Electric vs Gas Stove: ಗ್ಯಾಸ್ ಸ್ಟೌ ಒಳ್ಳೇದೋ? ಎಲೆಕ್ಟ್ರಿಕ್ ಸ್ಟೌ ಒಳ್ಳೇದೋ? ಇಲ್ಲಿದೆ ಉತ್ತರ, ಅರ್ಥ ಮಾಡ್ಕೊಂಡೇ ಒಲೆ ತಗೊಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Electric Vs Gas Stove: ಗ್ಯಾಸ್ ಸ್ಟೌ ಒಳ್ಳೇದೋ? ಎಲೆಕ್ಟ್ರಿಕ್ ಸ್ಟೌ ಒಳ್ಳೇದೋ? ಇಲ್ಲಿದೆ ಉತ್ತರ, ಅರ್ಥ ಮಾಡ್ಕೊಂಡೇ ಒಲೆ ತಗೊಳಿ

Electric vs Gas Stove: ಗ್ಯಾಸ್ ಸ್ಟೌ ಒಳ್ಳೇದೋ? ಎಲೆಕ್ಟ್ರಿಕ್ ಸ್ಟೌ ಒಳ್ಳೇದೋ? ಇಲ್ಲಿದೆ ಉತ್ತರ, ಅರ್ಥ ಮಾಡ್ಕೊಂಡೇ ಒಲೆ ತಗೊಳಿ

Kitchen Tips: ಅಡುಗೆಮನೆಯ ಕೆಲಸ ಸುಲಭವಾಗಬೇಕೆಂದರೆ ಮೊದಲು ಅಲ್ಲಿ ಬಳಸುವ ವಸ್ತುಗಳು ಸರಿಯಾಗಿರಬೇಕು. ಸ್ವಚ್ಛಗೊಳಿಸಲು ಕಷ್ಟ ಪಡಬೇಕಾದ ವಸ್ತುಗಳಿದ್ದರೆ ಅನಗತ್ಯವಾಗಿ ಸಮಯ ಹಾಳಾಗುತ್ತದೆ. ಅದರಲ್ಲೂ ಕೆಲಸಕ್ಕೆ ಹೋಗುವ ಗೃಹಿಣಿಯರಿಗಂತೂ ಇದು ಇನ್ನೂ ತಲೆನೋವಿನ ಕೆಲಸ. ಹಾಗಾಗಿ ಕೆಲಸ ಸುಲಭವಾಗುವ ಹಾಗೂ ಸಮಯ ಉಳಿಸುವ ವಸ್ತುಗಳು ಅವಶ್ಯಕ.

ಗ್ಯಾಸ್‌ ಸ್ಟೌ ಮತ್ತುಎಲೆಕ್ಟ್ರಿಕ್‌ ಸ್ಟೌ (PC: Unsplash)
ಗ್ಯಾಸ್‌ ಸ್ಟೌ ಮತ್ತುಎಲೆಕ್ಟ್ರಿಕ್‌ ಸ್ಟೌ (PC: Unsplash)

ಹಿಂದಿನ ಕಾಲವೊಂದಿತ್ತು, ಅಡುಗೆ ಮಾಡಲು ಕಟ್ಟಿಗೆಯ ಒಲೆ ಅಥವಾ ಅಗ್ಗಷ್ಟಿಕೆಗಳನ್ನು ಬಳಸುತ್ತಿದ್ದರು. ಕ್ರಮೇಣ ಕಾಲ ಬದಲಾಯಿತು. ಸೀಮೆಎಣ್ಣೆಯ ಸ್ಟೌ, ಗ್ಯಾಸ್‌ ಸ್ಟೌ, ಎಲೆಕ್ಟ್ರಿಕಲ್‌ ಕಾಯಿಲ್‌ ಹೀಗೆ ಬದಲಾಗುತ್ತಾ ಈಗ ಎಲೆಕ್ಟ್ರಿಕ್‌ ಸ್ಟೌ ಮತ್ತು ಓವನ್‌ವರೆಗೆ ಬಂದು ನಿಂತಿದೆ. ಕಾಲ ಬದಲಾದಂತೆ ಈ ಸ್ಟೌಗಳ ವಿನ್ಯಾಸ, ಆಕಾರವೂ ಬದಲಾಗಿದೆ. ಸ್ಟೀಲ್‌ನ ಗ್ಯಾಸ್‌ ಸ್ಟೌ ಬದಲಿಗೆ ಈಗ ಗ್ಲಾಸ್‌ ಟಾಪ್‌ ಸ್ಟೋವ್‌ಗಳು ಬಂದಿದೆ. ನಾಲ್ಕು ಸುರಳಿಯಾಕಾರದ ಎಲೆಕ್ಟ್ರಿಕ್‌ ಕಾಯಿಲ್‌ ಬದಲಿಗೆ ನಯವಾದ ಮೇಲ್ಮೈ ಹೊಂದಿರುವ ಎಲೆಕ್ಟ್ರಿಕ್‌ ಸ್ಟೌಗಳನ್ನು ನಾವು ಈಗ ಕಾಣುತ್ತಿದ್ದೇವೆ. ಇವೆಲ್ಲವೂ ಅಡುಗೆ ಮಾಡಲು ಸಹಾಯವಾಗುವುದೇ ಆದರೂ ಯಾವುದು ಬೆಸ್ಟ್‌ ಎಂಬ ಪ್ರಶ್ನೆ ಆಗಾಗ ಕಾಡುತ್ತಲೇ ಇರುತ್ತದೆ. ಹಾಗಾದರೆ ಯಾವುದು ಬೆಸ್ಟ್‌ ಗ್ಯಾಸ್‌ ಸ್ಟೌ ಅಥವಾ ಎಲೆಕ್ಟ್ರಿಕ್‌ ಸ್ಟೌ?

ಗ್ಯಾಸ್ ಸ್ಟೌ ಮತ್ತು ಎಲೆಕ್ಟ್ರಿಕ್‌ ಸ್ಟೌ

ನಿಮ್ಮ ಅಡುಗೆಯ ಪದ್ಧತಿ ಯಾವುದೇ ಇರಲಿ, ಆದರೆ ಅಡುಗೆ ಮಾಡಲು ಮಾತ್ರ ಸ್ಟೌ ಬೇಕೇ ಬೇಕು. ನಮಗೆಲ್ಲರಿಗೂ ತಿಳಿದಿರುವಂತೆ ಗ್ಯಾಸ್‌ ಸ್ಟೌನಲ್ಲಿ ಎಲ್‌ಪಿಜಿ ಅನಿಲ ಬಳಕೆಯಾಗುತ್ತದೆ. ಗ್ಯಾಸ್‌ ಪೈಪ್‌ ಲೈನ್‌ನಿಂದ ಬಂದ ಗ್ಯಾಸ್‌ ಬರ್ನರ್‌‌ ಸಹಾಯದಿಂದ ಒಲೆ ಉರಿಯುತ್ತದೆ. ಜ್ವಾಲೆಯನ್ನು ನಿಯಂತ್ರಿಸಲು ಡಯಲ್‌ಗಳಿರುತ್ತವೆ. ನಮಗೆ ಬೇಕಾದ ಹಾಗೆ ಅದನ್ನು ಹೊಂದಿಸಿಕೊಳ್ಳಬಹುದು.

ಇನ್ನು ಎಲೆಕ್ಟ್ರಿಕ್‌ ಸ್ಟೌ ಅಂದರೆ ನಾಲ್ಕು ಸೆಟ್‌ ಸುರುಳಿಯಾಕಾರದ ತಂತಿಗಳ ನಡುವೆ ವಿದ್ಯುತ್‌ ಚಲಿಸಿದಾಗ ಬಿಡುಗಡೆಯಾಗುವ ಶಾಖದಿಂದ ಒಲೆ ಉರಿಯತ್ತದೆ. ಸಮತಟ್ಟಾದ ಮೇಲ್ಮೈ ಹೊಂದಿರುವ ಇದು ಎಲ್ಲಾಕಡೆಯಲ್ಲಿಯೂ ಶಾಖವನ್ನು ಏಕಪ್ರಕಾರದಲ್ಲಿ ಬಿಡುಗಡೆಮಾಡುತ್ತದೆ. ಇದರ ಶಾಖವನ್ನು ಸಹ ಡಯಲ್‌ನಿಂದ ನಿಯಂತ್ರಿಸಬಹುದಾಗಿದೆ. ಎಲೆಕ್ಟ್ರಿಕ್‌ ಓವನ್‌ ಒಳಗೆಯೂ ಸಹ ಶಾಖವು ಒಂದೇ ರೀತಿಯಲ್ಲಿರುತ್ತದೆ.

ಯಾವ ಸ್ಟೌ ಬೆಸ್ಟ್‌?

ಇಲೆಕ್ಟ್ರಿಕ್‌ ಸ್ಟೌ ಅಥವಾ ಗ್ಯಾಸ್‌ ಸ್ಟೌ ನಾವು ಯಾವುದೇ ಬಳಕೆ ಮಾಡುತ್ತಿರಲಿ, ಅವುಗಳ ಮುಖ್ಯ ಪ್ರಯೋಜನ ಶಾಖವನ್ನು ಪಾತ್ರೆಗಳಿಗೆ ವರ್ಗಾಯಿಸುವುದೇ ಆಗಿರುತ್ತದೆ. ಆದರೆ ಯಾವುದು ಬೆಸ್ಟ್‌ ಎಂದು ನೋಡಲು ಅವುಗಳ ಪ್ರಯೋಜನಗಳನ್ನು ಹೊಲಿಕೆ ಮಾಡಿ ನೋಡಬೇಕಾಗುತ್ತದೆ.

1. ಮೊದಲಿಗೆ ಗ್ಯಾಸ್‌ ಸ್ಟೌನ ಪ್ರಯೋಜನಗಳನ್ನು ನೋಡುವುದಾದರೆ ಇದು ಬಹಳ ಬೇಗನೆ ತಣ್ಣಗಾಗುತ್ತದೆ. ಇದರಲ್ಲಿ ಅಡುಗೆ ಮಾಡಲು ಪ್ರೀಹೀಟ್‌ ಮಾಡುವು ಅವಶ್ಯಕತೆ ಇರುವುದಿಲ್ಲ. ಇದರಿಂದ ಸಮಯದ ಉಳಿತಾಯವಾಗುತ್ತದೆ. ಜ್ವಾಲೆಯನ್ನು ನಮಗೆ ಬೇಕಾದ ಹಾಗೆ ಹೊಂದಾಣಿಕೆ ಮಾಡಿಕೊಳ್ಳಬಹುದು.

2. ಇಲೆಕ್ಟ್ರಿಕ್‌ ಸ್ಟೌಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಗಾಳಿ ಸೇರಿ ಶಾಖ ನಷ್ಟವಾಗುವುದಿಲ್ಲ. ಪಾತ್ರೆಗಳಿಗೆ ಶಾಖದ ನೇರ ಸಂಪರ್ಕ ಇರುವುದರಿಂದ ಬರ್ನರ್‌ ಶಾಖ ಕಳೆದುಕೊಳ್ಳುವುದಿಲ್ಲ.

3. ಅಡುಗೆಗಳನ್ನು ಬೇಯಿಸಲು, ಹುರಿಯಲು ಅಥವಾ ಕಾಯಿಸಲು ಗ್ಯಾಸ್‌ ಸ್ಟೌ ಒಂದು ರೀತಿಯಲ್ಲಿ ಸಹಕಾರಿಯಾಗಿದೆ.

4. ಆದರೆ ಕೇಕ್‌, ಮಫಿನ್‌ಗಳಂತಹ ಪಾಕಗಳನ್ನು ತಯಾರಿಸಲು ಇಲೆಕ್ಟ್ರಿಕ್‌ ಓವನ್‌ ಗಳು ಬೆಸ್ಟ್‌

5. ಇನ್ನು ಸ್ವಚ್ಛತೆಯ ಬಗ್ಗೆ ಹೇಳುವುದಾದರೆ ಗ್ಯಾಸ್‌ ಸ್ಟೌ ಸ್ವಚ್ಛಗೊಳಿಸುವುದು ಸುಲಭ. ಆದರೆ ಇಲೆಕ್ಟ್ರಿಕ್‌ ಸ್ಟೌ ಅಥವಾ ಓವನ್‌ ಸ್ವಚ್ಛಗೊಳಿಸಲು ಸ್ವಲ್ಪ ಜಾಣ್ಮೆ ಬೇಕು.

6. ಪರಿಸರದ ಬಗ್ಗೆ ಹೇಳುವುದಾದರೆ ಗ್ಯಾಸ್‌ ಸ್ಟೌನಿಂದ ಅಡುಗೆಮನೆಯ ಒಳಾಂಗಣದ ಮಾಲಿನ್ಯ ಹೆಚ್ಚು. ಕಿಟಕಿ ಇರುವ ಕಡೆಯಲ್ಲಿಯೇ ಅದನ್ನು ಸ್ಥಾಪಿಸಬೇಕಾಗಿರುವುದು ಅವಶ್ಯಕವಾಗಿದೆ.

7. ಎರಡೂ ಸ್ಟೌಗಳ ಬೆಲೆಗಳನ್ನು ಹೋಲಿಸಿದಾಗ ಗ್ಯಾಸ್‌ ಸ್ಟೌ ಇಲೆಕ್ಟ್ರಿಕ್‌ ಸ್ಟೋವ್‌ಗಿಂತ ಸ್ವಲ್ಪ ಅಗ್ಗವಾಗಿದೆ.

8. ಹೆಚ್ಚಿನ ಅಡುಗೆ ಮನೆಗಳು ಇಲೆಕ್ಟ್ರಿಕ್ ಸ್ಟೌ ಬಳಸಲು ಅವಶ್ಯಕತೆ ಇರುವ ವಿದ್ಯುತ್‌ ವೋಲ್ಟೇಜ್‌ಗಳನ್ನು ಹೊಂದಿರುತ್ತವೆ. ಆದರೆ ಗ್ಯಾಸ್‌ ಸಿಲೆಂಡರ್‌ಗೆ ಹೋಲಿಸಿದಾಗ ವಿದ್ಯುತ್‌ ಬಿಲ್‌ ಹೆಚ್ಚಾಗಬಹುದು. ಅದು ನಮ್ಮ ಅಡುಗೆಯ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಪ್ರಮುಖವಾಗಿದೆ.

9. ಯಾವುದೇ ಸ್ಟೌ ಖರೀದಿಸುವ ಮೊದಲು ಅದರ ಶುಚಿಗೊಳಿಸುವ ಪ್ರಕ್ರಿಯೆಗಳ ಬಗ್ಗೆ ಯೋಚಿಸುವುದು ಮುಖ್ಯವಾಗಿದೆ. ಬಹಳಷ್ಟು ಸಮಯ ತಗಲುವುದಾದರೆ ಅವುಗಳನ್ನು ಖರೀದಿಸುವ ಮೊದಲು ನಿಮ್ಮ ಹತ್ತಿರ ಅಷ್ಟು ಸಮಯವಿದೆಯೇ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ.

Whats_app_banner