Lucky Bhaskar Quotes: ಲಕ್ಕಿ ಭಾಸ್ಕರ್ ಚಿತ್ರದ ಈ 20 ಡೈಲಾಗ್‌ಗಳಿಂದ ನಿಮ್ಮ ಬದುಕು ಬದಲಾಗಬಹುದು; ಜೀವನಕ್ಕೆ ಸ್ಪೂರ್ತಿಯಾಗುವ ಕೋಟ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Lucky Bhaskar Quotes: ಲಕ್ಕಿ ಭಾಸ್ಕರ್ ಚಿತ್ರದ ಈ 20 ಡೈಲಾಗ್‌ಗಳಿಂದ ನಿಮ್ಮ ಬದುಕು ಬದಲಾಗಬಹುದು; ಜೀವನಕ್ಕೆ ಸ್ಪೂರ್ತಿಯಾಗುವ ಕೋಟ್ಸ್

Lucky Bhaskar Quotes: ಲಕ್ಕಿ ಭಾಸ್ಕರ್ ಚಿತ್ರದ ಈ 20 ಡೈಲಾಗ್‌ಗಳಿಂದ ನಿಮ್ಮ ಬದುಕು ಬದಲಾಗಬಹುದು; ಜೀವನಕ್ಕೆ ಸ್ಪೂರ್ತಿಯಾಗುವ ಕೋಟ್ಸ್

ದುಲ್ಕರ್ ಸಲ್ಮಾನ್, ಮೀನಾಕ್ಷಿ ಚೌಧರಿ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಲಕ್ಕಿ ಭಾಸ್ಕರ್ ಒಟಿಟಿ ಸ್ಟ್ರೀಮಿಂಗ್‌ನೊಂದಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಜೀವನಕ್ಕೆ ಪ್ರೇರಣೆ ನೀಡುವಂತಹ ಡೈಲಾಗ್ ಗಳು ಲಕ್ಕಿ ಭಾಸ್ಕರ್ ಸಿನಿಮಾದಲ್ಲಿವೆ. ಜೀವನವನ್ನೇ ಬದಲಾಯಿಸುವ ಡೈಲಾಗ್‌ಗಳ ಪಟ್ಟಿ ಇಲ್ಲಿದೆ.

ಜೀವನಕ್ಕೆ ಸ್ಪೂರ್ತಿ ತುಂಬುವಂತಹ ಲಕ್ಕಿ ಭಾಸ್ಕರ್ ಸಿನಿಮಾದ 20 ಡೈಲಾಗ್ ಗಳು ಇಲ್ಲಿವೆ
ಜೀವನಕ್ಕೆ ಸ್ಪೂರ್ತಿ ತುಂಬುವಂತಹ ಲಕ್ಕಿ ಭಾಸ್ಕರ್ ಸಿನಿಮಾದ 20 ಡೈಲಾಗ್ ಗಳು ಇಲ್ಲಿವೆ

ಲಕ್ಕಿ ಭಾಸ್ಕರ್ ಸಿನಿಮಾ ಡೈಲಾಗ್ ಗಳು: ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮತ್ತು ನಾಯಕಿ ಮೀನಾಕ್ಷಿ ಚೌಧರಿ ಲಕ್ಕಿ ಭಾಸ್ಕರ್ ಸಿನಿಮಾದ್ಲಿ ಗಂಡ ಮತ್ತು ಹೆಂಡತಿಯಾಗಿ ನಟಿಸಿದ್ದಾರೆ. ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶನದ ಲಕ್ಕಿ ಭಾಸ್ಕರ್ ಚಿತ್ರ ದೀಪಾವಳಿ ಉಡುಗೊರೆಯಾಗಿ ಅಕ್ಟೋಬರ್ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಇದಾದ ತಿಂಗಳ ಅಂತರದಲ್ಲಿ ಒಟಿಟಿಗೆ ಬಂದು ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದೆ.

ಲಕ್ಕಿ ಭಾಸ್ಕರ್ ಪ್ರಸ್ತುತ ನೆಟ್‌ಫ್ಲಿಕ್ಸ್‌ನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ. ಇದಲ್ಲದೆ, ಲಕ್ಕಿ ಭಾಸ್ಕರ್ ನವೆಂಬರ್ 28 ರಂದು ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ದಿನದಿಂದಲೇ ಟಾಪ್ ಟ್ರೆಂಡಿಂಗ್ ನಲ್ಲಿದೆ. ಮಧ್ಯಮ ವರ್ಗದ ಹಿನ್ನೆಲೆಯೊಂದಿಗೆ ಹಣದ ಮೌಲ್ಯ ಮತ್ತು ಅದರ ಸುತ್ತ ಹೆಣೆಯುವ ಕುಟುಂಬ ಬಂಧಗಳನ್ನು ಭಾವನಾತ್ಮಕವಾಗಿ ತೋರಿಸಲಾಗಿದೆ. ಮಧ್ಯಮ ವರ್ಗದ ಪ್ರತಿಯೊಬ್ಬ ವ್ಯಕ್ತಿಯೂ ಜೀವನ ನಡೆಸಲು ಎಷ್ಟೆಲ್ಲಾ ಏಳು ಬೀಳುಗಳನ್ನು ಕಾಣುತ್ತಾರೆ. ಸವಾಲುಗಳನ್ನು ಮೆಟ್ಟಿನಿಂತರೆ ಉನ್ನತ ಮಟ್ಟಕ್ಕೆ ಹೋಗುತ್ತಾನೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಎಲ್ಲರಿಗೂ ಜೀವನ ಪಾಠವಾಗುವಂತೆ ನಿರ್ದೇಶಕ ವೆಂಕಿ ಅಟ್ಲೂರಿ ಸಂಭಾಷಣೆ ಬರೆದಿದ್ದಾರೆ. ಲಕ್ಕಿ ಭಾಸ್ಕರ್ ಸಿನಿಮಾದ 20 ಡೈಲಾಗ್‌ಗಳು ಜೀವನವನ್ನು ಬದಲಾಯಿಸುವ ಕೋಟ್ಸ್ ಗಳಾಗಿವೆ.

ಲಕ್ಕಿ ಭಾಸ್ಕರ್ ಸಿನಿಮಾದಲ್ಲಿರುವ 20 ಡೈಲಾಗ್ ಗಳು

ಡೈಲಾಗ್ - 1
ಕನಸು ಕಾಣಲು ಹೆದರುವವರಿಗೆ ಕನಸು ನನಸು ಮಾಡಿಕೊಳ್ಳುವುದನ್ನು ಹರ್ಷದ್ ಮೆಹ್ರಾ ತೋರಿಸಿದರು

ಡೈಲಾಗ್ - 2
ಈ ಸಮುದ್ರದಲ್ಲಿರುವ ಪ್ರಶಾಂತತೆ ಜನರಿಗಿಲ್ಲ. ಅದಕ್ಕೇ ಓಡುತ್ತಲೇ ಇರುತ್ತಾರೆ. ಕಾರಣ ಹಣ

ಡೈಲಾಗ್ - 3
ಬಾರ್ಡರ್ ಲೈನ್ ದರಿದ್ರದಲ್ಲಿ ಜೀವಿಸುತ್ತಿರುವ ನಾನೇ ಬೇಕೆಂದು ನನ್ನ ಮದುವೆ ಮಾಡಿಕೊಂಡಳು ಹೆಂಡತಿ ಸುಮತಿ

ಡೈಲಾಗ್ - 4
ಥಾಂಕ್ಯೂ ಸರ್ ನಂಬಿದ್ದಕ್ಕೆ.. ಥಾಂಕ್ಯೂ ಸರ್ ಉಳಿಸಿಕೊಂಡಿದ್ದಕ್ಕೆ

ಡೈಲಾಗ್ - 5
ಕಾಲು ಬೆರಳಿನಿಂದ ಹಿಡಿದು ತಲೆಯವರೆಗೆ ಏನು ಬೇಕಾದರೂ ಕೊಂಡುಕೊಳ್ಳಿ... ಅಷ್ಟು ಸಂಪಾದಿಸಿದ್ದೇನೆ. ಅದನ್ನೂ ತೆಗೆದುಹಾಕಿ. ಕೌಂಟರ್ ಖಾಲಿಯಾಗಬೇಕು ಅಲ್ವಾ

ಡೈಲಾಗ್ - 6
ದಿಸ್ ಈಸ್ ಇಂಡಿಯಾ.. ವಸ್ತುಗಳು ಬೇಕಾದರೆ ಹಣದಿಂದ ಖರೀದಿಸಬೇಕು.. ಗೌರವ ಬೇಕಾದರೆ ಹಣ ಮೈಮೇಲೆ ಕಾಣಿಸಬೇಕು

ಡೈಲಾಗ್ - 7
ಒಂದು ದಿನದಲ್ಲಿ ಅರ್ಧ ಗಂಟೆಯಾದರೂ ನನ್ನ ಇಷ್ಟದಂತೆ ನಡೆಯಲಿಲ್ಲ. ಇದಕ್ಕಾಗಿ ದಿನವಿಡೀ ನರಳಬೇಕೆ?

ಡೈಲಾಗ್ - 8
ಮಿಡ್ಲ್ ಕ್ಲಾಸ್ ಮೆಂಟಾಲಿಟಿ ಸರ್
ಕಷ್ಟ ಬಂದಾಗ ಎಲ್ಲಾ ಖರ್ಚುಗಳನ್ನು ಕಡಿಮೆ ಮಾಡಿ ಒಂದೊಂದು ರೂಪಾಯಿ ಉಳಿಸುತ್ತೇವೆ
ಅದೇ ಬಾಜಿಗೆ ಬಂದರೆ ಒಂದೇ ಒಂದು ರೂಪಾಯಿ ಕೂಡ ಉಳಿಸದೆ ಖರ್ಚು ಮಾಡ್ತೇವೆ ಸರ್

ಡೈಲಾಗ್ - 9
ಅವಮಾನಿಸಿದವನಿಂದಲೇ ಸಲಾಂ ಹೊಡಿಸಿಕೊಂಡಿದ್ದೇನೆ

ಡೈಲಾಗ್ - 10
ನಾನು ಹೋಗಿದ್ದ ಚಿನ್ನಾಭರಣ ಮಾತ್ರ ಖರೀದಿಸುವುದಕ್ಕೆ ಅಲ್ಲ ಸರ್, ಅವನ ಅಹಂಕಾರವನ್ನೂ ಖರೀದಿ ಮಾಡುವುದಕ್ಕೆ

ಡೈಲಾಗ್ - 11
ಹಣವೆಂದರೆ ಮರ್ಯಾದೆ, ಪ್ರೀತಿ

ಡೈಲಾಗ್ - 12
ಇಂಥ ಸಂದರ್ಭಗಳಲ್ಲಿ ಅನಿಸುತ್ತೆ ಕುಟುಂಬಕ್ಕಾಗಿ ಎಂತಹ ರಿಸ್ಕ್ ತಗೆದುಕೊಂಡರೂ ತಪ್ಪಲ್ಲ

ಡೈಲಾಗ್ - 13
ಸಿಗರೇಟ್, ಆಲ್ಕೋಹಾಲ್, ಡ್ರಗ್ಸ್ ಕೊಡುವ ಕಿಕ್‌ಗಿಂತ ಹಣ ನೀಡುವ ಕಿಕ್ ಜಾಸ್ತಿ

ಡೈಲಾಗ್ - 14
ಮಾತಿನಲ್ಲಿ ಇಷ್ಟೊಂದು ಅಹಂಕಾರ
ಅಹಂಕಾರವಲ್ಲ ಧೈರ್ಯ

ಡೈಲಾಗ್ - 15
ಕೈಯಲ್ಲಿ ಬಲ
ಬಲವಲ್ಲ ಶಕ್ತಿ

ಡೈಲಾಗ್ - 16
ಇಷ್ಟು ಕೆಟ್ಟವನಾಗಿ ಬದಲಾಗುತ್ತೀಯಾ ಅಂತ ಅಂದುಕೊಂಡಿರಲಿಲ್ಲ
ನಾನೇನು ಕೆಟ್ಟವನಲ್ಲ ಶ್ರೀಮಂತನಷ್ಟೇ

ಡೈಲಾಗ್ - 17
ಜೂಜಾಟದಲ್ಲಿ ಎಷ್ಟು ಶ್ರೇಷ್ಠ ಆಟವನ್ನು ಆಡಿದ್ದೀಯಾ ಎಂಬುದು ಮುಖ್ಯವಲ್ಲ
ಯಾವಾಗ ನಿಲ್ಲಿಸಬೇಕು ಎಂಬುದು ಮುಖ್ಯ

ಡೈಲಾಗ್ - 18
ಅವನೊಬ್ಬ ಸಾಮಾನ್ಯ ಮನುಷ್ಯ..
ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪ್ರಶಾಂತಿಯುತವಾಗಿ ಮಲಗಿಕೊಳ್ಳಬಹುದು

ಡೈಲಾಗ್ - 19
ವೆಲ್ ಕಂ ಟು ಬೊಂಬಾಯಿ. ದಿ ಮನಿ ಕ್ಯಾಪಿಟಲ್ ಆಫ್ ಇಂಡಿಯಾ

ಡೈಲಾಗ್ - 20
ದೇವರು ರೆಡ್ ಸಿಗ್ನಲ್ ಕೊಟ್ಟಿದ್ದಾನೆ ಎಂದರೆ ಎಲ್ಲವನ್ನು ನಿಲ್ಲಿಸಿ ಎಂದರ್ಥ

ಲಕ್ಕಿ ಭಾಸ್ಕರ್ ಸಿನಿಮಾ ನೋಡಿದ ಪ್ರೇಕ್ಷಕರು ಮತ್ತು ನೆಟ್ಟಿಗರು ಚಿತ್ರದಲ್ಲಿನ ಪ್ರತಿ ಡೈಲಾಗ್‌ಗಳು ಜೀವನದಲ್ಲಿ ಸ್ಫೂರ್ತಿ ತುಂಬಲು ಪ್ರೇರಕವಾಗುವ ಕೋಟ್ಸ್ ಗಳು ಎಂದು ಹೇಳುತ್ತಾರೆ. ಆದರೆ 30 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಲಕ್ಕಿ ಭಾಸ್ಕರ್ ಚಿತ್ರ ವಿಶ್ವದಾದ್ಯಂತ 107 ರಿಂದ 111.15 ಕೋಟಿಗಷ್ಟು ಕಲೆಕ್ಷನ್‌ನೊಂದಿಗೆ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಎನಿಸಿಕೊಂಡಿದೆ.

Whats_app_banner