ಉತ್ತಮ ಸ್ಟೋರೇಜ್, ಅಡ್ವಾನ್ಸ್ಡ್​ ಫೀಚರ್​ವುಳ್ಳ ಟಾಪ್​​-5 ಡಬಲ್ ಡೋರ್ ರೆಫ್ರಿಜರೇಟರ್ಸ್​​ ಇವೇ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಉತ್ತಮ ಸ್ಟೋರೇಜ್, ಅಡ್ವಾನ್ಸ್ಡ್​ ಫೀಚರ್​ವುಳ್ಳ ಟಾಪ್​​-5 ಡಬಲ್ ಡೋರ್ ರೆಫ್ರಿಜರೇಟರ್ಸ್​​ ಇವೇ ನೋಡಿ

ಉತ್ತಮ ಸ್ಟೋರೇಜ್, ಅಡ್ವಾನ್ಸ್ಡ್​ ಫೀಚರ್​ವುಳ್ಳ ಟಾಪ್​​-5 ಡಬಲ್ ಡೋರ್ ರೆಫ್ರಿಜರೇಟರ್ಸ್​​ ಇವೇ ನೋಡಿ

ನಿಮ್ಮ ಅಡುಗೆ ಮನೆಯನ್ನು ಅತ್ಯುತ್ತಮ ಡಬಲ್​ಡೋರ್​ ರೆಫ್ರಿಜರೇಟರ್​ನೊಂದಿಗೆ ಅಪ್​ಗ್ರೇಡ್ ಮಾಡಲು ಬಯಸುತ್ತೀರಾ? ವಿಶಾಲವಾದ ಸ್ಟೋರೇಜ್, ಸ್ಮಾರ್ಟ್ ಕೂಲಿಂಗ್ ತಂತ್ರಜ್ಞಾನ ಹೊಂದಿರುವ ಲೆಟೆಸ್ಟ್​​ ಟಾಪ್​​-5 ಡಬಲ್ ಡೋರ್​ ರೆಫ್ರಿಜರೇಟರ್​​ಗಳ ಪಟ್ಟಿ ಇಲ್ಲಿದೆ

ಉತ್ತಮ ಸ್ಟೋರೇಜ್, ಅಡ್ವಾನ್ಸ್ಡ್​ ಫೀಚರ್​ವುಳ್ಳ ಟಾಪ್​​-5 ಡಬಲ್ ಡೋರ್ ರೆಫ್ರಿಜರೇಟರ್ಸ್
ಉತ್ತಮ ಸ್ಟೋರೇಜ್, ಅಡ್ವಾನ್ಸ್ಡ್​ ಫೀಚರ್​ವುಳ್ಳ ಟಾಪ್​​-5 ಡಬಲ್ ಡೋರ್ ರೆಫ್ರಿಜರೇಟರ್ಸ್

ಆಧುನಿಕ ಕಿಚನ್​ಗಳಲ್ಲಿ ಡಬಲ್ ಡೋರ್ ರೆಫ್ರಿಜರೇಟರ್ ಅತ್ಯಗತ್ಯ. ಅವುಗಳ ಬೇಡಿಕೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ. ಪ್ರಸ್ತುತ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮತ್ತು ಸೊಗಸಾದ ವಿನ್ಯಾಸ ಹೊಂದಿರುವ ಫ್ರಿಜ್​ಗಳಿಗೆ ಆದ್ಯತೆ ಹೆಚ್ಚಾಗಿ ನೀಡುತ್ತಿದ್ದಾರೆ. ಡಬಲ್ ಡೋರ್​ ರೆಫ್ರಿಜರೇಟರ್​​ಗಳ ಸಾಧಾರಣವಾಗಿ ಮೇಲೆ ಕಂಪಾರ್ಟ್​ಮೆಂಟ್, ಕೆಳಗೆ ತಾಜಾ ಆಹಾರ ಸ್ಟೋರ್​ ಮಾಡುವ ವಿಭಾಗವನ್ನು ಹೊಂದಿರುತ್ತದೆ. ಫ್ರಾಸ್ಟ್​​-ಫ್ರೀ ಟೆಕ್ನಾಲಜಿ, ಮಲ್ಟಿ ಏರ್​​ಫ್ಲೋ ಸಿಸ್ಟಮ್, ಇನ್ವರ್ಟರ್ ಕಂಪ್ರೆಸರ್‌ಗಳಂತಹ ಸುಧಾರಿತ ವೈಶಿಷ್ಟ್ಯ ಹೊಂದಿರುವ ಮಾದರಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸಂಪೂರ್ಣ ಡಿಜಿಟಲ್ ಟಚ್

ಒಂದೊಂದು ಕಂಪನಿಯೂ ಒಂದೊಂದು ವೈಶಿಷ್ಟ್ಯ ಹೊಂದಿವೆ. ಮಾರುಕಟ್ಟೆ ಬರುತ್ತಿರುವ ಫ್ರಿಜ್​​ಗಳು ಅಪ್ಡೇಟ್ ಆಗಿ ಬರುತ್ತಿವೆ. ಮಾಡೆಲ್​​ಗಳು ಡಿಜಿಟಲ್ ಟಚ್ ಕಂಟ್ರೋಲ್‌ಗಳು, ಎಲ್ಇಡಿ ಲೈಟಿಂಗ್ ಮತ್ತು ರಿಮೋಟ್ ಮಾನಿಟರಿಂಗ್ ಮತ್ತು ನಿಯಂತ್ರಿಸಲು ಸ್ಮಾರ್ಟ್ ಕನೆಕ್ಟೆವಿಟಿ ಕೂಡ ಇರುತ್ತವೆ. ಫಿನಿಷಿಂಗ್​ ಮತ್ತು ವಿವಿಧ ಗಾತ್ರಗಳಲ್ಲಿ ಲಭ್ಯವಿರುವ ಡಬಲ್-ಡೋರ್ ರೆಫ್ರಿಜರೇಟರ್​​ಗಳು ಅತ್ಯುತ್ತಮ ಸೌಕರ್ಯಗಳ ಸಂಯೋಜನೆಯನ್ನು ನೀಡುತ್ತಿವೆ. ಅಂತಹ ಟಾಪ್​​-5 ರೆಫ್ರಿಜರೇಟರ್​ಗಳ ಪಟ್ಟಿ ಇಲ್ಲಿದೆ ನೋಡಿ.

1. ವರ್ಲ್​ಫೂಲ್-235L ಇನ್ವರ್ಟರ್ ಫ್ರಾಸ್ಟ್-ಫ್ರೀ ಡಬಲ್ ಡೋರ್ ರೆಫ್ರಿಜರೇಟರ್

ವರ್ಲ್‌ಪೂಲ್ 235L (265L ಗ್ರಾಸ್) 3 ಸ್ಟಾರ್ ಇನ್‌ವರ್ಟರ್ ಫ್ರಾಸ್ಟ್ ಫ್ರೀ ಡಬಲ್ ಡೋರ್ ರೆಫ್ರಿಜರೇಟರ್ ಮಧ್ಯಮ ವರ್ಗದಿಂದ ದೊಡ್ಡ ದೊಡ್ಡ ಕುಟುಂಬಗಳಿಗೆ ಸೂಕ್ತವಾಗಿದೆ. ಇಂಟೆಲಿಸೆನ್ಸ್ ಇನ್ವರ್ಟರ್ ತಂತ್ರಜ್ಞಾನ ಶಕ್ತಿ ಉಳಿಸುವ ವೇಳೆ ತಂಪಾಗಿಸುವಿಕೆ ಸಾಮರ್ಥ್ಯ ಹೊಂದಿದೆ. ಇದರ ಶೇಖರಣಾ ಸಾಮರ್ಥ್ಯ 235 ಲೀಟರ್‌. ವಿವಿಧ ಆಹಾರ, ಪಾನೀಯ ಸಂಗ್ರಹಿಸಿಡಲು ಸಾಕಷ್ಟು ಸ್ಥಳಾವಕಾಶ ಹೊಂದಿರಲಿದೆ. ಇದರ ಮೈಕ್ರೋಬ್ಲಾಕ್ ತಂತ್ರಜ್ಞಾನವು ಶೇ 99ರಷ್ಟು ಬ್ಯಾಕ್ಟೀರಿಯಾವನ್ನು ನಿಯಂತ್ರಿಸುತ್ತದೆ. ಆಹಾರವನ್ನು ಹೆಚ್ಚು ಕಾಲ ತಾಜಾವಾಗಿರುವಂತೆ ಮಾಡುತ್ತದೆ. ಹೆಚ್ಚುವರಿಯಾಗಿ ಫ್ರೀಜರ್ ಅನ್ನು ಮೈನಸ್ 24 ಡಿಗ್ರಿ ಸೆಂಟಿಗ್ರೇಡ್​​ವರೆಗೂ ತಂಪಾಗಿಸಬಹುದು. ಈ ರೆಫ್ರಿಜರೇಟರ್ 1 ವರ್ಷದ ಗ್ಯಾರೆಂಟಿ, ಕಂಪ್ರೇಸರ್​ 10 ವರ್ಷಗಳ ಗ್ಯಾರಂಟಿ ಹೊಂದಿರುತ್ತದೆ. ಶಕ್ತಿ ಸಾಮರ್ಥ್ಯ ಸಾಕಷ್ಟು ಶೇಖರಣಾ ಸ್ಥಳ, ನಯವಾದ ವಿನ್ಯಾಸಗಳನ್ನು ಹೊಂದಿರಲಿದೆ.

2. ಎಲ್​ಜಿ 242 L3 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್

ಎಲ್​ಜಿ 242 L3 ಸ್ಟಾರ್ ಸ್ಮಾರ್ಟ್ ಇನ್ವರ್ಟರ್ ಫ್ರಾಸ್ಟ್-ಫ್ರೀ ಡಬಲ್ ಡೋರ್ ರೆಫ್ರಿಜರೇಟರ್ ಆಧುನಿಕ ವೈಶಿಷ್ಟ್ಯ ಮತ್ತು ಕಾರ್ಯಕ್ಷಮತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಇದು ವಿನೀತನ ಡೋರ್ ಕೂಲಿಂಗ್ + ತಂತ್ರಜ್ಞಾನ ಹೊಂದಿದೆ. ಫ್ರಿಜ್ ಸ್ಮಾರ್ಟ್ ಇನ್ವರ್ಟರ್​ ಕಂಪ್ರೋಸರ್​​ಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಅದನ್ನು ತಂಪಾಗಿಸುವ ಶಕ್ತಿಯನ್ನು ಸ್ವೀಕರಿಸುತ್ತದೆ. ಫ್ರಾಸ್ಟ್-ಫ್ರೀ ವೈಶಿಷ್ಟ್ಯವು ಹಸ್ತಚಾಲಿತ ಡಿಫ್ರಾಸ್ಟಿಂಗ್ ಅಗತ್ಯವನ್ನು ನಿವಾರಿಸುತ್ತದೆ. ಡಬಲ್ ಡೋರ್ ಡಿಸೈನ್​ ಪ್ರತ್ಯೇಕವಾದ ಕಂಪಾರ್ಟ್​ಮೆಂಟ್ ವಿಭಾಗ ನೀಡುತ್ತದೆ. ಸ್ಮಾರ್ಟ್ ಥಿಂಕ್ ಯು ಅಪ್ಲಿಕೇಶನ್ ಮೂಲಕ ರಿಮೋಟ್​​ನಂತೆ ಬಳಕೆದಾರರು ರೆಫ್ರಿಜರೇಟರ್ ಅನ್ನು ನಿಯಂತ್ರಿಸಬಹುದು. ಎಲ್​​ಜಿ 242 ಎಲ್​3 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್ ಅನ್ನು ಶಕ್ತಿಯುತ ಸ್ಮಾರ್ಟ್ ಇನ್ವರ್ಟರ್ ಕಂಪ್ರೆಸರ್, ಉತ್ತಮ ಕೂಲಿಂಗ್ ಕಾರ್ಯಕ್ಷಮತೆಗೆ ಆಯ್ಕೆ ಮಾಡಬಹುದು.

3. ಸ್ಯಾಮ್​ಸಂಗ್ 236 ಎಲ್​3 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್

ಸ್ಯಾಮ್​ಸಂಗ್ 236 ಎಲ್​3 ಸ್ಟಾರ್ ಡಿಜಿಟಲ್ ಇನ್ವರ್ಟರ್, ಫ್ರಾಸ್ಟ್ ಫ್ರೀ ಡಬಲ್ ಡೋರ್ ರೆಫ್ರಿಜರೇಟರ್ 3 ರಿಂದ 5 ಸದಸ್ಯರ ಕುಟುಂಬಗಳಿಗೆ ಸೂಕ್ತವಾಗಿದೆ. ಸಿಲ್ವರ್​​ ಕಲರ್​​ನೊಂದಿಗೆ ಆಧುನಿಕ ಟಚ್ ಪಡೆದಿರುವ ಇದು ಅಡುಗೆ ಮನೆಯ ಕಳೆ ಮತ್ತಷ್ಟು ಹೆಚ್ಚಿಸುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ವಿಭಿನ್ನ ಇಂಟಿರಿಯರ್ಸ್​​ ಸ್ಟೈಲ್​ನೊಂದಿಗೆ ಆಕರ್ಷಿಸುತ್ತಿದೆ. ಈ ರೆಫ್ರಿಜರೇಟರ್‌ನಲ್ಲಿರುವ ಡಿಜಿಟಲ್ ಇನ್ವರ್ಟರ್ ತಂತ್ರಜ್ಞಾನವು ಅತ್ಯುತ್ತಮ ಕೂಲಿಂಗ್ ಕಾರ್ಯಕ್ಷಮತೆಯನ್ನು ದೃಢೀಕರಿಸುತ್ತದೆ. ಈ ತಂತ್ರಜ್ಞಾನವು ಕೂಲಿಂಗ್ ಬೇಡಿಕೆಗೆ ಹೊಂದಿಕೊಳ್ಳುತ್ತದೆ. ಈ ಫ್ರಿಡ್ಜ್‌ನಿಂದ ಬರುವ ಶಬ್ದವು ತುಂಬಾ ಕಡಿಮೆ. ವಿದ್ಯುತ್ ಬಳಕೆಯನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂಧನ ದಕ್ಷತೆ, ಇನ್ವರ್ಟರ್ ಕಂಪ್ರೆಸರ್, ಫ್ರಾಸ್ಟ್ ಫ್ರೀ ಇದರ ವಿಶೇಷತೆಗಳಾಗಿವೆ. ಸುಧಾರಿತ ಡಿಜಿಟಲ್ ಇನ್ವರ್ಟರ್ ತಂತ್ರಜ್ಞಾನ, ಸೊಗಸಾದ ವಿನ್ಯಾಸ ಹೊಂದಿರುವ ಸ್ಯಾಮ್​ಸಂಗ್ 236 ಎಲ್​3 ಸ್ಟಾರ್ ಡಬಲ್ ಡೋರ್ ಫ್ರಿಜ್ ಉತ್ತಮ ಆಯ್ಕೆಯಾಗಿದೆ.

4. ಪ್ಯಾನಾಸೋನಿಕ್ 338 ಎಲ್3 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್

ಇದು ಐದು ಜನರ ಕುಟುಂಬಕ್ಕೆ ಸೂಕ್ತವಾಗಿದೆ. ಡೈಮಂಡ್ ಬ್ಲಾಕ್ ಬಣ್ಣದ ಪ್ಯಾನಾಸೋನಿಕ್ 338 ಎಲ್​3 ಸ್ಟಾರ್ ರೆಫ್ರಿಜರೇಟರ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಪ್ರೈಮ್ ಕನ್ವರ್ಟಿಬಲ್ 6-ಸ್ಟೇಜ್ ಸ್ಮಾರ್ಟ್ ಇನ್‌ವರ್ಟರ್ ಫ್ರಾಸ್ಟ್-ಫ್ರೀ ಡಬಲ್ ಡೋರ್ ರೆಫ್ರಿಜರೇಟರ್ ಆಗಿದ್ದು, ಇದರ ಪ್ರಧಾನ ಕನ್ವರ್ಟಿಬಲ್ ವೈಶಿಷ್ಟ್ಯವು ಫ್ಲೆಕ್ಸಿಬಲ್​ ಸ್ಟೋರೆಜ್ ಬಹು ವಿಧಾನಗಳನ್ನು ನೀಡುತ್ತದೆ. ಇದರಲ್ಲಿ ಇಂಟಲಿಜೆಂಟ್ 6-ಸ್ಟೇಜ್ ಇನ್ವರ್ಟರ್ ಕಂಪ್ರೆಸರ್ ಇದೆ. ಅದರ ಟೆಂಪರ್ಡ್ ಗಾಜಿನ ಕಪಾಟುಗಳು 100 ಕೆಜಿವರೆಗೆ ತೂಕ ತಡೆದುಕೊಳ್ಳ ಸಾಮರ್ಥ್ಯ ಹೊಂದಿವೆ. 35 ಲೀಟರ್ ಜಂಬೋ ತಾಜಾ ತರಕಾರಿ ಬುಟ್ಟಿ ಇದೆ. ಈ ಫ್ರಿಡ್ಜ್ ಸರಿಯಾದ ಆಹಾರ ಸಂರಕ್ಷಣೆಗಾಗಿ ಸರೌಂಡ್ ಏರ್ ಫ್ಲೋ ಮತ್ತು ಎಜಿ ಕ್ಲೀನ್ ಟೆಕ್ನಾಲಜಿಯಂತಹ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.

5. ಗೋದ್ರೇಜ್ 244 ಎಲ್3 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್

ಗೋದ್ರೇಜ್ 244 ಲೀಟರ್ 3-ಸ್ಟಾರ್ ಕನ್ವರ್ಟಿಬಲ್ ಫ್ರೀಜರ್ 6-ಇನ್-1 ಡಬಲ್ ಡೋರ್ ರೆಫ್ರಿಜರೇಟರ್ ಅದ್ಭುತ ವಿನ್ಯಾಸ ಹೊಂದಿದೆ. ಈ ಡಬಲ್-ಡೋರ್ ರೆಫ್ರಿಜರೇಟರ್ ಆಧುನಿಕ ಕಿಚನ್​​ಗೆ ಹೇಳಿ ಮಾಡಿಸಿದಂತಿದೆ. ಇದು ಬಳಕೆದಾರ ಅಗತ್ಯಗಳ ಆಧಾರದ ಮೇಲೆ ರೆಫ್ರಿಜರೇಟರ್‌ನ ವಿಭಾಗಗಳನ್ನು ಬದಲಾಯಿಸುವ ಸೌಲಭ್ಯ ನೀಡುತ್ತದೆ. ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ 30 ಡೇಸ್ ಫಾರ್ಮ್ ಫ್ರೆಶ್‌ನೆಸ್ ಟೆಕ್ನಾಲಜಿ. ಇದು ಹಣ್ಣುಗಳು ಮತ್ತು ತರಕಾರಿಗಳ ತಾಜಾತನವನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಸಹಾಯ ಮಾಡುತ್ತದೆ. ಇದರ ಇನ್ವರ್ಟರ್ ತಂತ್ರಜ್ಞಾನ ಕೂಲಿಂಗ್ ಅವಶ್ಯಕತೆಗಳ ಆಧಾರದ ಮೇಲೆ ಕಂಪ್ರೆಸರ್ ವೇಗವನ್ನು ಸರಿಹೊಂದಿಸುತ್ತದೆ. ಫ್ರಿಜ್ ಫ್ರೀಜರ್ ಕನ್ವರ್ಟಿಬಿಲಿಟಿ, ಕೂಲ್ ಬ್ಯಾಲೆನ್ಸ್ ಟೆಕ್ನಾಲಜಿ ಮತ್ತು ಫಾರ್ಮ್ ಫ್ರೆಶ್‌ನೆಸ್ ಈ ರೆಫ್ರಿಜರೇಟರ್‌ಗಳ ವಿಶೇಷ ಲಕ್ಷಣಗಳಾಗಿವೆ.

Whats_app_banner