ಗ್ಲಾಸ್‌ ಸ್ಟೋವನ್ನು ಹೇಗೆ ಕ್ಲೀನ್‌ ಮಾಡ್ತಿದ್ದೀರಿ; ಸ್ಕ್ರಾಚ್‌ ಆಗದೆ ಹೊಸತರಂತೆ, ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಸಿಂಪಲ್‌ ಟಿಪ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಗ್ಲಾಸ್‌ ಸ್ಟೋವನ್ನು ಹೇಗೆ ಕ್ಲೀನ್‌ ಮಾಡ್ತಿದ್ದೀರಿ; ಸ್ಕ್ರಾಚ್‌ ಆಗದೆ ಹೊಸತರಂತೆ, ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಸಿಂಪಲ್‌ ಟಿಪ್ಸ್‌

ಗ್ಲಾಸ್‌ ಸ್ಟೋವನ್ನು ಹೇಗೆ ಕ್ಲೀನ್‌ ಮಾಡ್ತಿದ್ದೀರಿ; ಸ್ಕ್ರಾಚ್‌ ಆಗದೆ ಹೊಸತರಂತೆ, ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಸಿಂಪಲ್‌ ಟಿಪ್ಸ್‌

Kitchen Hacks: ಸಾಮಾನ್ಯ ಸ್ಟೋವ್‌ ಕ್ಲೀನ್‌ ಮಾಡುವುದಕ್ಕೂ ಗ್ಲಾಸ್‌ ಟಾಪ್‌ ಸ್ಟೋವ್‌ ಕ್ಲೀನ್‌ ಮಾಡುವುದಕ್ಕೂ ವ್ಯತ್ಯಾಸ ಇದೆ. ಗ್ಲಾಸ್‌ ಸ್ಟೋವ್‌ ಕ್ಲೀನ್‌ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.

ಗ್ಲಾಸ್‌ ಟಾಪ್‌ ಸ್ಟೋವ್‌ ಸ್ಚಚ್ಛಗೊಳಿಸುವ ವಿಧಾನ
ಗ್ಲಾಸ್‌ ಟಾಪ್‌ ಸ್ಟೋವ್‌ ಸ್ಚಚ್ಛಗೊಳಿಸುವ ವಿಧಾನ (PC: Unsplash)

Kitchen Hacks: ಮನೆ ಸ್ವಚ್ಛವಾಗಿದ್ದಷ್ಟೂ ನೋಡಲು ಆಕರ್ಷಕವಾಗಿ ಕಾಣುತ್ತದೆ , ಹಾಗೂ ಧನಾತ್ಮಕ ಶಕ್ತಿ ತುಂಬಿರುತ್ತದೆ. ಗೃಹಿಣಿಯರು ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಪ್ರತಿದಿನ ತಿಂಡಿ, ಮಧ್ಯಾಹ್ನ, ರಾತ್ರಿ ಅಡುಗೆ, ಟೀ, ಕಾಫಿ ಹೀಗೆ ಸ್ಟೋವ್‌ ಸದಾ ಕಾಲ ಬ್ಯುಸಿ ಇರುತ್ತದೆ. ಅಡುಗೆ ಮಾಡುವಾಗ ಚೆಲ್ಲುವ ವಸ್ತುಗಳಿಂದ ಸ್ಟೋವ್‌ ಕರೆಗಟ್ಟುತ್ತದೆ. ಅದನ್ನು ಆಗ್ಗಾಗ್ಗೆ ಸ್ವಚ್ಛ ಮಾಡಿಕೊಂಡರೆ ಒಳ್ಳೆಯದು. ಇಲ್ಲವಾದರೆ ಕಲೆ ಅಷ್ಟು ಸುಲಭವಾಗಿ ಕೈ ಬಿಡುವುದಿಲ್ಲ.

ಆದರೆ ನೀವು ಗ್ಲಾಸ್‌ ಟಾಪ್‌ ಸ್ಟೋವ್‌ ಬಳಸುತ್ತಿದ್ದರೆ ಬಹಳ ಎಚ್ಚರಿಕೆಯಿಂದ ಅದನ್ನು ಬಳಸಬೇಕು. ಅದು ಅತಿಯಾಗಿ ಹೀಟ್‌ ಆಗದಂತೆ ನೋಡಿಕೊಳ್ಳಬೇಕು. ಹಾಗೇ ಕ್ಲೀನ್‌ ಮಾಡುವಾಗಲೂ ಬಹಳ ಜಾಗರೂಕರಾಗಿರಬೇಕು. ನೀವು ಗ್ಲಾಸ್‌ ಸ್ಟೋವ್‌ ಸ್ವಚ್ಛಗೊಳಿಸಲು ನಿರ್ದಿಷ್ಟ ವಸ್ತುವನ್ನು ಬಳಸಬೇಕು. ಇಲ್ಲವಾದರೆ ಸ್ಕ್ರಾಚ್‌ ಉಂಟಾಗಬಹುದು.

ಇಲ್ಲಿ ತಿಳಿಸಿರುವ ಟಿಪ್ಸ್‌ ನೀವು ಫಾಲೋ ಮಾಡಿದರೆ ನಿಮ್ಮ ಗಾಜಿನ ಸ್ಟೋವನ್ನು ನೀವು ಸದಾ ಹೊಸತರಂತೆ ಇರಿಸಿಕೊಳ್ಳಬಹುದು.

ಗ್ಲಾಸ್‌ ಸ್ಟೋವ್‌ ಸ್ವಚ್ಛಗೊಳಿಸಲು ಬೇಕಾಗುವ ಸಾಮಗ್ರಿಗಳು

  • ಬಿಳಿ ವಿನೆಗರ್‌
  • ಸ್ಪ್ರೇ ಬಾಟಲ್‌
  • ಬೇಕಿಂಗ್‌ ಸೋಡಾ
  • ಟವೆಲ್‌
  • ಮೈಕ್ರೋಫೈಬರ್‌ ಕ್ಲಾತ್‌
  • ಸಿಂಗಲ್‌ ಎಡ್ಜ್‌ ರೇಜರ್‌ ಬ್ಲೇಡ್‌
  • ಮಲ್ಟಿಪರ್ಪಸ್‌ ಕುಕ್‌ಟಾಪ್‌ ಕ್ಲೀನರ್‌

ಹೇಗೆ ಸ್ವಚ್ಛಗೊಳಿಸುವುದು?

  • ಅಡುಗೆ ಮಾಡುತ್ತಿದ್ದಂತೆ ನೀವು ಸ್ಟೋವ್‌ ಕ್ಲೀನ್‌ ಮಾಡಲು ಮುಂದಾಗಬೇಡಿ. ಮೊದಲ ಸ್ಟೋವ್‌ ತಣ್ಣಗಾಗಲು ಬಿಡಿ. ಸ್ಟೋವ್‌ ಕ್ಲೀನ್‌ ಮಾಡುವ ಮುನ್ನ ಮೊದಲು ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ. ಆತುರಾತುರವಾಗಿ ಸ್ಟೋವ್‌ ಬಿಸಿಯಾಗಿದ್ದಂತೆ ಕ್ಲೀನ್‌ ಮಾಡಲು ಮುಂದಾಗಬೇಡಿ.
  • ಸ್ಪ್ರೇ ಬಾಟಲ್‌ ಸಹಾಯದಿಂದ ಸ್ಟೋವ್‌ ಸುತ್ತಲೂ ವಿನೆಗರ್‌ ಸ್ಪ್ರೇ ಮಾಡಿ.
  • ವಿನಿಗರ್‌ ಸ್ಪ್ರೇ ಮಾಡಿದ ಜಾಗದಲೆಲ್ಲಾ ಸೋಡಾವನ್ನು ಹರಡಿ, ಸ್ಪಾಂಜ್‌ ಸಹಾಯದಿಂದ ಸುತ್ತಲೂ ಹರಡುವಂತೆ ಕೈಯಾಡಿಸಿ
  • ಟವೆಲನ್ನು ಬಿಸಿ ನೀರಿನಲ್ಲಿ ಅದ್ದಿ ವಿನೆಗರ್‌ ಹಾಗೂ ಸೋಡಾ ಹಾಕಿದ ಸ್ಥಳದಲ್ಲಿ ಸುತ್ತಲೂ ಹರಡಿ 10-15 ನಿಮಿಷಗಳ ಕಾಲ ಬಿಡಿ
  • 15 ನಿಮಿಷದ ನಂತರ ಟವೆಲ್‌ ತೆಗೆದು ಮತ್ತೊಮ್ಮೆ ವಿನೆಗರ್‌ ಸ್ಪ್ರೇ ಮಾಡಿ ಮೈಕ್ರೋಫೈಬರ್‌ ಬಟ್ಟೆಯಿಂದ ಕ್ಲೀನ್‌ ಮಾಡಿ
  • ಇಷ್ಟು ಕ್ಲೀನ್‌ ಮಾಡಿದ ನಂತರವೂ ನಿಮ್ಮ ಸ್ಟೋವ್‌ ಮೇಲೆ ಹಟಮಾರಿ ಕಲೆಗಳಿದ್ದರೆ ರೇಜರ್‌ ಬ್ಲೇಡನ್ನು 45 ಡಿಗ್ರಿ ಕೋನದಲ್ಲಿ ಹಿಡಿದು ಕಲೆಯನ್ನು ಮೃದುವಾಗಿ ಉಜ್ಜಿ ತೆಗೆಯಿರಿ, ನಿಮ್ಮ ಸ್ಟೋವ್‌ ಸ್ಕ್ರಾಚ್‌ ಆಗದಂತೆ ಎಚ್ಚರಿಕೆಯಿಂದ ಸ್ವಚ್ಛ ಮಾಡಿ
  • ಕೊನೆಯದಾಗಿ ಮತ್ತೊಮ್ಮೆ ಮೈಕ್ರೋಫೈಬರ್‌ ಬಟ್ಟೆಯಿಂದ ವೈಪ್‌ ಮಾಡಿ, ಈಗ ನೋಡಿ ನಿಮ್ಮ ಸ್ಟೋವ್‌ ಹೊಸದರಂತೆ ಹೊಳೆಯುತ್ತದೆ.

ಕ್ಲೀನ್‌ ಮಾಡುತ್ತೇವೆಂದು ಸ್ಟೋವ್‌ ಕೊಳೆ ಮಾಡಿಕೊಳ್ಳಬೇಡಿ, ಸ್ಟೋವ್‌ ಮೇಲೆ ಹಾಲು ಅಥವಾ ಅಡುಗೆ ಪಾತ್ರೆಗಳನ್ನು ಇಟ್ಟು ಮರೆತುಬಿಡಬೇಡಿ. ಆದಷ್ಟು ಪ್ರತಿ ಬಾರಿ ಅಡುಗೆ ಮಾಡುತ್ತಿದ್ದಂತೆ ಸ್ಟೋವನ್ನು ಒರೆಸಿಕೊಂಡು ಸ್ವಚ್ಛ ಮಾಡಿಕೊಳ್ಳಿ.

Whats_app_banner