ಮನೆಯಲ್ಲಿ ಸೊಳ್ಳೆಗಳ ಸಮಸ್ಯೆ ಹೆಚ್ಚುತ್ತಿದೆಯಾ, ಚಿಂತೆ ಬೇಡ: ಬಾಳೆಹಣ್ಣಿನ ಸಿಪ್ಪೆಯನ್ನು ಹೀಗೆ ಬಳಸಿ ನೋಡಿ
ಮನೆಯಲ್ಲಿ ಸೊಳ್ಳೆಗಳ ಸಮಸ್ಯೆ ಹೆಚ್ಚುತ್ತಿದೆಯಾ? ಸಂಜೆ ಆದ್ರೆ ಸಾಕು ಎಲ್ಲೆಡೆ ಸೊಳ್ಳೆಗಳ ಕಾಟ ಶುರುವಾಗುತ್ತೆ.ಸೊಳ್ಳೆಗಳು ತುಂಬಾ ಅಪಾಯಕಾರಿ. ಸೊಳ್ಳೆಗಳನ್ನು ತಡೆಗಟ್ಟಲುವಿವಿಧ ರಾಸಾಯನಿಕಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬಾಳೆಹಣ್ಣಿನ ಸಿಪ್ಪೆಯಿಂದ ಅವುಗಳನ್ನು ಸುಲಭವಾಗಿ ಓಡಿಸಬಹುದು. ಇಲ್ಲಿದೆ ಮಾಹಿತಿ.
ಸಂಜೆ ಆದ್ರೆ ಸಾಕು ಸೊಳ್ಳೆಗಳ ಕಾಟ ಶುರುವಾಗುತ್ತದೆ. ಸೊಳ್ಳೆಗಳಿಗೆ ಶ್ರೀಮಂತರ ಮನೆ, ಬಡವರ ಮನೆ ಎಂದಿಲ್ಲ. ಎಲ್ಲಾ ಕಡೆನೂ ಸೊಳ್ಳೆಗಳ ಕಾಟ ಇದ್ದೇ ಇದೆ. ಸೊಳ್ಳೆಗಳು ತುಂಬಾ ಅಪಾಯಕಾರಿ. ಅವು ವೈರಲ್ ಜ್ವರ, ಡೆಂಗ್ಯೂ, ಚಿಕನ್ ಗುನ್ಯಾ ಮುಂತಾದ ಅನೇಕ ರೋಗಗಳಿಗೆ ಕಾರಣವಾಗಬಹುದು. ಸೊಳ್ಳೆಗಳಿಂದ ಉಂಟಾಗುವ ಜ್ವರಗಳು ಮಾರಣಾಂತಿಕವಾಗಬಹುದು. ತೀವ್ರ ಜ್ವರವು ಸೊಳ್ಳೆಗಳಿಂದ ಉಂಟಾಗುತ್ತದೆ. ಆದರೆ, ಸೊಳ್ಳೆಗಳನ್ನು ಹಿಮ್ಮೆಟ್ಟಿಸುವುದು ಅಷ್ಟು ಸುಲಭವಲ್ಲ. ಆದರೂ ಪರಿಣಾಮಕಾರಿ ಮನೆಮದ್ದಿನ ಮೂಲಕ ಸೊಳ್ಳೆಗಳನ್ನು ತೊಡೆದುಹಾಕಬಹುದು.
ಮಲೇರಿಯಾದಂತಹ ಜ್ವರಗಳು ಹರಡುವುದನ್ನು ತಡೆಗಟ್ಟಲು, ಅಂತಹ ಜ್ವರಗಳಿಂದ ನಮ್ಮನ್ನು ನಾವು ರಕ್ಷಿಸಲು ಸೊಳ್ಳೆಗಳನ್ನು ಹಿಮ್ಮೆಟ್ಟಿಸುವುದು ಬಹಳ ಮುಖ್ಯ. ಸೊಳ್ಳೆ ತಡೆಗಟ್ಟುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿದೆ. ಆದರೆ, ಅವುಗಳನ್ನು ಬಳಸುವುದರಿಂದ ಅನೇಕ ರಾಸಾಯನಿಕಗಳು ಗಾಳಿಗೆ ಬಿಡುಗಡೆಯಾಗುತ್ತವೆ. ಅವು ಆರೋಗ್ಯಕ್ಕೂ ಒಳ್ಳೆಯದಲ್ಲ. ಯಾವುದೇ ರಾಸಾಯನಿಕಗಳನ್ನು ಬಳಸದೆ ಕೇವಲ ಬಾಳೆಹಣ್ಣುಗಳಿಂದ ಸೊಳ್ಳೆಗಳನ್ನು ಓಡಿಸಬಹುದು. ಹೌದು, ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತೀರಾ. ಬಾಳೆಹಣ್ಣಿನ ಸಿಪ್ಪೆಯನ್ನು ಅಷ್ಟು ಲಘುವಾಗಿ ತೆಗೆದುಕೊಳ್ಳಬೇಡಿ. ಯಾಕೆಂದರೆ ಸೊಳ್ಳೆಗಳ ತಡೆಗಟ್ಟುವಿಕೆಗೆ ಬಾಳೆಹಣ್ಣಿನ ಸಿಪ್ಪೆ ಬಹಳ ಪ್ರಯೋಜನಕಾರಿ. ಅದನ್ನು ಹೇಗೆ ಬಳಸುವುದು ಎಂಬುದು ಇಲ್ಲಿದೆ.
ಸೊಳ್ಳೆಗಳನ್ನು ತಡೆಗಟ್ಟಲು ಬಾಳೆಹಣ್ಣಿನ ಸಿಪ್ಪೆಯ ಬಳಕೆ
ಸೊಳ್ಳೆಗಳನ್ನು ತಡೆಗಟ್ಟಲು ಬಾಳೆಹಣ್ಣು ತುಂಬಾ ಉಪಯುಕ್ತವಾಗಿದೆ. ಇದಕ್ಕಾಗಿ ನೀವು ತುಂಬಾ ಕಷ್ಟಪಡಬೇಕಾಗಿಲ್ಲ. ಬಾಳೆಹಣ್ಣಿನ ಸಿಪ್ಪೆಯನ್ನು ಮಲಗುವ ಒಂದು ಗಂಟೆ ಮೊದಲು ಕೋಣೆಯ ನಾಲ್ಕು ಮೂಲೆಗಳಲ್ಲಿ ಇಡಬೇಕು. ಬಾಳೆಹಣ್ಣಿನ ಸಿಪ್ಪೆಯ ವಾಸನೆಗೆ ಸೊಳ್ಳೆಗಳು ಬರುವುದಿಲ್ಲ. ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅಥವಾ ಉಸಿರಾಟದ ತೊಂದರೆ ಅಥವಾ ಅಸ್ತಮಾದಿಂದ ಬಳಲುತ್ತಿರುವವರು ಇದ್ದರೆ, ರಾಸಾಯನಿಕ ಆಧಾರಿತ ಉತ್ಪನ್ನಗಳ ಬದಲು ಈ ವಿಧಾನವನ್ನು ಪ್ರಯತ್ನಿಸಬಹುದು.
ಬಾಳೆಹಣ್ಣಿನ ಸಿಪ್ಪೆಯ ಪೇಸ್ಟ್
ಸೊಳ್ಳೆಗಳ ತಡೆಗಟ್ಟುವಿಕೆಗೆ ಬಾಳೆಹಣ್ಣಿನ ಸಿಪ್ಪೆಯ ಪೇಸ್ಟ್ ಅನ್ನು ಸಹ ಬಳಸಬಹುದು. ಇದಕ್ಕಾಗಿ, ಬಾಳೆಹಣ್ಣಿನ ಸಿಪ್ಪೆಗಳನ್ನು ಮಿಕ್ಸಿಯಲ್ಲಿ ಹಾಕಿ ಮೃದುವಾದ ಪೇಸ್ಟ್ ಆಗಿ ಮಾಡಬೇಕು. ಈ ಪೇಸ್ಟ್ ಅನ್ನು ಮನೆಯ ಪ್ರತಿಯೊಂದು ಮೂಲೆಗೂ ಹಚ್ಚಬೇಕು. ಇದರ ವಾಸನೆ ಸೊಳ್ಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಸೊಳ್ಳೆಗಳು ಇರುವಲ್ಲಿ ಬಾಳೆಹಣ್ಣಿನ ಸಿಪ್ಪೆಯ ವಾಸನೆಯನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಹೀಗಾಗಿ ಸೊಳ್ಳೆಗಳನ್ನು ತಡೆಗಟ್ಟಬಹುದು.
ಬಾಳೆಹಣ್ಣಿನ ಸಿಪ್ಪೆಯ ಹೊಗೆ
ಬಾಳೆಹಣ್ಣಿನ ಸಿಪ್ಪೆಯನ್ನು ಸುಡುವ ಮುಖಾಂತರ ಸೊಳ್ಳೆಗಳನ್ನು ಓಡಿಸಬಹುದು. ಇದಕ್ಕಾಗಿ, ಬಾಳೆಹಣ್ಣಿನ ಸಿಪ್ಪೆಗಳನ್ನು ಒಣಗಿಸಿ ಸಂರಕ್ಷಿಸಬೇಕು. ನಂತರ ಅದರ ಪುಡಿಯನ್ನು ಮಾಡಿ ಧೂಪವನ್ನು ಸುಡಬೇಕು. ಇದರ ಹೊಗೆಯನ್ನು ಇಡೀ ಮನೆಯನ್ನು ತಲುಪುವಂತೆ ಮಾಡಿ. ಸೊಳ್ಳೆಗಳು ಈ ಹೊಗೆಯನ್ನು ಇಷ್ಟಪಡುವುದಿಲ್ಲ. ಈ ವಾಸನೆ ಮತ್ತು ಹೊಗೆ ಆರೋಗ್ಯಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಇದನ್ನು ಸಾವಯವ ಸೊಳ್ಳೆ ನಿವಾರಕ ಎಂದೂ ಕರೆಯಬಹುದು.
ಸೊಳ್ಳೆಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ಡೆಂಗ್ಯೂ ಸಹ ಪ್ರಾಣಹಾನಿಗೆ ಕಾರಣವಾಗಬಹುದು. ಮಳೆ ಬಂದಾಗ ಸೊಳ್ಳೆಗಳು ಹೇರಳವಾಗಿ ಬರುತ್ತವೆ. ಮಳೆ ನಿಂತ ನಂತರವೂ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ. ಮಲೇರಿಯಾ ಮತ್ತು ಡೆಂಗ್ಯೂನಂತಹ ಜ್ವರಗಳನ್ನು ತೊಡೆದುಹಾಕಲು ಬಾಳೆಹಣ್ಣಿನ ಸಿಪ್ಪೆಯನ್ನು ಸೊಳ್ಳೆ ನಿವಾರಕವಾಗಿ ಬಳಸಲು ಪ್ರಯತ್ನಿಸಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)