Kitchen Tips: ಒಡೆದ ತೆಂಗಿನಕಾಯಿ ಹಾಳಾಗದಂತೆ ಬಹಳ ದಿನ ತಾಜಾವಾಗಿಡಲು ಇಲ್ಲಿದೆ ಐಡಿಯಾ, ನೀವೂ ಟ್ರೈ ಮಾಡಿ-kitchen tips this simple hack will keep unbroken coconuts fresh for longer how to store broken coconut rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಒಡೆದ ತೆಂಗಿನಕಾಯಿ ಹಾಳಾಗದಂತೆ ಬಹಳ ದಿನ ತಾಜಾವಾಗಿಡಲು ಇಲ್ಲಿದೆ ಐಡಿಯಾ, ನೀವೂ ಟ್ರೈ ಮಾಡಿ

Kitchen Tips: ಒಡೆದ ತೆಂಗಿನಕಾಯಿ ಹಾಳಾಗದಂತೆ ಬಹಳ ದಿನ ತಾಜಾವಾಗಿಡಲು ಇಲ್ಲಿದೆ ಐಡಿಯಾ, ನೀವೂ ಟ್ರೈ ಮಾಡಿ

ಭಾರತೀಯರು ತೆಂಗಿನಕಾಯಿ ಪ್ರಿಯರು. ನಮ್ಮಲ್ಲಿ ಬಹುತೇಕ ಖಾದ್ಯಗಳಿಗೆ ತೆಂಗಿನಕಾಯಿ ಬಳಲಾಗುತ್ತದೆ. ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಇಲ್ಲದ ಸಾಂಬಾರು ಊಹಿಸಲೂ ಸಾಧ್ಯವಿಲ್ಲ. ಹಾಗಂತ ಒಮ್ಮೆ ಒಡೆದ ತೆಂಗಿನಕಾಯಿಯನ್ನ ಒಮ್ಮೆಲೇ ಬಳಸಲು ಸಾಧ್ಯವಿಲ್ಲ. ಒಡೆದ ತೆಂಗಿನಕಾಯಿಯನ್ನು ಕೆಡದಂತೆ ಬಹಳ ದಿನ ಇಡಲು ಈ ಟ್ರಿಕ್ಸ್‌ ಸಹಾಯವಾಗುತ್ತೆ.

ಒಡೆದ ತೆಂಗಿನಕಾಯಿ ಹಾಳಾಗದಂತೆ ಬಹಳ ದಿನ ತಾಜಾವಾಗಿಡಲು ಇಲ್ಲಿದೆ ಐಡಿಯಾ, ನೀವೂ ಟ್ರೈ ಮಾಡಿ
ಒಡೆದ ತೆಂಗಿನಕಾಯಿ ಹಾಳಾಗದಂತೆ ಬಹಳ ದಿನ ತಾಜಾವಾಗಿಡಲು ಇಲ್ಲಿದೆ ಐಡಿಯಾ, ನೀವೂ ಟ್ರೈ ಮಾಡಿ

ತೆಂಗಿನಕಾಯಿ ಭಾರತೀಯ ಅಡುಗೆಯ ರುಚಿಗೆ ಟ್ರೇಡ್‌ಮಾರ್ಕ್‌ ಅಂದರೂ ತಪ್ಪಿಲ್ಲ. ಭಾರತದಲ್ಲಿ ತಯಾರಿಸುವ ಹಲವು ಖಾದ್ಯಗಳಿಗೆ ತೆಂಗಿನಕಾಯಿ ಬಳಲಾಗುತ್ತದೆ. ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಬಳಕೆ ಹೆಚ್ಚು. ಅದೇನೇ ಮಾಡಲು ಒಮ್ಮೆ ಒಡೆದ ತೆಂಗಿನಕಾಯಿಯನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಿಲ್ಲ. ಹಾಗಂತ ತೆಂಗಿನಕಾಯಿ ಒಡೆದಿಟ್ಟರೆ ಬೇಗನೇ ಕೆಡುತ್ತದೆ. ಕೆಲವೊಮ್ಮೆ ಒಣಗಿದಂತಾರೆ, ಕೆಲವೊಮ್ಮೆ ಲೋಳೆಯಂತಹ ಪರದೆ ಬಂದಿರುತ್ತದೆ.

ಹಾಗಾದರೆ ಒಡೆದ ತೆಂಗಿನಕಾಯಿಯನ್ನು ಕಡೆದಂತೆ ಇಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು, ಖಂಡಿತ ಸಾಧ್ಯವಿದೆ. ಅದಕ್ಕಾಗಿ ನೀವು ಕೆಲವೊಂದು ವಿಧಾನಗಳನ್ನು ಅನುಸರಿಸಬೇಕು.

ಚೆನ್ನೈ, ಟಿ. ನಗರದ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನಲ್ಲಿ ಕಾರ್ಯನಿರ್ವಾಹಕ ಪೌಷ್ಟಿಕ ತಜ್ಞರಾಗಿರುವ ಹರಿಪ್ರಿಯಾ ಎನ್. ʼತೆಂಗಿನಕಾಯಿಯನ್ನು ಎಥಿಲೀನ್ ಉತ್ಪಾದಿಸುವ ಹಣ್ಣುಗಳಿಂದ (ಬಾಳೆಹಣ್ಣುಗಳು ಮತ್ತು ಸೇಬುಗಳಂತಹವು) ದೂರವಿಡಬೇಕು. ಈ ಹಣ್ಣುಗಳ ಬಳಿ ತೆಂಗಿನಕಾಯಿ ಇರಿಸುವುದರಿಂದ ಬೇಗನೆ ಹಾಳಾಗುತ್ತದೆ. ಜೊತೆಗೆ ತೆಂಗಿನಕಾಯಿ ಕಾಯಿಯನ್ನು ತೇವಾಂಶ ರಹಿತ ಪ್ರದೇಶದಲ್ಲಿ ಸಂಗ್ರಹಿಸಿ ಇಡಬೇಕು ಎಂದು ಸಲಹೆ ನೀಡುತ್ತಾರೆ.

ಇವರ ಪ್ರಕಾರ ತೆಂಗಿನಕಾಯಿ ಮಾತ್ರವಲ್ಲ ಎಳನೀರನ್ನು ಕೂಡ ಈ ಕೆಳಗಿನ ವಿಧಾನಗಳನ್ನು ಅನುಸರಿಸುವ ಮೂಲಕ ಕೆಲವು ದಿನಗಳ ಕಾಲ ಕೆಡದಂತೆ ಸಂಗ್ರಹಿಸಿ ಇಡಬಹುದು.

ಎಳನೀರು ಸಂಗ್ರಹಿಸಿ ಇಡಲು ಟಿಪ್ಸ್‌ಗಳು

ತಾಜಾ ಎಳನೀರನ್ನು 24ರಿಂದ 48 ಗಂಟೆಗಳ ಒಳಗಡೆ ಸೇವಿಸಬೇಕು. ಇದನ್ನು ಸಂಗ್ರಹಿಸಿ ಇಡಬೇಕು ಅಂತಾದರೆ ಒಡೆದ ತಕ್ಷಣವೇ ಗಾಳಿಯಾಡದ ಕಂಟೈನರ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟರೆ ಒಂದು ವಾರದವರೆಗೆ ಸಂರಕ್ಷಿಸಬಹುದುʼ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದಾರೆ ಹರಿಪ್ರಿಯಾ.

ಫ್ರೀಜಿಂಗ್‌: ಬಹಳ ದಿನಗಳವರೆಗೆ ಇರಿಸಬೇಕು ಅಂತಿದ್ದರೆ ಐಸ್‌ಕ್ಯೂಬ್‌ ಅಥವಾ ಸ್ವಚ್ಛವಾದ ಪಾತ್ರೆಯಲ್ಲಿ ಹಾಕಿ ಫ್ರೀಜರ್‌ನಲ್ಲಿಟ್ಟು ಸಂಗ್ರಹಿಸಬಹುದು. ಇದನ್ನು ಫ್ರೀಜರ್‌ನಲ್ಲಿಟ್ಟರೆ ಕೆಲವು ತಿಂಗಳವರೆಗೆ ಕೆಡದಂತೆ ಇಡಬಹುದು ಎಂಬುದು ತಜ್ಞರ ಸಲಹೆ.

ಶೈತ್ಯೀಕರಣ ಮತ್ತು ಘನೀಕರಣ ಎರಡೂ ಸೂಕ್ಷ್ಮಜೀವಿಯ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಹಾಳಾಗಲು ಕಾರಣವಾಗುವ ಕಿಣ್ವದ ಚಟುವಟಿಕೆಯನ್ನು ಹರಿಪ್ರಿಯಾ ಹಂಚಿಕೊಂಡಿದ್ದಾರೆ.

ತೆಂಗಿನಕಾಯಿ ಸಂಗ್ರಹಿಸಲು ಟಿಪ್ಸ್‌

ತಾಜಾ ತೆಂಗಿನಕಾಯಿ ಅಥವಾ ತುರಿದ ತೆಂಗಿನಕಾಯಿಯನ್ನು ಫ್ರಿಜ್‌ನಲ್ಲಿಟ್ಟು ವಾರದವರೆಗೆ ಕಡೆದಂತೆ ನೋಡಿಕೊಳ್ಳಬಹುದು. ಇದನ್ನು ಕೂಡ ಗಾಳಿಯಾಡದ ಕಂಟೈನರ್‌ನಲ್ಲಿ ಇಡುವುದು ಉತ್ತಮ.

ತೆಂಗಿನತುರಿಯ ಕೆಡದಂತೆ ಇರಲು ಇದನ್ನು ಫ್ರೀಜ್‌ ಮಾಡಿ 6 ರಿಂದ 8 ತಿಂಗಳವರೆಗೆ ಇರಿಸಬಹುದು. ತೆಂಗಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಇದನ್ನು ಫ್ರೀಜರ್‌ ಬ್ಯಾಗ್‌ ಅಥವಾ ಗಾಳಿಯಾಡದ ಕಂಟೈನರ್‌ನಲ್ಲಿ ಸಂಗ್ರಹಿಸಿ ಇಡಿ.

ಈ ವಿಧಾನದ ಮೂಲಕ ಹಲವು ದಿನಗಳವರೆಗೆ ತೆಂಗಿನಕಾಯಿ ಹಾಗೂ ಎಳನೀರು ಎರಡನ್ನೂ ಸಂಗ್ರಹಿಸಿ ಇಡಬಹುದು. ಆದರೆ ಫ್ರಿಜ್‌ನಲ್ಲಿಟ್ಟು ಕರೆಂಟ್‌ ಹೋದರೆ ತೆಂಗಿನಕಾಯಿ ಕೆಡುತ್ತದೆ ನೆನಪಿರಲಿ.