Peel Garlic: ಇನ್ಮುಂದೆ ಬೆಳ್ಳುಳ್ಳಿ ಸುಲಿಯಲು ನೀವು ಕಷ್ಟಪಡಬೇಕಿಲ್ಲ, ಇಲ್ಲಿ ನಾವು ನೀಡಿರುವ ಸುಲಭ ವಿಧಾನ ಪಾಲಿಸಿದರೆ ಬೇಗ ಸುಲಿಬಹುದು
Kitchen Hacks: ಇನ್ಮುಂದೆ ಬೆಳ್ಳುಳ್ಳಿ ಸುಲಿಯಲು ನೀವು ಕಷ್ಟಪಡಬೇಕಿಲ್ಲ, ಇಲ್ಲಿ ನಾವು ನೀಡಿರುವ ಸುಲಭ ವಿಧಾನ ಪಾಲಿಸಿದರೆ ಪಟ್ ಅಂತ ಸುಲಿಬಹುದು. ಹಾಗಾದ್ರೆ ನೀವು ಏನು ಮಾಡಬೇಕು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಒಂದರೆರಡು ಎಸಳು ಬೆಳ್ಳುಳ್ಳಿಯನ್ನು ಹೇಗೋ ಸಲುಭವಾಗಿ ಕೈಯ್ಯಲ್ಲೇ ಸುಲಿದು ಹಾಕಬಹುದು. ಆದರೆ ಭಾರೀ ಪ್ರಮಾಣದಲ್ಲಿ ಸುಲಿಯಬೇಕು ಎಂದರೆ ತಲೆಕೆಟ್ಟು ಹೋಗುತ್ತದೆ. ಅದರಲ್ಲೂ ಈ ಸಮಾರಂಭಗಳಲ್ಲಿ ದೊಡ್ಡ ಅಡುಗೆ ಮಾಡಬೇಕು ಎಂದರೆ ಬೆಳ್ಳುಳ್ಳಿಯೇ ಒಂದು ದೊಡ್ಡ ಸಮಸ್ಯೆ ಆಗಿರುತ್ತದೆ. ಹೀಗಿರುವಾಗ ಬೆಳ್ಳುಳ್ಳಿ ಸುಲಿಯಲು ಸುಲಭ ವಿಧಾನ ಕಂಡುಕೊಂಡರೆ ಖಂಡಿತ ನೀವು ಯಾವತ್ತೂ ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇನ್ನು ಮನೆಗಳಲ್ಲಿ ಉಪ್ಪಿನ ಕಾಯಿ ಮಾಡಬೇಕು ಎಂದರೂ ನೀವು ಹೆಚ್ಚಿಗೆ ಬೆಳ್ಳುಳ್ಳಿಯನ್ನು ಸುಲಿಯಬೇಕಾಗುತ್ತದೆ. ಅಂತಹ ಸಂದರ್ಭದಲ್ಲೂ ಇದು ನಿಮ್ಮ ಸಹಾಯಕ್ಕೆ ಬರುತ್ತದೆ.
ಬೆಳ್ಳುಳ್ಳಿ ಸುಲಿಯುವ ಸುಲಭ ವಿಧಾನಗಳು
ಮೈಕ್ರೋವೇವ್: ನೀವು ಕೆಲಹೊತ್ತು ಇದರಲ್ಲಿ ಬೆಳ್ಳುಳ್ಳಿಯನ್ನು ಬಿಸಿ ಮಾಡಿ ನಂತರ ಅದರ ಹೊರಗಿನ ಪದರವು ಗರಿಗರಿಯಾಗುತ್ತದೆ. ಅದು ಗರಿಯಾದ ನಂತರ ಅದರ ಹೊರಗಿನ ಭಾಗವು ತುಂಬಾ ಸುಲಭವಾಗಿ ತೆಗೆಯಲು ಬರುತ್ತದೆ. ಈ ರೀತಿ ಮಾಡುವುದರಿಂದ ನೀವು ಯಾವುದೇ ಕಿರಿ ಕಿರಿ ಇಲ್ಲದೇ ಅವುಗಳ ಸಿಪ್ಪೆಯನ್ನು ತೆಗೆಯಬಹುದು. ಅದೇ ರೀತಿ ನೀವು ಒಂದು ತವಾ ತೆಗೆದುಕೊಂಡು ಅದರಲ್ಲಿ ಕೆಲವು ಬೆಳ್ಳುಳ್ಳಿ ದಳಗಳನ್ನು ಹಾಕಿ ನಂತರ ಅದನ್ನು ಆಡಿಸುತ್ತಾ ಇರಿ. ಆಗ ಕೆಲವು ಸಿಪ್ಪೆಗಳು ತನ್ನಿಂದ ತಾನೇ ತೆಗೆದುಕೊಳ್ಳುತ್ತವೆ. ಇನ್ನುಳಿದವುಗಳನ್ನು ನೀವೇ ಸುಲಭವಾಗಿ ತೆಗೆದುಹಾಕಬಹುದು.
ಬಟ್ಟಲಿನ ಮೂಲಕ ತೆಗೆಯಿರಿ
ಎಡರು ಬಟ್ಟಲುಗಳನ್ನು ಇಟ್ಟುಕೊಳ್ಳಿ. ಒಂದು ಬಟ್ಟಲನ್ನು ಉಲ್ಟಾ ಮಾಡಿಕೊಂಡು ಅದರ ಮೇಲೆ ಬೆಳ್ಳುಳ್ಳಿಗಳನ್ನು ಹಾಕಿಕೊಳ್ಳಿ. ನಂತರ ಇನ್ನೊಂದು ಬಟ್ಟಲಿನ ಹಿಂಬದಿಯಿಂದ ಅದರ ಮೇಲೆ ಸ್ವಲ್ಪ ಬಲ ಪ್ರಯೋಗ ಮಾಡಿ ಆಡಿಸಿ. ಆಗ ಸಿಪ್ಪೆಗಳು ತನ್ನಿಂದ ತಾನೇ ತೆಗೆದುಕೊಳ್ಳುತ್ತವೆ.
ಬುಡದ ಭಾಗ ಕಟ್ ಮಾಡಿ
ನೀವು ಬೆಳ್ಳುಳ್ಳಿ ಗಡ್ಡೆಯ ಮೇಲಿನ ಭಾಗವನ್ನು ಕಟ್ ಮಾಡಿ. ಈ ರೀತಿ ಮಾಡಿದಾಗ ಅದರ ಸಿಪ್ಪೆಗಳು ಬಹಳ ಸುಲಭವಾಗಿ ತೆಗೆಯಲು ಬರುತ್ತದೆ. ಇಲ್ಲವಾದಲ್ಲಿ ನಿಮ್ಮ ಉಗುರುಗಳು ನೋವಾಗಲು ಆರಂಭಿಸುತ್ತದೆ.
ಕುದಿಯುವ ನೀರಿನಲ್ಲಿ ಹಾಕಿ
ಕುದಿಯುವ ನೀರಿನಲ್ಲಿ ಸುಮಾರು ಐದು ನಿಮಿಷಗಳ ಕಾಲ ಬೇಯಿಸಿ. ನಂತರ ಅದನ್ನು ಹೊರಕ್ಕೆ ತೆಗೆದು ಒಂದು ಬಟ್ಟೆ ಮೇಲೆ ಹಾಕಿಕೊಳ್ಳಿ. ಅದಾದ ನಂತರದಲ್ಲಿ ಸ್ವಲ್ಪ ತಣಿದಾದ ಮೇಲೆ ನೀವು ಅದರ ಸಿಪ್ಪೆಯನ್ನು ಬಿಡಿಸಬಹುದು. ಈ ರೀತಿ ಬೆಳ್ಳುಳ್ಳಿ ಅರ್ಧ ಬೆಂದರೂ ಪರವಾಗಿಲ್ಲ ಎನ್ನುವಂತ ಸನ್ನಿವೇಷದಲ್ಲಿ ಮಾತ್ರ ಇದು ಪ್ರಯೋಜನಕ್ಕೆ ಬರುತ್ತದೆ. ಹಸಿಯಯಾದ ಬೆಳ್ಳುಳ್ಳಿಯೇ ಬೇಕು ಎಂದಾದರೆ ನೀವು ಯಾವುದಾದರೂ ಬೇರೆ ವಿಧಾನವನ್ನು ಟ್ರೈ ಮಾಡಬೇಕಾಗುತ್ತದೆ.
ವಿಭಾಗ