Green gram: ಹೆಸರುಕಾಳು ತಿನ್ನುತ್ತಿದ್ದೀರಾ...ಮೊದಲು ಇದರ ಬಗ್ಗೆ ತಿಳಿದುಕೊಳ್ಳಿ
ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವಸಾರ್ ಹೆಸರುಕಾಳಿನಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ ತಿಳಿಸಿದ್ದಾರೆ. ಇದರಲ್ಲಿ ವಿಶಿಷ್ಟ ಔಷಧೀಯ ಗುಣಗಳಿರುವುದರಿಂದ ನಿತ್ಯ ಆಹಾರದಲ್ಲಿ ಬಳಸಿದರೆ ಕಫ ಮತ್ತು ಪಿತ್ತವನ್ನು ಸಮತೋಲನದಲ್ಲಿರಿಸುತ್ತದೆ ಎಂದಿದ್ದಾರೆ.
ನಾವು ಸದಾ ಕಾಲ ಆರೋಗ್ಯದಿಂದ ಇರಲು ಕೆಲವೊಂದು ಆಹಾರಗಳು ನಮಗೆ ಸಹಾಯ ಮಾಡುತ್ತವೆ. ಅದರಲ್ಲಿ ಹೆಸರುಕಾಳು ಕೂಡಾ ಒಂದು. ಇದು ಬಹಳ ಹಗುರವಾದ ಆಹಾರವಾಗಿದೆ. ಜೀರ್ಣಿಸಿಕೊಳ್ಳಲು ಕೂಡಾ ಬಹಳ ಸುಲಭ. ಇದು ಆರೋಗ್ಯಕ್ಕೆ ವಿವಿಧ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದ್ದರಿಂದಲೇ ಇದನ್ನು ಸೂಪರ್ ಫುಡ್ ಎನ್ನಲಾಗುತ್ತದೆ.
ಹೆಸರುಕಾಳನ್ನು ನೀವು ನೆನೆಸಿ ತಿನ್ನಬಹುದು ಅಥವಾ ಮೊಳಕೆ ಬರಿಸಿ ಕೂಡಾ ಸೇವಿಸಬಹುದಾಗಿದೆ. ಇದನ್ನು ಸಾತ್ವಿಕ ಆಹಾರ ಎಂದು ಕರೆಯಲಾಗುತ್ತದೆ. ಮನಸ್ಸಿನ ಮೇಲೆ ಹಿತವಾದ ಪರಿಣಾಮವನ್ನು ಬೀರುವುದು ಇದರ ವಿಶೇಷತೆ. ಆಯುರ್ವೇದದ ಪ್ರಾಚೀನ ವೈದ್ಯಕೀಯ ವಿಜ್ಞಾನದಲ್ಲಿ, ಹೆಸರುಕಾಳನ್ನು ಮುದ್ಗಾ ಎಂದು ಕರೆಯಲಾಗುತ್ತದೆ. ಮುದ್ಗಾ ಎಂದರೆ ಉತ್ಸಾಹ ಮತ್ತು ಸಂತೋಷ ಎಂದರ್ಥ.
ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವಸಾರ್ ಹೆಸರುಕಾಳಿನಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ ತಿಳಿಸಿದ್ದಾರೆ. ಇದರಲ್ಲಿ ವಿಶಿಷ್ಟ ಔಷಧೀಯ ಗುಣಗಳಿರುವುದರಿಂದ ನಿತ್ಯ ಆಹಾರದಲ್ಲಿ ಬಳಸಿದರೆ ಕಫ ಮತ್ತು ಪಿತ್ತವನ್ನು ಸಮತೋಲನದಲ್ಲಿರಿಸುತ್ತದೆ ಎಂದಿದ್ದಾರೆ.
ಆಯುರ್ವೇದದ ಪ್ರಕಾರ ಹೆಸರು ನಾನಾ ರೀತಿಯ ಆರೋಗ್ಯ ಲಾಭಗಳನ್ನು ಹೊಂದಿದೆ. ಇದು ತಿನ್ನಲು ಬಹಳ ರುಚಿಯಾಗಿರುತ್ತದೆ. ಜೊತೆಗೆ ಬಹಳ ಬೇಗ ಜೀರ್ಣವಾಗುತ್ತದೆ. ಶೀತದ ವಿರುದ್ಧ ಹೊರಾಡುತ್ತದೆ. ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಜ್ವರವನ್ನು ನಿವಾರಿಸುವುದಲ್ಲದೆ, ಚರ್ಮದ ಟೋನ್ ಸುಧಾರಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು.
ಹೆಸರುಕಾಳಿನಲ್ಲಿ ಕಬ್ಬಿಣ, ಪೊಟ್ಯಾಷಿಯಮ್, ಅಮೈನೋ ಆಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ಬಹಳ ಸಮೃದ್ಧವಾಗಿವೆ. ಅವು ಸಸ್ಯ ಆಧಾರಿತ ಪ್ರೋಟೀನ್‌ನ ಉತ್ತಮ ಮೂಲವಾಗಿದೆ.
-ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಯಕೃತ್ತಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಇದರಲ್ಲಿ ಫೋಲೇಟ್ ಅಂಶ ಸಮೃದ್ಧವಾಗಿದೆ. ಹೆಣ್ಣು ಭ್ರೂಣದ ಬೆಳವಣಿಗೆಗೆ ಇದು ಅತ್ಯಗತ್ಯ ಪೋಷಕಾಂಶವಾಗಿದೆ. ಗರ್ಭಿಣಿಯರಿಗೆ ತುಂಬಾ ಒಳ್ಳೆಯದು
- ಹೆಸರುಕಾಳನ್ನು ಪುಡಿ ಮಾಡಿ ಫೇಸ್ ಪ್ಯಾಕ್ ಆಗಿ ಹಚ್ಚಿದರೆ ತ್ವಚೆಯು ಹಗುರವಾಗುತ್ತದೆ. ಇದು ಮೊಡವೆ, ಎಸ್ಜಿಮಾ ಮತ್ತು ತುರಿಕೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೆಸರುಕಾಳನ್ನು ಒಣಗಿಸಿ ಪುಡಿ ಮಾಡಿ ಇದರೊಂದಿಗೆ ಸ್ವಲ್ಪ ಕಡ್ಲೆಹಿಟ್ಟು ಹಾಗೂ ಮೊಸರು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. 20-30 ನಿಮಿಷಗಳ ನಂತರ ತೊಳೆಯಿರಿ. ಹೀಗೆ ಮಾಡಿದರೆ ನಿಮ್ಮ ಚರ್ಮಕ್ಕೆ ಕೆಲವೇ ದಿನಗಳಲ್ಲಿ ಎಷ್ಟು ಬದಲಾವಣೆ ದೊರೆಯಲಿದೆ ನೀವೇ ಗಮನಿಸಿ.
- ಸೂಕ್ಷ್ಮ ತ್ವಚೆ ಇರುವವರು ರಾಸಾಯನಿಕ ಸೋಪುಗಳ ಬದಲು ಹೆಸರುಕಾಳು ಪುಡಿಯನ್ನು ಬಳಸಬಹುದು. ಇದು ಎಲ್ಲಾ ವಯಸ್ಸಿನ ಚರ್ಮಕ್ಕೆ ಬಹಳ ಸೂಕ್ತವಾಗಿದೆ.
-ಅಡುಗೆ ಮಾಡುವಾಗ ಹೆಸರುಕಾಳನ್ನು ನೆನೆಸುವುದು ಉತ್ತಮ ಎಂದು ವೈದ್ಯರ ತಿಳಿಸುತ್ತಾರೆ. ಇದನ್ನು ನೆನೆಸುವುದರಿಂದ ಫೈಟಿಕ್ ಆಮ್ಲ ನಿವಾರಣೆಯಾಗುತ್ತದೆ. ನಂತರ ಅದು ಸುಲಭವಾಗಿ ಜೀರ್ಣವಾಗುತ್ತದೆ, ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಕೂಡಾ ಬಹಳ ಸುಲಭ.
ವಿಭಾಗ