ಮಕ್ಕಳ ಸ್ನಾಕ್ಸ್ ಬಾಕ್ಸ್‌ಗೆ ಹಾಕಿದ ಆಪಲ್ ಕಂದು ಬಣ್ಣಕ್ಕೆ ತಿರುಗುತ್ತದೆಯೇ: ತಾಜಾವಾಗಿಡಲು ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಸ್ನಾಕ್ಸ್ ಬಾಕ್ಸ್‌ಗೆ ಹಾಕಿದ ಆಪಲ್ ಕಂದು ಬಣ್ಣಕ್ಕೆ ತಿರುಗುತ್ತದೆಯೇ: ತಾಜಾವಾಗಿಡಲು ಇಲ್ಲಿದೆ ಟಿಪ್ಸ್

ಮಕ್ಕಳ ಸ್ನಾಕ್ಸ್ ಬಾಕ್ಸ್‌ಗೆ ಹಾಕಿದ ಆಪಲ್ ಕಂದು ಬಣ್ಣಕ್ಕೆ ತಿರುಗುತ್ತದೆಯೇ: ತಾಜಾವಾಗಿಡಲು ಇಲ್ಲಿದೆ ಟಿಪ್ಸ್

ಮಕ್ಕಳ ಸ್ನಾಕ್ಸ್ ಬಾಕ್ಸ್‌ಗೆ ಹಾಕಿರುವ ಕತ್ತರಿಸಿದ ಸೇಬು ಅಥವಾ ಆಪಲ್ ಸ್ವಲ್ಪ ಸಮಯದಲ್ಲೇ ಕಂದು ಬಣ್ಣಕ್ಕೆ ತಿರುಗುವುದು ಸಹಜ. ಹೀಗಾಗಿ ಮಕ್ಕಳು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಇದರಿಂದ ರುಚಿ ಕೂಡ ಕಡಿಮೆಯಾಗುತ್ತದೆ. ಸೇಬು ಕಂದು ಬಣ್ಣಕ್ಕೆ ತಿರುಗದಂತೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿ ನೀಡಿರುವ ಕೆಲವು ಸಲಹೆ ಅಥವಾ ತಂತ್ರಗಳನ್ನು ಅನುಸರಿಸಬಹುದು.

ಆಪಲ್ ಕಂದು ಬಣ್ಣಕ್ಕೆ ತಿರುಗಿದ್ದರೆ ತಾಜಾವಾಗಿಡಲು ಇಲ್ಲಿದೆ ಟಿಪ್ಸ್
ಆಪಲ್ ಕಂದು ಬಣ್ಣಕ್ಕೆ ತಿರುಗಿದ್ದರೆ ತಾಜಾವಾಗಿಡಲು ಇಲ್ಲಿದೆ ಟಿಪ್ಸ್ (Pixabay)

ಮಕ್ಕಳ ಸ್ನಾಕ್ಸ್ ಬಾಕ್ಸ್‌, ಲಂಚ್ ಬಾಕ್ಸ್‌ಗೆ ದಿನಾ ಏನಾದರೂ ಕಳಿಸಲೇಬೇಕು. ಲಂಚ್ ಬಾಕ್ಸ್‌ಗೆ ಅನ್ನ, ಸಾಂಬಾರ್ ಅಥವಾ ದೋಸೆ, ಇಡ್ಲಿ, ಪುಳಿಯೋಗರೆ ಇಂಥವುಗಳನ್ನು ಕಳುಹಿಸಿದರೆ, ಸ್ನಾಕ್ಸ್‌ಗೆ ಹೆಚ್ಚಿನವರು ಹಣ್ಣುಗಳನ್ನು ಕಳುಹಿಸುತ್ತಾರೆ. ಅದರಲ್ಲೂ ಹೆಚ್ಚಾಗಿ ಕೆಲವರಂತೂ ಆಪಲ್ ಅಥವಾ ಸೇಬು ಹಣ್ಣುಗಳನ್ನು ಕಳುಹಿಸುತ್ತಾರೆ. ಆಪಲ್‌ಗಳನ್ನು ಕತ್ತರಿಸಿ ಮಕ್ಕಳ ತಿಂಡಿ ಬಾಕ್ಸ್‌ಗೆ ಕಳುಹಿಸಿದರೆ ಅವು ಕೆಲವೇ ನಿಮಿಷಗಳಲ್ಲಿ ಕಂದು ಬಣ್ಣಕ್ಕೆ ತಿರುಗುತ್ತವೆ. ಇದರಿಂದ ಮಕ್ಕಳಿಗೆ ತಿನ್ನಲು ಮನಸ್ಸಾಗುವುದಿಲ್ಲ. ಬಣ್ಣದ ಜತೆಗೆ ಇದು ಸೇಬಿನ ರುಚಿಯ ಮೇಲೂ ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಸರಳ ಪರಿಹಾರ ಇಲ್ಲಿದೆ.

ಸೇಬುಗಳು ಏಕೆ ಕಂದು ಬಣ್ಣಕ್ಕೆ ತಿರುಗುತ್ತವೆ?

ಸೇಬನ್ನು ಹೋಳು ಮಾಡಿದಾಗ, ಆಮ್ಲಜನಕವು ಅದರ ಜೀವಕೋಶಗಳಿಗೆ ಸೋಂಕು ತಗುಲಿಸುತ್ತದೆ. ಕಿಣ್ವಗಳನ್ನು ಉತ್ಪಾದಿಸುವ ರಾಸಾಯನಿಕ ಕ್ರಿಯೆಯನ್ನು ಪ್ರಚೋದಿಸುತ್ತದೆ. ಇದು ಹಣ್ಣನ್ನು ಆಕ್ಸಿಡೀಕರಿಸುತ್ತದೆ. ಹೀಗಾಗಿ ಸೇಬಿನ ಚೂರುಗಳು ಕಂದು ಬಣ್ಣಕ್ಕೆ ತಿರುಗಲು ಕಾರಣವಾಗುತ್ತದೆ.

ಸೇಬು ಕತ್ತರಿಸಿದ ಬಳಿಕ ಕಂದು ಬಣ್ಣಕ್ಕೆ ತಿರುಗುವುದನ್ನು ತಪ್ಪಿಸಲು ಇಲ್ಲಿದೆ ಸಲಹೆ

ಸೇಬಿನ ತುಂಡುಗಳನ್ನು ತಾಜಾ ಮತ್ತು ರುಚಿಕರವಾಗಿಡಲು ಕೆಲವು ಸರಳ ಸಲಹೆ ಅಥವಾ ತಂತ್ರಗಳು ಇಲ್ಲಿವೆ.

ನಿಂಬೆ ರಸ: ನಿಂಬೆ ರಸದ ಆಮ್ಲೀಯ ಗುಣವು ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೋಳು ಮಾಡಿದಾಗ ಸೇಬಿನ ಮೇಲೆ ಸ್ವಲ್ಪ ತಾಜಾ ನಿಂಬೆ ರಸವನ್ನು ಹಿಂಡಿ. ಇದರಿಂದ ಸೇಬು ಕಂದು ಬಣ್ಣಕ್ಕೆ ತಿರುಗುವುದಿಲ್ಲ.

ವಿನೆಗರ್: ನಿಂಬೆ ರಸದಂತೆಯೇ ವಿನೆಗರ್ ಅನ್ನು ಸಹ ಬಳಸಬಹುದು. ನೀರು ಮತ್ತು ವಿನೆಗರ್ ಅನ್ನು ದ್ರಾವಣದಲ್ಲಿ ಅದ್ದುವುದರಿಂದ ಕತ್ತರಿಸಿದ ಸೇಬನ್ನು ಕಂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ.

ತಣ್ಣೀರು: ಸೇಬಿನ ತುಂಡುಗಳನ್ನು ತಣ್ಣೀರಿನಲ್ಲಿ ಮುಳುಗಿಸಿದರೆ ಅವು ಕಂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ನೀರು ಹಣ್ಣು ಮತ್ತು ಆಮ್ಲಜನಕದ ನಡುವೆ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಕತ್ತರಿಸಿದ ಸೇಬನ್ನು ಮನೆಯಲ್ಲಿ ಹೀಗೆ ಸಂಗ್ರಹಿಸಿ: ಕತ್ತರಿಸಿದ ಸೇಬಿನ ತಾಜಾತನವನ್ನು ಕಾಪಾಡಲು, ಅವುಗಳನ್ನು ರೆಫ್ರಿಜರೇಟರ್ ಅಥವಾ ಫ್ರಿಡ್ಜ್‌ನಲ್ಲಿ ಗಾಳಿಯಾಡದ ಧಾರಕದಲ್ಲಿ ಸಂಗ್ರಹಿಸಿಡಬಹುದು. ಕೆಲವು ಸೇಬು ಪ್ರಭೇದಗಳು ಕತ್ತರಿಸಿದ ತಕ್ಷಣವೇ ಕಂದು ಬಣ್ಣಕ್ಕೆ ತಿರುಗುತ್ತವೆ. ಅಂತಹ ಸೇಬು ಹಣ್ಣುಗಳನ್ನು ತೆಗೆದುಕೊಳ್ಳಬೇಡಿ.

Whats_app_banner