ಬೇಸಿಗೆಯಲ್ಲಿ ಪುದಿನಾ ಎಲೆಗಳು ಬಾಡದೆ, ಕೆಲವು ದಿನಗಳವರೆಗೆ ತಾಜಾವಾಗಿರಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆಯಲ್ಲಿ ಪುದಿನಾ ಎಲೆಗಳು ಬಾಡದೆ, ಕೆಲವು ದಿನಗಳವರೆಗೆ ತಾಜಾವಾಗಿರಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಬೇಸಿಗೆಯಲ್ಲಿ ಪುದಿನಾ ಎಲೆಗಳು ಬಾಡದೆ, ಕೆಲವು ದಿನಗಳವರೆಗೆ ತಾಜಾವಾಗಿರಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಸೊಪ್ಪುಗಳು ಬಹಳ ಬೇಗ ಬಾಡಿ ಹೋಗುತ್ತವೆ. ಪುದಿನಾ ಎಲೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಹಾಗಂತ ಪುದಿನಾ ಎಲೆಗಳನ್ನು ತಾಜಾವಾಗಿ ಇರಿಸುವುದು ಅಸಾಧ್ಯ ಅಂತೇನಲ್ಲ. ಈ ಟಿಪ್ಸ್ ಫಾಲೋ ಮಾಡಿದ್ರೆ ಕನಿಷ್ಠ 1 ವಾರ ‍ಪುದಿನಾ ಎಲೆ ಬಾಡದಂತಿರುತ್ತದೆ.

ಬೇಸಿಗೆಯಲ್ಲಿ ಪುದಿನಾ ಎಲೆಗಳು ಬಾಡದೆ, ಕೆಲವು ದಿನಗಳವರೆಗೆ ತಾಜಾವಾಗಿರಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ
ಬೇಸಿಗೆಯಲ್ಲಿ ಪುದಿನಾ ಎಲೆಗಳು ಬಾಡದೆ, ಕೆಲವು ದಿನಗಳವರೆಗೆ ತಾಜಾವಾಗಿರಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಬೇಸಿಗೆಯಲ್ಲಿ ಬಿಸಿಲಿಗೆ ಕೊತ್ತಂಬರಿ, ಪಾಲಾಕ್‌, ಪುದಿನಾದಂತಹ ಸೊಪ್ಪಗಳನ್ನು ತಾಜಾವಾಗಿ ಇರಿಸುವುದು ಖಂಡಿತ ಸವಾಲು. ತಾಜಾ ಸೊಪ್ಪನ್ನು ಖರೀದಿಸಿ ತಂದು ಫ್ರಿಜ್‌ನಲ್ಲಿ ಇಟ್ಟರೂ ಬೇಗನೆ ಬಾಡಿ ಹೋಗುತ್ತದೆ. ಸೂರ್ಯ ಕಿರಣಗಳ ಪ್ರತಾಪಕ್ಕೆ ಖರೀದಿಸಿ ತಂದ 2 ಗಂಟೆಗಳಲ್ಲಿ ಸೊಪ್ಪು ಬಾಡಿ ಹೋಗುತ್ತದೆ. 100 ಗ್ರಾಂ ಇದ್ದ ಸೊಪ್ಪು ಕೆಲ ಹೊತ್ತಿಗೆ ಬಾಡಿ ಹೋಗಿ 20 ಗ್ರಾಂ ನಷ್ಟಾಗುತ್ತದೆ. ಅಲ್ಲದೇ ಬೇಗನೆ ಒಣಗುವ ಕಾರಣ ಬಳಸುವುದು ಕಷ್ಟಸಾಧ್ಯವಾಗುತ್ತದೆ.

ಹಾಗಂತ ಬೇಸಿಗೆಯಲ್ಲಿ ಪುದಿನಾ ಎಲೆಗಳನ್ನು ತಾಜಾವಾಗಿ ಇಡುವುದು ಅಸಾಧ್ಯ ಅಂತೇನಲ್ಲ. ಬಿಸಿಲಿನ ದಿನಗಳಲ್ಲಿ ಪುದಿನಾ ಎಲೆ ಸ್ವಚ್ಛ ಮಾಡಲು ಹಾಗೂ ತಾಜಾವಾಗಿ ಇರಿಸಲು ಕೆಲವೊಂದು ಸಲಹೆಗಳನ್ನು ತಪ್ಪದೇ ಪಾಲಿಸಬೇಕು. ಈ ಟಿಪ್ಸ್‌ಗಳನ್ನು ಅನುಸರಿಸುವುದರಿಂದ ಒಂದು ವಾರದವರೆಗೆ ಪುದಿನಾ ಎಲೆಗಳನ್ನು ತಾಜಾವಾಗಿರುತ್ತವೆ, ಮಾತ್ರವಲ್ಲ ಅದರ ಸುವಾಸನೆಗೆ ಧಕ್ಕೆಯಾಗದಂತೆ ಬಳಸಬಹುದು. ನೀವು ಪುದಿನಾ ಹೆಚ್ಚಿಗೆ ಬಳಸುವವರಾದರೆ ಈ ಟಿಪ್ಸ್ ಅನುಸರಿಸಿ ನೋಡಿ.

ಪುದಿನಾ ಸ್ವಚ್ಛ ಮಾಡುವ ವಿಧಾನ

ಪುದಿನಾ ಎಲೆಗಳನ್ನು ತೊಳೆಯಿರಿ: ಪುದಿನಾ ಸೊಪ್ಪುಗಳನ್ನು ಖರೀದಿಸಿದ ನಂತರ ಅವುಗಳ ಕಾಂಡ, ಎಲೆಗಳನ್ನು ನೀಟಾಗಿ ತೊಳೆಯಿರಿ. ಖರೀದಿಸಿ ತಂದ ಕೂಡಲೇ ಟ್ಯಾಪ್ ನೀರಿನಲ್ಲಿ ಸೊಪ್ಪನ್ನು ತೊಳೆದು ಸ್ವಚ್ಛ ಮಾಡಿ. ಇದರಿಂದ ರಾಸಾಯನಿಕ ಅಂಶಗಳು ಸ್ವಚ್ಛವಾಗುತ್ತವೆ. ಈ ರೀತಿ ಮಾಡುವುದರಿಂದ ಎಲೆಗಳು ಬೇಗನೆ ಹಾಳಾಗದಂತೆ ನೋಡಿಕೊಳ್ಳಬಹುದು.

ಎಲೆಗಳು ಹಾಳಾಗದಂತೆ ತೊಳೆಯುವುದು ಮುಖ್ಯ: ಪುದಿನಾ ಎಲೆಗಳನ್ನು ತೊಳೆಯುವಾಗ ಎಲೆಗಳಿಗೆ ಹಾನಿಯಾಗದಂತೆ ತೊಳೆಯುವುದು ಮುಖ್ಯವಾಗುತ್ತದೆ. ಎಲೆಗಳನ್ನು ಗಟ್ಟಿಯಾಗಿ ಉಜ್ಜುವುದರಿಂದ ಎಲೆಗಳು ಕಿತ್ತು ಹೋಗಬಹುದು, ತುಂಡಾಗಬಹುದು. ಆದ್ದರಿಂದ ಇವು ಬಳಸಲು ಯೋಗ್ಯವಾಗದೇ ಇರಬಹುದು.

ಪುದಿನ ಎಲೆಗಳನ್ನು ಒಣಗಿಸಿ: ಪುದಿನಾ ಎಲೆಗಳು ಹಾಳಾಗದಂತೆ ನೀಟಾಗಿ ತೊಳೆದ ನಂತರ ಇದರಲ್ಲಿ ನೀರಿನಾಂಶ ಇಲ್ಲದಂತೆ ಮಾಡಲು ಸೊಪ್ಪುಗಳನ್ನು ಅಲ್ಲಾಡಿಸಿ. ತೇವಾಂಶ ಇದ್ದರೆ ಎಲೆಗಳು ಬೇಗನೆ ಹಾಳಾಗುತ್ತವೆ. ತೊಳೆದ ನಂತರ ಟವಲ್ ಅಥವಾ ಟಿಶ್ಯೂವಿನ ಸಹಾಯದಿಂದ ಸೊಪ್ಪಿನಲ್ಲಿ ನೀರಿನಾಂಶ ಇರದಂತೆ ನೋಡಿಕೊಳ್ಳಿ.

ಪುದಿನಾ ಸೊಪ್ಪು ಸಂಗ್ರಹಿಸಿ ಇಡುವ ವಿಧಾನ

  • ಬೇಸಿಗೆಯಲ್ಲಿ ಪುದಿನಾ ಎಲೆಗಳು ತಾಜಾವಾಗಿರಲು ಹೂಗುಚ್ಛ ವಿಧಾನವು ಉತ್ತಮವಾಗಿದೆ. ಇದಕ್ಕಾಗಿ ಪುದಿನಾ ಸೊಪ್ಪಿನ ಬುಡವನ್ನು ಕತ್ತರಿಸಿ. ನಂತರ ಅರ್ಧ ಇಂಚು ನೀರು ತುಂಬಿದ ಬಾಟಲಿಯಲ್ಲಿ ಪುದಿನಾದ ದಂಟುಗಳನ್ನು ಹಾಕಿ, ಸೊಪ್ಪುಗಳು ಬಾಟಲಿಯ ಮೇಲ್ಭಾಗದಲ್ಲಿ ಇರಬೇಕು. ನಂತರ ಎಲೆಗಳನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿಡಿ. ಎರಡು ದಿನಗಳಿಗೊಮ್ಮೆ ನೀರು ಬದಲಿಸಿದರೆ ಒಂದು ವಾರಕ್ಕಿಂತ ಹೆಚ್ಚು ಕಾಲ ಪುದಿನಾ ಸೊಪ್ಪು ತಾಜಾವಾಗಿರುತ್ತದೆ.
  • ಪುದಿನಾ ಎಲೆಗಳನ್ನು ಆರಿಸಿ ಟಿಶ್ಯೂ ಪೇಪರ್‌ನಿಂದ ಮುಚ್ಚಿದ ಪ್ಲಾಸ್ಟಿಕ್ ಜಾಲರಿ ಚೀಲದಲ್ಲಿ ಸಂಗ್ರಹಿಸಿ ಇಡಿ. ನೀವು ಪ್ಲಾಸ್ಟಿಕ್ ಜಾಲರಿ ಚೀಲದಲ್ಲಿ ಇರಿಸಿದಾಗ ಆ ಚೀಲ ಒದ್ದೆಯಾಗಿರಬೇಕು. ನಂತರ ಎಲೆಗಳನ್ನು ಅದರಲ್ಲಿ ಇರಿಸಿ, ಗಾಳಿಯಾಡುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಚೀಲವನ್ನು ಒಂದು ಡ್ರಾಯರ್‌ನಲ್ಲಿಡಿ ಮತ್ತು ಪ್ರತಿ ಎರಡು ಗಂಟೆಗಳಿಗೊಮ್ಮೆ ಪುದಿನಾ ಸೊಪ್ಪಿನ ಮೇಲೆ ನೀರು ಚಿಮುಕಿಸಲು ಮರೆಯಬೇಡಿ. ಈ ರೀತಿ ಮಾಡುವುದರಿಂದ ಪುದಿನಾ ಎಲೆ ಕನಿಷ್ಠ 5 ದಿನಗಳವರೆಗೆ ತಾಜಾವಾಗಿರುತ್ತದೆ.

    ಇದನ್ನೂ ಓದಿ: Cucumber Storage: ಸೌತೆಕಾಯಿ ಕೆಡದಂತೆ ತಾಜಾವಾಗಿರಿಸಲು ಇಲ್ಲಿದೆ ಸುಲಭ ಉಪಾಯ; ನೀವೂ ಮನೆಯಲ್ಲಿ ಟ್ರೈ ಮಾಡಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.