Egg Freshness; ಮೊಟ್ಟೆಯೊಳಗೆ ಹೇಗಿದೆ? ಕೆಟ್ಟು ಹೋದ ಮೊಟ್ಟೆಯನ್ನು ಸುಲಭವಾಗಿ ಗುರುತಿಸಲು ಈ ಟಿಪ್ಸ್ ಫಾಲೊ ಮಾಡಿ-kitchen tips how to check if eggs are rotten using the water test uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Egg Freshness; ಮೊಟ್ಟೆಯೊಳಗೆ ಹೇಗಿದೆ? ಕೆಟ್ಟು ಹೋದ ಮೊಟ್ಟೆಯನ್ನು ಸುಲಭವಾಗಿ ಗುರುತಿಸಲು ಈ ಟಿಪ್ಸ್ ಫಾಲೊ ಮಾಡಿ

Egg Freshness; ಮೊಟ್ಟೆಯೊಳಗೆ ಹೇಗಿದೆ? ಕೆಟ್ಟು ಹೋದ ಮೊಟ್ಟೆಯನ್ನು ಸುಲಭವಾಗಿ ಗುರುತಿಸಲು ಈ ಟಿಪ್ಸ್ ಫಾಲೊ ಮಾಡಿ

How to Check Egg Freshness; ಬಹುತೇಕರು ಮೊಟ್ಟೆ ಇಷ್ಟಪಡುವವರೇ. ಮೂರು ಹೊತ್ತು ಮೊಟ್ಟೆ ಸಿಕ್ಕಿದರೂ ಖುಷಿಯಿಂದ ತಿನ್ನುವವರು ಕೂಡ ಇದ್ದಾರೆ. ಹಾಗಂತ ಕೆಟ್ಟ ಮೊಟ್ಟೆ ತಿನ್ನೋಕಾಗುತ್ಯೆ, ಇಲ್ಲ ಅಲ್ವ. ಮೊಟ್ಟೆಯೊಳಗೆ ಹೇಗಿದೆ? ಕೆಟ್ಟು ಹೋದ ಮೊಟ್ಟೆಯನ್ನು ಸುಲಭವಾಗಿ ಗುರುತಿಸಲು ಈ ಟಿಪ್ಸ್ ಫಾಲೊ ಮಾಡಿ

ಕೆಟ್ಟು ಹೋದ ಮೊಟ್ಟೆಯನ್ನು ಸುಲಭವಾಗಿ ಗುರುತಿಸಲು ಈ ಟಿಪ್ಸ್ ಫಾಲೊ ಮಾಡಿ (ಸಾಂಕೇತಿಕ ಚಿತ್ರ)
ಕೆಟ್ಟು ಹೋದ ಮೊಟ್ಟೆಯನ್ನು ಸುಲಭವಾಗಿ ಗುರುತಿಸಲು ಈ ಟಿಪ್ಸ್ ಫಾಲೊ ಮಾಡಿ (ಸಾಂಕೇತಿಕ ಚಿತ್ರ)

ಬಹುತೇಕರು ಬೆಳಗ್ಗೆ ಉಪಾಹಾರಕ್ಕಾಗಿ ಮೊಟ್ಟೆ ಮತ್ತು ಮೊಟ್ಟೆ ಖಾದ್ಯ ತಿನ್ನಲು ಇಷ್ಟಪಡುತ್ತಾರೆ. ಕಾರಣ ಅದರಲ್ಲಿ ಪೌಷ್ಟಿಕಾಂಶದ ಜೊತೆಗೆ ಅಗತ್ಯವಿರುವ ಎಲ್ಲಾ ಪೋಷಣೆಯ ಸುಲಭ ಲಭ್ಯತೆ. ತೂಕ ಹೆಚ್ಚಿಸಲು ಅಥವಾ ಕಳೆದುಕೊಳ್ಳಲು, ಸ್ನಾಯು ಬೆಳೆಸುವುದಕ್ಕೆ ಅಥವಾ ಮಕ್ಕಳ ಶಾರೀರಿಕ ಬೆಳವಣಿಗೆಗೆ ಮೊಟ್ಟೆ ಸಹಕಾರಿ. ಅಂತಹ ಎಲ್ಲ ಅಂಶಗಳೂ ಮೊಟ್ಟೆಯಲ್ಲಿವೆ.

ಆದರೆ ಮೊಟ್ಟೆ ತಿನ್ನುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಮೊದಲನೆಯದಾಗಿ, ಮೊಟ್ಟೆಗಳು ಸಂಪೂರ್ಣವಾಗಿ ತಾಜಾವಾಗಿರಬೇಕು. ಕೊಳೆತ ಅಥವಾ ಹಾಳಾದ ಮೊಟ್ಟೆಯನ್ನು ಸ್ವಲ್ಪ ತಿಂದರೂ ಆರೋಗ್ಯಕ್ಕೆ ಆಗಿಬರಲ್ಲ. ಆನಾರೋಗ್ಯ ಉಂಟಾಗುವುದು ನಿಶ್ಚಿತ. ಆದ್ದರಿಂದ, ಖಂಡಿತವಾಗಿಯೂ ಕೆಟ್ಟ ಮೊಟ್ಟೆಗಳನ್ನು ಗುರುತಿಸಲು ಕಲಿಯಿರಿ.

ಕೆಟ್ಟ ಮೊಟ್ಟೆಗಳನ್ನು ಹೇಗೆ ಗುರುತಿಸುವುದು

ಅಂಗಡಿಯಲ್ಲೇ ಕೆಟ್ಟ ಮೊಟ್ಟೆ ಗುರುತಿಸುವುದು ಕಷ್ಟ. ಮೊಟ್ಟೆ ಒಳಗಿನಿಂದ ಕೆಟ್ಟಿದ್ದರೂ ಅದರ ಹೊರ ರಚನೆ ಗಟ್ಟಿಯಾಗಿರುವ ಕಾರಣ, ಅದನ್ನು ಒಡೆದರಷ್ಟೆ ಅದು ಕೆಟ್ಟಿದೆಯೋ ಇಲ್ಲವೋ ಎಂಬುದು ಗುರುತಿಸಲು ಸಾಧ್ಯ. ಹಾಗಾಗಿ ಮೊಟ್ಟೆ ಖರೀದಿಸುವಾಗ ತಾಜಾ ಮೊಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಯನ್ನೆ ಗುರುತಿಸಿಕೊಂಡು ವ್ಯವಹರಿಸಿ.

ಒಮ್ಮೆ ಮೊಟ್ಟೆ ಖರೀದಿ ಮಾಡಿ ಮನೆಗೆ ತಂದ ಬಳಿಕ ಮನೆಯಲ್ಲಿ ಕೆಟ್ಟ ಮೊಟ್ಟೆಯನ್ನು ಗುರುತಿಸಬಹುದು. ಮೊಟ್ಟೆ ಬೇಯಿಸುವ ಮೊದಲೇ ಅಥವಾ ಅದನ್ನು ಒಡೆಯುವ ಮೊದಲೇ ಅದು ಒಳಗೆ ಕೆಟ್ಟಿದೆಯೇ ಎಂಬುದನ್ನು ಪರಿಶೀಲಿಸಬಹುದು. ಅದಕ್ಕೆ ಇರುವ ಸುಲಭ ಟ್ರಿಕ್ಸ್ ಇದು.

ಕೊಳೆತ ಮೊಟ್ಟೆಯನ್ನು ಗುರುತಿಸುವ ಸುಲಭ ವಿಧಾನ

ಮನೆಯಲ್ಲಿ ಕೂಡ ಕೊಳೆತ ಮೊಟ್ಟೆ ಗುರುತಿಸುವುದಕ್ಕೆ ಸ್ವಲ್ಪ ಕೆಲಸ ಇದೆ. ಆದರೆ ಕಷ್ಟದ್ದಲ್ಲ. ಬಹಳ ಸುಲಭ ವಿಧಾನ

1) ಆಳ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ನಂತರ ಮೊಟ್ಟೆಗಳನ್ನು ನೀರಿನಲ್ಲಿ ಮುಳುಗಿಸಿ.

2) ಒಂದೊಮ್ಮೆ ಮೊಟ್ಟೆಗಳು ತಳದಲ್ಲಿ ಕುಳಿತುಬಿಟ್ಟರೆ ಅದು ತಾಜಾ ಮೊಟ್ಟೆ ಎಂದು ಅರ್ಥಮಾಡಿಕೊಳ್ಳಬಹುದು.

3) ಒಂದೊಮ್ಮೆ ಆ ಮೊಟ್ಟೆಗಳು ನೀರಿನ ಮೇಲೆ ತೇಲಿದರೆ ಆಗ ಅದು ತಾಜಾ ಅಲ್ಲ, ಹಳೆಯ ಮೊಟ್ಟೆ, ಏನಾದರೂ ಹೆಚ್ಚು ಕಮ್ಮಿ ಆಗಿರಬಹುದು ಎಂದು ಅರ್ಥಮಾಡಿಕೊಳ್ಳಬಹುದು.

4) ಇದಲ್ಲದೆ, ಮೊಟ್ಟೆ ಒಡೆದಾಗ ಹಳದಿ ಭಾಗದ ಬಣ್ಣ ಮತ್ತು ವಿನ್ಯಾಸದಲ್ಲಿ ವ್ಯತ್ಯಾಸವಿದ್ದರೆ ಅದು ಹಾಳಾಗಿರುವ ಸಾಧ್ಯತೆ ಇದೆ. ಇದಲ್ಲದೆ ಕೊಳೆತ ವಾಸನೆ ಬಂದರೆ ಅದು ಪಕ್ಕಾ ಹಾಳಾಗಿದೆ ಎಂದೇ ಅರ್ಥ.

ಆದಾಗ್ಯೂ, ಕೆಲವೊಮ್ಮೆ ನೀರಿನ ಮೇಲೆ ತೇಲುತ್ತಿರುವ ಮೊಟ್ಟೆಗಳು ಒಳಗಿನಿಂದ ಕೊಳೆತಿರುವುದಿಲ್ಲ. ಅವು ಹಳೆಯದಾಗಿರುವ ಕಾರಣ ತೇಲುವುದಕ್ಕೆ ಶುರುವಾಗಿರುತ್ತದೆ. ಅದನ್ನು ಒಡೆದು ನೋಡಿ ವಾಸನೆ, ಬಣ್ಣ ಮತ್ತು ರಚನೆ, ರುಚಿ ಸರಿಯಾಗಿದ್ದರೆ ತಿನ್ನಲು ಬಳಸಬಹುದು.

ಮೊಟ್ಟೆಗಳ ತಾಜಾತನವನ್ನು ನಿರ್ಧರಿಸುವ ನೀರಿನ ಪರೀಕ್ಷೆಯು ಸರಳ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಮೊಟ್ಟೆಗಳು ಮುಳುಗುತ್ತವೆ ಮತ್ತು ತೇಲುತ್ತವೆಯೇ, ನೇರವಾಗಿ ನಿಲ್ಲುತ್ತವೆಯೇ ಅಥವಾ ತೇಲುತ್ತವೆಯೇ ಎಂಬುದನ್ನು ಗಮನಿಸುವುದರ ಮೂಲಕ, ನೀವು ಅವುಗಳ ಸ್ಥಿತಿಯನ್ನು ಸುಲಭವಾಗಿ ನಿರ್ಣಯಿಸಬಹುದು. ತಾಜಾ ಮೊಟ್ಟೆಗಳು ಮುಳುಗುತ್ತವೆ ಮತ್ತು ಕೆಳಭಾಗದಲ್ಲಿ ಉಳಿಯುತ್ತವೆ. ಆದರೆ, ತಾಜಾವಾಗಿರದ ಮೊಟ್ಟೆಗಳು ಅವುಗಳೊಳಗಿನ ಗಾಳಿ ಕೋಶ ಗಾತ್ರ ಹೆಚ್ಚಿಸಿಕೊಂಡ ಕಾರಣ ತೇಲಲು ಆರಂಭಿಸುತ್ತವೆ.

ಈ ಸರಳ ತಂತ್ರವು ಹಾಳಾದ ಮೊಟ್ಟೆಗಳನ್ನು ಬಳಸುವುದನ್ನು ತಡೆಯಲು ನೆರವಾಗುತ್ತದೆ. ನಿಮ್ಮ ಅಡುಗೆಯಲ್ಲಿ ಸುರಕ್ಷತೆ ಮತ್ತು ಗುಣಮಟ್ಟ ಎರಡನ್ನೂ ಖಾತ್ರಿಪಡಿಸುತ್ತದೆ. ಈ ಸುಲಭ ಪರೀಕ್ಷಾ ವಿಧಾನದೊಂದಿಗೆ ಮೊಟ್ಟೆಗಳನ್ನು ನಿಯತವಾಗಿ ಪರಿಶೀಲಿಸುವುದರಿಂದ ತಾಜಾ ಮೊಟ್ಟೆಗಳನ್ನು ಬಳಸುವುದರ ಜೊತೆಗೆ ಆರೋಗ್ಯವನ್ನೂ ಉತ್ತಮ ರೀತಿಯಲ್ಲೇ ಕಾಪಾಡಬಹುದು.

mysore-dasara_Entry_Point