KSTDC Package: ಬೆಂಗಳೂರಿನಿಂದ ಶಿರಡಿಗೆ 3 ದಿನದ ಪ್ರವಾಸ; ಜೊತೆಗೊಂದಿಷ್ಟು ಸ್ಥಳ, ಈ ಪ್ಯಾಕೇಜ್‌ನತ್ತ ಕಣ್ಣಾಡಿಸಿ
KSTDC Package: ಕೆಎಸ್‌ಟಿಡಿಸಿಯು 3 ದಿನಗಳ ಶಿರಡಿ ಪ್ಯಾಕೇಜ್ ಟೂರ್ ಪ್ಯಾಕೇಜ್ ನಡೆಸುತ್ತಿದ್ದು, ಬೆಂಗಳೂರಿನಿಂದ ಹೊರಟು ಮತ್ತೆ ಬೆಂಗಳೂರಿಗೆ ಬರಬಹುದು. ಮಹಾರಾಷ್ಟ್ರದ ಶಿರಡಿ ಜೊತೆಗೆ ಹಲವು ಸ್ಥಳಗಳಿಗೆ ಹೋಗಿ ಬರಬಹುದು.

ಶಿರಡಿ ಸಾಯಿಬಾಬಾ ದೇವಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ. ಮಹಾರಾಷ್ಟ್ರ ಪ್ರಸಿದ್ಧ ದೇವಾಲಯ ಇದಾಗಿದ್ದು, ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯ ಜನರು ಶಿರಡಿ ಯಾತ್ರೆ ಮಾಡುತ್ತಾರೆ. ಶಿರಡಿಯಲ್ಲಿ ಸಾಯಿಬಾಬಾ ಮಂದಿರ ಮಾತ್ರವಲ್ಲದೆ ದ್ವಾರಕಾಮಾಯಿ, ಚಾವಡಿ, ಖಂಡೋಬಾ ದೇವಾಲಯ, ನಂದೀಪ್, ಸಾಯಿ ವಸ್ತು ಸಂಗ್ರಹಾಲಯದಂತಹ ಸೇರಿದಂತೆ ಇತರ ಪ್ರಮುಖ ಸ್ಥಳಗಳಿವೆ. ಇಲ್ಲಿನ ಶನಿ ಶಿಂಗಣಾಪುರವು ಭಾರತದ ವಿಶಿಷ್ಟ ಗ್ರಾಮವಾಗಿದ್ದು, ಇಲ್ಲಿ ಬಾಗಿಲುಗಳು ಇರಲ್ಲ, ಬೀಗ ಹಾಕಿರುವುದಿಲ್ಲ. ಇಲ್ಲಿ ಶನಿ ದೇವರನ್ನು ನಂಬಲಾಗುತ್ತಿದ್ದು, ಏನಾದರೂ ಕದ್ದರೆ ಗ್ರಾಮದಿಂದ ಹೊರಹೋಗಲು ಸಾಧ್ಯವೇ ಇಲ್ಲ ಎಂದು ನಂಬಲಾಗುತ್ತದೆ. ಇಂಥಾ ಭಿನ್ನತೆಗೆ ಸಾಕ್ಷಿ ಆದ ಶಿರಡಿ ಹಾಗೂ ಅಕ್ಕಪಕ್ಕದ ಸ್ಥಳಗಳಿಗೆ ಪ್ರವಾಸ ಮಾಡಿ ಬರಬಹುದು.
ಕೆಎಸ್‌ಟಿಡಿಸಿಯು (KSTDC Package) 3 ದಿನಗಳ ಶಿರಡಿ ಪ್ಯಾಕೇಜ್ ಟೂರ್ ಪ್ಯಾಕೇಜ್ ನಡೆಸುತ್ತಿದ್ದು, ಬೆಂಗಳೂರಿನಿಂದ ಹೊರಟು ಮತ್ತೆ ಬೆಂಗಳೂರಿಗೆ ಬರಬಹುದು. ಎಲ್ಲೆಲ್ಲಾ ಹೋಗಬಹುದು ಹಾಗೂ ಎಷ್ಟು ಖರ್ಚಾಗುತ್ತೆ ಎಂಬ ವಿವರ ಇಲ್ಲಿದೆ.
- ಸಾರಿಗೆ ವಿಧ: ಎಸಿ ವೋಲ್ವೋ ಬಸ್ ಮೂಲಕ
- ಪ್ರವಾಸ ಸ್ಥಳಗಳು: ಶಿರಡಿ, ಶನಿ ಶಿಂಗಣಾಪುರ ಮತ್ತು ಕೊಲ್ಲಾಪುರ
- ಅವಧಿ: 3 ರಾತ್ರಿ
- ನಿರ್ಗಮನ ಸ್ಥಳ: ಬೆಂಗಳೂರು
- ನಿರ್ಗಮನ ಸಮಯ: ಬೆಳಗ್ಗೆ 10 ಗಂಟೆ
- ದಿನ: ಪ್ರತಿ ತಿಂಗಳ ಎರಡನೇ ಬುಧವಾರ ಮತ್ತು ನಾಲ್ಕನೇ ಬುಧವಾರ
ಪ್ರವಾಸ ಹೇಗಿರುತ್ತದೆ?
ಮೊದಲ ದಿನ ಬೆಳಗ್ಗೆ 10 ಗಂಟೆಗೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ನಿರ್ಗಮನ. ಎರಡನೇ ದಿನ ಬೆಳಗ್ಗೆ 07.30ಕ್ಕೆ ಶಿರಡಿಗೆ ಆಗಮನ. ಇಲ್ಲಿ ಹೋಟೆಲ್‌ನಲ್ಲಿ ಚೆಕ್-ಇನ್) ಶಿರಡಿ ದರ್ಶನ ಪಡೆದು ಇಲ್ಲೇ ವಾಸ್ತವ್ಯ.
ಮೂರನೇ ದಿನ
ಬೆಳಿಗ್ಗೆ 05.30ಕ್ಕೆ ಶಿರಡಿಯಿಂದ ನಿರ್ಗಮನ. ಬೆಳಿಗ್ಗೆ 07.30ಕ್ಕೆ ಶನಿಶಿಂಗಣಾಪುರ ದೇವಸ್ಥಾನಕ್ಕೆ ಆಗಮನ. 08.15 ಗಂಟೆಗೆ ಶನಿಶಿಂಗಣಾಪುರಕ್ಕೆ ಹೋಗುವಾಗ ದಾರಿಯಲ್ಲಿ ಉಪಾಹಾರ ಮತ್ತು ಮಧ್ಯಾಹ್ನದ ಊಟ. ಮಧ್ಯಾಹ್ನ 12.30 ಗಂಟೆಗೆ ನಾರಾಯಣಪುರ ಬಾಲಾಜಿ ದೇವಸ್ಥಾನಕ್ಕೆ ಭೇಟಿ. ರಾತ್ರಿ 08 ಗಂಟೆಗೆ ಕೊಲ್ಹಾಪುರಕ್ಕೆ ಆಗಮನ. ರಾತ್ರಿ 08ರಿಂದ 09 ಗಂಟೆಗೆ ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ. ರಾತ್ರಿ 09 ಗಂಟೆಗೆ ಭೋಜನದ ನಂತರ ಕೊಲ್ಹಾಪುರದಿಂದ ನಿರ್ಗಮನ. ಮರುದಿನ ಬೆಳಿಗ್ಗೆ 08.30 ಗಂಟೆಗೆ ಬೆಂಗಳೂರಿಗೆ ಆಗಮಿಸುವ ಮೂಲಕ ಪ್ರವಾಸ ಅಂತ್ಯ.
ಪ್ಯಾಕೇಜ್ ವೆಚ್ಚ ಎಷ್ಟು?
ಒಬ್ಬರಿಗಾದರೆ 10490 ರೂ ವೆಚ್ಚವಾಗಲಿದೆ. ಇಬ್ಬರು ಶೇರಿಂಗ್ ಆದರೆ ವೆಚ್ಚ ಕಡಿಮೆಯಾಗಲಿದ್ದು 9390 ರೂ ಒಬ್ಬರಿಗೆ ಬೀಳಲಿದೆ.
