ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆಯಾ? ಈ ರೀತಿ ಲವಂಗ ಬಳಸಿದರೆ ಮೂಷಿಕಗಳು ಮನೆಯಿಂದ ಓಡಿಹೋಗುತ್ತವೆ, ಇಲ್ಲಿದೆ ಸಿಂಪಲ್ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆಯಾ? ಈ ರೀತಿ ಲವಂಗ ಬಳಸಿದರೆ ಮೂಷಿಕಗಳು ಮನೆಯಿಂದ ಓಡಿಹೋಗುತ್ತವೆ, ಇಲ್ಲಿದೆ ಸಿಂಪಲ್ ಟಿಪ್ಸ್

ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆಯಾ? ಈ ರೀತಿ ಲವಂಗ ಬಳಸಿದರೆ ಮೂಷಿಕಗಳು ಮನೆಯಿಂದ ಓಡಿಹೋಗುತ್ತವೆ, ಇಲ್ಲಿದೆ ಸಿಂಪಲ್ ಟಿಪ್ಸ್

Kitchen Tips: ಮನೆಯಲ್ಲಿ ಇಲಿಗಳ ಕಾಟ ಹೆಚ್ಚಿದ್ದು, ತೊಂದರೆ ಅನುಭವಿಸುತ್ತಿದ್ದರೆ ನಿಮಗಾಗಿ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಲವಂಗವನ್ನು ಮನೆಯ ಮೂಲೆಗಳಲ್ಲಿ ಈ ರೀತಿ ಇಡುವುದರಿಂದ ಇಲಿಗಳು ಅದರ ವಾಸನೆಗೆ ಮನೆಯಿಂದ ಓಡಿ ಹೋಗುತ್ತವೆ. ಇಲಿಗಳ ಹಾವಳಿ ತಪ್ಪಿಸಲು ಲವಂಗವನ್ನು ಬಳಸುವುದು ಹೇಗೆ ಅನ್ನೋದು ಇಲ್ಲಿದೆ.

ಇಲಿಗಳ ಕಾಟದಿಂದ ಬೇಸತ್ತಿದ್ದರೆ ಈ ಲವಂಗ ಟಿಪ್ಸ್ ಬಳಸಿ
ಇಲಿಗಳ ಕಾಟದಿಂದ ಬೇಸತ್ತಿದ್ದರೆ ಈ ಲವಂಗ ಟಿಪ್ಸ್ ಬಳಸಿ (PC: Canva)

ಇಲಿಗಳು ಮನೆಯಲ್ಲಿದ್ದರೆ ತುಂಬಾ ಕಿರಿಕಿರಿ ಎನಿಸಿಸುತ್ತದೆ. ಮನೆಯೊಳಗೆ ನೀವು ಎಲ್ಲೆ ಇಟ್ಟಿದ್ದರೂ ಆಹಾರ, ಬಟ್ಟೆ ಹಾಗೂ ಪುಸ್ತಕಗಳಂತಹ ಅಗತ್ಯ ವಸ್ತುಗಳನ್ನು ಕಚ್ಚಿ ಹಾನಿ ಮಾಡುತ್ತವೆ. ಅಷ್ಟೇ ಅಲ್ಲ, ಇವುಗಳಿಂದ ರೋಗಗಳು ಹರಡುವುದರಿಂದ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಇಲಿಗಳನ್ನು ಮನೆಯಿಂದ ಹೊರಹಾಕಲು ಹೆಚ್ಚಿನ ಜನರು ಇಲಿ ಪಂಜರಗಳನ್ನು ಬಳಸುತ್ತಾರೆ. ಆದರೆ, ಈ ಪಂಜರಗಳು ಇಲಿಗಳನ್ನು ಮನೆಗೆ ಪ್ರವೇಶಿಸದಂತೆ ತಡೆಯುವುದಿಲ್ಲ. ಹೀಗಾಗಿ ಪರಿಣಾಮಕಾರಿ ಮಾರ್ಗ ಹುಡುಕುವುದು ಅಗತ್ಯ. ಇಲಿಗಳನ್ನು ಮನೆಯಿಂದ ಓಡಿಸಲು ಅಡುಗೆ ಮನೆಯಲ್ಲಿನ ಲವಂಗವು ಪರಿಣಾಮಕಾರಿಯಾಗಿದೆ.

ಇಲಿಗಳನ್ನು ಓಡಿಸಲು ಲವಂಗ ಹೇಗೆ ಪರಿಣಾಮಕಾರಿ

ಲವಂಗವು ಬಲವಾದ ಮತ್ತು ಗಾಢವಾದ ವಾಸನೆಯನ್ನು ಹೊಂದಿರುತ್ತದೆ. ಇಲಿಗಳು ಲವಂಗದ ವಾಸನೆಯನ್ನು ಇಷ್ಟಪಡುವುದಿಲ್ಲ. ಹೀಗಾಗಿ ಲವಂಗವನ್ನು ಇಡುವುದರಿಂದ ಇಲಿಗಳು ಮನೆಯೊಳಗೆ ಬರದಂತೆ ತಡೆಗಟ್ಟಬಹುದು. ಇದಕ್ಕಾಗಿ ಲವಂಗವನ್ನು ಅಡುಗೆಮನೆಯ ಕ್ಯಾಬಿನೆಟ್, ಡ್ರಾಯರ್, ಶೆಲ್ಫ್ ಮುಂತಾದ ಇತರ ಸ್ಥಳಗಳಲ್ಲಿ ಇಡಬಹುದು. ಮನೆಯ ಯಾವ ಭಾಗದಲ್ಲಿ ಇಲಿಗಳಿವೆ ಎಂಬುದನ್ನು ತಿಳಿದು ಅಲ್ಲಿ ಲವಂಗವನ್ನು ಇಡಬಹುದು. ಈ ವಾಸನೆಗೆ ಇಲಿಗಳು ಆ ಸ್ಥಳದಿಂದ ದೂರ ಓಡಿ ಹೋಗುತ್ತವೆ

ಇಲಿಗಳನ್ನು ಹಿಮ್ಮೆಟ್ಟಿಸಲು ಮನೆಯಲ್ಲಿ ಸ್ಪ್ರೇ ತಯಾರಿಸಬಹುದು. ಇದಕ್ಕಾಗಿ, ಸ್ಪ್ರೇ ಬಾಟಲಿಯಲ್ಲಿ ಸ್ವಲ್ಪ ಲವಂಗ ಎಣ್ಣೆ ಮತ್ತು ನೀರನ್ನು ಸೇರಿಸಿ ಮಿಶ್ರಣ ಮಾಡಿ. ಲವಂಗದ ಎಣ್ಣೆ ಇಲ್ಲದಿದ್ದರೆ, ಅದನ್ನು ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕಾಗಿ ಸ್ವಲ್ಪ ಲವಂಗವನ್ನು ನೀರಿಗೆ ಹಾಕಿ ಕುದಿಸಬೇಕು. ನೀರು ಅರ್ಧದಷ್ಟು ಆವಿಯಾಗುವವರಿಗೆ ಕುದಿಸಬೇಕು. ನಂತರ ಬಿಸಿ ನೀರನ್ನು ತಣ್ಣಗಾಗಿಸಿ, ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಬೇಕು. ಬಳಿಕ ಮನೆಯ ಪ್ರತಿಯೊಂದು ಮೂಲೆಯಲ್ಲಿ, ವಿಶೇಷವಾಗಿ ಇಲಿಗಳು ಪ್ರವೇಶಿಸುವ ಬಾಗಿಲುಗಳು ಮತ್ತು ಕಿಟಕಿ ಇತ್ಯಾದಿ ಕಡೆಗಳಲ್ಲಿ ಸ್ಪ್ರೇ ಮಾಡಬೇಕು. ಹೀಗೆ ಮಾಡುವುದರಿಂದ ಮೂಲೆ ಮೂಲೆಗಳನ್ನು ಅಡಗಿರುವ ಇಲಿಗಳು ಅಲ್ಲಿಂದ ಹೊರ ಹೋಗುತ್ತವೆ.

ಲವಂಗವನ್ನು ಹೀಗೂ ಇಡಬಹುದು

ಒಂದು ತೆಳುವಾದ ಬಟ್ಟೆಯಲ್ಲಿ ಸ್ವಲ್ಪ ಲವಂಗವನ್ನು ಹಾಕಿ, ಅದನ್ನು ಕಟ್ಟಬೇಕು. ನಂತರ ಬಾಗಿಲು, ಕಿಟಕಿ, ಮೂಲೆಗಳಲ್ಲಿ ಅಥವಾ ಇಲಿಗಳು ಹೆಚ್ಚಾಗಿ ಇರುವ ಸ್ಥಳಗಳಲ್ಲಿ ಹಾಕಬೇಕು. ಅಲ್ಲದೆ, ಹತ್ತಿಯ ಸಣ್ಣ ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಲವಂಗದ ಎಣ್ಣೆ ಹಚ್ಚಿ ಮನೆಯ ಮೂಲೆಗಳಲ್ಲಿ ಇಡುವುದರಿಂದ ಇಲಿಗಳನ್ನು ದೂರವಿಡಬಹುದು. ಹೀಗೆ ಮಾಡುವುದರಿಂದ ಮನೆಯೊಳಗೆ ಇಲಿಗಳು ಬರುವುದನ್ನು ಕಡಿಮೆ ಮಾಡಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)

Whats_app_banner