ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವ ಮೊದಲು ಅದನ್ನು ಸ್ವಚ್ಛಗೊಳಿಸುವ ವಿಧಾನ ಹೀಗೆ
ಮಣ್ಣಿನ ಮಡಕೆಗಳನ್ನು ಅಡುಗೆ ಮತ್ತು ಕುಡಿಯುವ ನೀರಿಗೆ ಬಳಸಲಾಗುತ್ತದೆ. ಇದನ್ನು ಬಳಸುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಪಾತ್ರೆಗಳು ಒಡೆಯುವುದು ಮಾತ್ರವಲ್ಲದೆ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ.

ಹಿಂದೆಲ್ಲಾ ಆಹಾರವನ್ನು ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಲಾಗುತ್ತಿತ್ತು. ಬಳಿಕ ಸ್ಟೀಲ್, ನಾನ್‌ಸ್ಟಿಕ್ ಪಾತ್ರೆಗಳಲ್ಲಿ ಬೇಯಿಸಲು ಪ್ರಾರಂಭಿಸಿದರು. ಆದರೆ, ಮಣ್ಣಿನ ಪಾತ್ರೆಗಳಲ್ಲಿ ಆಹಾರ ಬೇಯಿಸುವುದು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂದು ಇತ್ತೀಚೆಗೆ ಮತ್ತೆ ಈ ಟ್ರೆಂಡ್ ಪ್ರಾರಂಭವಾಗಿದೆ. ಹೀಗಾಗಿ ಮಣ್ಣಿನ ಪಾತ್ರೆಗಳನ್ನು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ. ಪಾನ್, ತವಾ, ಪಾತ್ರೆ, ಬಾಟಲಿ, ಲೋಟ ಎಲ್ಲಾ ರೀತಿಯ ಪಾತ್ರೆಗಳನ್ನು ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ.
ಇತ್ತೀಚೆಗೆ ಬಹುತೇಕ ಮಂದಿ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುತ್ತಿದ್ದಾರೆ, ಹಾಗೂ ತಟ್ಟೆಯಲ್ಲಿ ತಿನ್ನಲು ಕೂಡ ಕೆಲವರು ಮಣ್ಣಿನ ಬಟ್ಟಲನ್ನು ಬಳಸುತ್ತಿದ್ದಾರೆ. ಆ ಪಾತ್ರೆಗಳನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಮಡಕೆಗಳನ್ನು ಬಳಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಇದರಿಂದ ಪಾತ್ರೆಗಳ ಬಳಕೆಯು ಆರೋಗ್ಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
ಮಡಕೆಗಳನ್ನು ಖರೀದಿಸುವಾಗ, ಈ ಪಾತ್ರೆಗಳ ಒಳಭಾಗದಲ್ಲಿ ಯಾವುದೇ ಗ್ಲೇಜ್ ಲೇಪನವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯುಎಸ್ ಫುಡ್ ಅಂಡ್ ಡ್ರಗ್ ರಿಪೋರ್ಟ್ ಪ್ರಕಾರ, ಹೆಚ್ಚಿನ ಲೇಪನಗಳು ಸೀಸ ಮತ್ತು ಕ್ಯಾಡ್ಮಿಯಂ ಅನ್ನು ಹೊಂದಿರುತ್ತವೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಆದ್ದರಿಂದ ನೀವು ಮಣ್ಣಿನ ಮಡಕೆಗಳನ್ನು ಖರೀದಿಸುವಾಗ ಹೊಳೆಯುವ ಮಣ್ಣಿನ ಪಾತ್ರೆಗಳನ್ನು ಖರೀದಿಸಬೇಡಿ. ಅವುಗಳ ಮೇಲೆ ಲೇಪನ ಮಾಡಲು ರಾಸಾಯನಿಕಗಳನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಮಣ್ಣಿನ ಮಡಕೆಯ ನೀರು ಕುಡಿಯುವುದರ ಪ್ರಯೋಜನಗಳು
ಎಣ್ಣೆ ಹಚ್ಚಿ
ನೀವು ಮಣ್ಣಿನ ಪಾತ್ರೆಗಳನ್ನು ಖರೀದಿಸಿ ಮನೆಗೆ ತಂದ ತಕ್ಷಣ ಅವುಗಳನ್ನು ಬಳಸಬೇಡಿ. ಮೊದಲು ಅವುಗಳನ್ನು ನೀರಿನಲ್ಲಿ ನೆನೆಸಿ ಮತ್ತು ಕನಿಷ್ಠ ರಾತ್ರಿಯಿಡೀ ಒಣಗಿಸಿ. ನಂತರ ಅವುಗಳನ್ನು ಎಣ್ಣೆಯಿಂದ ಲೇಪಿಸಿ ಇದರಿಂದ ಆಹಾರವು ಮಣ್ಣಿನ ಮಡಕೆಗಳಿಂದ ಹೀರಲ್ಪಡುವುದಿಲ್ಲ.
ಸಾಬೂನಿನಿಂದ ತೊಳೆಯಬೇಡಿ
ಮಣ್ಣಿನ ಮಡಕೆಯಲ್ಲಿ ಲೀಚಿಂಗ್ ಗುಣವಿದೆ. ಈ ಪಾತ್ರೆಗಳಿಗೆ ಸಾಬೂನನ್ನು ಹಚ್ಚಿದ ತಕ್ಷಣ, ಅವು ಅದನ್ನು ಹೀರಿಕೊಳ್ಳುತ್ತವೆ. ಅದರಲ್ಲಿ ಆಹಾರವನ್ನು ಬೇಯಿಸಿದರೆ, ಅದರಲ್ಲಿನ ಆಹಾರದೊಂದಿಗೆ ಸಾಬೂನನ್ನು ಬೆರೆಸಲಾಗುತ್ತದೆ. ಆದ್ದರಿಂದ ಮಣ್ಣಿನ ಮಡಕೆಗಳನ್ನು ಸಾಬೂನಿನಿಂದ ತೊಳೆಯುವ ತಪ್ಪನ್ನು ಮಾಡಬೇಡಿ.
ನೀವು ಮಣ್ಣಿನ ಮಡಕೆಗಳನ್ನು ಖರೀದಿಸುವಾಗ ಪಾತ್ರೆಯು ದಪ್ಪ ಮತ್ತು ಭಾರವಾಗಿರಬೇಕು. ಇದರಿಂದ ಅಡುಗೆ ಮಾಡುವಾಗ ಅವು ಒಡೆಯುವುದಿಲ್ಲ. ಮಡಕೆ ತೆಳುವಾಗಿದ್ದರೆ ಅಡುಗೆ ಮಾಡುವಾಗ ಅವು ಒಡೆಯುವ ಅಪಾಯವಿದೆ. ಮಡಕೆಯ ತಳಭಾಗವು ಬಲವಾಗಿರಬೇಕು ಮತ್ತು ಇದನ್ನು ಅಡುಗೆ ಉದ್ದೇಶಗಳಿಗಾಗಿ ಮಾತ್ರ ತಯಾರಿಸಬೇಕು. ಮಡಕೆಯ ಕೆಳಭಾಗಕ್ಕೆ ಕೈಯಿಂದ ಹೊಡೆದಾಗ ಅದು ಬಲವಾದ ಲೋಹದಂತೆ ಶಬ್ಧ ಹೊರಹೊಮ್ಮಿಸಬೇಕು. ಆ ಶಬ್ಧವು ಮಡಕೆಯ ಆಂತರಿಕ ರಚನೆಯು ಬಲವಾಗಿದೆ ಎಂದು ಸೂಚಿಸುತ್ತದೆ.
ಮಣ್ಣಿನ ಮಡಕೆಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಬಾರದು. ಆದರೆ ಉಗುರುಬೆಚ್ಚಗಿನ ನೀರು ಮತ್ತು ಅಡುಗೆ ಸೋಡಾದಿಂದ ಸ್ವಚ್ಛಗೊಳಿಸಬೇಕು. ಇದರಿಂದ ಮಣ್ಣಿನ ಮಡಕೆಗಳಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ.
ವಿಭಾಗ