ಮಟನ್, ಚಿಕನ್ ಖಾದ್ಯ ಸರಿಯಾಗಿ ಬೆಂದಿರದಿದ್ದರೆ ಇಲ್ಲಿದೆ ಟಿಪ್ಸ್: ಮಾಂಸ ಚೆನ್ನಾಗಿ ಬೇಯಲು ಈ 4 ಸಲಹೆ ಅನುಸರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಟನ್, ಚಿಕನ್ ಖಾದ್ಯ ಸರಿಯಾಗಿ ಬೆಂದಿರದಿದ್ದರೆ ಇಲ್ಲಿದೆ ಟಿಪ್ಸ್: ಮಾಂಸ ಚೆನ್ನಾಗಿ ಬೇಯಲು ಈ 4 ಸಲಹೆ ಅನುಸರಿಸಿ

ಮಟನ್, ಚಿಕನ್ ಖಾದ್ಯ ಸರಿಯಾಗಿ ಬೆಂದಿರದಿದ್ದರೆ ಇಲ್ಲಿದೆ ಟಿಪ್ಸ್: ಮಾಂಸ ಚೆನ್ನಾಗಿ ಬೇಯಲು ಈ 4 ಸಲಹೆ ಅನುಸರಿಸಿ

ಮಟನ್ ಅಥವಾ ಚಿಕನ್ ಅಡುಗೆ ಮಾಡುವಾಗ ಕೆಲವೊಮ್ಮೆ ಸರಿಯಾಗಿ ಬೆಂದಿರುವುದಿಲ್ಲ. ಅತಿಥಿಗಳಿಗೆ ಬಡಿಸಿದ ನಂತರ ಮುಜುಗರ ಎದುರಿಸಬೇಕಾದೀತು. ಅದರಲ್ಲೂ ಮಟನ್ ಬೇಯುವುದು ಸ್ವಲ್ಪ ತಡವಾಗುತ್ತದೆ. ಹೀಗಾಗಿ ಮಾಂಸ ಖಾದ್ಯವನ್ನು ಚೆನ್ನಾಗಿ ಬೇಯಿಸಲು ಇಲ್ಲಿ 4 ಸಲಹೆಗಳನ್ನು ನೀಡಲಾಗಿದೆ.

ಮಟನ್, ಚಿಕನ್ ಮಾಂಸ ಚೆನ್ನಾಗಿ ಬೇಯಲು ಇಲ್ಲಿದೆ ಟಿಪ್ಸ್
ಮಟನ್, ಚಿಕನ್ ಮಾಂಸ ಚೆನ್ನಾಗಿ ಬೇಯಲು ಇಲ್ಲಿದೆ ಟಿಪ್ಸ್ (shutterstock)

ಮಾಂಸಾಹಾರ ಪ್ರಿಯರು ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಭಾನುವಾರ ಮಾತ್ರವಲ್ಲ ವಾರದ ಮಧ್ಯದ ದಿನದಲ್ಲೂ ಹಲವರು ಚಿಕನ್, ಮಟನ್ ಖಾದ್ಯಗಳನ್ನು ತಿನ್ನಲು ಇಷ್ಟಪಡುತ್ತಾರೆ. ಮಟನ್ ಖಾದ್ಯ ಚೆನ್ನಾಗಿ ಬೆಂದಿಲ್ಲದಿದ್ದರೆ ತಿನ್ನಲು ಚೆನ್ನಾಗಿರುವುದಿಲ್ಲ. ಮಟನ್ ಚೆನ್ನಾಗಿ ಬೆಂದರೆ ಮಾತ್ರ ಖಾದ್ಯ ರುಚಿಕರವಾಗಿರುತ್ತದೆ. ಚೆನ್ನಾಗಿ ಬೆಂದಿಲ್ಲದಿದ್ದರೆ ಅತಿಥಿಗಳಿಗೆ ಊಟ ಬಡಿಸಿದ ನಂತರ ಮುಜುಗರವಾಗಬಹುದು. ಹೀಗಾಗಿ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸುವ ಮೂಲಕ ಮೃದುವಾದ, ರುಚಿಕರವಾದ ಚಿಕನ್ ಅಥವಾ ಮಟನ್ ಖಾದ್ಯವನ್ನು ತಯಾರಿಸಬಹುದು.

ಮಾಂಸವನ್ನು ರುಚಿಕರವಾಗಿ ಬೇಯಿಸಲು ಸಲಹೆಗಳು

ಮಾಂಸದ ತುಂಡುಗಳನ್ನು ಸರಿಯಾದ ರೀತಿಯಲ್ಲಿ ಕತ್ತರಿಸಿ: ಅಡುಗೆ ಮಾಡುವ ಮಾಂಸಕ್ಕೆ ಅನುಗುಣವಾಗಿ ತುಂಡುಗಳನ್ನು ಕತ್ತರಿಸುವ ವಿಧಾನವನ್ನು ಬದಲಾಯಿಸಬೇಕು. ಅಡುಗೆ ಮಾಡುವಾಗ ಕುರಿ ಮತ್ತು ಮೇಕೆಯ ಮಾಂಸವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಮಾಂಸದ ತುಂಡುಗಳನ್ನು ಮಸಾಲೆಯೊಂದಿಗೆ ಚೆನ್ನಾಗಿ ಬೆರೆಸಿದಾಗ ಉತ್ತಮ ರುಚಿ ಪಡೆಯುತ್ತವೆ.

ಚಿಕನ್ ಬೇಯಿಸುವಾಗ ತುಂಡು ಸ್ವಲ್ಪ ದೊಡ್ಡದಾಗಿದ್ದರೂ ಪರವಾಗಿಲ್ಲ. ಕೋಳಿ ಮಾಂಸದಲ್ಲಿ ಅದರ ಕಾಲಿನ ತುಂಡುಗಳು ಮತ್ತು ರೆಕ್ಕೆಗಳಿಂದ ಮಾಡಲಾಗುವ ಖಾದ್ಯ ತುಂಬಾ ರುಚಿಕರವಾಗಿಕುತ್ತದೆ. ತುಂಡುಗಳು ದೊಡ್ಡದಾಗಿದ್ದರೆ, ಅವುಗಳನ್ನು ಸ್ವಲ್ಪ ಚಿಕ್ಕದಾಗಿ ಕತ್ತರಿಸಬೇಕು. ಈ ರೀತಿ ಮಾಡುವುದರಿಂದ, ಮಾಂಸವನ್ನು ಮೃದುವಾಗಿ ಬೇಯಿಸಬಹುದು.

ಮಟನ್ ಅಥವಾ ಚಿಕನ್ ಬೇಯಿಸುವಾಗ ಸರಿಯಾದ ಉರಿಯನ್ನು ಬಳಸುವುದು ಅತ್ಯಗತ್ಯ: ಮಟನ್ ಅಥವಾ ಕೋಳಿ ಮಾಂಸವನ್ನು ಬೇಯಿಸುವಾಗ ಫ್ಲೇಮ್‌ ಸರಿಯಾದ ಪ್ರಮಾಣದಲ್ಲಿಡುವುದು ಅಗತ್ಯ. ಸಂಪೂರ್ಣವಾಗಿ ಬೇಯಿಸಲು ಮಧ್ಯಮ ಉರಿಯಲ್ಲಿ ಇಡಬೇಕು. ಹೆಚ್ಚಿನ ಉರಿಯಲ್ಲಿಡುವುದರಿಂದ ನೀರು ಆವಿಯಾಗಿ ಮಾಂಸ ಸುಟ್ಟುಹೋಗಬಹುದು. ಹೀಗಾಗಿ ಆದಷ್ಟು ಮಧ್ಯಮ ಉರಿಯಲ್ಲಿಡಿ.

ಮಾಂಸವನ್ನು ಮ್ಯಾರಿನೇಟ್ ಮಾಡಿ: ಮಟನ್ ಅಥವಾ ಚಿಕನ್ ಬೇಯಿಸುವ ಮೊದಲು, ಮಾಡಬೇಕಾದ ಇನ್ನೊಂದು ಮುಖ್ಯ ವಿಚಾರವೆಂದರೆ, ಮ್ಯಾರಿನೇಟಿಂಗ್ ಮಾಡುವುದು. ಮ್ಯಾರಿನೇಟ್‌ ಮಾಡುವುದರಿಂದ ಮಾಂಸ ಇನ್ನಷ್ಟು ರುಚಿಯನ್ನು ಪಡೆಯುತ್ತದೆ. ಇದಲ್ಲದೆ, ಇದು ಮಾಂಸವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ವಿನೆಗರ್ ಅಥವಾ ನಿಂಬೆ ರಸ, ಮೊಸರು ಮುಂತಾದವುಗಳನ್ನು ಬಳಸುವುದರಿಂದ ಮಾಂಸವನ್ನು ನಯಗೊಳಿಸಬಹುದು. ಅಡುಗೆ ಮಾಡುವ ಮೊದಲು ಕನಿಷ್ಠ 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡುವುದು ಉತ್ತಮ. ಮೃದು ಮತ್ತು ರುಚಿಕರವಾಗಿಸಲು ರಾತ್ರಿಯಿಡೀ ಮ್ಯಾರಿನೇಟ್ ಮಾಡಬಹುದು.

ಬೇಯಿಸಿದ ನಂತರ ಮಾಂಸವನ್ನು ಸ್ವಲ್ಪ ಸಮಯದವರೆಗೆ ಹಾಗೆಯೇ ಬಿಡಿ: ಮಾಂಸವನ್ನು ಬೇಯಿಸುವಾಗಲೇ ಕೆಲವರು ಮಾಂಸದ ತುಂಡುಗಳನ್ನು ಒಂದೊಂದಾಗಿ ತೆಗೆದು ಬೆಂದಿದೆಯೇ ಎಂದು ಪರೀಕ್ಷಿಸಲು ತಿನ್ನುತ್ತಾರೆ. ಸ್ಟೌವ್ ಆಫ್ ಮಾಡಿದರೂ ಅಥವಾ ಮಾಡದಿದ್ದರೂ ಬಹುತೇಕರು ಈ ರೀತಿ ತಿನ್ನುವುದು ಸಾಮಾನ್ಯ. ಆದರೆ, ಈ ವೇಳೆ ಮಾಂಸದ ತುಂಡಿಗೆ ಮಸಾಲೆ, ಉಪ್ಪು ಹೀರಿಕೊಂಡಿರುವುದಿಲ್ಲ. ಹೀಗಾಗಿ ಸ್ಟೌವ್ ಆಫ್ ಮಾಡಿ, ಸ್ವಲ್ಪ ಸಮಯದ ನಂತರ ನೀವು ರುಚಿ ನೋಡುವುದು ಉತ್ತಮ.

ಮೇಲೆ ತಿಳಿಸಿರುವ ಈ ನಾಲ್ಕು ಸಲಹೆಗಳು ನಿಮ್ಮ ಭಕ್ಷ್ಯಗಳನ್ನು ಹೆಚ್ಚು ರುಚಿಕರವಾಗಿಸಲು ಸಹಾಯ ಮಾಡುತ್ತದೆ. ಈ ನಾಲ್ಕು ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಮೃದುವಾದ, ರುಚಿಕರವಾದ ಚಿಕನ್ ಅಥವಾ ಮಟನ್ ಖಾದ್ಯವನ್ನು ತಯಾರಿಸಬಹುದು.

Whats_app_banner