Majjige Sambar: ಬೇಸಿಗೆ ಹತ್ತಿರ ಬಂತು, ಧಗೆಯ ತಾಪಕ್ಕೆ ದೇಹ ತಂಪಾಗಿಸಲು ಮಜ್ಜಿಗೆ ಸಾಂಬಾರ್‌ ತಯಾರಿಸಿ; ರೆಸಿಪಿ ಇಲ್ಲಿದೆ-majjige sambar recipe for summer days how to prepare curd sambar for summer lunch healthy food recipes rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Majjige Sambar: ಬೇಸಿಗೆ ಹತ್ತಿರ ಬಂತು, ಧಗೆಯ ತಾಪಕ್ಕೆ ದೇಹ ತಂಪಾಗಿಸಲು ಮಜ್ಜಿಗೆ ಸಾಂಬಾರ್‌ ತಯಾರಿಸಿ; ರೆಸಿಪಿ ಇಲ್ಲಿದೆ

Majjige Sambar: ಬೇಸಿಗೆ ಹತ್ತಿರ ಬಂತು, ಧಗೆಯ ತಾಪಕ್ಕೆ ದೇಹ ತಂಪಾಗಿಸಲು ಮಜ್ಜಿಗೆ ಸಾಂಬಾರ್‌ ತಯಾರಿಸಿ; ರೆಸಿಪಿ ಇಲ್ಲಿದೆ

Majjige Sambar Recipe: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರಗಳಲ್ಲಿ ಮಜ್ಜಿಗೆ ಪ್ರಮುಖವಾದುದು. ಒಂದು ವೇಳೆ ನಿಮಗೆ ಪ್ರತಿದಿನ ಮಜ್ಜಿಗೆಯನ್ನು ಹಾಗೇ ಸೇವಿಸಲು ಸಾಧ್ಯವಾಗದಿದ್ದಲ್ಲಿ ಒಮ್ಮೆ ಮಜ್ಜಿಗೆ ಸಾಂಬಾರ್‌ ತಯಾರಿಸಿ.

ಮಜ್ಜಿಗೆ ಸಾಂಬಾರ್‌ ರೆಸಿಪಿ
ಮಜ್ಜಿಗೆ ಸಾಂಬಾರ್‌ ರೆಸಿಪಿ (PC: @OnlyNakedTruth)

Majjige Sambar Recipe: ಬೇಸಿಗೆ ಆರಂಭವಾಗುತ್ತಿದೆ. ಬಿಸಿಲ ಧಗೆಗೆ ತಣ್ಣನೆಯ ನೀರು, ಐಸ್‌ಕ್ರೀಮ್, ಜ್ಯೂಸ್‌ ಇದ್ದರೆ ದೇಹಕ್ಕೆ ತಂಪು ಅನುಭವ ನೀಡುತ್ತದೆ, ಮನಸ್ಸಿಗೆ ರಿಲಾಕ್ಸ್‌ ಎನಿಸುತ್ತದೆ. ಆದರೆ ಅವರೆಡರ ಜೊತೆ ಮಜ್ಜಿಗೆ ಇದ್ದರೆ ಇನ್ನೂ ಒಳ್ಳೆಯದು.

ಮಜ್ಜಿಗೆ ಕುಡಿಯಲು, ಅನ್ನದ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಕೆಲವರಿಗಂತೂ ಬೇಸಿಗೆ ಮಾತ್ರವಲ್ಲ ಎಷ್ಟು ಚಳಿ ಇರಲಿ ಎಷ್ಟು ಮಳೆ ಸುರಿಯುತ್ತಿರಲಿ ಮಜ್ಜಿಗೆ ಇರಲೇಬೇಕು. ಒಂದು ವೇಳೆ ನಿಮಗೆ ಮಜ್ಜಿಗೆಯನ್ನು ಹಾಗೇ ಸೇವಿಸಲು ಇಷ್ಟವಾಗದಿದ್ದಲ್ಲಿ ಮಜ್ಜಿಗೆ ಸಾಂಬಾರ್‌ ಮಾಡಿ ನೋಡಿ, ಇದು ನಿಮಗೆ ವಿಭಿನ್ನ ರುಚಿ ನೀಡುತ್ತದೆ. ತಯಾರಿಸುವುದು ಬಹಳ ಸುಲಭ, ಕಡಿಮೆ ಸಾಮಗ್ರಿಗಳು ಸಾಕು.

ಮಜ್ಜಿಗೆ ಸಾಂಬಾರ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಗಟ್ಟಿ ಮೊಸರು - 1/4 ಲೀಟರ್‌
  • ಜೀರ್ಗೆ - 1/2 ಟೇಬಲ್‌ ಸ್ಪೂನ್‌
  • ಸಾಸಿವೆ - ಒಗ್ಗರಣೆಗೆ
  • ಒಣ ಮೆಣಸಿನಕಾಯಿ - 3
  • ಹಿಂಗು - ಚಿಟಿಕೆ
  • ಅರಿಶಿನ - 1/4 ಟೀ ಸ್ಪೂನ್‌
  • ಈರುಳ್ಳಿ - 1
  • ಬೆಳ್ಳುಳ್ಳಿ - 6 ಎಸಳು
  • ಕರಿಬೇವು - 1 ಎಸಳು
  • ಅಕ್ಕಿ - 1 ಟೇಬಲ್‌ ಸ್ಪೂನ್‌
  • ಹಸಿಮೆಣಸಿನಕಾಯಿ - 3
  • ಒಗ್ಗರಣೆಗೆ - ಎಣ್ಣೆ
  • ತೆಂಗಿನಕಾಯಿ ಚೂರು - 2 ಟೇಬಲ್‌ ಸ್ಪೂನ್‌
  • ಉಪ್ಪು - ರುಚಿಗೆ ತಕ್ಕಷ್ಟು

ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಬೆಸ್ಟ್‌ ರಾಗಿ ಪೂರಿ; ಈ ಹೆಲ್ತಿ, ಟೇಸ್ಟಿ ರೆಸಿಪಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ

ಮಜ್ಜಿಗೆ ಸಾಂಬಾರ್‌ ತಯಾರಿಸುವ ವಿಧಾನ

  • ಅಕ್ಕಿಯನ್ನು ತೊಳೆದು ಅರ್ಧ ಗಂಟೆಗಳ ಕಾಲ ನೆನೆಸಿ
  • ನೆನೆಸಿದ ಅಕ್ಕಿಯನ್ನು ಒಂದು ಮಿಕ್ಸಿ ಜಾರ್‌ಗೆ ಸೇರಿಸಿ, ಅದರೊಂದಿಗೆ ಹಸಿಮೆಣಸಿನಕಾಯಿ, ಅರಿಶಿನ, ತೆಂಗಿನಕಾಯಿ ಜೀರ್ಗೆ, ಬೆಳ್ಳುಳ್ಳಿ ಸೇರಿಸಿ
  • ಇದರೊಂದಿಗೆ ಅರ್ಧ ಕಪ್‌ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ, ಚಟ್ನಿ ಹದಕ್ಕೆ ಇರಲಿ
  • ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಹಿಂಗು, ಕರಿಬೇವು, ಒಣಮೆಣಸಿನಕಾಯಿ ಸೇರಿಸಿ ಕಡಿಮೆ ಉರಿಯಲ್ಲಿ 10 ಸೆಕೆಂಡ್‌ ಬಾಡಿಸಿ
  • ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ
  • ಕೊನೆಗೆ ಉರಿಯನ್ನು ಕಡಿಮೆ ಇರಿಸಿ ರುಬ್ಬಿಕೊಂಡ ಮಿಶ್ರಣ ಸೇರಿಸಿ ಮಿಕ್ಸ್‌ ಮಾಡಿ
  • ಅಕ್ಕಿ ಬಳಸಿರುವುದರಿಂದ ಮಿಶ್ರಣ ಗಟ್ಟಿಯಾಗುತ್ತದೆ, ಆದ್ದರಿಂದ ಸ್ವಲ್ಪ ನೀರು ಸೇರಿಸಿಕೊಂಡು ಒಂದೆರಡು ನಿಮಿಷ ಕುದಿಸಿ
  • ಒಂದು ಬೌಲ್‌ಗೆ ಮೊಸರು ಸೇರಿಸಿ ಗಂಟುಗಳು ಇಲ್ಲದಂತೆ ಚೆನ್ನಾಗಿ ವಿಸ್ಕ್‌ ಮಾಡಿ
  • ವಿಸ್ಕ್‌ ಮಾಡಿದ ಮೊಸರು ಸೇರಿಸಿ, ನಿಮಗೆ ಬೇಕಾದಷ್ಟು ನೀರು ಸೇರಿಸಿ ಅಡ್ಜೆಸ್ಟ್‌ ಮಾಡಿಕೊಳ್ಳಿ.
  • ಉಪ್ಪು ಸೇರಿಸಿ ಅನ್ನನ್ನೊಂದಿಗೆ ಮಜ್ಜಿಗೆ ಸಾಂಬಾರನ್ನು ಎಂಜಾಯ್‌ ಮಾಡಿ.
  • ಈ ಮಜ್ಜಿಗೆ ಸಾಂಬಾರ್‌ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಬಹಳ ಇಷ್ಟವಾಗುತ್ತದೆ. ಒಮ್ಮೆ ಟ್ರೈ ಮಾಡಿ ಹೇಗಿತ್ತು ಅಂತ ತಿಳಿಸಿ.

ಇದನ್ನೂ ಓದಿ: ವೀಕೆಂಡ್​​ಗೆ ಹೇಳಿ ಮಾಡಿಸಿದ ರೆಸಿಪಿ ತಂದೂರಿ ಚಿಕನ್​ ವ್ರ್ಯಾಪ್ಸ್‌​​: ಸಿಂಪಲ್‌ ಆಗಿ ಮನೆಯಲ್ಲೇ ಮಾಡೋದ್‌ ಹೇಗೆ ನೋಡಿ