Kitchen Tips: ಮಾರುಕಟ್ಟೆಯಿಂದ ತಂದ ಗೋಧಿಹಿಟ್ಟು ಅಸಲಿನಾ, ಕಲಬೆರಕೆ ಆಗಿದ್ಯಾ, ತಿಳಿಯಲು ಇಲ್ಲಿದೆ ಒಂದಿಷ್ಟು ಸಿಂಪಲ್ ಟ್ರಿಕ್ಸ್‌-kitchen tips how to find out if you bought adulterated wheat flour 4 quick tests to try at home health tips rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಮಾರುಕಟ್ಟೆಯಿಂದ ತಂದ ಗೋಧಿಹಿಟ್ಟು ಅಸಲಿನಾ, ಕಲಬೆರಕೆ ಆಗಿದ್ಯಾ, ತಿಳಿಯಲು ಇಲ್ಲಿದೆ ಒಂದಿಷ್ಟು ಸಿಂಪಲ್ ಟ್ರಿಕ್ಸ್‌

Kitchen Tips: ಮಾರುಕಟ್ಟೆಯಿಂದ ತಂದ ಗೋಧಿಹಿಟ್ಟು ಅಸಲಿನಾ, ಕಲಬೆರಕೆ ಆಗಿದ್ಯಾ, ತಿಳಿಯಲು ಇಲ್ಲಿದೆ ಒಂದಿಷ್ಟು ಸಿಂಪಲ್ ಟ್ರಿಕ್ಸ್‌

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಪ್ರತಿಯೊಂದು ಆಹಾರವು ಕಲಬೆರೆಕೆಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಪ್ರತಿನಿತ್ಯ ನಾವು ಬಳಸುವ ಗೋಧಿಹಿಟ್ಟು ಕಲಬೆರೆಕೆ ಆಗಿದ್ಯಾ ಅಥವಾ ನಾವು ಖರೀದಿ ತಂದಿದ್ದು ಅಸಲಿ ಗೋಧಿಹಿಟ್ಟೇ ಎಂಬುದನ್ನು ತಿಳಿಯಲು ಇಲ್ಲಿದೆ ಕೆಲವು ಸುಲಭ ಟ್ರಿಕ್ಸ್, ನೀವೂ ಪ್ರಯತ್ನಿಸಿ.

ಗೋಧಿಹಿಟ್ಟು
ಗೋಧಿಹಿಟ್ಟು

ಇತ್ತೀಚಿನ ದಿನಗಳಲ್ಲಿ ಜನರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಗುಣಮಟ್ಟದ ಆಹಾರ ಸೇವನೆಗೆ ಆದ್ಯತೆ ನೀಡುತ್ತಿದ್ದಾರೆ. ಅದರಲ್ಲೂ ಡಯೆಟ್ ಪಾಲಿಸುವವರು ಕೆಲವೊಂದು ಆಹಾರಗಳಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದಾರೆ. ಅಂತಹ ಆಹಾರಗಳಲ್ಲಿ ಗೋಧಿಹಿಟ್ಟು ಕೂಡ ಒಂದು.

ಚಪಾತಿ, ದೋಸೆ ಅಂತೆಲ್ಲಾ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಗೋಧಿಹಿಟ್ಟಿನಲ್ಲೂ ಕಲಬೆರಕೆ ಇರಬಹುದು ಎಂದು ಹೇಳಲಾಗುತ್ತದೆ. ಹಾಗಾದರೆ ನೀವು ಮಾರುಕಟ್ಟೆಯಿಂದ ಖರೀದಿ ತಂದ ಗೋಧಿಹಿಟ್ಟು ಅಸಲಿಯೋ ಕಲಬೆರಕೆಯೋ ಎಂದು ತಿಳಿಯುವುದು ಹೇಗೆ? ಇದಕ್ಕಾಗಿ ಇಲ್ಲಿದೆ ಕೆಲವು ಸಿಂಪಲ್ ಟ್ರಿಕ್ಸ್‌, ಈ ವಿಧಾನಗಳ ಮೂಲಕ ನೀವು ಮನೆಯಲ್ಲೇ ಕಲಬೆರಕೆ ಗೋಧಿಹಿಟ್ಟನ್ನು ಕಂಡುಹಿಡಿಯಬಹುದು.

ಕಲಬೆರಕೆ ಗೋಧಿಹಿಟ್ಟಿನ ಅಪಾಯ

ಕಲಬೆರಕೆ ಗೋಧಿಹಿಟ್ಟು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಅಪಾಯವಿದೆ. ಇದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ನಿಗಮ (ಎಫ್‌ಎಸ್‌ಡಿಎ) ತಿಳಿಸಿದೆ. ಇತ್ತೀಚಿಗೆ ಉತ್ತರಪ್ರದೇಶದ ಅಲೀಘರ್‌ನಲ್ಲಿ ಗೋಧಿಹಿಟ್ಟಿನಲ್ಲಿ ಕಲ್ಲಿನ ಪುಡಿ ಇರುವುದನ್ನು ಎಫ್‌ಎಸ್‌ಡಿಎ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ಗೋಧಿಹಿಟ್ಟಿನೊಂದಿಗೆ ಮೈದಾಹಿಟ್ಟು, ಮರಳು, ಚಾಕ್ ಪೌಡರ್‌, ಧಾನ್ಯದ ಹೊಟ್ಟು, ಜೋಳದ ಹಿಟ್ಟನ್ನು ಮಿಶ್ರಣ ಮಾಡಿದರೆ ನಮಗೆ ತಿಳಿಯುವುದಿಲ್ಲ.

ಹಿಟ್ಟು ಕಲಬೆರಕೆಯಾದಾಗ, ವೆಚ್ಚವನ್ನು ಕಡಿತಗೊಳಿಸಲು ಅಥವಾ ನೋಟವನ್ನು ಸುಧಾರಿಸಲು ಹಾನಿಕಾರಕ ಅಥವಾ ಕಡಿಮೆ-ಗುಣಮಟ್ಟದ ವಸ್ತುಗಳನ್ನು ಬೆರೆಸಲಾಗುತ್ತದೆ ಎಂದರ್ಥ. ಇದು ಹಿಟ್ಟಿನ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಾಮಾನ್ಯ ಕಲಬೆರಕೆಗಳೆಂದರೆ ಸೀಮೆಸುಣ್ಣ, ಟಾಲ್ಕಮ್ ಪೌಡರ್, ಮರದ ಪುಡಿ ಮತ್ತು ಬೆಂಜಾಯ್ಲ್ ಪೆರಾಕ್ಸೈಡ್‌ನಂತಹ ಅಪಾಯಕಾರಿ ರಾಸಾಯನಿಕಗಳಾಗಿವೆ.

ಕಲಬೆರಕೆ ಗೋಧಿಹಿಟ್ಟಿನ ಆರೋಗ್ಯದ ಮೇಲಾಗುವ ಪರಿಣಾಮ

ಹಾನಿಕಾರಕ ಪದಾರ್ಥಗಳೊಂದಿಗೆ ಬೆರೆಸಿದ ಹಿಟ್ಟನ್ನು ತಿನ್ನುವುದು ಗಂಭೀರ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಸೀಮೆಸುಣ್ಣ ಮತ್ತು ಟಾಲ್ಕಮ್ ಪೌಡರ್ ನಂತಹ ಸೇರ್ಪಡೆಗಳು ಹಿಟ್ಟಿನ ಪೋಷಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಇತರ ಹಾನಿಕಾರಕ ಪದಾರ್ಥಗಳು ನಿಯಮಿತವಾಗಿ ಸೇವಿಸಿದರೆ ಜೀರ್ಣಕಾರಿ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು ಅಥವಾ ದೀರ್ಘಕಾಲೀನ ಆರೋಗ್ಯದ ತೊಂದರೆಗಳನ್ನು ಉಂಟುಮಾಡಬಹುದು. ಹಾಗಾಗಿ ಕಲಬೆರಕೆ ಹಿಟ್ಟನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

ಮನೆಯಲ್ಲೇ ಗೋಧಿಹಿಟ್ಟಿನ ಶುದ್ಧತೆ ಪರೀಕ್ಷಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್‌

ನಿಂಬೆಹಣ್ಣಿನ ಪರೀಕ್ಷೆ: ಸ್ವಲ್ಪ ಪ್ರಮಾಣದ ಹಿಟ್ಟಿನ ಮೇಲೆ ನಿಂಬೆ ರಸದ ಕೆಲವು ಹನಿಗಳನ್ನು ಹಾಕಿ, ಗುಳ್ಳೆ ಬರಲು ಆರಂಭಿಸಿದರೆ ಅದು ಸೀಮೆಸುಣ್ಣ ಮಿಶ್ರಣವಾಗಿರುವುದನ್ನು ಸೂಚಿಸುತ್ತದೆ. ಶುದ್ಧ ಗೋಧಿಹಿಟ್ಟಿನ ಮೇಲೆ ನಿಂಬೆರಸ ಸುರಿದರೆ ಅದು ಗುಳ್ಳೆ ಬರುವುದಿಲ್ಲ.

ನೀರಿನ ಪರೀಕ್ಷೆ: ಒಂದು ಲೋಟ ನೀರಿಗೆ ಹಿಟ್ಟು ಮಿಶ್ರಣ ಮಾಡಿ. ತೇಲುವ ಕಣಗಳು ಇದ್ದರೆ ಹಿಟ್ಟು ಕಲಬೆರಕೆಯಾಗಿದೆ ಎಂದುಕೊಳ್ಳಬಹುದು. ಶುದ್ಧ ಗೋಧಿಹಿಟ್ಟು ಸಂಪೂರ್ಣವಾಗಿ ಕರಗುತ್ತದೆ, ನೀರು ಸ್ಪಷ್ಟವಾಗುತ್ತದೆ.

ರುಚಿ ಪರೀಕ್ಷೆ: ಸ್ವಲ್ಪ ಹಸಿ ಹಿಟ್ಟನ್ನು ಸವಿಯಿರಿ. ಕಲಬೆರಕೆ ಹಿಟ್ಟು ಸಾಮಾನ್ಯವಾಗಿ ರಾಸಾಯನಿಕಗಳನ್ನು ಸೇರಿಸುವುದರಿಂದ ಕಹಿ ರುಚಿಯನ್ನು ಹೊಂದಿರುತ್ತದೆ. ಶುದ್ಧ ಹಿಟ್ಟು ಈ ಕಹಿಯನ್ನು ಹೊಂದಿರುವುದಿಲ್ಲ ಮತ್ತು ಸಪ್ಪೆ ರುಚಿಯನ್ನು ಹೊಂದಿರುತ್ತದೆ.

ಎಚ್‌ಸಿಎಲ್ ಪರೀಕ್ಷೆ: ಹಿಟ್ಟು ಮತ್ತು ನೀರಿನ ಮಿಶ್ರಣವನ್ನು ತಯಾರಿಸಿ, ನಂತರ ಹೈಡ್ರೋಕ್ಲೋರಿಕ್ ಆಮ್ಲದ ಕೆಲವು ಹನಿಗಳನ್ನು ಸೇರಿಸಿ. ಮಿಶ್ರಣಕ್ಕೆ ಅರಿಶಿನ ಬಣ್ಣದ ಕಾಗದವನ್ನು ಹಾಕಿ. ಕಾಗದದ ಬಣ್ಣ ಕೆಂಪು ಬಣ್ಣಕ್ಕೆ ಬದಲಾದರೆ ಬೋರಿಕ್ ಆಮ್ಲದ ಉಪಸ್ಥಿತಿಯನ್ನು ಸೂಚಿಸುತ್ತದೆ, ಆದರೆ ಶುದ್ಧ ಹಿಟ್ಟು ಕಾಗದದ ಬಣ್ಣವನ್ನು ಬದಲಾಯಿಸುವುದಿಲ್ಲ.

mysore-dasara_Entry_Point