KSTDC Package: 8 ದಿನಗಳಲ್ಲಿ ದಕ್ಷಿಣ ಭಾರತ ಪ್ರವಾಸ; ಬೆಂಗಳೂರಿನಿಂದ ಕೇರಳ-ತಮಿಳುನಾಡಿನ ಪ್ರಸಿದ್ಧ ಸ್ಥಳಗಳ ಸುತ್ತಿ ಬನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  Kstdc Package: 8 ದಿನಗಳಲ್ಲಿ ದಕ್ಷಿಣ ಭಾರತ ಪ್ರವಾಸ; ಬೆಂಗಳೂರಿನಿಂದ ಕೇರಳ-ತಮಿಳುನಾಡಿನ ಪ್ರಸಿದ್ಧ ಸ್ಥಳಗಳ ಸುತ್ತಿ ಬನ್ನಿ

KSTDC Package: 8 ದಿನಗಳಲ್ಲಿ ದಕ್ಷಿಣ ಭಾರತ ಪ್ರವಾಸ; ಬೆಂಗಳೂರಿನಿಂದ ಕೇರಳ-ತಮಿಳುನಾಡಿನ ಪ್ರಸಿದ್ಧ ಸ್ಥಳಗಳ ಸುತ್ತಿ ಬನ್ನಿ

KSTDC Package: ಬೆಂಗಳೂರಿನಿಂದ ದಕ್ಷಿಣ ಭಾರತ ಪ್ರವಾಸಕ್ಕೆ ಕೆಎಸ್‌ಟಿಡಿಸಿಯಿಂದ ಒಂದೊಳ್ಳೆ ಪ್ರವಾಸ ಪ್ಯಾಕೇಜ್‌ ಇದೆ. ಎಂಟು ದಿನಗಳಲ್ಲಿ ತಮಿಳು ನಾಡು ಹಾಗೂ ಕೇರಳದ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಹೋಗಿ ಬರಬಹುದು. ಈ ಪ್ಯಾಕೇಜ್‌ ಕುರಿತ ವಿವರವಾದ ಮಾಹಿತಿ ಇಲ್ಲಿದೆ ನೋಡಿ.

ದಕ್ಷಿಣ ಭಾರತ ಪ್ರವಾಸ; ಬೆಂಗಳೂರಿನಿಂದ ಕೇರಳ-ತಮಿಳುನಾಡಿನ ಪ್ರಸಿದ್ಧ ಸ್ಥಳಗಳ ಸುತ್ತಿ ಬನ್ನಿ
ದಕ್ಷಿಣ ಭಾರತ ಪ್ರವಾಸ; ಬೆಂಗಳೂರಿನಿಂದ ಕೇರಳ-ತಮಿಳುನಾಡಿನ ಪ್ರಸಿದ್ಧ ಸ್ಥಳಗಳ ಸುತ್ತಿ ಬನ್ನಿ (pixabay)

ಭಾರತದಲ್ಲಿ ಉತ್ತರ ಭಾರತಕ್ಕೂ ದಕ್ಷಿಣ ಭಾರತಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ದಕ್ಷಿಣ ಭಾರತದಲ್ಲಿ ಹಲವು ಸುಂದರ ದೇವಾಲಯಗಳು, ಪಾರಂಪರಿಕ ಸ್ಮಾರಕಗಳು, ಪಶ್ಚಿಮ ಘಟ್ಟ, ಬಗೆಬಗೆಯ ಖಾದ್ಯ, ಸಮುದ್ರಾಹಾರ ಹೆಸರುವಾಸಿ. ಸುಂದರ ಕಡಲತೀರಗಳು, ಹಚ್ಚಹಸಿರಿನ ಗಿರಿಧಾಮಗಳು, ಅದ್ಭುತ ಜಲಪಾತಗಳು ಹೀಗೆ ದಕ್ಷಿಣ ಭಾರತವೆಂದರೆ ಪ್ರವಾಸಿಗರ ಸ್ವರ್ಗ. ಕೇರಳ, ತಮಿಳುನಾಡಿನಲ್ಲಿ ಹಲವು ಸುಂದರ ತಾಣಗಳಿವೆ. ಸಂಸ್ಕೃತಿ, ಸೌಂದರ್ಯದಲ್ಲಿ ಶ್ರೀಮಂತಿಕೆಗೆ ಹೆಸರುವಾಸಿಯಾಗಿದೆ. ಸಾಂಪ್ರದಾಯಿಕ ಮೌಲ್ಯಗಳನ್ನು ಹೆಚ್ಚು ಗೌರವಿಸುವ ದಕ್ಷಿಣ ಭಾರತೀಯ ಜನರು, ತಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡುವುದಿಲ್ಲ. ದಕ್ಷಿಣ ಭಾರತವನ್ನು ಸಂಪೂರ್ಣ ಸುತ್ತಲು ತಿಂಗಳೇ ಬೇಕು. ಆದರೆ, ಪ್ರಮುಖ ತಾಣಗಳಿಗೆ ಬೆಂಗಳೂರಿನಿಂದ ಹೋಗಿ ಬರಲು 8 ದಿನಗಳು ಸಾಕು.

ಬೆಂಗಳೂರಿನಿಂದ ದಕ್ಷಿಣ ಭಾರತ ಪ್ರವಾಸಕ್ಕೆ ಕೆಎಸ್‌ಟಿಡಿಸಿಯಿಂದ ಒಂದೊಳ್ಳೆ ಪ್ರವಾಸ ಪ್ಯಾಕೇಜ್‌ (KSTDC Package) ಇದೆ. ಎಂಟು ದಿನಗಳಲ್ಲಿ ಹೋಗಿ ಬರಬಹುದು.

  • ಪ್ರವಾಸ ಸ್ಥಳಗಳು: ಮಧುರೈ, ರಾಮೇಶ್ವರಂ, ಕನ್ಯಾಕುಮಾರಿ, ತಿರುವನಂತಪುರಂ, ಗುರುವಾಯೂರು, ಕೊಡೈಕೆನಲ್‌
  • ನಿರ್ಗಮನ ಸ್ಥಳ: ಬೆಂಗಳೂರು
  • ನಿರ್ಗಮನ ಸಮಯ: ಬೆಳಗ್ಗೆ 06.00 ಗಂಟೆ
  • ಸಾರಿಗೆ: ಎ/ಸಿ ಡಿಲಕ್ಸ್ ಕೋಚ್ ಮೂಲಕ
  • ಯಾವಾಗ: ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ

ಮೊದಲ ದಿನ

ಬೆಳಗ್ಗೆ 06 ಗಂಟೆಗೆ BMTC ಬಸ್ ನಿಲ್ದಾಣ, ಯಶವಂತಪುರದಿಂದ ನಿರ್ಗಮನ. ಬೆಳಗ್ಗೆ 11.00 ಗಂಟೆಗೆ ತಿರುವಣ್ಣಾಮಲೈಗೆ ಆಗಮನ. ಮಧ್ಯಾಹ್ನ 12.30ಕ್ಕೆ ಅರುಣಾಚಲೇಶ್ವರ ದೇವರ ದರ್ಶನ. ಮಧ್ಯಾಹ್ನ ತಿರುವಣ್ಣಾಮಲೈನಲ್ಲಿ ಊಟ ಮತ್ತು ಚಿದಂಬರಂಗೆ ನಿರ್ಗಮನ. ಸಂಜೆ 04.30ರಿಂದ 05.30ರವರೆಗೆ ನಟರಾಜನ ದರ್ಶನ. ಸಂಜೆ 05.30 - 07.30ಕ್ಕೆ ತಿರುನಲ್ಲಾರ್ ಶನೀಶ್ವರ ದೇವರ ದರ್ಶನ. ರಾತ್ರಿ ಹೋಟೆಲ್‌ನಲ್ಲಿ ನಿಲುಗಡೆ.

ಎರಡನೇ ದಿನ

ಬೆಳಿಗ್ಗೆ 05.30 ತಿರುನಲ್ಲಾರ್‌ನಿಂದ ನಿರ್ಗಮನ. ಬೆಳಿಗ್ಗೆ 07.30ರಿಂದ 08.45ಕ್ಕೆ ಕುಂಭಕೋಣಂನಲ್ಲಿ ಕುಂಭೇಶ್ವರ ದರ್ಶನ ಮತ್ತು ಉಪಾಹಾರ. 08.45ಕ್ಕೆ ತಂಜಾವೂರಿಗೆ ನಿರ್ಗಮನ. ಅಲ್ಲಿ ಬೃಹದೀಶ್ವರ ದರ್ಶನ. ಬೆಳಿಗ್ಗೆ 11 ಗಂಟೆಗೆ ಶ್ರೀರಂಗಂಗೆ ತೆರಳಿ ಮಧ್ಯಾಹ್ನ ರಂಗನಾಥಸ್ವಾಮಿ ದರ್ಶನ ಮತ್ತು ಊಟ. ಮಧ್ಯಾಹ್ನ 02.30 ಮಧುರೈಗೆ ಪ್ರಯಾಣ. ಸಂಜೆ 05.30ಕ್ಕೆ ಮಧುರೈ ಮೀನಾಕ್ಷಿ ಸುಂದರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಮತ್ತು ರಾತ್ರಿ ಹೋಟೆಲ್‌ನಲ್ಲಿ ರಾತ್ರಿ ವಾಸ್ತವ್ಯ.

ಮೂರನೇ ದಿನ

ಬೆಳಿಗ್ಗೆ 08.30ಕ್ಕೆ ಮಧುರೈನಿಂದ ನಿರ್ಗಮಿಸಿ ಮಧ್ಯಾಹ್ನ ರಾಮೇಶ್ವರಂಗೆ ಆಗಮಿಸಿ ಹೋಟೆಲ್‌ನಲ್ಲಿ ಚೆಕ್ ಇನ್. ಮಧ್ಯಾಹ್ನ ಸಮುದ್ರ ಸ್ನಾನ ಮತ್ತು 21 ಪವಿತ್ರ ಬಾವಿ ಸ್ನಾನ ಮುಗಿಸಿ ರಾಮನಾಥ ದೇವರ ದರ್ಶನ. ರಾತ್ರಿ ಇಲ್ಲೇ ವಾಸ್ತವ್ಯ.

ನಾಲ್ಕನೇ ದಿನ

ಬೆಳಿಗ್ಗೆ 5ರಿಂದ 06 ಗಂಟೆಗೆ ಸ್ಪಟಿಕಲಿಂಗ ದರ್ಶನ ಮಾಡಿ ತಿರುಚಂದೂರಿಗೆ ನಿರ್ಗಮನ. ಬೆಳಿಗ್ಗೆ 11ರಿಂದ 12.30ರವರೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಮತ್ತು ಊಟ. ಅಲ್ಲಿಂದ ಮಧ್ಯಾಹ್ನ 01 ಗಂಟೆಗೆ ಕನ್ಯಾಕುಮಾರಿಗೆ ನಿರ್ಗಮನ. ಸಂಜೆ 04.15ರಿಂದ 06.00 ಗಂಟೆಯವರೆಗೆ ಸೂರ್ಯಾಸ್ತ ಸವಿದು ಕನ್ಯಕಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ. ರಾತ್ರಿ ಹೋಟೆಲ್‌ನಲ್ಲಿ ವಾಸ್ತವ್ಯ.

ಐದನೇ ದಿನ

ಬೆಳಿಗ್ಗೆ 06 ರಿಂದ 07 ರವರೆಗೆ ಸೂರ್ಯೋದಯ ವೀಕ್ಷಣೆ ಮತ್ತು ಉಪಾಹಾರ ಮುಗಿಸಿ, 07.45 ರಿಂದ 09.45 ರವರೆಗೆ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಭೇಟಿ. ಆ ಬಳಿಕ ಸುಚೀಂದ್ರಕ್ಕೆ ನಿರ್ಗಮನ. 10.15ರಿಂದ 11.30 ರವರೆಗೆ ಸಾತು ಮಾಲಯ ದೇವರ ದರ್ಶನ. 12.30ರವರೆಗೆ ಊಟದ ವಿರಾಮ. ಆ ಬಳಿಕ ಕೋವಲಂ ಬೀಚ್‌ಗೆ ನಿರ್ಗಮನ. ಮಧ್ಯಾಹ್ನ 03.30ರಿಂದ 04.30 ರವರೆಗೆ ಕೋವಲಂ ಬೀಚ್‌ಗೆ ಭೇಟಿ. ಅಲ್ಲಿಂದ ಕೇರಳದ ರಾಜಧಾನಿ ತಿರುವನಂತಪುರಕ್ಕೆ ನಿರ್ಗಮನ. ಸಂಜೆ 05.30 ರಿಂದ 06.30ರವರೆಗೆ ಅನಂತ ಪದ್ಮನಾಭ ದೇವಸ್ಥಾನದ ದರ್ಶನ ಮುಗಿಸಿ ರಾತ್ರಿ ಹೋಟೆಲ್‌ನಲ್ಲಿ ವಾಸ್ತವ್ಯ.

ಆರನೇ ದಿನ

ಬೆಳಿಗ್ಗೆ 05.30ಕ್ಕೆ ಕಾಲಡಿ ಪ್ರಯಾಣ. ದಾರಿಯಲ್ಲಿ ಉಪಾಹಾರ ಮುಗಿಸಿ ಮಧ್ಯಾಹ್ನ 12.30ಕ್ಕೆ ಕಾಲಡಿಗೆ ಆಗಮನ. ಮಧ್ಯಾಹ್ನ 12.30 – 01.00ಕ್ಕೆ ಆದಿ ಶಂಕರಾಚಾರ್ಯ ಆಶ್ರಮ (ಜನ್ಮಸ್ಥಳ) ಭೇಟಿ. ಆ ಬಳಿಕ ಊಟದ ವಿರಾಮ. ಸಂಜೆ 05.30ಕ್ಕೆ ಗುರುವಾಯೂರಿಗೆ ಆಗಮಿಸಿ ಗುರುವಾಯೂರಪ್ಪನ ದರ್ಶನ ಮತ್ತು ರಾತ್ರಿ ಇಲ್ಲಿ ವಾಸ್ತವ್ಯ.

ಏಳನೇ ದಿನ

ಬೆಳಿಗ್ಗೆ 06.30ಕ್ಕೆ ಪಳನಿಗೆ ನಿರ್ಗಮನ ಮತ್ತು ದಾರಿಯಲ್ಲಿ ಉಪಾಹಾರ ಮುಗಿಸಿ ಮಧ್ಯಾಹ್ನ 12.30ರಿಂದ 02.30ಕ್ಕೆ ಪಳನಿಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ ದರ್ಶನ. ಬಳಿಕ ಊಟದ ವಿರಾಮ. ಸಂಜೆ 05.30ಕ್ಕೆ ಕೊಡೈಕೆನಾಲ್ ತಲುಪಿ ರಾತ್ರಿ ವಾಸ್ತವ್ಯ.

ಎಂಟನೇ ದಿನ

ಬೆಳಿಗ್ಗೆ 09ರಿಂದ ಸಂಜೆ 05.30 ರವರೆಗೆ ಪಿಲ್ಲರ್ ರಾಕ್, ಗ್ರೀನ್ ವ್ಯಾಲಿ ವ್ಯೂ, ಕೋಕರ್ಸ್ ವಾಕ್, ಬ್ರ್ಯಾಂಟ್ಸ್ ಪಾರ್ಕ್ (ಲಂಚ್), ಕುದುರೆ ಸವಾರಿ, ಸೈಕ್ಲಿಂಗ್, ಕೊಡೈ ಸರೋವರದಲ್ಲಿ ದೋಣಿ ವಿಹಾರ ಮುಗಿಸಿ ಸಂಜೆ 06 ಗಂಟೆಗೆ ಬೆಂಗಳೂರಿಗೆ ನಿರ್ಗಮನ. ಒಂಬತ್ತನೇ ದಿನ ಬೆಳಗ್ಗೆ 6 ಗಂಟೆಗೆ ಪ್ರಯಾಣ ಮುಕ್ತಾಯ.

ವೆಚ್ಚ ಎಷ್ಟು?

8 ದಿನಗಳ ಪ್ರವಾಸಕ್ಕೆ ಒಬ್ಬರಿಗಾದರೆ 25770 ರೂ ವೆಚ್ಚವಾಗುತ್ತದೆ. ಇಲ್ಲಿ ನಿಮಗೆ ಸಿಂಗಲ್‌ ರೂಮ್‌ ಕೊಡಲಾಗುತ್ತದೆ. ಡಬಲ್‌ ಆದರೆ 19140 ರೂ ವೆಚ್ಚವಾಗುತ್ತದೆ. ಮೂವರಿಗಾದರೆ 17960 ರೂ ಮಾತ್ರ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.