಮುಚ್ಚಳ ಭದ್ರಪಡಿಸಿ