ಒಂದು ವಾರನಾದ್ರೂ ಪನೀರ್ ಫ್ರೆಶ್ ಆಗಿ ಇರಬೇಕಪ್ಪ, ಹಾಗೇ ಫ್ರಿಡ್ಜ್‌ನಲ್ಲಿಡೋದಾ ಅಂತ ಆಲೋಚಿಸ್ತಿದ್ದೀರಾ, ಚಿಂತೆ ಬಿಡಿ ಹೀಗೆ ಮಾಡಿ
ಪನೀರ್ ಪ್ಯಾಕೆಟ್ ತಂದು ಓಪನ್ ಮಾಡಿ, ಸ್ವಲ್ಪ ಭಾಗ ಬಳಸಿದ ಬಳಿಕ ಅದನ್ನು ಒಂದು ವಾರನಾದ್ರೂ ಪನೀರ್ ಫ್ರೆಶ್ ಆಗಿ ಇರಬೇಕಪ್ಪ, ಹಾಗೇ ಫ್ರಿಡ್ಜ್‌ನಲ್ಲಿಡೋದಾ, ಅದು ಈಗಿರುವ ಹಾಗೆಯೇ ಫ್ರೆಶ್ ಆಗಿ ಉಳಿಯುತ್ತಾ ಅಂತ ಆಲೋಚಿಸ್ತಿದ್ದೀರಾ.. ಚಿಂತೆ ಬಿಡಿ.. ಪನೀರ್ ಫ್ರೆಶ್ ಆಗಿಡೋದಕ್ಕೆ 10 ದಾರಿ ಇದೆ ಇಲ್ನೋಡಿ.
ಪನೀರ್ ಬಹುತೇಕ ಎಲ್ಲರೂ ಇಷ್ಟಪಡುವ ತಿನಿಸು. ಭಾರತದ ಪಾಕಪದ್ಧತಿಯಲ್ಲಿ ಪನೀರ್ ಬಳಕೆ ವ್ಯಾಪಕವಾಗಿದ್ದು, ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಪನೀರ್ ಖಾದ್ಯ ಮತ್ತು ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್, ಕಬಾಬ್ ಹೀಗೆ ನಾನಾ ರೀತಿಯಲ್ಲಿ ಪನೀರ್ ಅನ್ನು ಇಷ್ಟಪಟ್ಟು ತಿನ್ನುವ ಜನರ ಸಂಖ್ಯೆ ದೊಡ್ಡದಿದೆ. ರೆಸ್ಟೋರೆಂಟ್‌ಗಳಿಗೆ ಹೋದರೆ ಅಲ್ಲಿ ಪನೀರ್‌ನ ದೊಡ್ಡ ಮೆನುವನ್ನೇ ನಮ್ಮ ಎದುರು ತಂದಿರಿಸುವುದನ್ನು ಗಮನಿಸಿರಬಹುದು. ಮನೆಗಳಲ್ಲೂ ಅಷ್ಟೆ. ಹಾಲು ಹಾಳಾಯಿತೆಂದರೆ ಕೂಡಲೇ ಅದಕ್ಕೆ ನಿಂಬೆ ಹಣ್ಣಿನ ರಸ ಹಿಂಡಿ ಲೈಟ್ ಆಗಿ ಬಿಸಿ ಮಾಡಿ ಅದು ಪನೀರ್ ಆಯಿತು ಎಂದು ಗೊತ್ತಾದ ಕೂಡಲೇ ಅದರಿಂದ ನೀರು ಪ್ರತ್ಯೇಕಿಸಿ ತೆಗೆದು ಫ್ರೆಶ್ ಆಗಿರುವ ತಾಜಾ ಪನೀರ್ ಅನ್ನು ಬಳಸುತ್ತಾರೆ. ದೊಡ್ಡ ಪ್ರಮಾಣದ ಹಾಲು ಹಾಳಾದರೆ ಪನೀರ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟುಬಿಡುತ್ತಾರೆ. ಆದಾಗ್ಯೂ, ಅ ಪನೀರ್ ಅನ್ನು ತಾಜಾ ಅಥವಾ ಫ್ರೆಶ್ ಆಗಿ ಹೆಚ್ಚು ದಿನಗಳವರೆಗೆ ಉಳಿಸುವುದೇ ದೊಡ್ಡ ಸವಾಲು. ಅನೇಕರು ಅದನ್ನು ಹಾಗೆಯೇ ಫ್ರಿಡ್ಜ್‌ನಲ್ಲಿ ಇಟ್ಟುಬಿಡುತ್ತಾರೆ. ಆದರೆ ಪನೀರ್ ಅನ್ನು ವಾರಕ್ಕಿಂತಲೂ ಹೆಚ್ಚು ಸಮಯ ಫ್ರೆಶ್ ಆಗಿ ಇರಿಸೋದಕ್ಕೆ ಸಣ್ಣ ಪುಟ್ಟ ಟ್ರಿಕ್ಸ್ ಇವೆ. ಅದನ್ನೇ ಇಲ್ಲಿ ನಿಮಗೂ ತಿಳಿಸ್ತೇವೆ.
ವಾರದವರೆಗೆ ಪನೀರ್ ಅನ್ನು ಫ್ರೆಶ್ ಆಗಿರಿಸೋದು ಹೇಗೆ; ನಿಮಗಾಗಿ 10 ಸಿಂಪಲ್ ಟ್ರಿಕ್ಸ್
ಒಂದು ವಾರನಾದ್ರೂ ಪನೀರ್ ಅನ್ನು ತಾಜಾವಾಗಿ ಇಡುವುದು ಹೇಗೆ ಎಂಬುದು ನಿಮ್ಮ ದೊಡ್ಡ ಪ್ರಶ್ನೆಯಾಗಿದ್ದರೆ ಅದಕ್ಕೆ ಸಿಂಪಲ್ ಉತ್ತರ ಇಲ್ಲಿದೆ. ನೀವೇನಾದರೂ ಪನೀರ್ ಅನ್ನು ಹಾಗೆಯೇ ಫ್ರಿಡ್ಜ್‌ನಲ್ಲಿಟ್ಟುಬಿಟ್ಟಿದ್ದೀರಾ.. ಅದು ಫ್ರೆಶ್ ಆಗಿರುತ್ತೆ ಅಂತ.. ಖಂಡಿತಾ ಇಲ್ಲ. ಅದು ಫ್ರೆಶ್ ಆಗಿ ಇರಬೇಕು ಎನ್ನುವುದಾದರೆ ಈ 10 ಟ್ರಿಕ್ಸ್ ಗಮನಿಸಿ.
1) ಚೆನ್ನಾಗಿ ಕವರ್ ಮಾಡಿ ಇಡಿ: ಪೇಪರ್ ಟವೆಲ್ ತಗೊಂಡು ಅದರಲ್ಲಿ ಪನೀರ್ ಇಟ್ಟು ಗಟ್ಟಿಯಾಗಿ ಸುತ್ತಿ ಇಡಿ. ಅದರ ಫ್ರೆಶ್‌ನೆಸ್ ಅನ್ನು ಉಳಿಸಬಹುದು
2) ಏರ್ ಟೈಟ್ ಡಬ್ಬದಲ್ಲಿ ಹಾಕಿಡಿ: ಗಾಳಿ ಮತ್ತು ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಳ್ಳುದಂತೆ ಬಟರ್ ಪೇಪರ್‌ನಲ್ಲಿ ಸುತ್ತಿದ ಪನೀರ್ ಅನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
3) ನೀರಲ್ಲಿ ಹಾಕಿಡಿ: ತಾಜಾ ನೀರಿನಲ್ಲಿ ಮುಳುಗಿರುವ ಪನೀರ್ ಅನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ. ತಾಜಾತನವನ್ನು ಕಾಪಾಡಿಕೊಳ್ಳಲು ಪ್ರತಿದಿನ ನೀರನ್ನು ಬದಲಾಯಿಸಿ.
4) ಪ್ಲಾಸ್ಟಿಕ್‌ನಲ್ಲಿ ಸುತ್ತಿಡಬೇಡಿ: ಪನೀರ್ ಅನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿಡಬೇಡಿ. ಇದು ತೇವಾಂಶವನ್ನು ಹಿಡಿದಿಟ್ಟುಕೊಂಡು ಅದು ಹಾಳಾಗಲು ಕಾರಣವಾಗಬಹುದು.
5) ಪನೀರ್ ಅನ್ನು ಪ್ರತ್ಯೇಕವಾಗಿಡಿ: ಪನೀರ್ ಅನ್ನು ಇತರೆ ಆಹಾರ ವಸ್ತುಗಳ ಜೊತೆಗೆ ಇಡಬೇಡಿ. ಆ ಆಹಾರ ವಸ್ತುಗಳ ಪರಿಮಳ ಪನೀರ್‌ಗೂ ಆವರಿಸಿ ಅದರ ತಾಜಾತನ ಹೋಗಬಹುದು.
6) ತಾಜಾ ಪನೀರ್: ತಾಜಾ ಪನೀರ್ ಅನ್ನೇ ಖರೀದಿಸಿ ಮತ್ತು ಬಳಸಿ. ಅದಕ್ಕೆ ಹೆಚ್ಚು ಅವಧಿಗೆ ತಾಜಾ ಆಗಿ ಉಳಿಯುವ ಸಾಮರ್ಥ್ಯ ಇರುತ್ತದೆ.
7) ನಿಯತವಾಗಿ ಪರೀಕ್ಷಿಸಿ: ಫ್ರಿಡ್ಜ್‌ನಲ್ಲಿಟ್ಟ ಪನೀರ್ ಅನ್ನು ನಿಯತವಾಗಿ ಪರಿಶೀಲಿಸುತ್ತಿರಬೇಕು. ಅದರ ಪರಿಮಳ ಮತ್ತು ಬಣ್ಣವನ್ನು ಗಮನಿಸುತ್ತಿರಬೇಕು. ಬಣ್ಣ ಬದಲಾದರೆ, ಕೆಟ್ಟ ಸ್ಮೆಲ್ ಬರಲಾರಂಭಿಸಿದರೆ ಬಳಸಬೇಡಿ.
8) ಪನೀರ್ ಅನ್ನು ತಂಪಾಗಿಡಿ: ಪನೀರ್ ಅನ್ನು ಫ್ರಿಜ್‌ನ ಅತ್ಯಂತ ತಂಪಾದ ಭಾಗದಲ್ಲಿ ಇರಿಸಿ. ಅದರ ತಾಜಾತನವನ್ನು ಹೆಚ್ಚಿಸಲು ಸಾಮಾನ್ಯವಾಗಿ ಹಿಂಭಾಗದಲ್ಲಿರಿಸಿ.
9) ಪದೇಪದೆ ಹೊರಗೆ ತೆಗೆದಿಡಬೇಡಿ: ತಾಪಮಾನ ಏರಿಳಿತದಿಂದ ಹಾಳಾಗುವುದನ್ನು ತಡೆಯಲು ಫ್ರಿಜ್ ಒಳಗೆ ಮತ್ತು ಹೊರಗೆ ಪನೀರ್ ತೆಗೆದು ಇಟ್ಟು ಮಾಡುವುದನ್ನು ಕಡಿಮ ಮಾಡಿ.
ವಿಭಾಗ