September Holidays: ಸೆಪ್ಟೆಂಬರ್‌ನಲ್ಲಿ ಸಾಲು ಸಲು ರಜೆಗಳು; ಲಾಂಗ್ ವೀಕೆಂಡ್ ಯೋಜನೆಗೆ ಇಲ್ಲಿವೆ ಪ್ಲಾನ್ 1,2,3
ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಸುದೀರ್ಘ ವಾರಾಂತ್ಯಗಳಿವೆ. ಸರ್ಕಾರಿ ರಜೆಗಳ ಜೊತೆಗೆ ಶನಿವಾರ-ಹಾಗೂ ಭಾನುವಾರಗಳು ಇದ್ದು, ಹೆಚ್ಚುವರಿ ರಜೆ ಹಾಕಿದರೆ ನಾಲ್ಕು ದಿನಗಳ ಪ್ಲಾನ್ ರೂಪಿಸಬಹುದು. ರಜೆ ಯೋಜನೆ ಹೇಗೆ ಮಾಡಬಹುದು ಎಂಬುದಕ್ಕೆ ಇಲ್ಲವೆ ಸಲಹೆ.
ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಸ ಅಥವಾ ದೂರಪ್ರಯಾಣ ಯೋಜಿಸುವವರಿಗೆ ಅತ್ಯುತ್ತಮ ತಿಂಗಳು. ಸಾಲು ಸಾಲು ರಜೆಗಳೊಂದಿಗೆ ಸುದೀರ್ಘ ವಾರಾಂತ್ಯದ ಯೋಜನೆಗಳನ್ನು ಮಾಡಿಕೊಳ್ಳಲು ಇದು ಉತ್ತಮ ಸಮಯ. ತಿಂಗಳಲ್ಲಿ ಐದು ಭಾನುವಾರ ದಿನಗಳೇ ಇವೆ. ಎರಡು ದಿನ ಸೆಕೆಂಡ್ ಹಾಗೂ ಫೋರ್ತ್ ಸ್ಯಾಟರ್‌ಡೇ (ಶನಿವಾರ) ರಜೆ ಇದ್ದೇ ಇದೆ. ಉಳಿದಂತೆ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ರಜೆಯೂ ಇರಲಿದೆ. ಹೀಗಾಗಿ ಹಲವು ವಾರಗಳಲ್ಲಿ ಎರಡು ದಿನಗಳು ಹಾಗೂ ಒಂದು ವಾರ ಮೂರು ದಿನಗಳ ಸುದೀರ್ಘ ವಾರಾಂತ್ಯ ಸಿಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ರಜೆ ಹಾಕಿಕೊಂಡರೆ, ನಿಮ್ಮ ರಜೆಗಳನ್ನು ಎಂಜಾಯ್ ಮಾಡಬಹುದು.
ಕಾರ್ಪೊರೇಟ್ ವಲಯಗಳಲ್ಲಿರುವವರಿಗೆ ಪ್ರತಿ ಶನಿವಾರ ಹಾಗೂ ಭಾನುವಾರ ರಜೆಗಳಿರುತ್ತವೆ. ಉಳಿದಂತೆ ಸರ್ಕಾರಿ ಕೆಲಸ ಅಥವಾ ಬ್ಯಾಂಕ್ ಉದ್ಯೋಗಿಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ಇರಲಿದೆ. ಆದರೂ ಸೆಪ್ಟೆಂಬರ್ 7ರ ಶನಿವಾರ ಹಾಗೂ 16ರ ಸೋಮವಾರ ಹೆಚ್ಚುವರಿ ರಜೆಗಳು ಇರಲಿದೆ. ಹೀಗಾಗಿ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ಲಾಂಗ್ ವೀಕೆಂಡ್‌ಗಳು ಸಿಕ್ಕೇ ಸಿಗಲಿದೆ.
ಸೆಪ್ಟೆಂಬರ್ 2024ರ ಸುದೀರ್ಘ ವಾರಾಂತ್ಯ; ರಜಾದಿನಗಳು
- ಸೆಪ್ಟೆಂಬರ್ 7, ಶನಿವಾರ: ಗಣೇಶ ಚತುರ್ಥಿ (ಸರ್ಕಾರಿ ರಜೆ)
- ಸೆಪ್ಟೆಂಬರ್ 8, ಭಾನುವಾರ: ಭಾನುವಾರ
- ಸೆಪ್ಟೆಂಬರ್ 14, ಶನಿವಾರ: ಎರಡನೇ ಶನಿವಾರ
- ಸೆಪ್ಟೆಂಬರ್ 15, ಭಾನುವಾರ: ಭಾನುವಾರ
- ಸೆಪ್ಟೆಂಬರ್ 16, ಸೋಮವಾರ: ಈದ್ ಮಿಲಾದ್ ಉನ್ ನಬಿ (ಸರ್ಕಾರಿ ರಜೆ)
ಇದನ್ನೂ ಓದಿ | ಉಜ್ಜಯನಿಯಲ್ಲಿದೆ ಭಾರತ ಮಾತೆಯ ಭವ್ಯ ಮಂದಿರ: ಭಾರತ್ ಮಾತಾ ಮಂದಿರ ಮತ್ತು ಅಖಂಡ ಭಾರತ ನಕ್ಷೆಯ ವೈಶಿಷ್ಟ್ಯ
- ಸೆಪ್ಟೆಂಬರ್ 28, ಶನಿವಾರ: ನಾಲ್ಕನೇ ಶನಿವಾರ
- ಸೆಪ್ಟೆಂಬರ್ 29 ಭಾನುವಾರ: ಭಾನುವಾರ
ಉಳಿದಂತೆ ಸೆಪ್ಟೆಂಬರ್ 1, 22ರಂದು ಭಾನುವಾರ ಆಗಿರುವುದರಿಂದ ರಜೆ ಇರುತ್ತದೆ.
ಪ್ಲಾನ್ 1
ಸೆಪ್ಟೆಂಬರ್ 6ರಂದು ಓಣಂ ಸಂಭ್ರಮ ಶುರುವಾಗಲಿದೆ. ಈ ದಿನ ಒಂದು ರಜೆ ಹಾಕಿಕೊಂಡರೆ, 7ರಂದು ಗಣೇಶ ಚತುರ್ಥಿ ರಜೆ ಇರಲಿದೆ. 8ರಂದು ಭಾನುವಾರ ಆಗಿರುವ ಕಾರಣ ಸತತ ಮೂರು ದಿನಗಳ ಲಾಂಗ್ ವೀಕೆಂಡ್ ಸಿಕ್ಕಂತಾಗುತ್ತದೆ. ನಿಮ್ಮ ಪ್ರವಾಸ ಯೋಜನೆಗಳಿಗೆ ಮೊದಲ ವಾರ ಆದ್ಯತೆಯಾಗಿರಲಿ. ಕನಿಷ್ಠ ಶನಿವಾರ-ಭಾನುವಾರ ಎಲ್ಲಾ ಕ್ಷೇತ್ರದಲ್ಲಿ ಕೆಲಸದಲ್ಲಿರುವ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ರಜೆ ಇದ್ದೇ ಇರುತ್ತದೆ.
ಪ್ಲಾನ್ 2
ಸೆಪ್ಟೆಂಬರ್ 14ರಂದು ಸೆಕೆಂಡ್ ಸ್ಯಾಟರ್‌ಡೇ. ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ ಸಾಫ್ಟ್‌ವೇರ್, ಕಾರ್ಪೊರೇಟ್ ವಲಯದವರಿಗೆ ರಜೆ ಇರುತ್ತದೆ. 14ರಂದು ಓಣಂ ಸಂಭ್ರಮ ಒಂದೆಡೆಯಾದರೆ, ಅಂದು ಭಾನುವಾರವೂ ಹೌದು. ಆ ಬಳಿಕ 16ರಂದು ಈದ್ ಮಿಲಾದ್ ನಿಮಿತ್ತ ಸರ್ಕಾರಿ ರಜೆ ಇದೆ. ಸತತ ಮೂರು ದಿನಗಳ ರಜೆ ಸಿಗಲಿದೆ. ನಿಮಗೇನಾದರೂ ನಾಲ್ಕು ದಿನಗಳ ಪ್ಲಾನ್ ಮಾಡುವುದಿದ್ದರೆ, ಒಂದು ದಿನ ರಜೆ ಹೆಚ್ಚುವರಿ ರಜೆ ತೆಗೆದುಕೊಳ್ಳಬಹುದು. ಸೆಪ್ಟೆಂಬರ್ 13ರ ಶುಕ್ರವಾರ ಅಥವಾ 17ರ ಮಂಗಳವಾರ ಒಂದು ರಜೆ ಹಾಕಿದರೆ, ಸುದೀರ್ಘ ನಾಲ್ಕು ದಿನಗಳ ಯೋಜನೆ ಮಾಡಬಹುದು.
ಪ್ಲಾನ್ 3
ಸೆಪ್ಟೆಂಬರ್ 28ರಂದು ನಾಲ್ಕನೇ ಶನಿವಾರ. 29ರಂದು ಭಾನುವಾರ. ಈ ತಿಂಗಳು ಐದು ಭಾನುವಾರ ಬರುತ್ತಿರುವುದರಿಂದ, ಇದು ಕೊನೆಯ ರಜಾ ದಿನವಾಗಿದೆ. ಇಲ್ಲಿಯೂ ಎರಡು ದಿನಗಳ ಯೋಜನೆ ಹಾಕಿಕೊಳ್ಳಬಹುದು. ಹೆಚ್ಚುವರಿಯಾಗಿ ಒಂದು ದಿನ ರಜೆ ಹಾಕಿಕೊಂಡರೆ ಮೂರು ದಿನಗಳ ಪ್ರವಾಸ ಯೋಜನೆ ರೂಪಿಸಬಹುದು.