ಚಪಾತಿ, ರೊಟ್ಟಿ ತಯಾರಿಸುವಾಗ ಎಂದೂ ಈ ತಪ್ಪು ಮಾಡಬೇಡಿ, ಇದನ್ನು ಹೆಚ್ಚು ಪೌಷ್ಟಿಕವಾಗಿಸಲು ಇಲ್ಲಿದೆ ಕೆಲವು ಸಲಹೆ
ಚಪಾತಿ ಮತ್ತು ರೊಟ್ಟಿಯು ನಮ್ಮ ದೇಶದಲ್ಲಿ ಅನ್ನದ ನಂತರ ಹೆಚ್ಚು ತಿನ್ನುವ ಆಹಾರ ಎಂದರೆ ತಪ್ಪಿಲ್ಲ.ಚಪಾತಿ ತಯಾರಿಸುವಾಗ ನೀವು ಈ ತಪ್ಪುಗಳನ್ನು ಮಾಡಿದರೆ,ಪೋಷಕಾಂಶಗಳು ಕಡಿಮೆಯಾಗುತ್ತವೆ. ಅವುಗಳನ್ನು ಸರಿಯಾದ ರೀತಿ ಬೇಯಿಸಿದರೆ ಮಾತ್ರ ನಿಮಗೆ ಪೋಷಕಾಂಶಗಳು ಲಭ್ಯವಾಗುತ್ತವೆ. ಚಪಾತಿಯನ್ನುಹೆಚ್ಚು ಪೌಷ್ಟಿಕವಾಗಿಸಲು ಇಲ್ಲಿದೆ ಕೆಲವು ಸಲಹೆ.

ಬಹುತೇಕ ಮಂದಿ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನ ತಿನ್ನುತ್ತಾರೆ. ಅನ್ನ ಊಟ ಮಾಡುವ ಮುಂಚೆ ಚಪಾತಿ ಅಥವಾ ರೊಟ್ಟಿ ಇರದಿದ್ದರೆ ಪರಿಪೂರ್ಣವಾಗುವುದಿಲ್ಲ. ಚಪಾತಿ ಮತ್ತು ರೊಟ್ಟಿಯು ನಮ್ಮ ದೇಶದಲ್ಲಿ ಅನ್ನದ ನಂತರ ಹೆಚ್ಚು ತಿನ್ನುವ ಆಹಾರ ಎಂದರೆ ತಪ್ಪಿಲ್ಲ. ಉತ್ತರ ಭಾರತದಲ್ಲಿ, ಪ್ರತಿದಿನ ಚಪಾತಿ ಮತ್ತು ರೊಟ್ಟಿ ತಿನ್ನುತ್ತಾರೆ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರ ಪ್ರಥಮ ಆದ್ಯತೆ ಅಂದರೆ ಅದು ಚಪಾತಿ.
ಗೋಧಿ ಹಿಟ್ಟಿನಿಂದಲೇ ಅನೇಕರು ಚಪಾತಿ ತಯಾರಿಸುತ್ತಾರೆ. ಚಪಾತಿಯಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್‍ಗಳಿದ್ದರೂ, ಇತರ ಪೋಷಕಾಂಶಗಳು ಇರುವುದು ಕಡಿಮೆ. ಚಪಾತಿಗಳನ್ನು ತಯಾರಿಸುವ ವಿಧಾನವನ್ನು ಅವಲಂಬಿಸಿ ಇದು ಪೋಷಕಾಂಶಗಳನ್ನು ಹೊಂದಿರುತ್ತದೆ. ಹೀಗಾಗಿ ಇಲ್ಲಿ ನೀಡಿರುವ ಸಲಹೆಯನ್ನು ಅನುಸರಿಸಿದರೆ ರೊಟ್ಟಿ, ಚಪಾತಿಯನ್ನು ಪೌಷ್ಟಿಕ ಆಹಾರವಾಗಿ ಪರಿವರ್ತಿಸಬಹುದು.
ಈ ಪದಾರ್ಥಗಳನ್ನು ಬೆರೆಸಿ
ಪ್ರತಿದಿನ ಅದೇ ಸಾಮಾನ್ಯ ಗೋಧಿ ಹಿಟ್ಟಿನಿಂದ ಮಾಡಿದ ರೊಟ್ಟಿ ಮತ್ತು ಚಪಾತಿ ತಿನ್ನುವ ಬದಲು ಪೋಷಕಾಂಶಗಳಿರುವ ಕೆಲವು ಪದಾರ್ಥಗಳನ್ನು ಸೇರಿಸಬಹುದು. ಇದು ಆರೋಗ್ಯಕರ ಮಾತ್ರವಲ್ಲದೆ ರುಚಿಕರವಾಗಿರುತ್ತದೆ. ಗೋಧಿ ಹಿಟ್ಟಿಗೆ ಕಾಲು ಚಮಚ ಮೆಂತ್ಯ ಬೀಜದ ಪುಡಿ ಅಥವಾ ಎರಡು ಚಮಚ ಅಗಸೆ ಬೀಜದ ಪುಡಿ, ಕುಂಬಳಕಾಯಿ ಬೀಜದ ಪುಡಿ, ಕಡಲೆ ಹಿಟ್ಟು, ಸೋಯಾಬೀನ್ ಪುಡಿ ಇತ್ಯಾದಿಗಳನ್ನು ಬೆರೆಸಬಹುದು. ಇವುಗಳನ್ನು ಬೆರೆಸುವುದರಿಂದ ತುಂಬಾ ರುಚಿಕರವಾಗಿರುತ್ತವೆ.
ಹಿಟ್ಟನ್ನು ಬೆರೆಸುವಾಗ ಸಣ್ಣ ಮುನ್ನೆಚ್ಚರಿಕೆಗಳನ್ನು ಕೂಡ ತೆಗೆದುಕೊಳ್ಳಬೇಕು. ಕೆಲವರು ರೊಟ್ಟಿಗಳನ್ನು ಮೃದುವಾಗಿಸಲು ಹಿಟ್ಟಿಗೆ ಹಾಲು ಮತ್ತು ಎಣ್ಣೆಯನ್ನು ಸೇರಿಸುತ್ತಾರೆ. ಇದನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಿಟ್ಟನ್ನು ಯಾವಾಗಲೂ ಉಗುರುಬೆಚ್ಚಗಿನ ನೀರಿನೊಂದಿಗೆ ಬೆರೆಸಿದರೆ ಸಾಕು. ರೊಟ್ಟಿಯನ್ನು ಹೆಚ್ಚು ಪೌಷ್ಟಿಕ ಮತ್ತು ರುಚಿಕರವಾಗಿಸಲು ಮಜ್ಜಿಗೆ, ಅಕ್ಕಿ ನೀರು, ಬೀಟ್ರೂಟ್ ಅಥವಾ ಪಾಲಕ್ ಪೇಸ್ಟ್ ಅನ್ನು ಸಹ ಬಳಸಬಹುದು.
ರೊಟ್ಟಿ ಅಥವಾ ಚಪಾತಿಯನ್ನು ನೇರವಾಗಿ ಬೆಂಕಿಯ ಮೇಲೆ ಬೇಯಿಸುವುದು ಸೂಕ್ತವಲ್ಲ
ಮನೆಯಲ್ಲಿ, ರೊಟ್ಟಿ ಅಥವಾ ಚಪಾತಿ ಬೇಯಿಸುವಾಗ ಕೆಲವು ತಪ್ಪು ವಿಧಾನವನ್ನು ಬಳಸಲಾಗುತ್ತದೆ. ಚಪಾತಿ ಅಥವಾ ರೊಟ್ಟಿಯನ್ನು ಬಾಣಲೆಯಲ್ಲಿ ಸ್ವಲ್ಪ ಸಮಯ ಹುರಿಯುತ್ತಾರೆ. ನಂತರ ನೇರವಾಗಿ ಗ್ಯಾಸ್ ಜ್ವಾಲೆಯ ಮೇಲೆ ಹಾಕುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ರೊಟ್ಟಿಯನ್ನು ನೇರವಾಗಿ ಬೆಂಕಿಯ ಮೇಲೆ ಸುಟ್ಟಾಗ ಅದು ಸಂಪೂರ್ಣವಾಗಿ ಉರಿಯುವುದಿಲ್ಲ. ಹಾಗೆಯೇ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಅಲ್ಲದೆ ಗ್ಯಾಸ್ ಒಲೆಯ ಮೇಲೆ ಸುಡುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಹೀಗಾಗಿ ಚಪಾತಿಯನ್ನು ಬಾಣಲೆಯಲ್ಲಿ ಮಾತ್ರ ಬೇಯಿಸುವುದು ಸೂಕ್ತ.
ಹಿಟ್ಟು ಬೆರೆಸಿದ ತಕ್ಷಣ ಚಪಾತಿ ತಯಾರಿಸಬೇಡಿ. ಹಿಟ್ಟನ್ನು 10 ರಿಂದ 20 ನಿಮಿಷಗಳ ಕಾಲ ಬಿಡಿ. ಇದು ಹಿಟ್ಟಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗಬಹುದು. ಹಾಗೆಯೇ, ನಾನ್-ಸ್ಟಿಕ್ ಪ್ಯಾನ್ ಬದಲಿಗೆ ಜೇಡಿಮಣ್ಣು ಅಥವಾ ಕಬ್ಬಿಣದ ಬಾಣಲೆಯನ್ನು ಬಳಸುವುದು ಸೂಕ್ತ.
