ಕನ್ನಡ ಸುದ್ದಿ  /  Lifestyle  /  Leap Year 2024 Know The Important Facts About February 29th Extra Day Which Comes Every 4 Years Julian Calendar Rsm

Leap Year 2024: ಫೆ 29 ಅಧಿಕ ವರ್ಷ ಅಂತ ಗೊತ್ತು; 4 ವರ್ಷಗಳಿಗೊಮ್ಮೆ ಬರುವ ಈ ಹೆಚ್ಚುವರಿ ದಿನದ ಬಗ್ಗೆ ಇನ್ನಷ್ಟು ಆಸಕ್ತಿಕರ ವಿಚಾರಗಳು

Leap Year 2024: ಪ್ರತಿ 4 ವರ್ಷಗಳಿಗೊಮ್ಮೆ ಬರುವ ಅಧಿಕ ದಿನದ ಪರಿಕಲ್ಪನೆಯನ್ನು ರೋಮನ್ ಸರ್ವಾಧಿಕಾರಿ ಜೂಲಿಯಸ್ ಸೀಸರ್ ಕ್ರಿಪೂ 45 ರಲ್ಲಿ ಜೂಲಿಯನ್ ಕ್ಯಾಲೆಂಡರ್‌ಗಾಗಿ ಪರಿಚಯಿಸಿದನು. ಈ ಹೆಚ್ಚುವರಿ ದಿನದ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿಕರ ವಿಚಾರಗಳು ಇಲ್ಲಿವೆ.

4 ವರ್ಷಗಳಿಗೊಮ್ಮೆ ಬರುವ ಫೆ 29, ಅಧಿಕ ವರ್ಷದ ಬಗ್ಗೆ ಆಸಕ್ತಿಕರ ವಿಚಾರಗಳು
4 ವರ್ಷಗಳಿಗೊಮ್ಮೆ ಬರುವ ಫೆ 29, ಅಧಿಕ ವರ್ಷದ ಬಗ್ಗೆ ಆಸಕ್ತಿಕರ ವಿಚಾರಗಳು

ಅಧಿಕ ವರ್ಷ 2024: ಸಾಮಾನ್ಯವಾಗಿ ಪ್ರತಿ ತಿಂಗಳು 30 ಅಥವಾ 31 ದಿನಗಳಿದ್ದರೆ ಫೆಬ್ರವರಿಯಲ್ಲಿ ಮಾತ್ರ 28 ಅಥವಾ 29 ದಿನಗಳಿರುತ್ತವೆ. ಪ್ರತಿ ವರ್ಷವೂ ಫೆಬ್ರವರಿಯಲ್ಲಿ 28 ದಿನಗಳು ಇರಲಿದ್ದು 4 ವರ್ಷಗಳಿಗೆ ಮಾತ್ರ ಹೆಚ್ಚವರಿ ಒಂದು ದಿನ ಇರಲಿದೆ. ಇದನ್ನು ಅಧಿಕ ವರ್ಷ ಎಂದು ಕರೆಯುತ್ತಾರೆ.

ಅಧಿಕ ದಿನದ ಪರಿಕಲ್ಪನೆಯನ್ನು ರೋಮನ್ ಸರ್ವಾಧಿಕಾರಿ ಜೂಲಿಯಸ್ ಸೀಸರ್ ಕ್ರಿಪೂ 45 ರಲ್ಲಿ ಜೂಲಿಯನ್ ಕ್ಯಾಲೆಂಡರ್‌ಗಾಗಿ ಪರಿಚಯಿಸಿದನು. ಸಾಮಾನ್ಯವಾಗಿ ವರ್ಷದಲ್ಲಿ 365 ದಿನಗಳು ಇರುತ್ತವೆ. ಆದರೆ ಅಧಿಕ ವರ್ಷವು 366 ದಿನಗಳನ್ನು ಹೊಂದಿರುತ್ತದೆ. ಆ ಹೆಚ್ಚುವರಿ ದಿನವು ಫೆಬ್ರವರಿ 29 ರಂದು ಬರುತ್ತದೆ.

ಸೌರ ಕ್ಯಾಲೆಂಡರ್‌ಗಾಗಿ

2024 ರಲ್ಲಿ ಒಂದು ಹೆಚ್ಚುವರಿ ದಿನವಿದೆ. ಅಂದರೆ 366 ದಿನಗಳಿವೆ. ಆದ್ದರಿಂದ ಫೆಬ್ರವರಿ ತಿಂಗಳು 28 ದಿನಗಳ ಬದಲಿಗೆ 29 ದಿನಗಳನ್ನು ಹೊಂದಿದೆ. ಇದು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪುನರಾವರ್ತಿಸುವ ನೈಸರ್ಗಿಕ ವಿದ್ಯಮಾನವಾಗಿದೆ. ಕ್ಯಾಲೆಂಡರ್‌ಗಳನ್ನು ಸೌರ ಕ್ಯಾಲೆಂಡರ್‌ನೊಂದಿಗೆ ಜೋಡಿಸಲು ಈ ಮಾರ್ಗವನ್ನು ಆಯ್ಕೆ ಮಾಡಲಾಗಿದೆ.

ಭೂಮಿಯು ಸೂರ್ಯನ ಸುತ್ತ ಒಂದು ಕಕ್ಷೆಯನ್ನು ಪೂರ್ಣಗೊಳಿಸಲು 365 ದಿನಗಳು, 5 ಗಂಟೆ 48 ನಿಮಿಷಗಳು ಮತ್ತು 45 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಈ ಹೆಚ್ಚುವರಿ ಸಮಯವನ್ನು ಸರಿ ಹೊಂದಿಸಲು ಅಧಿಕ ದಿನದ ಪರಿಕಲ್ಪನೆಯನ್ನು ಪರಿಚಯಿಸಲಾಯಿತು. ಅಂದರೆ, ಈ ಹೆಚ್ಚುವರಿ ಸಮಯವನ್ನು ಪ್ರತಿ 4 ವರ್ಷಗಳಿಗೊಮ್ಮೆ ಒಂದು ದಿನವಾಗಿ ಪರಿವರ್ತಿಸಲಾಗುತ್ತದೆ ಮತ್ತು ಹೆಚ್ಚುವರಿ ದಿನವನ್ನು ಫೆಬ್ರವರಿಯಲ್ಲಿ ಸೇರಿಸಲಾಗುತ್ತದೆ.

ಲೀಪ್ ಡೇ ಬಗ್ಗೆ ಆಸಕ್ತಿದಾಯಕ ಸಂಗತಿಗಳು

  • ರೋಮನ್ ಸರ್ವಾಧಿಕಾರಿ ಜೂಲಿಯಸ್ ಸೀಸರ್ ಕ್ರಿಪೂ 45 ರಲ್ಲಿ ಜೂಲಿಯನ್ ಕ್ಯಾಲೆಂಡರ್‌ಗಾಗಿ ಅಧಿಕ ವರ್ಷದ ಪರಿಕಲ್ಪನೆಯನ್ನು ಪರಿಚಯಿಸಿದರು. ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಫೆಬ್ರವರಿ ಕೊನೆಯ ತಿಂಗಳು ಎಂದು ಪರಿಗಣಿಸಲಾಗಿದೆ.
  • ಚೀನೀ ಜನರು ಕ್ಯಾಲೆಂಡರ್‌ಗೆ ಇಡೀ ತಿಂಗಳನ್ನು ಸೇರಿಸುವ ಸಂಪ್ರದಾಯವನ್ನು ಅನುಸರಿಸುತ್ತಾರೆ. ಇದು ಕೊನೆಯ ಬಾರಿಗೆ 2015 ರಲ್ಲಿ ಸಂಭವಿಸಿತು.

ಇದನ್ನೂ ಓದಿ: ನಂಗ್‌ ಒಬ್ಳು ಫ್ಲ್ಯಾಟ್‌ಮೇಟ್‌ ಬೇಕು, ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಯ್ತು ಬೆಂಗ್ಳೂರು ಹುಡ್ಗಿಯ ಕ್ರಿಯೇಟಿವ್‌ ಪೋಸ್ಟ್‌

  • ಹಿಂದೆ, ಲೀಪ್ ಡೇ ಅನ್ನು ಪುರುಷರು ಮಹಿಳೆಯರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಬದಲು, ಮಹಿಳೆಯರು ಪುರುಷರಿಗೆ ಪ್ರಪೋಸ್ ಮಾಡುವ ದಿನವಾಗಿ ಆಚರಿಸಲಾಗುತ್ತಿತ್ತು. ಕಾಲಾ ನಂತರದಲ್ಲಿ, ಈ ಸಂಪ್ರದಾಯ ಕಣ್ಮರೆಯಾಯಿತು.
  • ಅಧಿಕ ದಿನದಂದು ಜನಿಸಿದ ಶಿಶುಗಳನ್ನು ಲೀಪ್ಲಿಂಗ್ಸ್ ಅಥವಾ ಅಧಿಕ ವರ್ಷದ ಶಿಶುಗಳು ಎಂದು ಕರೆಯಲಾಗುತ್ತದೆ. ಅವರು ತಮ್ಮ ಜನ್ಮದಿನವನ್ನು ಫೆಬ್ರವರಿ 28 ಅಥವಾ ಮಾರ್ಚ್ 1 ರಂದು ಸಾಮಾನ್ಯ ವರ್ಷಗಳಲ್ಲಿ ಆಚರಿಸುತ್ತಾರೆ.
  • 1461 ಜನನಗಳಲ್ಲಿ ಒಬ್ಬರು ಮಾತ್ರ ಫೆಬ್ರವರಿ 29 ರಂದು ಅಧಿಕ ದಿನದಲ್ಲಿ ಜನಿಸುವ ಸಾಧ್ಯತೆಯಿದೆ.
  • ಪ್ರಪಂಚದಲ್ಲಿ ಎರಡು ಅಧಿಕ ವರ್ಷದ ರಾಜಧಾನಿಗಳಿವೆ. ಆಂಥೋನಿ ಟೆಕ್ಸಾಸ್ ಹಾಗೂ ಆಂಥೋನಿ ನ್ಯೂ ಮೆಕ್ಸಿಕೋ. ಪ್ರತಿ ಅಧಿಕ ದಿನದಂದು, ಈ ಸ್ಥಳಗಳಲ್ಲ್ ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ಉದ್ಯೋಗ ಸಂದರ್ಶನದಲ್ಲಿ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬೇಕಾ; ನಿಮ್ಮ ರೆಸ್ಯೂಮ್‌ನಲ್ಲಿ ಈ 7 ಪವರ್‌ಫುಲ್ ಪದಗಳು ಇರಲಿ

ವಿಭಾಗ