ಕನ್ನಡ ಸುದ್ದಿ / ಜೀವನಶೈಲಿ /
ಈರುಳ್ಳಿ ಬೆಲೆ ಪದೇ ಪದೇ ಜಾಸ್ತಿ ಆಗುತ್ತೆ ಅಂತ ಚಿಂತಿಸಬೇಡಿ, ಮನೆಯಲ್ಲೇ ಪ್ಲಾಸ್ಟಿಕ್ ಬಾಟಲಿಯಲ್ಲಿ ಈರುಳ್ಳಿ ಬೆಳೆದುಕೊಳ್ಳಬಹುದು ನೋಡಿ
ಈರುಳ್ಳಿ ಬೆಲೆ ಮತ್ತೆ ಮತ್ತೆ ಜಾಸ್ತಿ ಆಗ್ತಾ ಇರುತ್ತೆ, ಹಾಗಂತ ಈರುಳ್ಳಿ ಬಳಸದೇ ಅಡುಗೆ ಮಾಡೋಕೆ ಆಗುತ್ತಾ ಖಂಡಿತ ಇಲ್ಲ. ಚಿಂತೆ ಮಾಡ್ಬೇಡಿ, ಈರುಳ್ಳಿಯನ್ನ ಮನೆಯಲ್ಲೇ ಬೆಳ್ಕೊಳ್ಳಿ. ಪ್ಲಾಸ್ಟಿಕ್ ನೀರಿನ ಬಾಟಲಿ ಇದ್ದರೆ ಸುಲಭವಾಗಿ ಈರುಳ್ಳಿ ಬೆಳೆಯಬಹುದು. ಬಾಟಲಿಯಲ್ಲಿ ಈರುಳ್ಳಿ ಬೆಳೆಯೋದು ಹೇಗೆ ಎನ್ನುವ ಹಂತ ಹಂತದ ವಿವರ ಇಲ್ಲಿದೆ.
ಮನೆಯಲ್ಲೇ ಪ್ಲಾಸ್ಟಿಕ್ ಬಾಟಲಿಯಲ್ಲಿ ಈರುಳ್ಳಿ ಬೆಳೆದುಕೊಳ್ಳುವ ವಿಧಾನ (PC: Her Zindagi/ Canva )
ಭಾರತೀಯ ಅಡುಗೆಮನೆಯಲ್ಲಿ ಈರುಳ್ಳಿ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಅಡುಗೆಗಾದ್ರೂ ಈರುಳ್ಳಿ ಕಡ್ಡಾಯ. ಈರುಳ್ಳಿ ರುಚಿಯ ಇಲ್ಲದ ಅಡುಗೆ ತಿನ್ನೋಕೆ ಕಷ್ಟವಾಗುತ್ತೆ. ನೀವು ಈರುಳ್ಳಿ ಪ್ರಿಯರಾಗಿದ್ರೆ ಏರುತ್ತಿರುವ ಈರುಳ್ಳಿ ದರ ನಿಮ್ಮಲ್ಲಿ ಕಣ್ಣಲ್ಲಿ ನೀರು ಹಾಕಿಸಿ ಇರಬಹುದು.
ಬೆಲೆ ಜಾಸ್ತಿ ಆಯ್ತು ಅಂತ ಈರುಳ್ಳಿ ತಿನ್ನೋದೇ ಇರೋಕೆ ಆಗುತ್ತಾ, ಖಂಂಡಿತ ಇಲ್ಲ. ಇದಕ್ಕಾಗಿ ಮನೆಯಲ್ಲಿ ಈರುಳ್ಳಿ ಬೆಳೆಯುವ ಪ್ರಯತ್ನ ಮಾಡಿ. ಇಂದು ನಾವು ನಿಮಗೆ ಪ್ಲಾಸ್ಟಿಕ್ ನೀರಿನ ಬಾಟಲಿನಲ್ಲಿ ಈರುಳ್ಳಿ ಬೆಳೆಯುವ ವಿಧಾನವನ್ನು ಹೇಳಿ ಕೊಡುತ್ತೇವೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ಈರುಳ್ಳಿ ಬೆಳೆಯುವ ಹಂತ ಹಂತದ ವಿಧಾನ ಇಲ್ಲಿದೆ.
ಬಾಟಲಿಯಲ್ಲಿ ಈರುಳ್ಳಿ ಬೆಳೆಯಲು ಇವೆಲ್ಲಾ ಬೇಕು
ಪ್ಲಾಸ್ಟಿಕ್ ಬಾಟಲಿಯಲ್ಲಿ ಈರುಳ್ಳಿ ಬೆಳೆಯಲು ಪ್ಲಾಸ್ಟಿಕ್ ಬಾಟಲಿ ಮಾತ್ರವಲ್ಲ ಇನ್ನೂ ಕೆಲವು ವಸ್ತುಗಳು ಬೇಕು. ಇದಕ್ಕೆ ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ ನೋಡಿ.
- ಮುಚ್ಚಳವಿರುವ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಗಾತ್ರವಿರುವ ಸ್ವಚ್ಛವಾದ ಪಾರದರ್ಶಕ ಬಣ್ಣದ ಪ್ಲಾಸ್ಟಿಕ್ ಬಾಟಲಿ ತೆಗೆದುಕೊಳ್ಳಿ.
- ಆರೋಗ್ಯಕರ ಮನಿ ಪ್ಲಾಂಟ್ ಕಾಂಡ: ಕೆಲವು ಎಲೆಗಳಿರುವ ಮನೆಪ್ಲಾಂಟ್ ಗಿಡದ ಕಾಂಡವನ್ನು ತೆಗೆದು ಇರಿಸಿಕೊಳ್ಳಿ.
- ಚೆನ್ನಾಗಿ ಗೊಬ್ಬರ ಬೆರೆಸಿದ ಮಣ್ಣು ಅಥವಾ ಫಲವತ್ತಾದ ಮಣ್ಣು
- ಶುದ್ಧ ನೀರಿನ ಮೂಲ: ಗಿಡಕ್ಕೆ ಶುದ್ಧ ನೀರು ಹಾಯಿಸುವುದು ಮುಖ್ಯ ನೆನಪಿರಲಿ
- ಕತ್ತರಿ ಅಥವಾ ಚಾಕು: ಬಾಟಲಿಯನ್ನು ಹಾಗೂ ಮನಿ ಪ್ಲಾಂಟ್ ಕತ್ತರಿಸಿಲು ನೆರವಾಗುವ ಚಾಕು ಅಥವಾ ಕತ್ತರಿ
ಇದನ್ನೂ ಓದಿ: ಮನೆಯಲ್ಲೇ ಕೊತ್ತಂಬರಿ ಸೊಪ್ಪು ಬೆಳೆದುಕೊಳ್ಳುವುದು ಹೇಗೆ? ಇಲ್ಲಿದೆ ಹಂತ ಹಂತದ ವಿವರ, ಗೃಹಿಣಿಯರಿಗಿದು ಉಪಯುಕ್ತ ಮಾಹಿತಿ
ಬಾಟಲಿಯಲ್ಲಿ ಈರುಳ್ಳಿ ಬೆಳೆಯುವುದು ಹೇಗೆ ನೋಡಿ
- ಮೊದಲು ಬಾಟಲಿಯನ್ನು ಸಿದ್ಧಪಡಿಸಿ: ಬಾಟಲಿಯನ್ನು ಚೆನ್ನಾಗಿ ತೊಳೆಯಿರಿ. ಅದರ ಮೇಲೆ ಅಂಟಿಸಿರುವ ಲೇಬಲ್, ಸ್ಟಿಕರ್‌ಗಳನ್ನು ತೆಗೆದುಹಾಕಿ. ಈಗ ಬಾಟಲಿಯನ್ನು ಅಲ್ಲಲ್ಲಿ ಚಿಕ್ಕದಾಗಿ ಆಯಾತಾಕಾರದಲ್ಲಿ ಕತ್ತರಿಸಿ. ಈರುಳಿ ಗಿಡ ಬೆಳೆದು ಹೊರಗೆ ಬರಲು ಅನುವಾಗುವಂತೆ ಕತ್ತರಿಸಬೇಕು.
- ಈರುಳ್ಳಿ ಗಿಡ ನೆಡುವುದು: ಈಗ ಬಾಟಲಿಗೆ ತಳದಿಂದ ಮಣ್ಣು ತುಂಬಿಸಿ. ನಂತರ ಮೊಳೆಕೆಯೊಡೆದ ಈರುಳ್ಳಿಯನ್ನು ಮೊಳಕೆ ಮೇಲೆ ಇರುವಂತೆ ಮಣ್ಣಿನಲ್ಲಿ ಊರಿ. ಇದಕ್ಕೆ ಸ್ಪಲ್ಪ ನೀರು ಚಿಮುಕಿಸಿ. ಆದರೆ ನೀರು ಜಾಸ್ತಿಯಾಗದಂತೆ ನೋಡಿಕೊಳ್ಳಿ.
- ಸಾಕಷ್ಟು ಸೂರ್ಯನ ಬೆಳಕು ಇರುವ ಜಾಗದಲ್ಲಿ ಬಾಟಲಿಯನ್ನು ಇರಿಸಿ. ಈರುಳ್ಳಿ ಬೆಳೆಯಲು ಬಿಸಿಲು ಅವಶ್ಯ ಎಂಬುದನ್ನು ಮರೆಯಬೇಡಿ.
- ನಿರ್ವಹಣೆ: ಈರುಳ್ಳಿಗೆ ನಿರಂತರವಾಗಿ ನೀರು ಹಾಕುವುದು ಬಹಳ ಮುಖ್ಯ. ಇದರಿಂದ ಈರುಳ್ಳಿ ನಿಧಾನಕ್ಕೆ ಮೊಳಕೆ ಬರಲು ಆರಂಭವಾಗುತ್ತದೆ. ಈರುಳ್ಳಿ ಸಸಿ ಬೆಳೆದಂತೆ ಅದನ್ನು ಬೇರೆ ಜಾಗದಲ್ಲಿ ಬೆಳೆಸಬಹುದು.
- ಈರುಳ್ಳಿ ಗೆಡ್ಡೆ ಬೆಳೆಯುವುದನ್ನು ಗುರುತಿಸಲು ಅದರ ಎಲೆ ಅಥವಾ ಕಾಂಡ ಎಷ್ಟು ಬೆಳೆದಿದೆ ಎನ್ನವುದನ್ನು ಕಂಡುಕೊಳ್ಳಬೇಕು. ಹಸಿರು ದಂಟು ಚೆನ್ನಾಗಿ ಬೆಳೆದಿದ್ದರೆ ಈರುಳ್ಳಿ ಬೆಳೆದಿದೆ ಎಂದರ್ಥ. ಬಾಟಲಿಯಲ್ಲಿ ಈರುಳ್ಳಿ ಬೆಳೆಯುವುದಕ್ಕೆ ನಿಮ್ಮ ಮನೆಯ ಕಿಟಕಿ, ಬಾಲ್ಕನಿ ಅಥವಾ ಟೆರೆಸ್ ಜಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ನಿರ್ವಹಿಸಲು ಒಂದಿಷ್ಟು ಸಮಯ ಬೇಕು. ಆದರೆ ಒಮ್ಮೆ ಈರುಳ್ಳಿ ಮನೆಯಲ್ಲೇ ಬೆಳೆದು ತಿಂದರೆ ಅದರ ಖುಷಿಯೇ ಬೇರೆ.
ಇದನ್ನೂ ಓದಿ: ಮನೆಯಲ್ಲೇ ಸರಳ ವಿಧಾನದ ಮೂಲಕ ಮೆಂತ್ಯೆ ಸೊಪ್ಪು ಬೆಳೆಯುವುದು ಹೇಗೆ ನೋಡಿ, ಈ ಗಿಡದ ನಿರ್ವಹಣೆಯೂ ಸುಲಭ
ವಿಭಾಗ
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.