ಕೋಟಕ್ ಕನ್ಯಾ ಸ್ಕಾಲರ್‌ಷಿಪ್ 2024: ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 1.5 ಲಕ್ಷ ವಿದ್ಯಾರ್ಥಿವೇತನ, ಅರ್ಜಿ ಸಲ್ಲಿಕೆಗೆ ಡಿ 20 ಕೊನೆದಿನ
Kotak Kanya Scholarship 2024-25: ಕೋಟಕ್ ಕನ್ಯಾ ಸ್ಕಾಲರ್‌ಷಿಪ್ 2024ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನವಾಗಿದೆ. ದ್ವಿತೀಯ ಪಿಯುಸಿ ಬಳಿಕದ ವೃತ್ತಿಪರ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿನಿಯರಿಗೆ 4/5 ವರ್ಷಗಳ ಕಾಲ 1.5 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
![ಕೋಟಕ್ ಕನ್ಯಾ ಸ್ಕಾಲರ್‌ಷಿಪ್ 2024: ವರ್ಷಕ್ಕೆ 1.5 ಲಕ್ಷ ವಿದ್ಯಾರ್ಥಿವೇತನ ಕೋಟಕ್ ಕನ್ಯಾ ಸ್ಕಾಲರ್‌ಷಿಪ್ 2024: ವರ್ಷಕ್ಕೆ 1.5 ಲಕ್ಷ ವಿದ್ಯಾರ್ಥಿವೇತನ](https://images.hindustantimes.com/kannada/img/2024/12/17/550x309/Kotak_Kanya_Scholarship_1734429755571_1734429761013.png)
Kotak Kanya Scholarship 2024-25: ಕೋಟಕ್ ಕನ್ಯಾ ಸ್ಕಾಲರ್‌ಷಿಪ್ ಎನ್ನುವುದು ಕೋಟಕ್ ಮಹೀಂದ್ರ ಗ್ರೂಪ್ ಕಂಪನಿಗಳು ಮತ್ತು ಕೋಟಕ್ ಎಜುಕೇಷನ್ ಫೌಂಡೇಷನ್‌ನ ಸಿಎಸ್‌ಆರ್ ಪ್ರಾಜೆಕ್ಟ್ ಆಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ 12ನೇ ತರಗತಿ ಬಳಿಕದ ವೃತ್ತಿಪರ ಕೋರ್ಸ್ ಕಲಿಕೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳಿವೆ. ಅಂದರೆ, ಡಿಸೆಂಬರ್ 20, 2024 ಕೊನೆಯ ದಿನವಾಗಿದೆ. ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬಹುದು.
ಕೋಟಕ್ ಕನ್ಯಾ ಸ್ಕಾಲರ್‌ಷಿಪ್‌ಗೆ ಅರ್ಜಿ ಆಹ್ವಾನ
12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿನಿಯರು ಎಂಬಿಬಿಎಸ್, ಬಿಡಿಎಸ್, ಎಲ್‌ಎಲ್‌ಬಿ (ಐದು ವರ್ಷಗಳು), ಬಿ ಫಾರ್ಮಸಿ, ಬಿಎಸ್ಸಿ ನರ್ಸಿಂಗ್, ಇಂಟಿಗ್ರೇಟೆಡ್ ಬಿಎಸ್-ಎಂಎಸ್/ಬಿಎಸ್ ರಿಸರ್ಚ್, ಡಿಸೈನ್, ಆರ್ಕಿಟೆಕ್ಷನರ್‌ನಂತಹ ವಿನ್ಯಾಸ ಕೋರ್ಸ್‌ಗಳನ್ನು ಕಲಿಯಲು ಬಯಸುವ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ಪದವಿ ಮುಗಿಯುವ ತನಕ ವರ್ಷಕ್ಕೆ 1.5 ಲಕ್ಷ ರೂಪಾಯಿಯಂತೆ ನೀಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
- ಭಾರತದಾದ್ಯಂತ ಇರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇಕಡ 75 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಅಥವಾ ಸಮಾನವಾದ ಸಿಜಿಪಎ ಗಳಿಸಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 6,00,000 ರೂಪಾಯಿಗಿಂತ ಕಡಿಮೆಯಿರಬೇಕು.
- ಎಂಜಿನಿಯರಿಗ್, ಎಂಬಿಬಿಎಸ್, ಬಿಡಿಎಸ್, ಎಲ್‌ಎಲ್‌ಬಿ (ಐದು ವರ್ಷಗಳು), ಬಿ ಫಾರ್ಮಸಿ, ಬಿಎಸ್ಸಿ ನರ್ಸಿಂಗ್, ಇಂಟಿಗ್ರೇಟೆಡ್ ಬಿಎಸ್-ಎಂಎಸ್/ಬಿಎಸ್ ರಿಸರ್ಚ್, ಡಿಸೈನ್, ಆರ್ಕಿಟೆಕ್ಷನರ್‌ನಂತಹ ವಿನ್ಯಾಸ ಕೋರ್ಸ್‌ಗಳನ್ನು ಕಲಿಯಲು ಬಯಸುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
- ಕೋಟಕ್ ಮಹೀಂದ್ರ ಗ್ರೂಪ್, ಕೋಟಕ್ ಎಜುಕೇಷನ್ ಫೌಂಡೇಷನ್, ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಇದನ್ನೂ ಓದಿ: HDFC Scholarship: ಎಚ್‌ಡಿಎಫ್‌ಸಿ ಪರಿವರ್ತನ್ ವಿದ್ಯಾರ್ಥಿವೇತನ, 75 ಸಾವಿರ ರೂವರೆಗೆ ಸ್ಕಾಲರ್‌ಷಿಪ್ ಪಡೆಯಲು ಅವಕಾಶ
ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಹಿಂದಿನ ಅರ್ಹತಾ ಪರೀಕ್ಷೆಯ ಮಾರ್ಕ್‌ಶೀಟ್ (12 ನೇ ತರಗತಿ)
- ಪೋಷಕರು/ಪೋಷಕರ ಆದಾಯ ಪ್ರಮಾಣಪತ್ರ
- ಪೋಷಕರ ಐಟಿಆರ್ (ಲಭ್ಯವಿದ್ದರೆ)
- ಶುಲ್ಕ ಸ್ಟ್ರಕ್ಚರ್ (2024-25 ಶೈಕ್ಷಣಿಕ ವರ್ಷಕ್ಕೆ)
- ಕಾಲೇಜಿನಿಂದ ಉತ್ತಮ ವಿದ್ಯಾರ್ಥಿ ಪ್ರಮಾಣಪತ್ರ
- ಕಾಲೇಜು ಸೀಟು ಹಂಚಿಕೆ ದಾಖಲೆ
- ಕಾಲೇಜು ಪ್ರವೇಶ ಪರೀಕ್ಷೆಯ ಅಂಕಪಟ್ಟಿ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
- ಪೋಷಕರ ಮರಣ ಪ್ರಮಾಣಪತ್ರ (ಏಕ ಪೋಷಕ/ಅನಾಥ ಅಭ್ಯರ್ಥಿಗಳಿಗೆ)
- ಮನೆಯ ಫೋಟೋಗಳು
ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲ ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.
![Whats_app_banner Whats_app_banner](https://kannada.hindustantimes.com/static-content/1y/wBanner.png)