ಸೋಪ್ ತುಂಡು ಉಳ್ಕೊಂಡಿದೆಯಾ, ಚಿಕ್ಕ ಪೀಸ್ ಅಂತ ಡಸ್ಟ್‌ಬಿನ್‌ಗೆ ಹಾಕಬೇಡಿ, ಅದರಿಂದಲೂ ಇದೆ ನಾಲ್ಕಾರು ಪ್ರಯೋಜನ
ಮನೆಗಳಲ್ಲಿ ಸಾಮಾನ್ಯವಾಗಿ ಬಳಸಿ ಕೊನೆಗೆ ಉಳಿಯುವ ಪೀಸ್ ಪೀಸ್ ಆದ ಸಾಬೂನಿನ ತುಂಡುಗಳನ್ನು ಡಸ್ಟ್ ಬಿನ್‌ಗೆ ಹಾಕುವುದು ವಾಡಿಕೆ. ಆದರೆ ಅದರಿಂದಲೂ ನಾಲ್ಕಾರು ಪ್ರಯೋಜನ ಇದೆ. ಏನದು- ಇಲ್ಲಿದೆ ವಿವರ.
ಮನೆ ಮನೆಗಳಲ್ಲೂ ಲಿಕ್ವಿಡ್ ಸೋಪ್‌ಗಳು ಜನಪ್ರಿಯತೆ ಗಳಿಸಿದ್ದರೂ ಸಾಂಪ್ರದಾಯಿಕ ಸೋಪುಗಳು ಇನ್ನೂ ಬಹುತೇಕ ಮನೆಗಳಲ್ಲಿ ಬಳಕೆಯಲ್ಲಿದೆ. ಆದರೆ ಸೋಪು ಪೂರ್ತಿಯಾಗಿ ಬಳಸಲಾಗುವುದಿಲ್ಲ. ಕೊನೆಯಲ್ಲಿ ಉಳಿಯುವ ಸಾಬೂನು ತುಂಡುಗಳನ್ನು ಉಳಿದರೆ ಅವುಗಳನ್ನು ಎಸೆಯುವುದು ಮಾಮೂಲು. ಆದರೆ ಈ ಸೋಪು ತುಂಡುಗಳನ್ನು ಎಸೆಯಬೇಕಾಗಿಲ್ಲ.
ಸೋಪಿನ ಸಣ್ಣ ತುಂಡುಗಳ ಇನ್ನೇನು ಬಳಸುವುದು ಎಂಬ ಭಾವನೆ ಸಹಜ. ಅವುಗಳಿಗೆ ಮನೆಯ ಸುತ್ತಮುತ್ತಲಿನ ನಿತ್ಯದ ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಇದೆ. ಅನೇಕ ಮನೆಗಳ ಕಿರಿಕಿರಿ ಸದ್ದು ಮಾಡುವ ಬಾಗಿಲುಗಳು, ತುಕ್ಕುಹಿಡಿದ ಬೀಗ ತೆಗೆಯಲು ಬಳಕೆಯಾಗುತ್ತದೆ. ಅದೇ ರೀತಿ ಜಿಪ್ಪರ್ ಸರಿ ಮಾಡಲು ಕೂಡ ಬಳಸಬಹುದು. ಹಾಗೆ ಸೋಪ್ ತುಂಡುಗಳನ್ನು ಸಮಸ್ಯೆ ಪರಿಹಾರಕ್ಕೆ 4 ಸಿಂಪಲ್ ತಂತ್ರಗಳಿವು
ಸೋಪ್ ತುಂಡು ಉಳಿದ್ರೆ ಬಿಸಾಡಬೇಡಿ, ಈ 4 ಸಮಸ್ಯೆಗಳಿಗೆ ಸಿಂಪಲ್ ಪರಿಹಾರವಾದೀತು
1) ಜಾಮ್ ಆದ ಡೋರ್ ಸ್ಮೂತ್ ಆಗಿ ತೆರೆಯಲು ಬಳಸಿ- ಹೌದು ಜಾಮ್ ಆಗಿರುವ ಡೋರ್‌ಗಳಿದ್ದರೆ ಈ ಸೋಪ್ ತುಂಡುಗಳನ್ನು ಅದರ ಬಿಜಾಗಿರಿಗೆ ಅಥವಾ ಎಲ್ಲಿ ಜಾಮ್ ಆಗುವುದೋ ಅಲ್ಲಿಗೆ ಉಜ್ಜಿ. ಇದರಿಂದ ಜಾಮ್ ಆಗುವ ಜಾಗ ಸ್ವಲ್ಪ ನಯವಾಗಿ ಬಾಗಿಲು ಸಲೀಸಾಗಿ ಹಾಕುವುದು ಸಾಧ್ಯವಿದೆ. ಡೋರ್ ಮತ್ತೆ ಜಾಮ್ ಆಗಲ್ಲ. ಅದೇ ರೀತಿ ಮರದ ಬಾಗಿಲು ಕೆಲವೊಮ್ಮೆ ಜಾಮ್ ಆದರೆ ಕಿರ್ ಕಿರ್ ಸದ್ದು ಮಾಡುತ್ತಿರುತ್ತದೆ. ಆ ಸದ್ದು ನಿವಾರಿಸುವುದಕ್ಕೂ ಇದೇ ಟ್ರಿಕ್ ಬಳಸಬಹುದು. ಆ ಬಾಗಿಲು ಮತ್ತೆ ಸದ್ದು ಮಾಡದು.
2) ವಾರ್ಡ್ ರೋಬ್ ಫ್ರೆಶ್ನರ್ ಆಗಿ ಬಳಸಿ- ಉಳಿದ ಸೋಪ್ ತುಂಡುಗಳನ್ನು ಬಿಸಾಡದೇ ಅವುಗಳನ್ನು ನಿಮ್ಮ ವಾರ್ಡ್ ರೋಬ್ ಫ್ರೆಶ್ನರ್ ಆಗಿ ಅಥವಾ ಕ್ಲೋಸೆಟ್ ಫ್ರೆಶ್ನರ್ ಆಗಿ ಬಳಸಬಹುದು. ವಾರ್ಡ್ ರೋಬ್ ಫ್ರೆಶ್ನರ್ ಆಗಿ ಬಳಸುವಾಗ ಆ ಸೋಪಿನ ತುಂಡನ್ನು ಪುಟ್ಟ ಬಟ್ಟೆ ಅಥವಾ ಟಿಶ್ಶ್ಯೂ ಪೇಪರ್ ತುಂಡಿನಲ್ಲಿ ಸುತ್ತಿ ಇರಿಸಿ. ಹೀಗೆ ಮಾಡುವುದರಿಂದ ಬಟ್ಟೆಯೂ ಸುರಕ್ಷಿತ, ವಾರ್ಡ್ ರೋಬ್ ತುಂಬ ಪರಿಮಳವೂ ಹರಡಿರುತ್ತದೆ. ಈ ಎರಡೂ ಟ್ರಿಕ್ಸ್ ಏರ್‌ಫ್ರೆಶ್ನರ್‌ಗಳಂತೆ ಕೆಲಸ ಮಾಡುತ್ತದೆ. ತಾಜಾತನ ಪಸರಿಸುತ್ತದೆ.
3) ಬೀಗ ತೆಗೆಯಲು ಸಾಧ್ಯವಾಗದೇ ಇದ್ದಾಗ ಬಳಸಿ; ಹಲವು ಬಾರಿ ಬೀಗಗಳು ಹಳೆಯದಾದಾಗ, ತೆರೆಯಲು ಮತ್ತು ಮುಚ್ಚಲು ಸ್ವಲ್ಪ ಕಷ್ಟವಾಗುತ್ತದೆ. ಬೀಗಗಳು ಸುಲಭವಾಗಿ ತೆರೆಯುವುದಿಲ್ಲ. ಅವುಗಳನ್ನು ತೆರೆಯಲು ಸಾಕಷ್ಟು ಶಕ್ತಿ ಬೇಕಾಗುತ್ತದೆ. ಈ ಸಂದರ್ಭದಲ್ಲಿ, ಬೀಗಗಳನ್ನು ಸಡಿಲಗೊಳಿಸಲು ಸೋಪ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ಮೊದಲು ಸೋಪಿನ ಮೇಲೆ ಕೀಯನ್ನು ಸ್ವಲ್ಪ ಉಜ್ಜಿಕೊಳ್ಳಿ. ಈಗ ಈ ಸೋಪ್ ಲೇಪಿತ ಕೀಲಿಯನ್ನು ಲಾಕ್ ಕವರ್‌ನಲ್ಲಿ ಇರಿಸಿ. ಅದನ್ನು ಪದೇಪದೆ ತೆರೆದು ಮುಚ್ಚುತ್ತಿರಿ. ಹೀಗೆ ಮಾಡುವುದರಿಂದ ಬೀಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
4) ಜಿಪ್ ಕೆಲಸ ಮಾಡದೇ ಇದ್ದರೆ ಆಗ ಬಳಸಿ: ಹಲವು ಬಾರಿ ಪ್ಯಾಂಟ್, ಜಾಕೆಟ್, ಬ್ಯಾಗ್ ಜಿಪ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಸಿಲುಕಿಕೊಳ್ಳಲಾರಂಭಿಸುತ್ತದೆ. ಈ ಕಾರಣದಿಂದಾಗಿ, ಅದನ್ನು ತೆರೆಯಲು ಮತ್ತು ಮುಚ್ಚಲು ಸಾಕಷ್ಟು ಬಲವನ್ನು ತೆಗೆದುಕೊಳ್ಳುತ್ತದೆ. ಇದಾದ ನಂತರವೂ ಹಲವು ಬಾರಿ ಸರಿಯಾಗಿ ಮುಚ್ಚದೇ ಇರುವುದರಿಂದ ಹೊಸ ಜಿಪ್ ಅಳವಡಿಸಬೇಕು. ಸೋಪ್ನ ಸಣ್ಣ ತುಂಡುಗಳು ಇದನ್ನು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ಸೋಪ್ ತುಂಡು ತೆಗೆದುಕೊಂಡು ಅದನ್ನು ಜಿಪ್ ಮೇಲೆ ಉಜ್ಜಬೇಕು. ನಂತರ ಜಿಪ್ ತೆರೆದು ಮುಚ್ಚಬೇಕು. ಹೀಗೆ ಮಾಡುವುದರಿಂದ ಜಿಪ್ ಫಿಕ್ಸ್ ಆಗುತ್ತದೆ.
ಚಿಕ್ಕ ಪುಟ್ಟ ರಿಪೇರಿಗೂ ಬಳಕೆಯಾಗುತ್ತೆ ಸೋಪು ತುಂಡುಗಳು
ತುಕ್ಕು ಹಿಡಿದ ಕೀಲುಗಳಿಂದ ಹಿಡಿದು ತೆರೆಯಲು ಬಾರದ ಬೀಗಗಳವರೆಗೆ, ಸಾಬೂನು ವಿವಿಧ ರೀತಿಯ ಮನೆಯ ಸಮಸ್ಯೆಗಳಿಗೆ ತ್ವರಿತ ಪರಿಹಾರವಾಗಿ ಬಳಕೆಯಲ್ಲಿದೆ. ಆದ್ದರಿಂದ ಸೋಪಿನ ತುಂಡುಗಳನ್ನು ಬಿಸಾಡದೇ ಮರುಬಳಕೆ ಮಾಡುವ ಮೂಲಕ, ತ್ಯಾಜ್ಯ ಕಡಿಮೆ ಮಾಡಿ ಮನೆ ಬೆಳಗುವ ಕೆಲಸಕ್ಕೂ ಉಪಯೋಗಿಸಬಹುದು. ಹಾಗಾಗಿ ಸೋಪು ತುಂಡುಗಳನ್ನು ಬಿಸಾಡುವ ಮುನ್ನ ಒಮ್ಮೆ ಆಲೋಚಿಸಿ. ವೈಯಕ್ತಿಕ ಹಣಕಾಸು ದೃಷ್ಟಿಯಿಂದ ಇದು ಉಳಿತಾಯವೂ ಹೌದು.
ವಿಭಾಗ