Period Tracking Apps: ಪಿರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳಲ್ಲಿ ಗೌಪ್ಯತೆಯ ಕೊರತೆ; ಅಪಾಯಕಾರಿ ಮಾಹಿತಿ ಬಿಚ್ಚಿಟ್ಟ ಅಧ್ಯಯನ-lack of privacy in period tracking apps a study that exposed dangerous information women safety smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Period Tracking Apps: ಪಿರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳಲ್ಲಿ ಗೌಪ್ಯತೆಯ ಕೊರತೆ; ಅಪಾಯಕಾರಿ ಮಾಹಿತಿ ಬಿಚ್ಚಿಟ್ಟ ಅಧ್ಯಯನ

Period Tracking Apps: ಪಿರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳಲ್ಲಿ ಗೌಪ್ಯತೆಯ ಕೊರತೆ; ಅಪಾಯಕಾರಿ ಮಾಹಿತಿ ಬಿಚ್ಚಿಟ್ಟ ಅಧ್ಯಯನ

Period Tracking Apps: ಮಹಿಳೆಯರಿಗೆ ಎಂದೇ ಕೆಲವು ಪಿರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳು ಲಭ್ಯವಿದೆ. ಆದರೆ ಇವುಗಳು ಎಷ್ಟು ಮಟ್ಟಿಗೆ ಸೇಪ್ ಎಂಬುದನ್ನು ಈಗ ನಾವು ಅರಿಯುವ ಸಂದರ್ಭ ಬಂದಿದೆ. ಅಧ್ಯಯನ ಒಂದರ ಪ್ರಕಾರ ಹಲವಾರು ಗೌಪ್ಯ ಮಾಹಿತಿಗಳು ಲೀಕ್ ಆಗುತ್ತಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಪಿರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌
ಪಿರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌

ಮಹಿಳೆಯರು ತಮ್ಮ ಮುಟ್ಟಿನ ದಿನಾಂಕವನ್ನು ಹಾಗೇ ತಾವು ಗರ್ಭದರಿಸುವುದನ್ನು ಟ್ರ್ಯಾಕ್ ಮಾಡುವ ಸಲುವಾಗಿ ಕೆಲವು ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಆದರೆ ಇವು ಎಷ್ಟು ಸರಿಯಾದ ಮಾಹಿತಿಯನ್ನು ನೀಡುತ್ತವೆ? ಮತ್ತು ನೀವು ನೀಡಿದ ಮಾಹಿತಿಯನ್ನು ಎಷ್ಟು ಗೌಪ್ಯವಾಗಿಡುತ್ತದೆ ಎನ್ನುವುದು ಕೂಡ ತುಂಬಾ ಮುಖ್ಯವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನವಿಟ್ಟು ಓದಿ. ನೀವು ಬಳಕೆ ಮಾಡುವ ಮುನ್ನ ಜಾಗ್ರತರಾಗಿ.

ಅಧ್ಯಯನ ಏನು ಹೇಳುತ್ತದೆ?

ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ ನಡೆಸಿದ ಅಧ್ಯಯನ ಒಂದರಲ್ಲಿ ಈ ಕುರಿತು ತುಂಬಾ ನೆಗಟಿವ್ ರಿಸಲ್ಟ್ ಬಂದಿದೆ. ಇದು ಸೇಫ್ ಅಲ್ಲ. US ಮತ್ತು UK ನಲ್ಲಿ Google Play ಸ್ಟೋರ್‌ಗಳಲ್ಲಿ ಲಭ್ಯವಿರುವ 20 ಜನಪ್ರಿಯ ಅಪ್ಲಿಕೇಶನ್‌ಗಳು ಅಪಾಯಕಾರಿಯಾಗಿದೆ ಇದರಲ್ಲಿ ಸರಿಯಾದ ರೀತಿಯಲ್ಲಿ ಡೇಟಾ ನಿರ್ವಹಣೆ ಆಗುತ್ತಿಲ್ಲ ಎಂದು ಹೇಳಲಾಗಿದೆ. ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯ ಕಾಳಜಿಯನ್ನು ಈ ಅಪ್ಲಿಕೇಶನ್‌ಗಳು ಹೊಂದಿಲ್ಲ ಎಂದು ಹೇಳಲಾಗಿದೆ.

ಮಿಲಿಯನ್ ಬಳಕೆದಾರರು

ನೂರಾರು ಮಿಲಿಯನ್ ಬಳಕೆದಾರರು ಈ ಅಪ್ಲಿಕೇಶನ್‌ಗಳ ಮೇಲೆ ಅವಲಂಬಿತರಾಗಿರುವುದರಿಂದ ಇದರಲ್ಲಿ ಗೌಪ್ಯತೆ ತುಂಬಾ ಮುಖ್ಯ. ಡಾ ರುಬಾ ಅಬು-ಸಲ್ಮಾ, ಈ ಅಧ್ಯಯನದಲ್ಲಿ ಪ್ರಮುಖ ಲೇಖಕಿ, ಇವರು ಜಾಗತಿಕವಾಗಿ ಮಹಿಳೆಯರ ಆರೋಗ್ಯವನ್ನು ನಿರ್ವಹಿಸುವಲ್ಲಿ ಸ್ತ್ರೀ ಆರೋಗ್ಯ ಅಪ್ಲಿಕೇಶನ್‌ಗಳ ಪ್ರಮುಖ ಪಾತ್ರ ಎಷ್ಟಿದೆ ಎಂಬುದನ್ನು ವಿವರಿಸಿದ್ದಾರೆ. ಅವರು ಈ ಬಗ್ಗೆ shethepeople ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ತೀರಾ ವೈಯಕ್ತಿಕ ಮಾಹಿತಿ ಸೋರಿಕೆ

ಗೌಪ್ಯತೆ ಮತ್ತು ಸುರಕ್ಷತೆ ಇಲ್ಲ ಈ ಕಾರಣದಿಂದ ಹಲವು ಸಮಸ್ಯೆಗಳಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೂ ಮಹಿಳೆಯರು ಇದಕ್ಕೆ ರಾಜಿಯಾಗುತ್ತಿದ್ದಾರೆ. ಇದೇ ಅಪ್ಲಿಕೇಶನಲ್ಲಿ ಲೈಂಗಿಕ ಚುಟವಟಿ, ಗರ್ಭದಾರಣೆ ಮತ್ತು ಮಿಸ್‌ಕ್ಯಾರೇಜ್‌ ಇದೆಲ್ಲದರ ಮಾಹಿತಿಯೂ ಲಭ್ಯವಾಗುತ್ತದೆ. ಇದನ್ನು ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್ ಮೇಲ್ ಮಾಡುವ ಸಾಧ್ಯತೆ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.

ಗರ್ಭಪಾತ

ಕೆಲವು ಅಪ್ಲಿಕೇಶನ್‌ಗಳು ಗರ್ಭಪಾತದ ಮಾಹಿತಿಯನ್ನೂ ಸಹ ಹೊಂದಿರುತ್ತದೆ. ಗರ್ಭಪಾತದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತವೆ. ಇದನ್ನು ಇಟ್ಟುಕೊಂಡು ಕೆಲ ವ್ಯಕ್ತಿಗಳು ಕಾನೂನು ಕ್ರಮ ಜರುಗಿಸಲು ಮುಂದಾಗುತ್ತಾರೆ. ಈ ರೀತಿ ಹೆಣ್ಣು ಮಕ್ಕಳು ಎಷ್ಟೋ ಕಷ್ಟ ಅನುಭವಿಸಲು ಇದೇ ಅಪ್ಲಿಕೇಶನ್ ಕಾರಣ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಸಮಸ್ಯಾತ್ಮಕ ನಿರ್ವಹಣೆಯಿಂದ ಹಲವರಿಗೆ ತೊಂದರೆ ಆಗುತ್ತದೆ. ಅದನ್ನು ತಪ್ಪಿಸಲು ಉತ್ತಮ ಗೌಪ್ಯತೆ ಬೇಕು.

ಯಾವುದು ಸೇಫ್?

35% ರಷ್ಟು ಅಪ್ಲಿಕೇಶನ್‌ಗಳು ಮಾತ್ರ ವೈಯಕ್ತಿಕ ಡೇಟಾವನ್ನು ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿವೆ ಆದರೆ ಅದನ್ನು ಅನುಸರಿಸುತ್ತಿಲ್ಲ.
50% ರಷ್ಟು ಬಳಕೆದಾರರು ಆರೋಗ್ಯದ ಡೇಟಾವನ್ನು ಜಾಹೀರಾತುದಾರರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಭರವಸೆ ಹೊಂದಿದ್ದರು ಆದರೆ ಅದರ ಬಗ್ಗೆ ನಂತರ ಅವರಿಗೆ ಅರಿವಿರುವುದಿಲ್ಲ.

ಇದನ್ನೂ ಓದಿ: ಎಷ್ಟು ಒದ್ದಾಡಿದ್ರೂ ಸರಿಯಾಗಿ ನಿದ್ದೆ ಬರುತ್ತಿಲ್ವಾ: ಇದಕ್ಕೇನು ಕಾರಣ? ನಿದ್ರೆ ಸರಿಪಡಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ

ತಂತ್ರಜ್ಞಾನ ಮಾರುಕಟ್ಟೆಯು ಕ್ಷಿಪ್ರ ಬೆಳವಣಿಗೆಯನ್ನು ಕಂಡಿದೆ, ಇದು 2025 ರ ವೇಳೆಗೆ ಇನ್ನೂ ಹೆಚ್ಚಾಗಲಿದೆ. ಡೆವಲಪರ್‌ಗಳು ಇದನ್ನು ಇನ್ನಷ್ಟು ಅಭಿವೃದ್ದಿ ಪಡಿಸಬೇಕಿದೆ. ಡೇಟಾಗೆ ಸಂಬಂಧಿಸಿದ ನಿರ್ದಿಷ್ಟ ಗೌಪ್ಯತೆ ಮತ್ತು ಸುರಕ್ಷತೆಯ ಅಪಾಯಗಳನ್ನು ಗುರುತಿಸುವ ಅಗತ್ಯ ಇದೆ. ಆರೋಗ್ಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಮಾನವೀಯ ಮತ್ತು ಸುರಕ್ಷತೆ-ಪ್ರಜ್ಞೆ ಇರಬೇಕು ಎಂದಿದ್ದಾರೆ.