Patrode Recipe: ಮಳೆಗಾಲಕ್ಕೆ ಕೆಸುವಿನ ಎಲೆಯ ಖಾದ್ಯ; ತುಳುನಾಡಿನ ತಿಂಡಿ ಪತ್ರೊಡೆ ನೀವೂ ತಯಾರಿಸಿ ಸೇವಿಸಿ-lifestyle monsoon recipes tulu nadu special patrode is made from colocasia leaves recipe inside karnataka news arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Patrode Recipe: ಮಳೆಗಾಲಕ್ಕೆ ಕೆಸುವಿನ ಎಲೆಯ ಖಾದ್ಯ; ತುಳುನಾಡಿನ ತಿಂಡಿ ಪತ್ರೊಡೆ ನೀವೂ ತಯಾರಿಸಿ ಸೇವಿಸಿ

Patrode Recipe: ಮಳೆಗಾಲಕ್ಕೆ ಕೆಸುವಿನ ಎಲೆಯ ಖಾದ್ಯ; ತುಳುನಾಡಿನ ತಿಂಡಿ ಪತ್ರೊಡೆ ನೀವೂ ತಯಾರಿಸಿ ಸೇವಿಸಿ

ಎಡಬಿಡದೆ ಸುರಿವ ಮಳೆಯಲ್ಲಿ ಬೆಚ್ಚಗಿನ ತಿಂಡಿಗಳು ಬಹಳ ರುಚಿಯಾಗಿರುತ್ತದೆ. ಈ ಸಮಯದಲ್ಲಿ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಹಸಿರು ತರಕಾರಿಗಳಿಂದ ತಿಂಡಿಗಳನ್ನು ತಯಾರಿಸುವುದು ರೂಢಿ. ಹಾಗೆ ತುಳುನಾಡಿನಲ್ಲಿ ಈಗ ಪತ್ರೊಡೆ ಫೇಮಸ್‌ ತಿಂಡಿ. ಪತ್ರೊಡೆಯನ್ನ ಇಲ್ಲಿ ಹೇಳಿರುವ ವಿಧಾನದಿಂದ ನೀವು ಸುಲಭವಾಗಿ ತಯಾರಿಸಬಹುದು.

ಮಳೆಗಾಲಕ್ಕೆ ಕೆಸುವಿನ ಎಲೆಯ ಖಾದ್ಯ; ತುಳುನಾಡಿನ ತಿಂಡಿ ಪತ್ರೊಡೆ ನೀವೂ ತಯಾರಿಸಿ ಸೇವಿಸಿ
ಮಳೆಗಾಲಕ್ಕೆ ಕೆಸುವಿನ ಎಲೆಯ ಖಾದ್ಯ; ತುಳುನಾಡಿನ ತಿಂಡಿ ಪತ್ರೊಡೆ ನೀವೂ ತಯಾರಿಸಿ ಸೇವಿಸಿ

ಈಗಂತೂ ಮಳೆಗಾಲ. ನಮ್ಮ ಸುತ್ತಲಿನ ಪರಿಸರದಲ್ಲಿ ಸಿಗುವ ಎಲೆ ತರಕಾರಿಗಳನ್ನುಪಯೋಗಿಸಿ ಮಾಡುವ ತಿಂಡಿ ತಿನಿಸುಗಳನ್ನು ಬೆಚ್ಟಗೆ ತಿನ್ನುವುದೇ ಹಬ್ಬ. ಅಂತಹ ತಿಂಡಿಗಳಲ್ಲಿ ಪತ್ರೊಡೆಯೂ ಒಂದು. ಇದು ಕೆಸುವಿನ ಎಲೆಯನ್ನು ಉಪಯೋಗಿಸಿ ಮಾಡುವಂತಹ ತಿನಿಸು. ಅಲ್ಲದೆ ಇದನ್ನು ತಯಾರಿಸುವ ರೀತಿಯೂ ಕಷ್ಟಕರವಾಗಿಲ್ಲ.

ಹಾಗಾದರೆ ಪತ್ರೊಡೆ ಮಾಡುವ ವಿಧಾನವನ್ನು ನೋಡಿಕೊಂಡು ಬರೋಣ ಬನ್ನಿ.

ಕೆಸುವಿನ ಎಲೆ ಸಾಧಾರಣವಾಗಿ ಮಳೆಗಾಲದಲ್ಲಿಯೇ ಹುಟ್ಟುವಂತದ್ದು. ಇದು ಉಷ್ಣದ ಗುಣವನ್ನು ಹೊಂದಿದೆ. ಮಳೆಗಾಲದ ತಂಪಿನ ವಾತಾವರಣಕ್ಕೆ ಇದರಿಂದ ತಯಾರಿಸುವ ಪತ್ರೊಡೆ ಸವಿಯಲೂ ಚಂದ, ಆರೋಗ್ಯಕರವೂ ಹೌದು.

ಮೊದಲನೆಯದಾಗಿ ಇದಕ್ಕೆ ಸರಿಯಾದ ಎಲೆಯನ್ನು ಆರಿಸಿಕೊಳ್ಳಬೇಕು. ಕಲೆ ಇರುವ, ಹಸಿರು ಬಣ್ಣವನ್ನು ಹೊರತುಪಡಿಸಿ ಬೇರೆ ಬಣ್ಣ ಇರುವ ಎಲೆಗಳು ಅಷ್ಟು ಸೂಕ್ತವಲ್ಲ. ಅಲ್ಲದೆ ಹಸಿರು ಬಣ್ಣದ ಎಲೆದೊಂದಿಗೆ ಬಿಳಿ,ನಸು ಹಸಿರು ಬಣ್ಣವಿರುವ ದಂಟನ್ನು ಆರಿಸಿದರೆ ಒಳ್ಳೆಯದು.

ಅಂದ ಹಾಗೆ ಪತ್ರೊಡೆಯನ್ನು ಹಲವು ವಿಧದಲ್ಲಿ ತಯಾರಿಸುತ್ತಾರೆ. ಇಲ್ಲಿ ಒಂದು ವಿಧಾನವನ್ನು ನೋಡೋಣ.

* ಅಗತ್ಯಕ್ಕೆ ಬೇಕಾದಷ್ಟು ಕೆಸುವಿನ ಎಲೆಗಳನ್ನು ಸಂಗ್ರಹಿಸಿ ಅವುಗಳನ್ನು ತೊಳೆದು ಶುಚಿಗೊಳಿಸಬೇಕು. ನಂತರ ಅವುಗಳನ್ನು ಚಿಕ್ಕ ಚಿಕ್ಕ ಪೀಸ್ ಮಾಡಿಕೊಳ್ಳಬೇಕು. ಪೀಸ್ ಮಾಡಿದ ನಂತರವೂ ತೊಳೆಯಬಹುದು. ಯಾಕೆಂದರೆ ಕೆಲವೊಮ್ಮೆ ಎಲೆಗಳು ತುರಿಕೆಯ ಗುಣವನ್ನು ಹೊಂದಿರುತ್ತದೆ. ತೊಳೆದ ನಂತರ ನೀರು ಆದಷ್ಟು ಮಟ್ಟಿಗೆ ಹೋದರೆ ಒಳ್ಳೆಯದು.

* ನಂತರ ಅಗತ್ಯಕ್ಕೆ ತಕ್ಕಷ್ಟು ಬೋಯಿಲ್ಡ್ ರೈಸ್ ತೆಗೆದುಕೊಳ್ಳಬೇಕು. ಮೋದಲೇ ಈ ಅಕ್ಕಿಯನ್ನು ಐದಾರು ಗಂಟೆಗಳ ಕಾಲ ನೆನೆಸಿಟ್ಟಿರಬೇಕು. ಒಂದು ಕೆಜಿ ಅಕ್ಕಿಯನ್ನು ತೆಗೆದುಕೊಂಡಿದ್ದರೆ ಅದಕ್ಕೆ ಸರಿಯಾಗುವಂತೆ ಬೇರೆ ಪದಾರ್ಥಗಳನ್ನು ಸೇರಿಸಬೇಕು.

* ಅಕ್ಕಿಯನ್ನು ಗ್ರೈಂಡರ್ ಅಥವಾ ಕಲ್ಲಿನಲ್ಲಿ ಹಾಕಿ ಅದಕ್ಕೆ ನಾಲ್ಕು ದೊಡ್ಡ ಸ್ಪೂನ್ ಕೊತ್ತಂಬರಿ, ಒಂದು ಚಮಚ ಅರಶಿನ ಹುಡಿ, ಅರ್ಧ ಮುಷ್ಠಿಯಷ್ಟು ಹುಳಿ, ಅರ್ಧ ಚಮಚದಷ್ಟು ಮೆಂತೆ, ಎಂಟು ಉದ್ದ ಮೆಣಸಿನೊಂದಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅರಿಯಬೇಕು/ಮಿಶ್ರಣವನ್ನು ತಯಾರಿಸಬೇಕು. ಹುಳಿ ಮತ್ತು ಉಪ್ಪು ಸರಿಯಾಗಿದೆಯೇ ಎಂದು ಪರೀಕ್ಷಿಸಿ ಮುಂದುವರಿಯಿರಿ. ಅಗತ್ಯಕ್ಕೆ ಬೇಕಾದಷ್ಟು ನೀರನ್ನು ಸೇರಿಸಿಕೊಂಡು ಕಡೆಯಬೇಕು.

* ಮಿಶ್ರಣ ತಯಾರಾದ ನಂತರ ಸ್ವಲ್ಪ ತೆಂಗಿನ ಎಣ್ಣೆಯನ್ನು ಬೆರೆಸಬೇಕು. ನಂತರ ಈ ಮಿಶ್ರಣಕ್ಕೆ ಮೊದಲು ತಯಾರಿಸಿಟ್ಟ ಕೆಸುವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

* ಇದಾದ ನಂತರ ಇನ್ನೊಂದು ಕಡೆ ಬಾಳೆ ಎಲೆಗಳನ್ನು ತೆಗೆದುಕೊಂಡು ಇವುಗಳನ್ನು ಬೆಂಕಿಗೆ ಹಿಡಿದು ಸರಿಯಾಗಿ ಬಾಡಿಸಬೇಕು. ಬಾಡಿಸಿದ ಎಲೆಗಳನ್ನು ಚೆನ್ನಾಗಿ ಒರಸಿ ಒಂದು ಕಡೆ ಇಟ್ಟು ಅದಕ್ಕೆ ತಯಾರಿಸಿದ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಹಾಕಿ ಎಲೆಯನ್ನು ಮಡಚಿ ಇಡಬೇಕು.

* ನಂತರ ಒಂದು ಅಟ್ಟಿಯ ಪಾತ್ರೆಯನ್ನು ತೆಗೆದುಕೊಂಡು ಬೇಕಾದಷ್ಟು ನೀರನ್ನು ಹಾಕಿ, ಅದರ ಮೇಲೆ ಬೇಕಾದರೆ ಒಂದೆರಡು ಬಾಳೆ ಎಲೆ ಇಟ್ಟು ನಂತರ ನಾವು ಮಡಿಚಿಟ್ಟ ಬಾಳೆ ಎಲೆಗಳನ್ನು ಚೆನ್ನಾಗಿ ಜೋಡಿಸಿ ಇಡಬೇಕು. ನಂತರ ಸರಿಸುಮಾರು ಒಂದು ಗಂಟೆಗಳ ಕಾಲ ಬೇಯಿಸಬೇಕು.

* ಬೇಯಿಸಿದ ನಂತರ ಎಲೆಗಳನ್ನೆಲ್ಲಾ ಬಿಡಿಸಿ ಬೆಂದ ಮಿಶ್ರಣಕ್ಕೆ ಸ್ವಲ್ಪ ತೆಂಗಿನೆಣ್ಣೆ ಸೇರಿಸಬಹುದು.

ಹಾಗೆಯೇ ಪತ್ರೊಡೆ ಗಸಿಯನ್ನು ತಯಾರಿಸಿ ಆ ಗಸಿಯೊಂದಿಗೆ ಮಿಶ್ರಣ ಮಾಡಿ ಸೇವಿಸಬಹುದು. ಅಥವಾ ಬೇಯಿಸಿದ ಮಿಶ್ರಣ ತಣಿದ ನಂತರ ಅದನ್ನು ಹುಡಿಮಾಡಿ ಒಂದು ಚಮಚ ಉದ್ದಿನ ಬೇಳೆ, ತೆಂಗಿನ ಕಾಯಿ, ಸ್ವಲ್ಪ ತೆಂಗಿನೆಣ್ಣೆ, ಸಾಸಿವೆ, ಮೆಣಸು, ಬೆಲ್ಲ, ಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಹಾಕಿ ಮಿಶ್ರಣ ಮಾಡಿಯೂ ಪತ್ರೊಡೆಯನ್ನು ತಯಾರಿಸಬಹುದು.

mysore-dasara_Entry_Point