ನಿಮ್ಮ ಬೆರಳೇ ಹೇಳುತ್ತೆ ಮದುವೆ ವಿಚಾರ: ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ನಿಮ್ಮ ಅದೃಷ್ಟ ಹೇಗಿದೆ? ಇಲ್ಲೊಮ್ಮೆ ನೋಡಿ
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ತಾವು ಯಾರನ್ನು ಮದುವೆಯಾಗುತ್ತೇವೆ? ಹೇಗೆ ಮದುವೆಯಾಗುತ್ತೇವೆ? ಮತ್ತು ಯಾವ ವಯಸ್ಸಿನಲ್ಲಿ ಮದುವೆಯಾಗುತ್ತೇವೆ? ಎಂದು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿರುತ್ತಾರೆ. ಅಂತಹದೇ ಒಂದು ಕುತೂಹಲ ತಣಿಸಲು ಇದನ್ನು ಓದಿನೋಡಿ
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ತಾವು ಯಾರನ್ನು ಮದುವೆಯಾಗುತ್ತೇವೆ? ಹೇಗೆ ಮದುವೆಯಾಗುತ್ತೇವೆ? ಮತ್ತು ಯಾವ ವಯಸ್ಸಿನಲ್ಲಿ ಮದುವೆಯಾಗುತ್ತೇವೆ? ಎಂದು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿರುತ್ತಾರೆ. ಆ ಕುತೂಹಲ ಇರುವುದು ಸಹಜ ಅದೇ ರೀತಿ ನಿಮ್ಮ ಕುತೂಹಲಕ್ಕೆ ಇಲ್ಲೊಂದು ಉತ್ತರವಿದೆ. ಇದು ನಿಖರ ಅಲ್ಲ ಆದರೂ ಒಮ್ಮೆ ಟ್ರೈ ಮಾಡಿ ನೋಡಿದರೆ ತಪ್ಪೇನಿಲ್ಲ. ಇದನ್ನು ಹೇಗೆ ಕಂಡು ಹಿಡಿಯುವುದು ಎಂಬ ವಿವರವನ್ನು ನಾವು ಈ ಕೆಳಗೆ ನೀಡಿದ್ದೇವೆ ಗಮನಿಸಿ. ನೀವೂ ಅದನ್ನೇ ಅನುಸರಿಸಿ. ಈ ವಿಧಾನ ತುಂಬಾ ಸಿಂಪಲ್ ಆಗಿದೆ.
ನಿಮ್ಮ ಕೈಯನ್ನು ಬಳಸಿ ನೀವು ನಿಮ್ಮದು ಲವ್ ಮ್ಯಾರೇಜಾ? ಅಥವಾ ಅರೆಂಜ್ಡ್ ಮ್ಯಾರೇಜಾ? ಎಂದು ತಿಳಿಯಬಹುದು. ಅಥವಾ ಲವ್ ಕಮ್ ಅರೆಂಜ್ಡ್ ಮ್ಯಾರೇಜ್ ಆಗಿದ್ರೆ ಅದನ್ನು ಕೂಡ ತಿಳಿಯಬಹುದು. ನೀವು ಚಿಕ್ಕಂದಿನಲ್ಲಿದ್ದಾಗ ಈ ರೀತಿ ಏನೇನೋ ಟ್ರೈ ಮಾಡಿರಬಹುದು ಅಲ್ವಾ? ಬನ್ನಿ ಹಾಗಾದ್ರೆ ಇದನ್ನು ಯಾವ ರೀತಿ ತಿಳಿದುಕೊಳ್ಳೋದು ಎಂದು ನೋಡೋಣ.
ನಿಮ್ಮ ಬಲಗೈ ಬಳಸಿ
ಮೊದಲಿಗೆ ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಕೈಗಳನ್ನು ನೇರವಾಗಿ ಇಟ್ಟುಕೊಳ್ಳಿ ಬಲಗೈ ಒಂದೇ ಸಾಕು. ನಿಮ್ಮ ಎಲ್ಲಾ ಬೆರಳುಗಳನ್ನು ಜೋಡಿಸಿ. ಜೋಡಿಸಿದ ನಂತರ. ಈ ಮೂರು ಬೆರಳುಗಳ ಮೇಲೆ ಗಮನವಿಡಿ
1) ಉಂಗುರ ಬೆರಳು
2) ಮಧ್ಯಬೆರಳು
3) ತೋರುವ ಬೆರಳು
ಲವ್ ಮ್ಯಾರೇಜ್ ಎಂದರೆ ಈ ರೀತಿ ಕಾಣಿಸುತ್ತದೆ:
ನಿಮ್ಮ ಉಂಗುರ ಬೆರಲು ತೋರು ಬೆರಳಿಗಿಂತ ಉದ್ದವಾಗಿರುತ್ತದೆ. ಹೇಗಿದ್ದರೆ ನೀವು ಲವ್ ಮ್ಯಾರೇಜ್ ಆಗುತ್ತೀರಾ ಎಂದು ಅರ್ಥ.
ಅರೇಂಜ್ಡ್ ಮ್ಯಾರೇಜ್
ನೀವು ಅರೇಂಜ್ ಮ್ಯಾರೇಜ್ ಆಗೋದಾದ್ರೆ ನಿಮ್ಮ ತೋರುಬೆರಳು ಉಂಗುರ ಬೆರಳಿಗಿಂತ ಎತ್ತರವಾಗಿರುತ್ತದೆ. ಹೀಗಿದ್ದರೆ ಅರೆಂಜ್ ಮ್ಯಾರೇಜ್ ಎಂದು ಹೇಳಲಾಗುತ್ತದೆ.
ಲವ್ ಕಮ್ ಅರೇಂಜ್ಡ್
ಇನ್ನು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗುವುದಾದರೆ ನಿಮ್ಮ ಉಂಗುರ ಬೆರಳು ಮತ್ತು ತೋರುಬೆರಳು ಎರಡು ಕೂಡ ಸಮನಾಗಿರುತ್ತದೆ. ನೀವು ಒಂದು ಪಟ್ಟಿಯ ಮೇಲೆ ಅಥವಾ ಸಾಮಾನ್ಯ ಕಣ್ಣಳತೆಯಲ್ಲಿ ನಿಮ್ಮ ಕೈಯನ್ನು ನೋಡಿ ಇದನ್ನು ತಿಳಿದುಕೊಳ್ಳಬಹುದು. ಆಸಕ್ತಿ ಇದ್ದರೆ ನೀವೂ ಟ್ರೈ ಮಾಡಿ.
ವಿಭಾಗ