Tattoo Designs: ನೀವು ಫ್ಯಾಷನ್ ಪ್ರಿಯರಾ, ಶಿವನನ್ನು ಆರಾಧಿಸುತ್ತಿದ್ದೀರಾ? ಹಾಗಿದ್ರೆ ನಿಮಗಾಗಿ ಇಲ್ಲಿದೆ ಕೆಲವೊಂದು ಟ್ಯಾಟೂ ಡಿಸೈನ್ಸ್
Shiva Tattoos: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಬಹಳ ಟೆಂಡ್ ಆಗುತ್ತಿದೆ. ವಿವಿಧ ರೀತಿಯ ಡಿಸೈನ್‌ಗಳು ಗಮನ ಸೆಳೆಯುತ್ತಿದೆ. ನಾನಾ ಅರ್ಥಗಳಿರುವ ಟ್ಯಾಟೂಗಳನ್ನು ಜನರು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಶಿವನ ಭಕ್ತರಿಗೆ ಹೊಂದುವಂತೆ ಕೆಲವೊಂದು ಟ್ಯಾಟೂ ಡಿಸೈನ್‌ಗಳ ಮಾಹಿತಿ ಇಲ್ಲಿದೆ.
Shiva Tattoos: ಪ್ರತಿಯೊಬ್ಬರಿಗೂ ಒಂದೊಂದು ದೇವರನ್ನು ಆರಾಧಿಸುತ್ತಾರೆ. ತಮ್ಮ ಇಷ್ಟದೇವತೆಯನ್ನು ತಮ್ಮದೇ ರೀತಿಯಲ್ಲಿ ಆರಾಧಿಸುತ್ತಾರೆ. ಕೆಲವರು ಪ್ರತಿದಿನ ದೇವರ ಧ್ಯಾನ ಮಾಡಿದರೆ, ತಮಗೆ ಇಷ್ಟವಾದ ದೇವರ ಫೋಟೋವನ್ನು ತಮ್ಮ ಮನೆಯಲ್ಲಿ ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವರು ಫೋಟೋವನ್ನು ತಮ್ಮ ವಾಹನಗಳಲ್ಲಿ ಅಳವಡಿಸಿಕೊಳ್ಳುತ್ತಾರೆ.
ಇನ್ನೂ ಕೆಲವರು ತಮ್ಮ ಮೆಚ್ಚಿನ ದೇವರ ಟ್ಯಾಟೂ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಶಿವ, ಬಹುತೇಕ ಜನರ ಮೆಚ್ಚಿನ ಆರಾಧ್ಯ ದೇವರು. ಇತ್ತೀಚಿನ ದಿನಗಳಲ್ಲಿ ಶಿವನ ಕುರಿತಾದ ಹಚ್ಚೆ ಬಃಹಳ ಡ್ರೆಂಡಿಗ್ ಇದೆ. ಶಿವನ ಮುಖ, ಶಿವಲಿಂಗ, ಓಂ ನಮ: ಶಿವಾಯ, ಡಮರುಗ, ಶಿವನ ಹೆಸರು ಸೇರಿದಂತೆ ನಾನಾ ರೀತಿಯ ಟ್ಯಾಟೂಗಳನ್ನು ಕೆಲವರು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ಕಾಣಬಹುದು.
ಬೆರಳಿನ ಮೇಲೆ ಓಂ ಗುರುತಿನ ಟ್ಯಾಟೂ
ನಿಮಗೆ ದೊಡ್ಡದಾಗಿ ಕಾಣುವಂತೆ ಟ್ಯಾಟೂ ಹಾಕಿಸಿಕೊಳ್ಳಲು ಇಷ್ಟವಿಲ್ಲದಿದ್ದರೆ ಬೆರಳುಗಳ ಮೇಲೆ ಬಹಳ ಸಿಂಪಲ್ ಆಗಿ ಸಂಸ್ಕೃತದಲ್ಲಿ ಓಂ ಆಕಾರದ ಟ್ಯಾಟೂ ಹಾಕಿಸಿಕೊಳ್ಳಬಹುದು. ಇದು ನಿಮ್ಮಲ್ಲಿನ ಆಧ್ಯಾತ್ಮಿಕತೆಯನ್ನು ತೋರಿಸುತ್ತದೆ. ಬೆರಳುಗಳ ಮೇಲಿನ ಈ ರೀತಿ ಟ್ಯಾಟೂ ಬಹಳ ಸುಂದರವಾಗಿ ಕಾಣುತ್ತದೆ.
ಶಿವನ ಮೂರನೇ ಕಣ್ಣಿನ ಟ್ಯಾಟೂ
ಈಶ್ವರ ಎಂದರೆ ನೆನಪಾಗುವುದು ಅವನ ಮೂರನೇ ಕಣ್ಣು. ಕೈ ಬೆರಳು, ಮಣಿಕಟ್ಟು ಅಥವಾ ತೋಳಿನ ಮೇಲೆ ನೀವು ಶಿವನ ಮೂರನೇ ಕಣ್ಣಿನ ಟ್ಯಾಟೂ ಹಾಕಿಸಿಕೊಳ್ಳಬಹುದು. ಸರ್ವಶಕ್ತನ ಪವಿತ್ರ ಉಪಸ್ಥಿತಿ ಮತ್ತು ಶಕ್ತಿಯನ್ನು ಪ್ರತಿನಿಧಿಸುವ ಹಚ್ಚೆ ಇದು.
ಹೆಬ್ಬೆರಳ ಮೇಲಿನ ಟ್ಯಾಟೂ
ಹೆಬ್ಬೆರಳಿನ ಉದ್ದಕ್ಕೂ ಓಂ ಅಕ್ಷರದೊಂದಿಗೆ ಫಿಲ್ಲಿಂಗ್ ಡಿಸೈನ್ ಹಚ್ಚೆ ಗುರುತು ಕೂಡಾ ನೋಡಲು ನಯನ ಮನೋಹರವಾಗಿರುತ್ತದೆ. ಬ್ರಹ್ಮಾಂಡದ ಧ್ವನಿ ಎಂದೇ ಕರೆಯಲಾಗುವ ಓಂ ಎಂಬ ಉಚ್ಛಾರ ಪಾಸಿಟಿವ್ ವೈಬ್ಸ್ ನೀಡುತ್ತದೆ. ಅಂತದ್ದರಲ್ಲಿ ಆ ಟ್ಯಾಟೂವನ್ನು ನಿಮ್ಮ ಹೆಬ್ಬೆರಳ ಮೇಲೆ ಹಾಕಿಸಿದ್ದೀರಿ ಎಂದರೆ ನಿಮ್ಮಲ್ಲಿ ಸಂಪೂರ್ಣವಾಗಿ ಧನಾತ್ಮಕ ಶಕ್ತಿ ತುಂಬಿರುತ್ತದೆ.
ಡಮರುಗ ಟ್ಯಾಟೂ ಡಿಸೈನ್
ಡಮರುಗ ಶಿವನ ವಾದ್ಯ. ಆಧ್ಯಾತ್ಮಿಕ ಶಬ್ಧವನ್ನು ಸೃಷ್ಟಿಸಲು ಶಿವನಿಂದಲೇ ಸೃಷ್ಟಿಸಲ್ಪಟ್ಟಿದ್ದು ಎಂದು ಖ್ಯಾತಿಯಾಗಿದೆ. ಡಮರುಗದ ಸದ್ದು ಈ ಸೃಷ್ಟಿಯನ್ನು ನಿಯಂತ್ರಿಸುತ್ತದೆ ಎನ್ನಲಾಗುತ್ತದೆ. ನೀವು ಶಂಕರನ ಭಕ್ತನಾಗಿದ್ದರೆ ಈ ಟ್ಯಾಟೂವನ್ನು ಹಾಕಿಸಿಕೊಳ್ಳಬಹುದು.
ಎರಡೂ ಕೈಗಳ ಓಂ ಟ್ಯಾಟೂ
ನೀವು ಇನ್ನಷ್ಟು ವಿಭಿನ್ನವಾದ ಟ್ಯಾಟೂ ಡಿಸೈನ್ ಹುಡುಕುತ್ತಿದ್ದರೆ ನಿಮಗೆ ಎರಡೂ ಕೈಗಳ ಓಂ ಆಕಾರದ ಡಿಸೈನ್ ಹೇಳಿ ಮಾಡಿಸಿದಂತಿದೆ. ಎರಡೂ ಕೈಗಳ ಮೇಲೆ ಅರ್ಧರ್ಧ ವಿನ್ಯಾಸದ ಓಂ ಟ್ಯಾಟೂ ಹಾಕಿಸಿ, ನೀವು ನಮಸ್ಕರಿಸಿದಂತೆ ಕೈ ಜೋಡಿಸಿದರೆ ಓಂ ಡಿಸೈನ್ ಸಂಪೂರ್ಣವಾಗಿ ಕಾಣುತ್ತದೆ.
ನೀವೂ ಶಿವನ ಭಕ್ತರಾಗಿದ್ದರೆ ಈ ಟ್ಯಾಟೂಗಳನ್ನು ಟ್ರೈ ಮಾಡಬಹುದು.