KSTDC Package: ವಿಶ್ವ ಪಾರಂಪರಿಕ ಸ್ಮಾರಕಗಳ ನೋಡೋಣ ಬಾರಾ; ಬೇಲೂರು ಹಳೇಬೀಡು ಶ್ರವಣಬೆಳಗೊಳ ಒಂದು ದಿನದ ಪ್ರವಾಸ
KSTDC Package: ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಹೊಯ್ಸಳ ರಾಜವಂಶದ ಅತ್ಯಂತ ಪ್ರಸಿದ್ಧ ದೇವಾಲಯಗಳು. ಕಲ್ಲಿನ ಕೆತ್ತನೆಗಳು ಕರ್ನಾಟಕದ ಶ್ರೀಮಂತ ವಾಸ್ತುಶಿಲ್ಪಕ್ಕೆ ಸಾಕ್ಷಿ. ಅತ್ತ ಶ್ರವಣಬೆಳಗೊಳವು ಜೈನರ ಪ್ರಮುಖ ಯಾತ್ರಾ ಸ್ಥಳ. ಈ ಎಲ್ಲಾ ಸ್ಥಳಗಳಿಗೂ ಒಂದೇ ದಿನದಲ್ಲಿ ಬೆಂಗಳೂರಿನಿಂದ ಹೋಗಿ ಬರಬಹುದು.

ಕರ್ನಾಟಕವು ಶ್ರೀಮಂತ ವಾಸ್ತುಶಿಲ್ಪಕ್ಕೆ ಸಾಕ್ಷಿ. 'ಶಿಲೆಗಳು ಸಂಗೀತವಾ ಹಾಡಿವೆ, ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ ಶಿಲೆಗಳು ಸಂಗೀತವಾ ಹಾಡಿವೆ' ಎಂಬ ಚಿ ಉದಯಶಂಕರ್ ಸಾಹಿತ್ಯದಂತೆ ಕಲ್ಲಿನ ಒಂದೊಂದು ಕೆತ್ತನೆಗಳು ಸಾವಿರ ಪದಗಳನ್ನು ಮಾತನಾಡುತ್ತವೆ. ಹಾಸನ ಜಿಲ್ಲೆಯ ಬೇಲೂರು ಮಾತ್ರವಲ್ಲದೆ ಹಳೇಬೀಡು ಹೊಯ್ಸಳೇಶ್ವರ ದೇಗುಲ ಹಾಗೂ ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಬೆಟ್ಟ ಇಲ್ಲಿನ ಶ್ರೀಮಂತ ಇತಿಹಾಸವನ್ನು ಬಿಂಬಿಸುತ್ತದೆ. ವಿಶ್ವ ಪಾರಂಪರಿಕ ತಾಣಗಳಾಗಿರುವ ಹಾಸನದ ಮೂರು ತಾಣಗಳಿಗೆ ಒಮ್ಮೆ ಹೋಗಿಬರೋಣ ಅತಾ ನಿಮಗೆ ಅನಿಸಬಹುದು. ಚಿಂತೆ ಬೇಡ. ಕೆಎಸ್‌ಟಿಡಿಸಿಯಿಂದ (KSTDC Package) ಒಂದೊಳ್ಳೆ ಪ್ರವಾಸ ಪ್ಯಾಕೇಜ್ ಇದೆ. ಇದರ ವಿವರ ಮುಂದಿದೆ ನೋಡಿ.
ಬೇಲೂರು ಮತ್ತು ಹಳೇಬೀಡು ಹೊಯ್ಸಳ ರಾಜವಂಶದ ಅತ್ಯಂತ ಪ್ರಸಿದ್ಧ ದೇವಾಲಯಗಳು. ಕಲ್ಲಿನ ಸುಂದರ ಕೆತ್ತನೆಗಳು ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿ. ಇದೇ ವೇಳೆ ಶ್ರವಣಬೆಳಗೊಳವು ಜೈನ ದೇವಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಇಲ್ಲಿನ ಗೊಮ್ಮಟೇಶ್ವರ ಬಾಹುಬಲಿ ಪ್ರತಿಮೆ ಜೈನರಿಗೆ ಮಹತ್ವದ ಯಾತ್ರಾ ಸ್ಥಳವಾಗಿದೆ.
- ಪ್ಯಾಕೇಜ್ ಹೆಸರು: ವಿಶ್ವ ಪಾರಂಪರಿಕ ಸ್ಮಾರಕಗಳ ಪ್ರವಾಸ (World Heritage Monuments Tour)
- ಸಾರಿಗೆ ವಿಧ: ಎ/ಸಿ ಡಿಲಕ್ಸ್ ಕೋಚ್ ಬಸ್
- ಪ್ರವಾಸ ಸ್ಥಳಗಳು: ಬೇಲೂರು, ಹಳೇಬೀಡು, ಶ್ರವಣಬೆಳಗೊಳ.
- ಅವಧಿ: 1 ದಿನ
- ಎಲ್ಲಿಂದ: ಬೆಂಗಳೂರು
- ಹೊರಡುವ ಸಮಯ: ಬೆಳಗ್ಗೆ 6:30
- ಯಾವಾಗ: ಪ್ರತಿದಿನ
- ಪ್ಯಾಕೇಜ್ ವೆಚ್ಚ: ಒಬ್ಬರಿಗೆ 950 ರೂ.
ಪ್ರವಾಸ ಹೇಗಿರಲಿದೆ?
- ಪ್ರವಾಸ ಬೆಂಗಳೂರಿನಿಂದ ಆರಂಭವಾಗುತ್ತದೆ. ಬೆಳಿಗ್ಗೆ 06:30ಕ್ಕೆ ಕೆಎಸ್‌ಟಿಡಿಸಿ ಪ್ರಧಾನ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಬಸ್ ನಿರ್ಗಮನ
- ಬೆಳಿಗ್ಗೆ 08:30ಕ್ಕೆ ಹೋಗುತ್ತಾ ದಾರಿಯಲ್ಲಿ ಉಪಾಹಾರ
- ಬೆಳಿಗ್ಗೆ 09:00 ಯಡಿಯೂರಿನಿಂದ ನಿರ್ಗಮನ
- ಬೆಳಿಗ್ಗೆ 10:30 ಶ್ರವಣಬೆಳಗೊಳಕ್ಕೆ ಆಗಮಿಸಿ ಭಗವಾನ್ ಬಾಹುಬಲಿ (ಗೋಮಟೇಶ್ವರ) ದರ್ಶನ
- ಬೆಳಿಗ್ಗೆ 11:30 ಶ್ರವಣಬೆಳಗೊಳದಿಂದ ನಿರ್ಗಮನ.
- ಮಧ್ಯಾಹ್ನ 01:30 ಬೇಲೂರಿಗೆ ಆಗಮನ. ಇಲ್ಲಿ ಹೋಟೆಲ್ ಮಯೂರ ವೇಲಾಪುರಿಯಲ್ಲಿ ಊಟ ಮತ್ತು ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ
ಇದನ್ನೂ ಓದಿ | IRCTC Package: ಗುರು ಭಕ್ತಿಯೇ ನಿಮ್ಮ ಸ್ವಭಾವವೇ? ಹಾಗಿದ್ರೆ ಶಿರಡಿ ಟೂರ್ ಪ್ಯಾಕೇಜ್ ನೀವು ಗಮನಿಸಲೇಬೇಕು
- ಮಧ್ಯಾಹ್ನ 03:00 ಬೇಲೂರಿನಿಂದ ನಿರ್ಗಮನ
- ಮಧ್ಯಾಹ್ನ 03:45 ಹಳೇಬೀಡುಗೆ ಆಗಮನ. ಇಲ್ಲಿ ಹೊಯ್ಸಳೇಶ್ವರ ದೇವಸ್ಥಾನಕ್ಕೆ ಭೇಟಿ
- ಮಧ್ಯಾಹ್ನ 04:45 ಹಳೇಬೀಡುವಿನಿಂದ ಬೆಂಗಳೂರಿಗೆ ನಿರ್ಗಮನ
- ರಾತ್ರಿ 10:00 ಗಂಟೆಗೆ ಪ್ರವಾಸವು ಬೆಂಗಳೂರಿನಲ್ಲಿ ಕೊನೆಗೊಳ್ಳುತ್ತದೆ.
ಹಾಸನ ಜಿಲ್ಲೆಗೆ ಪ್ರವಾಸ ಮಾಡಲು ಇಚ್ಛಿಸುವವರು ಒಂದು ವಾರ ಮುಂಚಿತವಾಗಿ ಬುಕಿಂಗ್ ಮಾಡಿಕೊಳ್ಳುವುದು ಉತ್ತಮ. ಕೆಎಸ್‌ಟಿಡಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಬುಕಿಂಗ್ ಮಾಡಬಹುದು. ಗೊಂದಲಗಳಿದ್ದರೆ 080- 4334 4334 ಸಂಖ್ಯೆಗೆ ಕರೆ ಮಾಡಿ ಕೇಳಬಹುದು. ಹೆಚ್ಚಿನ ವಿವರಗಳಿಗೆ ಕೆಎಸ್‌ಟಿಡಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
