ಪೂರಿ, ಪಕೋಡಾ ಕರಿದು ಉಳಿದ ಎಣ್ಣೆಯನ್ನು ಎಸೆಯಬೇಡಿ; ಇದನ್ನು ಈ ರೀತಿ ಬಳಸಿದ್ರೆ ಮನೆಯಲ್ಲಿ ಜಿರಳೆ, ಇಲಿಗಳ ಕಾಟವೇ ಇರೋಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಪೂರಿ, ಪಕೋಡಾ ಕರಿದು ಉಳಿದ ಎಣ್ಣೆಯನ್ನು ಎಸೆಯಬೇಡಿ; ಇದನ್ನು ಈ ರೀತಿ ಬಳಸಿದ್ರೆ ಮನೆಯಲ್ಲಿ ಜಿರಳೆ, ಇಲಿಗಳ ಕಾಟವೇ ಇರೋಲ್ಲ

ಪೂರಿ, ಪಕೋಡಾ ಕರಿದು ಉಳಿದ ಎಣ್ಣೆಯನ್ನು ಎಸೆಯಬೇಡಿ; ಇದನ್ನು ಈ ರೀತಿ ಬಳಸಿದ್ರೆ ಮನೆಯಲ್ಲಿ ಜಿರಳೆ, ಇಲಿಗಳ ಕಾಟವೇ ಇರೋಲ್ಲ

ಪೂರಿ, ಪಕೋಡಾ ಕರಿದ ನಂತರ ಉಳಿದ ಎಣ್ಣೆಯನ್ನು ಹಲವರು ಪುನಃ ಬಳಕೆ ಮಾಡುತ್ತಾರೆ, ಇನ್ನೂ ಕೆಲವರು ಎಸೆಯುತ್ತಾರೆ. ಆದರೆ ಇದನ್ನು ಎಸೆಯುವ ಬದಲು ಹಲವು ರೀತಿಗಳಲ್ಲಿ ಬಳಕೆ ಮಾಡಬಹುದು. ಮನೆಯಲ್ಲಿ ಜಿರಳೆ ಹಾಗೂ ಇಲಿಗಳನ್ನು ಓಡಿಸಲು ಇದನ್ನು ಹೇಗೆ ಬಳಸಬಹುದು ನೋಡಿ.

ಇಲಿ, ಜಿರಳೆ ಓಡಿಸಲು ಕರಿದು ಉಳಿದ ಎಣ್ಣೆಯನ್ನು ಹೇಗೆಲ್ಲಾ ಬಳಸಬಹುದು
ಇಲಿ, ಜಿರಳೆ ಓಡಿಸಲು ಕರಿದು ಉಳಿದ ಎಣ್ಣೆಯನ್ನು ಹೇಗೆಲ್ಲಾ ಬಳಸಬಹುದು

ಪೂರಿ, ಪಕೋಡ, ಬೋಂಡಾ, ಬಜ್ಜಿ ಮಾಡುವಾಗ ಹೆಚ್ಚು ಎಣ್ಣೆಯನ್ನು ಬಳಸಲಾಗುತ್ತದೆ. ಈ ತಿನಿಸುಗಳನ್ನು ಕರಿದ ನಂತರ ಎಣ್ಣೆ ಉಳಿಯುತ್ತದೆ. ಪೂರಿ ಮತ್ತು ಪಕೋಡದಂತಹ ತಿನಿಸುಗಳನ್ನು ಕರಿದ ನಂತರ ಉಳಿದ ಎಣ್ಣೆಯನ್ನು ಬಳಸಬಾರದು ಎಂದು ಹೇಳಲಾಗುತ್ತದೆ. ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದರೂ ಅದನ್ನು ಬಳಸಬಾರದು. ಹಾಗಾಗಿ ಹಲವರು ಈ ಎಣ್ಣೆಯನ್ನು ಎಸೆಯುತ್ತಾರೆ. ಆದರೆ ಕರಿದ ನಂತರ ಉಳಿಯುವ ಎಣ್ಣೆಯು ನಿಜವಾಗಿಯೂ ನಮಗೆ ಉಪಯುಕ್ತವಾಗಿದೆ. ಇದನ್ನು ಎಸೆಯುವ ಬದಲು ಜಿರಳೆ ಮತ್ತು ಇಲಿಗಳನ್ನು ಓಡಿಸಲು ಬಳಸಬಹುದು ಎಂಬುದು ಹಲವರಿಗೆ ತಿಳಿದಿಲ್ಲ. ಹಾಗಾದರೆ ಇದರಿಂದ ಇಲಿ, ಜಿರಳೆ ಓಡಿಸುವುದು ಹೇಗೆ ನೋಡಿ.

ಮನೆಯಲ್ಲಿ ಸರಿಯಾದ ಸ್ವಚ್ಛತೆ ಇಲ್ಲ ಎಂದರೆ ಜಿರಳೆ ಸೇರಿದಂತೆ ಹಲವು ಕ್ರಿಮಿ ಕೀಟಗಳು ಸೇರಿಕೊಳ್ಳುತ್ತವೆ. ಅಲ್ಲದೇ ಇಲಿಗಳು ಕೂಡ ಸುತ್ತಾಡಲು ಆರಂಭಿಸುತ್ತವೆ. ಇದಲ್ಲದೆ, ಇಲಿಗಳು ಹೆಚ್ಚಾಗಿ ಮನೆಗಳಲ್ಲಿ ವಾಸಿಸುತ್ತವೆ. ಇದರಿಂದ ಮನೆ ಅಸ್ತವ್ಯಸ್ಥವಾಗುವ ಜೊತೆಗೆ ಹಲವು ಕಾಯಿಲೆಗಳು ಹರಡುತ್ತವೆ. ಹಾಗಾಗಿ ಇಲಿ, ಜಿರಳೆಯನ್ನು ಓಡಿಸಲು ಬಳಸಿದ ಎಣ್ಣೆಯನ್ನು ಹೇಗೆ ಉಪಯೋಗಿಸಬಹುದು ನೋಡಿ.

ಜಿರಳ, ಇಲಿ ಹೋಗಲು ಹೀಗೆ ಮಾಡಿ 

ಉಳಿದ ಎಣ್ಣೆ ಮತ್ತು ಸ್ವಲ್ಪ ಸೀಮೆಎಣ್ಣೆಯನ್ನು ಸ್ಪ್ರೇ ಬಾಟಲಿಯಲ್ಲಿ ಮಿಶ್ರಣ ಮಾಡಿ. ಈಗ ಇದನ್ನು ಮನೆಯ ಮೂಲೆಗಳು ಮತ್ತು ಬಾಗಿಲುಗಳ ಮೇಲೆ ಸಿಂಪಡಿಸಿ. ಇದು ಸಣ್ಣ ಕೀಟಗಳು, ಸೊಳ್ಳೆಗಳು, ನೊಣಗಳು, ಇರುವೆಗಳು, ಜಿರಳೆಗಳು ಮತ್ತು ಇಲಿಗಳನ್ನು ಸಹ ನಿಮ್ಮ ಮನೆಯಿಂದ ದೂರವಿಡುತ್ತದೆ.

ಲೂಬ್ರಿಕಂಟ್ ಆಗಿ ಬಳಕೆ ಮಾಡಿ 

ಉಳಿದ ಎಣ್ಣೆಯನ್ನು ಎಸೆಯುವ ಬದಲು, ನೀವು ಅದನ್ನು ಲೂಬ್ರಿಕಂಟ್ ಆಗಿ ಬಳಸಬಹುದು. ಹಳೆಯ ಕಿಟಕಿ ಬಾಗಿಲುಗಳು ಆಗಾಗ್ಗೆ ಜಾಮ್ ಆಗುತ್ತವೆ ಮತ್ತು ಶಬ್ದ ಮಾಡುತ್ತವೆ. ಹಳೆಯ ಯಂತ್ರಗಳಲ್ಲೂ ಅದೇ ರೀತಿ ಆಗುತ್ತದೆ. ಈ ಸಂದರ್ಭದಲ್ಲಿ, ನೀವು ಉಳಿದ ಎಣ್ಣೆಯನ್ನು ಲೂಬ್ರಿಕಂಟ್ ಆಗಿ ಬಳಸಬಹುಸು, ಇದು ಘರ್ಷಣೆಯನ್ನು ಕಡಿಮೆ ಮಾಡುತ್ತದೆ.

ಪೀಠೋಪಕರಣಗಳ ಹೊಳಪು ಹೆಚ್ಚಲು ಹೀಗೆ ಬಳಸಿ 

ತ್ಯಾಜ್ಯ ಎಣ್ಣೆಯನ್ನು ಹೊಳಪು ಹೆಚ್ಚಿಸಲು ಸಹ ಬಳಸಬಹುದು. ಮರದ ಹಳೆಯ ಪೀಠೋಪಕರಣಗಳ ಹೊಳಪು ಹೆಚ್ಚಿಸಲು ಇದು ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಇದಕ್ಕಾಗಿ, ಮನೆಯಲ್ಲಿರುವ ಹಳೆಯ ಮರದ ಪೀಠೋಪಕರಣಗಳ ಮೇಲೆ ಬಟ್ಟೆ ಅಥವಾ ಬ್ರಷ್ ಸಹಾಯದಿಂದ ತೆಳುವಾಗಿ ಎಣ್ಣೆಯನ್ನು ಹಚ್ಚಿ. ಅದು ಪೀಠೋಪಕರಣಗಳಿಗೆ ಚೆನ್ನಾಗಿ ಹೀರಿಕೊಳ್ಳಲಿ. ಹೀಗೆ ಮಾಡುವುದರಿಂದ ಪೀಠೋಪಕರಣಗಳು ಚೆನ್ನಾಗಿ ಸ್ವಚ್ಛಗೊಳಿಸುವುದಲ್ಲದೆ, ಅದರ ಹೊಳಪು ವರ್ಷಗಳ ಕಾಲ ಹಾಗೆಯೇ ಇರುತ್ತದೆ. ಕಬ್ಬಿಣದ ಉಪಕರಣಗಳು ಮತ್ತು ಹಿಡಿಕೆಗಳಂತಹ ವಸ್ತುಗಳನ್ನು ಪಾಲಿಶ್ ಮಾಡಲು ಸಹ ನೀವು ಇದನ್ನು ಬಳಸಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner