Maha Shivaratri 2024: ಆದಿ ಶಂಕರಾಚಾರ್ಯರು ರಚಿಸಿದ ದಕ್ಷಿಣಾಮೂರ್ತಿ ಸ್ತೋತ್ರ ಜಪಿಸಿ ಪರಮೇಶ್ವರನ ಅನುಗ್ರಹಕ್ಕೆ ಪಾತ್ರರಾಗಿ-maha shivaratri 2024 chant shiva mantra which adi shankara written lord shiva dakshina murthy stotram rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Maha Shivaratri 2024: ಆದಿ ಶಂಕರಾಚಾರ್ಯರು ರಚಿಸಿದ ದಕ್ಷಿಣಾಮೂರ್ತಿ ಸ್ತೋತ್ರ ಜಪಿಸಿ ಪರಮೇಶ್ವರನ ಅನುಗ್ರಹಕ್ಕೆ ಪಾತ್ರರಾಗಿ

Maha Shivaratri 2024: ಆದಿ ಶಂಕರಾಚಾರ್ಯರು ರಚಿಸಿದ ದಕ್ಷಿಣಾಮೂರ್ತಿ ಸ್ತೋತ್ರ ಜಪಿಸಿ ಪರಮೇಶ್ವರನ ಅನುಗ್ರಹಕ್ಕೆ ಪಾತ್ರರಾಗಿ

Maha Shivaratri 2024: ಆದಿ ಶಂಕರಾಚಾರ್ಯರು ರಚಿಸಿದ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಮಂತ್ರವನ್ನು ಜಪಿಸುವುದರಿಂದ ವಿದ್ಯಾರ್ಥಿಗಳಿಗೆ ವಿಶೇಷ ಫಲಗಳು ದೊರೆಯುತ್ತವೆ. ವಿಶೇಷವಾಗಿ ಮಹಾ ಶಿವರಾತ್ರಿಯಂದು ಈ ಮಂತ್ರಗಳನ್ನು ಪಠಿಸುವವರಿಗೆ ಶಿವನ ಕೃಪೆಯಿಂದ ಶುಭ ಫಲ ದೊರೆಯುತ್ತದೆ.

ಆದಿಶಂಕರರು ರಚಿಸಿದ ಈ ಶಿವ ಮಂತ್ರಕ್ಕಿದೆ ಪ್ರಾಮುಖ್ಯತೆ
ಆದಿಶಂಕರರು ರಚಿಸಿದ ಈ ಶಿವ ಮಂತ್ರಕ್ಕಿದೆ ಪ್ರಾಮುಖ್ಯತೆ (PC: Pixabay)

Maha Shivaratri 2024: ಶಿವರಾತ್ರಿ ಆಚರಣೆಗೆ ದಿನಗಣನೆ ಆರಂಭವಾಗಿದೆ. ಹಬ್ಬ ಹತ್ತಿರ ಬರುತ್ತಿದ್ದಂತೆ ಎಲ್ಲೆಡೆ ಶಿವಮಂತ್ರ ಘೋಷಗಳು ಮೊಳಗುತ್ತಿವೆ. ಭಕ್ತರು ಪಠಿಸುವ ಶಿವಮಂತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ಆದಿ ಶಂಕರಾಚಾರ್ಯರು ರಚಿಸಿದ ದಕ್ಷಿಣಾಮೂರ್ತಿ ಸ್ತೋತ್ರ ಬಹಳ ಶಕ್ತಿಯುತವಾದ ಮಂತ್ರವಾಗಿದೆ. ಇದನ್ನು ಪಠಿಸಿದರೆ ಸಕಲ ಕಷ್ಟಗಳೂ ನಿವಾರಣೆಯಾಗುತ್ತದೆ.

ಶಿವನು ಅಭಿಷೇಕಪ್ರಿಯ ಎಂದು ಎಲ್ಲರಿಗೂ ಗೊತ್ತು. ಅಂತಹ ಶಿವನ ಅನುಗ್ರಹ ಪಡೆಯಲು ಅಭಿಷೇಕ ಮಾತ್ರವಲ್ಲದೆ ಶಿವನ ಮಂತ್ರ ಜಪಿಸುವುದು ಕೂಡಾ ಅಷ್ಟೇ ಮುಖ್ಯವಾಗಿದೆ. "ಓಂ ನಮಃ ಶಿವಾಯ" ಜಪಿಸುವುದರಿಂದ ಸಕಲ ಪಾಪಗಳು ನಿವಾರಣೆಯಾಗಿ ಭಕ್ತರ ಎಲ್ಲಾ ಕೋರಿಕೆಗಳು ನೆರವೇರುತ್ತದೆ ಎಂಬ ನಂಬಿಕೆ ಇದೆ.

ಆದಿ ಶಂಕರರರು ರಚಿಸಿದ ದಕ್ಷಿಣಾಮೂರ್ತಿ ಮಂತ್ರ

ಶಿವ ಮಂತ್ರಗಳಲ್ಲಿ ಓಂ ತಚ್ಚುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಪ್ರಚೋದಯಾತ್ ಎಂಬ ಇನ್ನೊಂದು ಶಿವ ಮಂತ್ರವೂ ವಿಶೇಷವಾಗಿದೆ. ಆದಿ ಶಂಕರಾಚಾರ್ಯರು ಶಿವಪೂಜೆಗಾಗಿ ಅನೇಕ ಸ್ತೋತ್ರಗಳನ್ನು ಮತ್ತು ಮಂತ್ರಗಳನ್ನು ನೀಡಿದ್ದಾರೆ. ಅವುಗಳಲ್ಲಿ ನಿರ್ವಾಣ ಧ್ವನಿ ಮತ್ತು ಗುರು ದಕ್ಷಿಣಾಮೂರ್ತಿ ಸ್ತೋತ್ರವು ಅತ್ಯಂತ ವಿಶೇಷ ವಾಗಿದೆ ಎಂದು ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ ಹೇಳಿದ್ದಾರೆ. ವಿಶೇಷವಾಗಿ ಮಹಾಶಿವರಾತ್ರಿಯಂದು ಈ ಮಂತ್ರಗಳನ್ನು ಪಠಿಸುವವರಿಗೆ ಶಿವನ ಕೃಪೆಯಿಂದ ಶುಭ ಫಲ ದೊರೆಯುತ್ತದೆ.

ಶಂಕರಾಚಾರ್ಯರು ಬರೆದ ಕೀರ್ತನೆಗಳಲ್ಲಿ ಗುರು ದಕ್ಷಿಣಾಮೂರ್ತಿಯ ಸ್ತೋತ್ರವೂ ವಿಶೇಷವಾಗಿದೆ. ದಕ್ಷಿಣಾಮೂರ್ತಿ ಎಂದರೆ ಶಿವ ಶಕ್ತಿ ಮತ್ತು ಶಕ್ತಿ ದೇವತೆಯ ದಿವ್ಯ ರೂಪ. ದಕ್ಷಿಣಾಮೂರ್ತಿಯನ್ನು ಪೂಜಿಸಿದರೆ ಸಕಲ ಋಷಿ ಮುನಿಗಳಿಗೆ ಜ್ಞಾನವನ್ನು ದಯ ಪಾಲಿಸುವ ಶಿವ ಪಾರ್ವತಿಯನ್ನು ಪೂಜಿಸಿದಂತೆ. ಇದರ ಜೊತೆಗೆ ಶಿವ ಗಾಯತ್ರಿ ಮಂತ್ರವಾದ ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್‌ ಎಂಬುದು ಕೂಡಾ ಶಿವನ ಮಂತ್ರಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ನಮಗೆ ಬುದ್ಧಿ ಮತ್ತು ಅಜ್ಞಾನದಿಂದ ವಿಮೋಚನೆಯನ್ನು ದಯ ಪಾಲಿಸುವಂತೆ ನಾವು ಎಲ್ಲಾ ದೇವರ ಪರಮಾತ್ಮನಾದ ಮಹಾದೇವನನ್ನು ಪ್ರಾರ್ಥಿಸುತ್ತೇವೆ ಎಂಬುದು ಈ ಮಂತ್ರದ ಅರ್ಥವಾಗಿದೆ.

ಇವಿಷ್ಟೇ ಅಲ್ಲ ಓಂ ನಮೋ ಭಗವತೇ ರುದ್ರಾಯ ಎಂಬ ರುದ್ರ ಮಂತ್ರ, ಕರ್ಚರಾಂಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವನ್ನಾಯಂಜಂ ವಾ ಮಾನಸಂ ವಾ ಪಾರದಂ| ವಿಹಿತಂ ವಿಹಿತಂ ವಾ ಸರ್ವ ಮೇತತ್ ಕ್ಷಮಸ್ವ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ|| ಎಂಬ ಶಿವಧ್ಯಾನ ಮಂತ್ರ, ಓಂ ತ್ರಯಂಬಕಂ ಯಜಾಮಹೇ 'ಸುಗಂಧಿಂ ಪುಷ್ಠಿವಧನಂ ಊರ್ವರುಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌ ಮಹಾ ಮೃತ್ಯುಂಜಯ ಮಂತ್ರಗಳು ಕೂಡಾ ಬಹಳ ಶಕ್ತಿದಾಯಕ ಮಂತ್ರಗಳಾಗಿವೆ.

ಆದಿ ಶಂಕರಾಚಾರ್ಯರು ರಚಿಸಿದ ಶಿವಮಂತ್ರವಿದು

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ

ಗುರು:ಸಾಕ್ಷಾತ್ ಪರಂ ಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ

ವಿಶ್ವಂ ದರ್ಪಣ ದೃಶ್ಯಮಾನ ನಗರೀತುಲ್ಯಂ ನಿಜಾಂತರ್ಗತಂ

ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾ ನಿದ್ರಯಾ

ಯಃ ಸಾಕ್ಷಾತ್ಕುರುತೇ ಪ್ರಬೋಧ ಸಮಯೇ ಸ್ವಾತ್ಮಾನ ಮೇವಾದ್ವಯಂ

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್ನನಿರ್ವಿಕಲ್ಪಂ

ಪುನರ್ಮಾಯಾ ಕಲ್ಪಿತ ದೇಶ ಕಾಲಕಲನಾ ವೈಚಿತ್ರ್ಯ ಚಿತ್ರೀಕೃತಮ್

ಮಾಯಾವೀವ ವಿಜೃಂಭಯಾತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ

ಸಾಕ್ಷಾತ್ತತ್ತ್ವ ಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್

ಯತ್ಸಾಕ್ಷಾತ್ಕರಣಾದ್ಭವೇನ್ನ ಪುನರಾವೃತ್ತಿರ್ಭವಾಂಭೋನಿಧೌ

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ನಾನಾಚ್ಛಿದ್ರ ಘಟೋದರ ಸ್ಥಿತ ಮಹಾದೀಪ ಪ್ರಭಾಭಾಸ್ವರಂ

ಜ್ಞಾನಂ ಯಸ್ಯ ತು ಚಕ್ಷುರಾದಿಕರಣ ದ್ವಾರಾ ಬಹಿಃ ಸ್ಪಂದತೇ

ಜಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸಮಸ್ತಂ ಜಗತ್

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿಧು:

ಸ್ತ್ರೀಬಾಲಾಂಧ ಜಡೋಪಮಾಸ್ತ್ವಹಮಿತಿ ಭ್ರಾಂತಾಭೃಶಂ ವಾದಿನ:

ಮಾಯಾಶಕ್ತಿ ವಿಲಾಸಕಲ್ಪಿತ ಮಹಾ ವ್ಯಾಮೋಹ ಸಂಹಾರಿಣೇ

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ರಾಹುಗ್ರಸ್ತ ದಿವಾಕರೇಂದು ಸದೃಶೋ ಮಾಯಾ ಸಮಾಚ್ಛಾದನಾತ್

ಸನ್ಮಾತ್ರಃ ಕರಣೋಪ ಸಂಹರಣತೋ ಯೋಽ ಭೂತ್ಸುಷುಪ್ತಃ ಪುಮಾನ್

ಪ್ರಾಗಸ್ವಾಪ್ಸಮಿತಿ ಪ್ರಬೋಧ ಸಮಯೇ ಯಃ ಪ್ರತ್ಯಭಿಜ್ಞಾಯತೇ

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ

ವ್ಯಾವೃತ್ತಾ ಸ್ವನುವರ್ತಮಾನ ಮಹಮಿತ್ಯಂತಃ ಸ್ಫುರಂತಂ ಸದಾ

ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬಂಧತಃ

ಶಿಷ್ಯಾಚಾರ್ಯತಯಾ ತಥೈವ ಪಿತೃಪುತ್ರಾದ್ಯಾತ್ಮನಾ ಭೇದತಃ

ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತಃ

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ಭೂರಂಭಾಂಸ್ಯನಲೋಽನಿಲೋಂಽಬರ ಮಹರ್ನಾಥೋ ಹಿಮಾಂಶುಃ ಪುಮಾನ್

ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಮ್

ನಾನ್ಯತ್ಕಿಂಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋ:

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿನ್ ಸ್ತವೇ

ತೇನಾಸ್ಯ ಶ್ರವಣಾತ್ತದರ್ಥ ಮನನಾದ್ಧ್ಯಾನಾಚ್ಚ ಸಂಕೀರ್ತನಾತ್

ಸರ್ವಾತ್ಮತ್ವಮಹಾವಿಭೂತಿ ಸಹಿತಂ ಸ್ಯಾದೀಶ್ವರತ್ವಂ ಸ್ವತಃ

ಶ್ರೀ ದಕ್ಷಿಣಾಮೂರ್ತಯೇ ನಮ: ನಮಸ್ಕಾರಂ ಸಮರ್ಪಯಾಮಿ

ಇತಿ ಶ್ರೀ ಶಂಕರಾಚಾರ್ಯ ವಿರಚಿತ ದಕ್ಷಿಣಾಮೂರ್ತಿ ಸ್ತೋತ್ರ ಪೂರ್ವಕ ಪ್ರದಕ್ಷಿಣ ನಮಸ್ಕಾರಂ ಸಮರ್ಪಯಾಮಿ