ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲದಲ್ಲಿ ಆಹಾರಗಳ ಮೇಲೆ, ಅಡುಗೆಮನೆಯಲ್ಲಿ ಸೊಳ್ಳೆ, ನೊಣ ಮುತ್ತುವುದನ್ನು ತಡೆಯಲು ಇಲ್ಲಿದೆ ಒಂದಿಷ್ಟು ಸಿಂಪಲ್‌ ಟ್ರಿಕ್ಸ್‌

ಮಳೆಗಾಲದಲ್ಲಿ ಆಹಾರಗಳ ಮೇಲೆ, ಅಡುಗೆಮನೆಯಲ್ಲಿ ಸೊಳ್ಳೆ, ನೊಣ ಮುತ್ತುವುದನ್ನು ತಡೆಯಲು ಇಲ್ಲಿದೆ ಒಂದಿಷ್ಟು ಸಿಂಪಲ್‌ ಟ್ರಿಕ್ಸ್‌

ಆಹಾರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಪ್ರತಿ ಋತುವಿನಲ್ಲೂ ಏನಾದರೂ ಸಮಸ್ಯೆಗಳು ಇದ್ದೇ ಇರುತ್ತವೆ. ಅದರಲ್ಲೂ, ಮಳೆಗಾಲದಲ್ಲಿ ಹೆಚ್ಚಿನ ತೇವಾಂಶ ಮತ್ತು ನೀರು ನಿಲ್ಲುವ ಕಾರಣದಿಂದ ಸೊಳ್ಳೆಗಳು ವೇಗವಾಗಿ ಬೆಳೆಯುತ್ತವೆ. ಅಡುಗೆಮನೆ ಹಾಗೂ ಆಹಾರಗಳ ಮೇಲೆ ಸೊಳ್ಳೆ ಮುತ್ತಿಕೊಳ್ಳುವುದನ್ನು ತಡೆಯಲು ಇಲ್ಲಿದೆ ಉಪಾಯ (ಬರಹ: ಪ್ರಿಯಾಂಕ ಗೌಡ)

ಮಳೆಗಾಲದಲ್ಲಿ ಆಹಾರಗಳ ಮೇಲೆ, ಅಡುಗೆಮನೆಯಲ್ಲಿ ಸೊಳ್ಳೆ, ನೊಣ ಮುತ್ತುವುದನ್ನು ತಡೆಯಲು ಇಲ್ಲಿದೆ ಒಂದಿಷ್ಟು ಸಿಂಪಲ್‌ ಟ್ರಿಕ್ಸ್‌
ಮಳೆಗಾಲದಲ್ಲಿ ಆಹಾರಗಳ ಮೇಲೆ, ಅಡುಗೆಮನೆಯಲ್ಲಿ ಸೊಳ್ಳೆ, ನೊಣ ಮುತ್ತುವುದನ್ನು ತಡೆಯಲು ಇಲ್ಲಿದೆ ಒಂದಿಷ್ಟು ಸಿಂಪಲ್‌ ಟ್ರಿಕ್ಸ್‌

ಬಿಸಿಲಿನ ತಾಪದಿಂದ ಹೊರಬಂದ ಜನರು ಮಾನ್ಸೂನ್‌ ಋತುವನ್ನು ಆನಂದಿಸುತ್ತಿದ್ದಾರೆ. ಬೇಸಿಗೆಗಿಂತ ಈ ಋತುವು ವಿಶ್ರಾಂತಿಯನ್ನು ನೀಡುತ್ತದೆ. ಆದರೆ, ಮಾನ್ಸೂನ್ ಬಂತೆಂದರೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ, ಈ ಋತುವಿನಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿರುತ್ತದೆ. ಮುಂಗಾರು ಮಳೆಯ ನಡುವೆ ನಿಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.

ಸೊಳ್ಳೆಗಳು ಆಹಾರ ಮಾಲಿನ್ಯದ ಪ್ರಮುಖ ಮೂಲಗಳಾಗಿವೆ. ಮಳೆಗಾಲದ ಸಮಯದಲ್ಲಿ ಮನೆಯ ಸುತ್ತಮುತ್ತ, ಕೈತೋಟ, ಉದ್ಯಾನವನದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ, ಇದು ಸೊಳ್ಳೆಗಳ ಸಂತಾನೋತ್ಪತಿ ಕೇಂದ್ರವಾಗಿ ಬದಲಾಗುತ್ತದೆ. ಅಲ್ಲದೆ ಅಡುಗೆ ಮನೆ, ಕೂಲರ್‌ಗಳು, ಹವಾನಿಯಂತ್ರಣಗಳಲ್ಲಿ ಶೇಖರಿಸಿಟ್ಟ ನೀರು ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಬಹುದು.

ಬಹುತೇಕ ಮಂದಿ ಇದಕ್ಕಾಗಿ ಸೊಳ್ಳೆ ನಿವಾರಕ ಮತ್ತು ಸೊಳ್ಳೆ ಬ್ಯಾಟ್ ಅನ್ನು ಬಳಸುತ್ತಾರೆ. ಇದರಿಂದ ದೇಹವನ್ನು ರಕ್ಷಿಸಲು ಉತ್ತಮ ಮಾರ್ಗವಾಗಿದ್ದರೂ, ಸೊಳ್ಳೆಗಳು ಮನೆಗೆ ಎಂಟ್ರಿ ಕೊಟ್ಟಾಗಿರುತ್ತದೆ. ಅದರಲ್ಲೂ ಅಡುಗೆ ಮನೆ ಮತ್ತು ಆಹಾರದತ್ತ ಸೊಳ್ಳೆಗಳು ಸುಳಿಯಂತೆ ಎಚ್ಚರಿಕೆ ವಹಿಸಬೇಕು.

ಟ್ರೆಂಡಿಂಗ್​ ಸುದ್ದಿ

ಮಾನ್ಸೂನ್‌ನಲ್ಲಿ ಸೊಳ್ಳೆ ಬಾರದಂತೆ ತಡೆಯಲು ಟ್ರಿಕ್ಸ್

ಸ್ವಚ್ಛತೆ ಕಾಪಾಡಿ: ಮಳೆಗಾಲದಲ್ಲಿ ಮನೆಯ ಎಲ್ಲಾ ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಮಳೆ ಸುರಿದು ನಿಂತ ಬಳಿಕ, ಮನೆಯ ಸುತ್ತಮುತ್ತ ಅಲ್ಲಲ್ಲಿ ಕೊಳಕು ನೀರು ಸಂಗ್ರಹವಾಗಿರುತ್ತದೆ. ಇವುಗಳಿಂದ ಸೊಳ್ಳೆಗಳ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗುತ್ತದೆ. ಅದರಲ್ಲೂ ಈ ಸೊಳ್ಳೆಗಳು ಹೆಚ್ಚಾಗಿ ಅಡುಗೆ ಮನೆಯತ್ತ ದಾಂಗುಡಿ ಇಡುತ್ತವೆ. ಹೀಗಾಗಿ ಮಳೆ ಬಂದು ನಿಂತ ಕೂಡಲೇ ಮನೆಯ ಸುತ್ತಮುತ್ತ ಪದೇ ಪದೇ ಸ್ವಚ್ಛಗೊಳಿಸಬೇಕು. ಎಲ್ಲೂ ಕೂಡ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಹಣ್ಣು-ತರಕಾರಿಗಳನ್ನು ತೊಳೆಯಬೇಕು: ಮಾನ್ಸೂನ್ ಋತುವಿನಲ್ಲಿ, ಆಹಾರ ಮಾಲಿನ್ಯವನ್ನು ತಪ್ಪಿಸಲು ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆಯುವುದು ಬಹಳ ಮುಖ್ಯ. ಮಾರುಕಟ್ಟೆಯಿಂದ ತರಕಾರಿಗಳು ಮತ್ತು ಹಣ್ಣುಗಳನ್ನು ಖರೀದಿಸಿದ ನಂತರ, ಎಲ್ಲರೂ ಫ್ರಿಜ್‌ನಲ್ಲಿ ಶೇಖರಿಸಿಡುತ್ತಾರೆ. ಆದರೆ, ಫ್ರಿಜ್‌ನಲ್ಲಿಡುವ ಮುನ್ನ ಇವನ್ನು ಚೆನ್ನಾಗಿ ತೊಳೆದು ಇಡಬೇಕು. ಅಲ್ಲದೇ ಫ್ರಿಜ್‌ನ ಒಳಗೂ ಸ್ವಚ್ಛವಾಗಿದೆಯೇ ಎಂಬುದನ್ನು ಗಮನಿಸಬೇಕು. ನಂತರ, ಈ ಹಣ್ಣುಗಳು ಅಥವಾ ತರಕಾರಿಗಳನ್ನು ಬಳಸುವ ಮೊದಲು, ಮತ್ತೆ ಇನ್ನೊಂದು ಬಾರಿ ತೊಳೆಯಬೇಕು. ಹೆಚ್ಚಿನ ತೇವಾಂಶವು ಸೊಳ್ಳೆಗಳಿಂದ ಆಹಾರ ಮಾಲಿನ್ಯಕ್ಕೆ ಒಳಗಾಗುವ ಕಾರಣದಿಂದಾಗಿ, ನೈರ್ಮಲ್ಯ ಪ್ರೋಟೋಕಾಲ್‌ಳನ್ನು ಅನುಸರಿಸುವುದು ತುಂಬಾ ಮುಖ್ಯ.

ಆಹಾರವನ್ನು ಹೊರಗಿಡಬೇಡಿ: ಆಹಾರವನ್ನು ಹೆಚ್ಚು ಹೊತ್ತು ತೆರೆದ ಸ್ಥಳದಲ್ಲಿ ಇಡುವುದು ಸೊಳ್ಳೆಗಳು ಆಹಾರದ ಮೇಲೆ ಪರಿಣಾಮ ಬೀರಲು ಒಂದು ಪ್ರಮುಖ ಕಾರಣವಾಗಿದೆ. ಆಹಾರವನ್ನು ತೆರೆದ ಪರಿಸರದಲ್ಲಿ ಇಡಬೇಕಾದರೆ ಅದನ್ನು ಸರಿಯಾಗಿ ಮುಚ್ಚಬೇಕು. ಗಾಳಿಯಾಡದ ಪಾತ್ರೆಯಲ್ಲಿ ಆಹಾರವನ್ನು ಸಂಗ್ರಹಿಸಬೇಕು. ಇಲ್ಲದಿದ್ದಲ್ಲಿ ಇದರಿಂದ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗಬಹುದು.

ಕರ್ಪೂರ: ಕರ್ಪೂರವು ಬಣ್ಣರಹಿತ ಮತ್ತು ಮೇಣದಂಥ ವಸ್ತುವಾಗಿದ್ದು, ಇದರ ಕಡು ಪರಿಮಳಕ್ಕೆ ಸೊಳ್ಳೆಗಳು ಹತ್ತಿರಕ್ಕೂ ಸುಳಿಯಲ್ಲ. ಹಾಗಂತ ಅಡುಗೆ ಮನೆಯಲ್ಲಿ ಕರ್ಪೂರವನ್ನು ಹಚ್ಚಬೇಡಿ. ಇದರಿಂದ ಆಹಾರದ ರುಚಿಯ ಮೇಲೆ ಪರಿಣಾಮ ಬೀರಬಹುದು. ಆದರೆ, ಈ ಕರ್ಪೂರವನ್ನು ಮನೆಯ ವಿವಿಧ ಭಾಗಗಳಲ್ಲಿ ಬೆಳಗಿಸಿ ಸೊಳ್ಳೆಗಳ ನಿರ್ಮೂಲನೆ ಮಾಡಬಹುದು. ಹಾಗೆಯೇ, ಯಾವಾಗಲೂ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಬೇಕು. ಕಿಟಕಿ, ಬಾಗಿಲು ತೆರೆದಿದ್ದರೆ ಸೊಳ್ಳೆಗಳು ಮನೆಯೊಳಗೆ ಬಂದು ಆಹಾರ ಪದಾರ್ಥಗಳಿಗೆ ಸೋಂಕು ತಗುಲಿಸುವ ಸಾಧ್ಯತೆ ಹೆಚ್ಚಿರುತ್ತದೆ.

ನಿಂಬೆ ಮತ್ತು ಲವಂಗ: ನಿಂಬೆ ಮತ್ತು ಲವಂಗವು ಸೊಳ್ಳೆಗಳನ್ನು ದೂರ ಇಡುವಲ್ಲಿ ಪ್ರಯೋಜನಕಾರಿಯಾಗಿದೆ. ಇದೊಂದು ನೈಸರ್ಗಿಕ ವಿಧಾನವಾಗಿದ್ದು, ಯಾವುದೇ ರೀತಿಯ ಕೀಟ, ಸೊಳ್ಳೆಗಳಿಂದ ಆಹಾರವನ್ನು ರಕ್ಷಿಸಲು ಬಹಳ ಹಿಂದಿನಿಂದಲೂ ಇದನ್ನು ಬಳಸಲಾಗುತ್ತಿದೆ. ಒಂದು ಸ್ವಚ್ಛ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಅರ್ಧ ಕತ್ತರಿಸಿದ ನಿಂಬೆ ಹಣ್ಣು ಮತ್ತು ಲವಂಗವನ್ನು ಹಾಕಿ. ಇದನ್ನು ನೀವು ತಯಾರಿಸಿಟ್ಟ ಆಹಾರದ ಬಳಿ ಇರಿಸಿ. ಇದರ ಗಾಢ ಸುವಾಸನೆಯು ಆಹಾರಕ್ಕೆ ಪ್ರತಿರಕ್ಷೆಯನ್ನು ಒದಗಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.

ಅಡುಗೆಮನೆ ನೈರ್ಮಲ್ಯ ಕಾಪಾಡಿಕೊಳ್ಳಿ: ಅಡುಗೆಮನೆಯ ಪಾತ್ರೆಗಳನ್ನು ಆಗಾಗ್ಗೆ ಶುಚಿಗೊಳಿಸುತ್ತಿರಬೇಕು. ಹಲವು ಬಾರಿ, ಪಾತ್ರೆಗಳನ್ನು ತೊಳೆದಾಗ ಅದರಲ್ಲಿ ಕೆಲವು ಆಹಾರದ ಕಣಗಳು ಉಳಿದುಕೊಂಡಿರುವುದನ್ನು ಅನೇಕರು ಗಮನಿಸಿರುವುದಿಲ್ಲ. ಇವು ಸೊಳ್ಳೆಗಳ ಸಂತಾನೋತ್ಪತ್ತಿಯ ಕೇಂದ್ರವಾಗುತ್ತದೆ. ಅಲ್ಲದೆ, ಅಡುಗೆ ಮನೆಯಲ್ಲಿ ನೀವು ತಂದಿಟ್ಟ ತರಕಾರಿ ಅಥವಾ ಹಣ್ಣು ಹಾಳಾಗಿ ಹೋಗಿದ್ದರೂ ಗಮನಿಸದವರಿದ್ದಾರೆ. ಇದರಿಂದಲೂ ಸೊಳ್ಳೆಗಳು ಉತ್ಪತಿಯಾಗುತ್ತವೆ. ಹೀಗಾಗಿ ಸೊಳ್ಳೆಗಳನ್ನು ದೂರವಿಡಬೇಕೆಂದರೆ ಅಡುಗೆ ಮನೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.

ಸೊಳ್ಳೆ-ನಿವಾರಕ ಸಸ್ಯಗಳು: ಅಡುಗೆ ಮನೆಯಲ್ಲಿಡುವ ಸಸ್ಯಗಳು ಕೇವಲ ಸೌಂದರ್ಯದ ಉದ್ದೇಶಗಳಿಗೆ ಮಾತ್ರವಲ್ಲ, ಇದು ಸೊಳ್ಳೆಗಳನ್ನು ಅಡುಗೆ ಮನೆಯಿಂದ ದೂರವಿಡಲು ಸಹ ಉತ್ತಮ ಮಾರ್ಗವಾಗಿದೆ. ಡಿಸೆಲ್, ಲಾವೆಂಡರ್, ಗಾರ್ಲಿಕ್ ಮಾರಿಗೋಲ್ಡ್, ಲೆಮನ್ ಗ್ರಾಸ್ ಮತ್ತು ರೋಸ್ಮರಿಗಳಂತಹ ಹಲವಾರು ನಿರ್ದಿಷ್ಟ ರೀತಿಯ ಸಸ್ಯಗಳು ಅಡುಗೆಮನೆಯಿಂದ ಸೊಳ್ಳೆಗಳನ್ನು ಸೆಳೆಯಲು ಸಹಾಯ ಮಾಡುತ್ತವೆ. ಈ ಸಸ್ಯಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ, ಇದು ಅಡುಗೆ ಮನೆ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತದೆ.