ನಿದ್ದೆ ಚೆನ್ನಾಗಿ ಬರಬೇಕು ಅಂದ್ರೆ ತಲೆದಿಂಬು ಹೇಗಿರಬೇಕು? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ
ರಾತ್ರಿ ಹಾಸಿಗೆಯಲ್ಲಿ ಎಷ್ಟು ಹೊರಳಾಡಿದರೂ ನಿಮಗೆ ನಿದ್ರೆ ಬರ್ತಾ ಇಲ್ಲ ಎಂದಾದರೆ ಅದು ನಿಮ್ಮ ತಲೆದಿಂಬಿನ ಸಮಸ್ಯೆಯೂ ಆಗಿರಬಹುದು. ಆರಾಮದಾಯಕ ಮತ್ತು ಶಾಂತ ನಿದ್ರೆಗೆ ಉತ್ತಮ ದಿಂಬು ಅತ್ಯಗತ್ಯ. ಆದರೆ ಈ ದಿಂಬಿನ ಆಯ್ಕೆ ಮಾಡುವಾಗ ನೀವು ತುಂಬಾ ಆಲೋಚನೆ ಮಾಡಬೇಕು.
ಆರಾಮದಾಯಕ ಮತ್ತು ಶಾಂತ ನಿದ್ರೆಗೆ ಉತ್ತಮ ದಿಂಬು ಅತ್ಯಗತ್ಯ. ಸರಿಯಾದ ದಿಂಬನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ ಗಮನಿಸಿ. ನಿಮ್ಮ ಕತ್ತು ಹಾಗೂ ಬೆನ್ನು ಹುರಿ ನೇರವಾಗಿರುವಂತೆ ಇದು ನಿಮಗೆ ಸಹಾಯ ಮಾಡಬೇಕು. ಇಲ್ಲವಾದರೆ ನಿಮಗೆ ಕತ್ತು ಹಾಗೂ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ನೀವು ಆಯ್ಕೆ ಮಾಡುವಾಗ ಮೆತ್ತಗಿನ ಹಾಗೂ ನಿಮಗೆ ಎಷ್ಟು ಎತ್ತರ ಸರಿ ಹೊಂದುತ್ತದೆಯೋ ಅಷ್ಟು ಎತ್ತರದ ದಿಂಬನ್ನು ಆಯ್ಕೆ ಮಾಡಿಕೊಳ್ಳಬೇಕು.
ಹತ್ತಿಯಿಂದ ಮಾಡಿದ ದಿಂಬು: ಹೆಚ್ಚಿನ ಜನರು ಹತ್ತಿಯಿಂದ ಮಾಡಿದ ಮೆತ್ತಗಿನ ದಿಂಬನ್ನು ಇಷ್ಟಪಡುತ್ತಾರೆ. ಅವರು ಇದೇ ದಿಂಬು ಬೇಕು ಎಂದು ಖರೀದಿ ಮಾಡಿ ತರುತ್ತಾರೆ. ಹಾಗಾದರೆ ಈ ಹತ್ತಿಯ ದಿಂಬು ಉತ್ತಮವೇ? ಎಂದು ನೀವು ಕೇಳಿದರೆ, ಖಂಡಿತ ಇದು ಉತ್ತಮವಾದ ದಿಂಬು. ನಿಮಗೆ ಯಾವ ಆಕಾರಕ್ಕೆ ಬೇಕೋ ಆ ಆಕಾರಕ್ಕೆ ಇದು ನಿಮ್ಮ ತಲೆ ಹಾಗೂ ಕತ್ತಿನ ಭಾಗವನ್ನು ಹಿಡಿದಿಟ್ಟುಕೊಳ್ಳುತ್ತದೆ.
ಬಟ್ಟೆಯಿಂದ ಮಾಡಿದ ದಿಂಬು: ಬಟ್ಟೆಯಿಂದ ಮಾಡಿದ ದಿಂಬನ್ನು ಬಳಸದೇ ಇರುವುದು ಉತ್ತಮ. ಯಾಕೆಂದರೆ ಅದರ ಒಳಗಡೆ ತುಂಬಲಾದ ಬಟ್ಟೆಗಳು ಮುದ್ದೆಯಾಗುತ್ತದೆ. ಅದು ಗಂಟು ಗಂಟಾಗಿ ಅಲ್ಲಲ್ಲಿ ಸಿಕ್ಕಿಬಿದ್ದಿರುತ್ತದೆ. ಇದು ನಿಮ್ಮ ನಿದ್ರೆಗೆ ಅಡಚಣೆ ಉಂಟು ಮಾಡುತ್ತದೆ. ಆರೋಗ್ಯಕ್ಕೂ ಈ ರೀತಿ ಗಂಟು ಗಂಟಿನ ದಿಂಬು ಒಳ್ಳೆಯದಲ್ಲ.
ಇನ್ನು ತಮ್ಮ ಗರ್ಭಾವಸ್ಥೆಯಲ್ಲಿ ಮಹಿಳೆಯರು ಮಲಗುವಾಗ ದೊಡ್ಡ ದಿಂಬನ್ನು ಬಳಸುತ್ತಾರೆ. ಅದು ಆರಾಮದಾಯಕ ಅನುಭವ ನೀಡುತ್ತದೆ ಎಂದು ಹೇಳುತ್ತಾರೆ. ಇದನ್ನು ಪ್ರೆಗ್ನೆನ್ಸಿ ಫಿಲ್ಲೊ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ದಿಂಬುಗಳಿಗಿಂತ ಬಿನ್ನವಾಗಿರುತ್ತದೆ. ಸಾಕಷ್ಟು ನಿದ್ರೆ ಸಿಗದೇ ಇರುವ ಸಂದರ್ಭದಲ್ಲಿ ಕಿರಿಕಿರಿ ಆರಂಭವಾಗುತ್ತದೆ. ಅದನ್ನು ಹೋಗಲಾಡಿಸಲು ಈ ದಿಂಬು ಸಹಕಾರಿಯಾಗಿದೆ.
ನಿಯಮಿತವಾಗಿ ಬದಲಾಯಿಸಿ:
ನೆನಪಿಡಿ, ಸರಿಯಾದ ದಿಂಬು ವೈಯಕ್ತಿಕ ಆದ್ಯತೆಯಾಗಿದೆ. ಆದ್ದರಿಂದ ನಿಮಗೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯೋಗ ಮಾಡಿ. ಬೇರೆ ಬೇರೆ ದಿಂಬುಗಳನ್ನು ಆಯ್ಕೆ ಮಾಡಿ ಯಾವುದು ಎಂದು ನೀವೇ ಕಂಡುಕೊಳ್ಳಬೇಕಾಗುತ್ತದೆ. ಒಬ್ಬಬ್ಬೊಬ್ಬರ ಆದ್ಯತೆಯೂ ಒಂದೊಂದು ರೀತಿಯಲ್ಲಿ ಇರುತ್ತದೆ. ಕೆಲವರಿಗೆ ಗಟ್ಟಿ ದಿಂಬು ಇಷ್ಟವಾದರೆ, ಇನ್ನು ಕೆಲವರಿಗೆ ಮೆತ್ತಗಿನ ದಿಂಬು ಇಷ್ಟವಾಗುತ್ತದೆ.
ಫೋಮ್: ಫೋಮ್‌ನಂತ ಸಡಿಲವಾದ ದಿಂಬುಗಳು ಸಹ ತುಂಬಾ ಸೂಕ್ತವಾಗಿದೆ. ಇದು ನಿಮಗೆ ಆರಾಮದಾಯಕ ನಿದ್ರೆಗೆ ಸಹಕರಿಸುತ್ತದೆ. ಇದು ಹಗುರವಾಗಿರುತ್ತದೆ.