ಬೇಸಿಗೆಯಲ್ಲಿ ಸೊಳ್ಳೆ, ನೊಣಗಳ ಕಾಟದಿಂದ ಬೇಸತ್ತಿದ್ದರೆ ಇಲ್ಲಿದೆ ನೈಸರ್ಗಿಕ ಪರಿಹಾರ; ಈರುಳ್ಳಿಯನ್ನು ಹೀಗೆ ಬಳಸಿ ನೋಡಿ
ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ.ಮನೆಯಲ್ಲಿ ಸೊಳ್ಳೆಗಳು ಮತ್ತು ನೊಣಗಳಿಂದ ತೊಂದರೆಗೀಡಾಗಿದ್ದರೆ,ನೈಸರ್ಗಿಕ ಪರಿಹಾರವನ್ನು ಪಡೆಯಬಹುದು. ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ಸೊಳ್ಳೆಗಳ ಕಾಟವನ್ನು ತೊಡೆದುಹಾಕಬಹುದು.

ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ವಿಶೇಷವಾಗಿ ಮಳೆ ಬಂದಾಗ, ಸೊಳ್ಳೆಗಳು ಮನೆಯೊಳಗೆ ಮತ್ತು ಹೊರಗೆ ವೇಗವಾಗಿ ಹರಡುತ್ತವೆ. ಸ್ವಲ್ಪ ಅಜಾಗರೂಕತೆಯು ಡೆಂಗ್ಯೂ, ಮಲೇರಿಯಾ ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಬಹುತೇಕರು ರಾಸಾಯನಿಕಗಳತ್ತ ಮೊರೆ ಹೋಗುತ್ತದೆ. ಆದರೆ, ರಾಸಾಯನಿಕ ಸೊಳ್ಳೆ ನಿವಾರಕವನ್ನು ದಿನವಿಡೀ ಹಚ್ಚುವುದು ಮಕ್ಕಳ ಉಸಿರಾಟ ಮತ್ತು ಶ್ವಾಸಕೋಶಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಕೆಲವು ಮನೆಮದ್ದುಗಳು ಸೊಳ್ಳೆ ಮತ್ತು ನೊಣಗಳ ಭಯವನ್ನು ತೊಡೆದುಹಾಕಬಹುದು.
ನೀವು ಅನೇಕ ರೀತಿಯಲ್ಲಿ ಸೊಳ್ಳೆಯನ್ನು ತೊಡೆದುಹಾಕಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗದಿದ್ದರೆ ಇಲ್ಲಿ ನೀಡಿರುವ ಸಿಂಪಲ್ ಟ್ರಿಕ್ಸ್ ಅನ್ನು ಪಾಲಿಸಬಹುದು. ಇದರಿಂದ ಸೊಳ್ಳೆ, ಸಣ್ಣ ಕೀಟಗಳು ಮತ್ತು ನೊಣಗಳು ಕೂಡ ವೇಗವಾಗಿ ಓಡಿಹೋಗುತ್ತವೆ. ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ಸೊಳ್ಳೆಗಳನ್ನು ತೊಡೆದುಹಾಕಬಹುದು
ಸೊಳ್ಳೆಗೆ ಅತ್ಯುತ್ತಮ ನೈಸರ್ಗಿಕ ಮನೆಮದ್ದು
ಮನೆಯಲ್ಲಿ ಇರಿಸಲಾದ ಕೆಲವು ವಸ್ತುಗಳು ಸೊಳ್ಳೆ ನಿವಾರಕಗಳಿಗೆ ಅತ್ಯುತ್ತಮವಾಗಿವೆ. ಕರ್ಪೂರ, ತುಳಸಿ, ಬೆಳ್ಳುಳ್ಳಿ, ಬೇವಿನೆಣ್ಣೆ, ಲವಂಗ ಮತ್ತು ನಿಂಬೆ, ಈರುಳ್ಳಿ, ಆಪಲ್ ಸೈಡರ್ ವಿನೆಗರ್, ನೀಲಗಿರಿ ಎಣ್ಣೆ. ಅದರಲ್ಲೂ ಈರುಳ್ಳಿಯು ಬಹಳ ಪರಿಣಾಮಕಾರಿಯಾಗಿದೆ. ಇದು ನೈಸರ್ಗಿಕವಾಗಿ ಸೊಳ್ಳೆ ನಿವಾರಕವಾಗಿದೆ. ಸೊಳ್ಳೆ, ನೊಣಗಳನ್ನು ತೊಡೆದುಹಾಕಲು ಈರುಳ್ಳಿಯನ್ನು ಹೀಗೆ ಬಳಸಿ.
ಇದನ್ನೂ ಓದಿ: ಸೊಳ್ಳೆಗಳನ್ನು ದೂರವಿರಿಸಲು ಸಹಾಯ ಮಾಡುವ 5 ಸಸ್ಯಗಳು
ಈರುಳ್ಳಿ ಕತ್ತರಿಸಿ ಇರಿಸಿ
ಸೊಳ್ಳೆಗಳು ಅಥವಾ ನೊಣಗಳು ಹೆಚ್ಚಾಗಿ ಕಂಡುಬರುವ ಮೂಲೆಗಳಲ್ಲಿ ಈರುಳ್ಳಿಯನ್ನು ಕತ್ತರಿಸಿ ಇರಿಸಿ. ಈರುಳ್ಳಿಯ ಬಲವಾದ ವಾಸನೆ ಸೊಳ್ಳೆಗಳು ಮತ್ತು ನೊಣಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಈರುಳ್ಳಿಯನ್ನು ಸುಡಬಹುದು
ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ ಸಾಸಿವೆ ಎಣ್ಣೆಯಲ್ಲಿ ಅದ್ದಿದ ಬತ್ತಿಯನ್ನು ಇರಿಸಿ ಮತ್ತು ಕರ್ಪೂರದ ಪುಡಿಯನ್ನು ಮಾಡಿ ಸೇರಿಸಿ. ಈಗ ಈ ಬತ್ತಿಯನ್ನು ಬೆಳಗಿಸಿ. ಇದರ ಬಲವಾದ ವಾಸನೆ ಸೊಳ್ಳೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈರುಳ್ಳಿಯ ವಾಸನೆ ಮನೆ ತುಂಬಾ ಹಬ್ಬುತ್ತದೆ. ಇದು ತುಂಬಾ ವಿಚಿತ್ರವಾಗಿ ತೋರುತ್ತದೆ. ನೀವು ಬಯಸಿದರೆ ಅದರಲ್ಲಿ ಒಂದರಿಂದ ಎರಡು ಲವಂಗಗಳನ್ನು ಸಹ ಹಾಕಬಹುದು.
ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳಿಂದ ಸೊಳ್ಳೆ ನಿವಾರಕವನ್ನು ತಯಾರಿಸಿ
ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಎಸೆಯುವ ಬದಲು, ಅವುಗಳನ್ನು ನೀರಿನಲ್ಲಿ ಕುದಿಸಿ. ನಂತರ ಈ ನೀರನ್ನು ಫಿಲ್ಟರ್ ಮಾಡಿ ಕೀಟಗಳು, ಸೊಳ್ಳೆಗಳು ಮತ್ತು ನೊಣಗಳು ಕಂಡುಬರುವ ಮೂಲೆಗಳಲ್ಲಿ ಇರಿಸಿ. ಅಲ್ಲಿ ಸಿಂಪಡಿಸಿ. ಇದು ಸೊಳ್ಳೆಗಳು ಮತ್ತು ನೊಣಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ.
ವಿಭಾಗ