ಸಂಕ್ರಾಂತಿ ಹಬ್ಬಕ್ಕೆ ಗರಿಗರಿ, ರುಚಿಯಾದ ಉದ್ದಿನಬೇಳೆ, ಅಕ್ಕಿಹಿಟ್ಟು ಮುರುಕು ತಯಾರಿಸಿ: ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಕ್ರಾಂತಿ ಹಬ್ಬಕ್ಕೆ ಗರಿಗರಿ, ರುಚಿಯಾದ ಉದ್ದಿನಬೇಳೆ, ಅಕ್ಕಿಹಿಟ್ಟು ಮುರುಕು ತಯಾರಿಸಿ: ರೆಸಿಪಿ ಇಲ್ಲಿದೆ

ಸಂಕ್ರಾಂತಿ ಹಬ್ಬಕ್ಕೆ ಗರಿಗರಿ, ರುಚಿಯಾದ ಉದ್ದಿನಬೇಳೆ, ಅಕ್ಕಿಹಿಟ್ಟು ಮುರುಕು ತಯಾರಿಸಿ: ರೆಸಿಪಿ ಇಲ್ಲಿದೆ

ಮಕರ ಸಂಕ್ರಾಂತಿ ಹಬ್ಬಕ್ಕೆ ತಯಾರಿಸುವ ತಿಂಡಿಗಳಲ್ಲಿ ಮುರುಕು ಕೂಡಾ ಒಂದು. ಉದ್ದಿನ ಬೇಳೆ, ಅಕ್ಕಿಹಿಟ್ಟು, ಎಳ್ಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿ ತಯಾರಿಸಲಾದ ಈ ತಿಂಡಿ ಬಹಳ ರುಚಿಯಾಗಿರುತ್ತದೆ. ನೀವೂ ಟ್ರೈ ಮಾಡಿ, ರೆಸಿಪಿ ಇಲ್ಲಿದೆ.

ಸಂಕ್ರಾಂತಿ ಹಬ್ಬಕ್ಕಾಗಿ ಮುರುಕು ರೆಸಿಪಿ
ಸಂಕ್ರಾಂತಿ ಹಬ್ಬಕ್ಕಾಗಿ ಮುರುಕು ರೆಸಿಪಿ

ಮುರುಕು ರೆಸಿಪಿ: ಸುಗ್ಗಿ ಹಬ್ಬ ಸಂಕ್ರಾಂತಿಗೆ ಇನ್ನು 1 ದಿನವಷ್ಟೇ ಬಾಕಿ ಇದೆ. ಸಂಕ್ರಾಂತಿಯು ವರ್ಷದ ಮೊದಲ ಹಬ್ಬ. ಎಲ್ಲಾ ಕಡೆ ಹಬ್ಬಕ್ಕೆ ತಯಾರಿ ಜೋರಾಗಿದೆ. ಈ ಹಬ್ಬವನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಹಾಗೇ ಆಚರಿಸುವ ವಿಧಾನ ಕೂಡಾ ವಿಭಿನ್ನವಾಗಿದೆ. ಹಬ್ಬಕ್ಕೆ ಎಳ್ಳಿನಿಂದ ವಿವಿಧ ತಿಂಡಿಗಳನ್ನು ತಯಾರಿಸುತ್ತಾರೆ.

ಜೊತೆಗೆ ಸಂಕ್ರಾತಿಗೆ ವಿವಿಧ ಕುರುಕಲು ತಿಂಡಿಗಳನ್ನು ಕೂಡಾ ತಯಾರಿಸಲಾಗುತ್ತದೆ. ಅದರಲ್ಲಿ ಮುರುಕು ಕೂಡಾ ಒಂದು. ಇದನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಮುರುಕನ್ನು ಕೆಲವೆಡೆ ಸಂಪೂರ್ಣ ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಎಂದಾದರೂ ಉದ್ದಿನ ಬೇಳೆ ಬಳಸಿ ತಯಾರಿಸಿದ್ದೀರಾ? ಇಲ್ಲವಾದರೆ ರೆಸಿಪಿ ಇಲ್ಲಿದೆ.

ಮುರುಕು ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಉದ್ದಿನ ಬೇಳೆ - 1 ಕಪ್‌
  • ಅಕ್ಕಿಹಿಟ್ಟು - 2 ಕಪ್‌
  • ಜೀರ್ಗೆ - 1 ಸ್ಪೂನ್‌
  • ಓಂ ಕಾಳು - 1/4 ಟೀ ಸ್ಪೂನ್‌
  • ಅಚ್ಚಖಾರದ ಪುಡಿ - 2 ಟೀ ಸ್ಪೂನ್
  • ಹುರಿಕಡಲೆ -‌1/2 ಕಪ್
  • ಎಳ್ಳು‌ - 2 ಟೇಬಲ್ ಸ್ಪೂನ್
  • ಎಣ್ಣೆ‌ - ಕರಿಯಲು
  • ಉಪ್ಪು - ರುಚಿಗೆ ತಕ್ಕಷ್ಟು

ಇದನ್ನೂ ಓದಿ: ಮಕರ ಸಂಕ್ರಾಂತಿ ಹಬ್ಬಕ್ಕೆ ತಯಾರಿಸಿ ರುಚಿಕರ ಹೆಸರುಬೇಳೆ ಪಾಯಸ, ಎಲ್ಲರಿಗೂ ಇಷ್ಟವಾಗುವ ಸಿಹಿತಿನಿಸಿದು, ಇಲ್ಲಿದೆ ರೆಸಿಪಿ

ಮುರುಕು ತಯಾರಿಸುವ ವಿಧಾನ

  • ಉದ್ದಿನ ಬೇಳೆಯನ್ನು 2-3 ಬಾರಿ ತೊಳೆದು ಸ್ವಲ್ಪವೇ ನೀರು ಸೇರಿಸಿ 5-6 ಸೀಟಿ ಕೂಗಿಸಿಕೊಳ್ಳಿ
  • ಕುಕ್ಕರ್‌ ತಣ್ಣಗಾದ ನಂತರ ಉದ್ದಿನ ಬೇಳೆಯನ್ನು ಮ್ಯಾಶ್‌ ಮಾಡಿ ಅಥವಾ ಜಾರ್‌ಗೆ ಸೇರಿಸಿ ಗ್ರೈಂಡ್‌ ಮಾಡಿಕೊಳ್ಳಿ
  • ಹುರಿಕಡಲೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ
  • ಒಂದು ದೊಡ್ಡ ಪಾತ್ರೆಗೆ ಅಕ್ಕಿಹಿಟ್ಟು, ಓಂಕಾಳು, ಬಿಳಿ ಎಳ್ಳು, ಅಚ್ಚಖಾರದ ಪುಡಿ, ಜೀರ್ಗೆ, ಪುಡಿ ಮಾಡಿದ ಹುರಿಗಡಲೆ ಸೇರಿಸಿ ಮಿಕ್ಸ್‌ ಮಾಡಿಕೊಳ್ಳಿ
  • ಇದಕ್ಕೆ 2-3 ಸ್ಪೂನ್‌ ಬಿಸಿ ಎಣ್ಣೆ ಹಾಗೂ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ
  • ಈ ಅಕ್ಕಿಹಿಟ್ಟಿನ ಮಿಶ್ರಣಕ್ಕೆ ಗ್ರೈಂಡ್‌ ಮಾಡಿಕೊಂಡ ಉದ್ದಿನ ಬೇಳೆ ಮಿಶ್ರಣ ಸೇರಿಸಿ ರೊಟ್ಟಿಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಮಿಕ್ಸ್‌ ಮಾಡಿಕೊಳ್ಳಿ
  • ಮುರುಕು ಮಾಡುವ ಹೊರಳಿಗೆ ಹಿಟ್ಟು ಅಂಟದಿರಲು ಸುತ್ತಲೂ ಸ್ವಲ್ಪ ಎಣ್ಣೆ ಸವರಿಕೊಳ್ಳಿ
  • ಒಂದು ಪ್ಲಾಸ್ಟಿಕ್‌ ಶೀಟ್‌ನಲ್ಲಿ ಮುರುಕುಗಳನ್ನು ಒತ್ತಿಕೊಂಡು ಎಣ್ಣೆಗೆ ಸೇರಿಸಿ ಅಥವಾ ನೇರವಾಗಿ ಎಣ್ಣೆಗೆ ಬಿಡಿ
  • ಮಧ್ಯಮ ಉರಿಯಲ್ಲಿ ಮುರುಕುಗಳನ್ನು ಕಂದು ಬಣ್ಣ ಬರುವರೆಗೂ ಕರಿಯಿರಿ
  • ಮಕ್ಕಳು, ದೊಡ್ಡವರು ಎನ್ನದೆ ಈ ಮುರುಕುಗಳನ್ನು ಎಂಜಾಯ್‌ ಮಾಡುವುದು ಖಂಡಿತ

ಇದನ್ನೂ ಓದಿ: ಕ್ಯಾರೆಟ್‌ ಗುಲಾಬ್‌ ಜಾಮೂನು ರೆಸಿಪಿ

Whats_app_banner