ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಅಡುಗೆ ಕೋಣೆಯಲ್ಲಿ ಮಹಿಳೆಯರು ಸಾಮಾನ್ಯವಾಗಿ ನಿರ್ಲಕ್ಷಿಸುವ ವಿಷಯಗಳಿವು; ನೀವು ಹೇಗೆ?

Kitchen Tips: ಅಡುಗೆ ಕೋಣೆಯಲ್ಲಿ ಮಹಿಳೆಯರು ಸಾಮಾನ್ಯವಾಗಿ ನಿರ್ಲಕ್ಷಿಸುವ ವಿಷಯಗಳಿವು; ನೀವು ಹೇಗೆ?

Kitchen Tips: ಅಡುಗೆ ಮನೆ ಸ್ವಚ್ಛವಾಗಿಟ್ಟುಕೊಳ್ಳುವ ಭರದಲ್ಲಿ ನಾವು ಕೆಲವೊಂದು ವಿಚಾರಗಳನ್ನು ನಿರ್ಲಕ್ಷಿಸಿಬಿಡುತ್ತೇವೆ. ಇದರಿಂದ ಅಡುಗೆ ಮನೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಬಹುದು. ಕೆಲವು ಬಾರಿ ಈ ನಿರ್ಲಕ್ಷ್ಯಗಳು ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಹುದು.

ಅಡುಗೆ ಕೋಣೆಯಲ್ಲಿ ಮಹಿಳೆಯರು ಸಾಮಾನ್ಯವಾಗಿ ನಿರ್ಲಕ್ಷಿಸುವ ವಿಷಯಗಳಿವು
ಅಡುಗೆ ಕೋಣೆಯಲ್ಲಿ ಮಹಿಳೆಯರು ಸಾಮಾನ್ಯವಾಗಿ ನಿರ್ಲಕ್ಷಿಸುವ ವಿಷಯಗಳಿವು (PC: Unsplash)

Kitchen Tips: ಅಡುಗೆ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಎಂಬ ಆಸೆ ಬಹುತೇಕ ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಅಡುಗೆಮನೆಯನ್ನು ಶಿಸ್ತಾಗಿ ಇಟ್ಟುಕೊಳ್ಳಬೇಕು ಎಂಬ ಪ್ರಯತ್ನದಲ್ಲಿ ನಾವು ಕೆಲವು ಮುಖ್ಯ ಅಂಶಗಳನ್ನೇ ಮರೆತುಬಿಡುತ್ತೇವೆ. ಇದರಿಂದ ಅಡುಗೆ ಮನೆಯಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಬಂದಾಗ ಈ ಸಣ್ಣ ಪುಟ್ಟ ಲೋಪದೋಷಗಳಿಂದ ಕಿರಿಕಿರಿ ಉಂಟಾಗುತ್ತದೆ. ಅಡುಗೆ ಮನೆಯ ಯಾವ ವಿಚಾರಗಳ ಬಗ್ಗೆ ಮಹಿಳೆಯರು ನಿರ್ಲಕ್ಷ್ಯ ವಹಿಸುತ್ತಾರೆ ಎಂಬುದನ್ನು ನೋಡುವುದಾರೆ...

ಟ್ರೆಂಡಿಂಗ್​ ಸುದ್ದಿ

ಚಾಕುಗಳನ್ನು ಹರಿತಗೊಳಿಸದೇ ಇರುವುದು

ಚಾಕುವಿನ ಉಪಯೋಗವಿಲ್ಲದೇ ಅಡುಗೆ ಮನೆಯನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ತರಕಾರಿ ಹಣ್ಣು ಹೀಗೆ ಏನೇ ಕತ್ತರಿಸಲು ಚಾಕು ಬೇಕೆ ಬೇಕು. ಆದರೆ ನಾವು ಚಾಕುವನ್ನು ಎಂದಿಗೂ ಹರಿತವಾಗಿ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಗಮನ ನೀಡಲು ಹೋಗುವುದೇ ಇಲ್ಲ. ಚಾಕುಗಳನ್ನು ಆಗ್ಗಾಗ್ಗೆ ಹರಿತ ಮಾಡಿಸಬೇಕು.

ಚಾಕುಗಳನ್ನು ಸರಿಯಾಗಿ ಇಡದೇ ಇರುವುದು

ಚಾಕುಗಳನ್ನು ಬಳಕೆ ಮಾಡಿದ ಕೂಡಲೇ ಅವುಗಳನ್ನು ಸರಿಯಾದ ರೀತಿಯಲ್ಲಿ ಸುರಕ್ಷಿತವಾಗಿ ಇಡುವ ಜವಾಬ್ದಾರಿ ಕೂಡ ನಮ್ಮದೇ ಆಗಿರುತ್ತದೆ. ಎಲ್ಲೆಂದರಲ್ಲಿ ಮನಸ್ಸಿಗೆ ಬಂದಹಾಗೆ ಚಾಕುವನ್ನು ಇಡಲು ಸಾಧ್ಯವಿಲ್ಲ. ಇದು ಹರಿತವಾದ ವಸ್ತುವಾದ್ದರಿಂದ ಅಪಾಯಕಾರಿಯಾಗಿರುತ್ತದೆ. ಅಲ್ಲದೇ ಇದ್ದು ಕೈ ಜಾರಿ ಬಿದ್ದಾಗ ಕೂಡ ಹಾನಿ ಉಂಟಾಗಬಹುದು. ಹೀಗಾಗಿ ಚಾಕುಗಳನ್ನು ಅದರ ಕವರ್​ನ ಒಳಗೆ ಹಾಕಿ ಇಡುವ ಅಭ್ಯಾಸ ಇಟ್ಟುಕೊಳ್ಳಬೇಕು.

ಕಾಫಿ ಬೀಜವನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು

ಕಾಫಿ ಪುಡಿ ಕೇವಲ ಕಾಫಿ ಮಾಡಿ ಕುಡಿಯಲು ಮಾತ್ರ ಬಳಕೆ ಮಾಡುವುದಲ್ಲ. ಕಾಫಿ ಪುಡಿ ಅಥವಾ ಕಾಫಿ ಬೀಜಗಳಿಂದ ಇನ್ನೂ ಅನೇಕ ಲಾಭಗಳಿವೆ. ಕಾಫಿ ಬೀಜಗಳನ್ನು ನೀವು ಅಡುಗೆ ಮನೆಯ ರೂಮ್​ ಫ್ರೆಶ್ನರ್​ಗಳಂತೆ ಬಳಕೆ ಮಾಡಿಕೊಳ್ಳಬಹುದು. ಕಾಫಿ ಬೀಜಗಳನ್ನು ಅಡುಗೆ ಮನೆಯ ಕಿಟಕಿಗಳ ಮೇಲೆ ಇಡುವ ಮೂಲಕ ನೈಸರ್ಗಿಕ ರೂಮ್​ ಫ್ರೆಶ್ನರ್​ಗಳಂತೆ ಬಳಸಬಹುದಾಗಿದೆ.

ಫ್ರಿಡ್ಜ್​ನಲ್ಲಿ ಮಾಂಸವನ್ನು ಸರಿಯಾಗಿ ಸಂಗ್ರಹಿಸದೇ ಇರುವುದು

ಮಾಂಸಗಳನ್ನು ಫ್ರಿಡ್ಜ್​​ನಲ್ಲಿ ಮೇಲಿನ ಭಾಗದಲ್ಲಿ ಇಡುವುದು ಒಳ್ಳೆಯದಲ್ಲ. ಇದರಿಂದ ಇಡೀ ಫ್ರಿಡ್ಜ್​ ತುಂಬಾ ವಾಸನೆ ಹರಡಬಹುದು. ಹೀಗಾಗಿ ಮಾಂಸವನ್ನು ಸರಿಯಾಗಿ ಪ್ಯಾಕ್​ ಮಾಡಿ ಕೆಳಗಿನ ಶೆಲ್ಫ್​ನಲ್ಲಿ ಇಡುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಪಾತ್ರೆ ತೊಳೆಯುವ ಬ್ರಶ್

ಪಾತ್ರೆ ತೊಳೆಯುವ ಬ್ರಶ್​ಗಳಲ್ಲಿ ಬ್ಯಾಕ್ಟೀರಿಯಾಗಳ ಸಂತಾನವೇ ಅಡಗಿರುತ್ತದೆ. ಹೀಗಾಗಿ ನಾವು ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯಲು ಬಳಕೆ ಮಾಡಲ್ಪಡುವ ಬ್ರಶ್​ಗಳನ್ನು ಸರಿಯಾದ ಕಾಲಕ್ಕೆ ಬದಲಾವಣೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. 15 ದಿನಗಳಿಗೆ ಒಮ್ಮೆ ನಿಮ್ಮ ಅಡುಗೆ ಮನೆ ಸಿಂಕ್​ಗಳಲ್ಲಿ ಇರುವ ಬ್ರಶ್​ಗಳನ್ನು ಬದಲಾಯಿಸಬೇಕು.

ಹಣ್ಣುಗಳನ್ನು ಸಂಗ್ರಹಿಸುವುದು

ಹಣ್ಣುಗಳನ್ನು ತಂದ ಕೂಡಲೇ ಅವುಗಳಲ್ಲಿ ಫ್ರಿಡ್ಜ್​ನಲ್ಲಿ ಇಡುವ ಅಭ್ಯಾಸ ಬಹುತೇಕರಿಗಿದೆ. ಆದರೆ ಸಾಮಾನ್ಯ ತಾಪಮಾನದಲ್ಲಿ ಸಂಗ್ರಹಿಸಿಟ್ಟ ಹಣ್ಣುಗಳೇ ಆರೋಗ್ಯಕ್ಕೆ ಹೆಚ್ಚು ಲಾಭಕಾರಿ. ಹೀಗಾಗಿ ಹಣ್ಣುಗಳನ್ನು ಆದಷ್ಟು ಫ್ರಿಡ್ಜ್​​ನಲ್ಲಿ ಶೇಖರಿಸಿಡುವ ಅಭ್ಯಾಸ ತಪ್ಪಿಸುವುದು ಉತ್ತಮ .

ವಿಭಾಗ