ನೀವು ಸೇವಿಸುತ್ತಿರುವ ಹಾಲು ಕಲಬೆರಕೆಯೋ, ಅಸಲಿಯೋ: ಹಾಲಿನ ಶುದ್ಧತೆಯನ್ನು ಹೀಗೆ ಪರೀಕ್ಷಿಸಿ
ಹಾಲಿನಲ್ಲಿ ಯಾವುದೇ ಕಲಬೆರಕೆ ಇಲ್ಲದಿದ್ದರೆ ಹಾಲು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ, ಇಂದು ಹಾಲು ಕೂಡ ಕಲಬೆರಕೆಯಾಗಿದೆ. ಹಾಗಿದ್ದರೆ ಹಾಲಿನ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ?ಈ ವಿಧಾನಗಳ ಮೂಲಕ ಹಾಲು ಕಲಬೆರಕೆಯೋ, ಇಲ್ಲವೋ ಎಂಬುದನ್ನು ಇಲ್ಲಿ ಪರೀಕ್ಷಿಸಬಹುದು.
ಇಂದು ಎಲ್ಲವೂ ಕಲಬೆರಕೆಯಾಗಿದೆ. ತಿನ್ನುವ ಆಹಾರಗಳಿಂದ ಹಿಡಿದು ಬೇರೆ ಪದಾರ್ಥಗಳವರೆಗೆ ಕಲಬೆರಕೆಯಾಗಿದೆ. ಕಲಬೆರಕೆ ವಸ್ತುಗಳ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಯಾವುದು ಅಸಲಿ, ಯಾವುದು ನಕಲಿ ಎಂಬ ಗೊಂದಲವುಂಟಾಗುತ್ತಿದೆ. ಅದರಲ್ಲೂ ಉತ್ತಮ ಆರೋಗ್ಯ, ಪೌಷ್ಟಿಕಾಂಶ ಪಡೆಯಲು ಪ್ರತಿದಿನ ಹಾಲು ಕುಡಿಯುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಹಾಲಿನಲ್ಲಿ ಯಾವುದೇ ಕಲಬೆರಕೆ ಇಲ್ಲದಿದ್ದರೆ ಹಾಲು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ, ಇಂದು ಹಾಲು ಕೂಡ ಕಲಬೆರಕೆಯಾಗಿದೆ. ಹಾಗಿದ್ದರೆ ಹಾಲಿನ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ? ಈ ವಿಧಾನಗಳ ಮೂಲಕ ಹಾಲು ಕಲಬೆರಕೆಯೋ, ಇಲ್ಲವೋ ಎಂಬುದನ್ನು ಇಲ್ಲಿ ಪರೀಕ್ಷಿಸಬಹುದು.
ಹಾಲಿನ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ?
ಕುದಿಸಲು ಪ್ರಯತ್ನಿಸಿ: ಹಾಲಿನ ಶುದ್ಧತೆಯನ್ನು ಪರೀಕ್ಷಿಸಲು, ಸುಮಾರು 2 ರಿಂದ 3 ಗಂಟೆಗಳ ಕಾಲ ಕಡಿಮೆ ಉರಿಯಲ್ಲಿ ಕುದಿಸಿ. ಹಾಲು ಮೊಸರಾಗಿ ಮಾರ್ಪಟ್ಟರೆ ಅದು ಶುದ್ಧವಾಗಿರುತ್ತದೆ. ಈ ಹಾಲಿನಲ್ಲಿ ಗಟ್ಟಿಯಾದ ಧಾನ್ಯಗಳಂತೆ ಕಾಣಿಸಿಕೊಂಡರೆ ಹಾಲಿನಲ್ಲಿ ಪಿಷ್ಟವನ್ನು ಬೆರೆಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.
ಕೃತಕ ವಾಸನೆ: ಹಾಲು ಸ್ವಲ್ಪ ಸಿಹಿ ವಾಸನೆಯನ್ನು ಹೊಂದಿದೆ. ಹಾಲಿನಲ್ಲಿ ಯಾವುದೇ ರೀತಿಯ ಬಲವಾದ ಅಥವಾ ಕೃತಕ ವಾಸನೆ ಇದ್ದರೆ, ಹಾಲಿಗೆ ಖಂಡಿತವಾಗಿಯೂ ಏನಾದರೂ ಕಲಬೆರಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.
ನೊರೆ ಕಾಣಿಸಬಹುದು: ಗಾಜಿನ ಬಾಟಲಿಗೆ ಒಂದು ಚಮಚ ಹಾಲನ್ನು ಹಾಕಿ ನಂತರ ಬಾಟಲಿಯನ್ನು ಚೆನ್ನಾಗಿ ಅಲ್ಲಾಡಿಸಿ. ನೀವು ಹಾಲಿನಲ್ಲಿ ಬಹಳಷ್ಟು ನೊರೆಯನ್ನು ಕಂಡರೆ, ಈ ಹಾಲಿನಲ್ಲಿ ಡಿಟರ್ಜೆಂಟ್ ಅನ್ನು ಬೆರೆಸಲಾಗಿದೆ ಎಂಬುದಾಗಿ ತಿಳಿದುಕೊಳ್ಳಬಹುದು.
ಬಣ್ಣಕ್ಕೆ ಗಮನ ಕೊಡಿ: ಹಾಲಿನ ಬಿಳಿ ಬಣ್ಣದ ಮೂಲಕ ಶುದ್ಧತೆಯ ಗುರುತನ್ನು ಸಾಬೀತುಪಡಿಸಬಹುದು. ಹಾಲು ಕುದಿಸಿದ ನಂತರ ಅಥವಾ ರೆಫ್ರಿಜರೇಟರ್‌ನಲ್ಲಿ ಇಟ್ಟ ನಂತರ ತಿಳಿ ಹಳದಿ ಬಣ್ಣಕ್ಕೆ ತಿರುಗಿದರೆ, ನೀವು ಜಾಗರೂಕರಾಗಿರಬೇಕು. ಹಾಲು ದಪ್ಪವಾಗಿದ್ದರೆ ಅದಕ್ಕೆ ಯೂರಿಯಾವನ್ನು ಸೇರಿಸಲಾಗುತ್ತದೆ ಎಂಬುದಾಗಿ ತಿಳಿದುಕೊಳ್ಳಬಹುದು. ಅದರ ಬಣ್ಣವು ಬಿಳಿ ಬಣ್ಣಕ್ಕೆ ಬದಲಾಗಿ ಹಳದಿಯಾಗುತ್ತದೆ.
ನೀರಿನ ಪರೀಕ್ಷೆ: ಒಂದು ಲೋಟಕ್ಕೆ ನೀರಿನಿಂದ ತುಂಬಿಸಿ, ಸ್ವಲ್ಪ ಪ್ರಮಾಣದ ಹಾಲು ಸೇರಿಸಿ. ಶುದ್ಧ ಹಾಲು ನೀರಿನ ಕಲಬೆರಕೆ ಹಾಲಿಗೆ ಹೋಲಿಸಿದರೆ ಹೆಚ್ಚಿನ ಸ್ನಿಗ್ಧತೆ ಮತ್ತು ಮೇಲ್ಮೈ ಒತ್ತಡವನ್ನು ಹೊಂದಿರುತ್ತದೆ.
ರುಚಿ ಪರೀಕ್ಷೆ: ಶುದ್ಧ ಹಾಲು ತಾಜಾ, ಕೆನೆ ರುಚಿಯನ್ನು ಹೊಂದಿರಬೇಕು. ಯಾವುದೇ ವಿಚಿತ್ರವಾದ ರುಚಿ ಹೊಂದಿದ್ದರೆ ಅದು ಕಲಬೆರಕೆ ಹಾಲು ಎಂಬುದನ್ನು ಸೂಚಿಸುತ್ತದೆ.
ಕೊಬ್ಬಿನ ಪರೀಕ್ಷೆ: ಹಾಲನ್ನು ಗಾಜಿನೊಳಗೆ ಸುರಿದು, ಅದನ್ನು ಕೆಲವು ಗಂಟೆಗಳ ಕಾಲ ಬಿಡಿ. ಕೆನೆ ಪದರವು ಶುದ್ಧ ಹಾಲಿನಲ್ಲಿ ಮೇಲಕ್ಕೆ ಬರಬೇಕು. ಹೀಗಿದ್ದರೆ ಹಾಲಿಗೆ ಕಲಬೆರಕೆಯಾಗಿಲ್ಲ ಎಂಬುದಾಗಿ ತಿಳಿದುಕೊಳ್ಳಬಹುದು.
ವಿಭಾಗ