ಮಕ್ಕಳು ಶಾಲೆಯಿಂದ ಬಂದ ಕೂಡಲೇ ಮಾಡಿಕೊಡಿ ಸ್ಟ್ರಾಬೆರಿ ಜ್ಯೂಸ್; ತಯಾರಿಸುವುದು ತುಂಬಾ ಸಿಂಪಲ್, ರುಚಿಯಂತೂ ಅದ್ಭುತ
ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಸ್ಟ್ರಾಬೆರಿ ಜ್ಯೂಸ್ ಅನ್ನು ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ಹೇರಳವಾಗಿ ಈ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಕ್ಕಳು ಈ ಹಣ್ಣು ತಿನ್ನದಿದ್ದರೆ ಜ್ಯೂಸ್ ಮಾಡಿ ಕೊಡಿ. ಖಂಡಿತ ಇಷ್ಟಪಟ್ಟು ಕುಡಿಯುತ್ತಾರೆ. ಸ್ಟ್ರಾಬೆರಿ ಜ್ಯೂಸ್ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಈ ಚಳಿಗಾಲದಲ್ಲಿ ಅನೇಕ ರೀತಿಯ ಹಣ್ಣುಗಳು ಲಭ್ಯವಿದೆ. ಅವುಗಳಲ್ಲಿ ಸ್ಟ್ರಾಬೆರಿ ಹಣ್ಣು ಕೂಡ ಒಂದು. ಇದು ರಸಭರಿತ ರುಚಿಕರವಾದ ಹಣ್ಣಾಗಿದ್ದು, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಫೋಲಿಕ್ ಆಮ್ಲ, ರಂಜಕ, ಪೊಟ್ಯಾಸಿಯಮ್, ಫೈಬರ್, ಉತ್ಕರ್ಷಣ ನಿರೋಧಕಗಳು, ಪಾಲಿಫಿನಾಲ್ ಸಂಯುಕ್ತ ಮುಂತಾದ ಪೋಷಕಾಂಶಗಳಿವೆ. ಮಕ್ಕಳಿಗೆ ಸ್ಟ್ರಾಬೆರಿ ಅಂದ್ರೆ ತುಂಬಾ ಇಷ್ಟಪಡುತ್ತಾರೆ. ಸಂಜೆ ಶಾಲೆಯಿಂದ ಬಂದ ಕೂಡಲೇ ಮಕ್ಕಳಿಗೆ ಸ್ಟ್ರಾಬೆರಿ ಜ್ಯೂಸ್ ಮಾಡಿಕೊಟ್ಟರೆ ಅವರು ತುಂಬಾ ಖುಷಿಯಿಂದ ಕುಡಿಯುತ್ತಾರೆ. ಸ್ಟಾಬೆರಿ ಜ್ಯೂಸ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸ್ಟ್ರಾಬೆರಿ ಮಿಲ್ಕ್ ಶೇಕ್ ಪಾಕವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಸ್ಟ್ರಾಬೆರಿ- 10, ಹಾಲು- ಅರ್ಧ ಲೀಟರ್, ಸಕ್ಕರೆ- 2 ಚಮಚ.
ತಯಾರಿಸುವ ವಿಧಾನ: ಮೊದಲಿಗೆ ಸ್ಟ್ರಾಬೆರಿ ಹಣ್ಣನ್ನು ನೀರಿನಲ್ಲಿ ಹಾಕಿ ಕಾಲು ಗಂಟೆ ಕಾಲ ಬಿಡಿ. ನಂತರ ಅವನ್ನು ತೊಳೆದು ಪಕ್ಕಕ್ಕೆ ಇರಿಸಿ. ಸ್ಟ್ರಾಬೆರಿ ಹಣ್ಣನ್ನು ಎರಡರಿಂದ ಮೂರು ಬಾರಿ ನೀರಿನಿಂದ ತೊಳೆಯಲು ಮರೆಯಬೇಡಿ. ಸ್ಟ್ರಾಬೆರಿಯಲ್ಲಿ ಧೂಳು, ಕೀಟನಾಶಕ ಮತ್ತು ಬ್ಯಾಕ್ಟೀರಿಯಾ ಇರಬಹುದು. ಹೀಗಾಗಿ ಅದನ್ನು ವಿನೆಗರ್ ಮತ್ತು ಅಡುಗೆ ಸೋಡಾದಿಂದ ನೀರಿನಲ್ಲಿ ಸ್ವಚ್ಛಗೊಳಿಸಬಹುದು.
ಸ್ವಚ್ಛಗೊಳಿಸಿದ ಸ್ಟ್ರಾಬೆರಿ ಹಣ್ಣುಗಳನ್ನು ಕನಿಷ್ಠ 4 ಗಂಟೆಗಳ ಕಾಲ ಫ್ರಿಜ್‌ನಲ್ಲಿ ಇಡಬೇಕು. ಬೆಳಗ್ಗಿನ ಉಪಾಹಾರದ ಸಮಯದಲ್ಲಿ ನೀವು ಈ ಮಿಲ್ಕ್ ಶೇಕ್ ಕುಡಿಯಲು ಬಯಸಿದರೆ, ರಾತ್ರಿಯಿಡೀ ಸ್ಟ್ರಾಬೆರಿ ಹಣ್ಣನ್ನು ಫ್ರೀಜ್ ಮಾಡಬಹುದು. ಈಗ ಕುದಿಸಿ ಆರಿಸಿರುವ ಹಾಲು, ಸ್ಟ್ರಾಬೆರಿ ಮತ್ತು ಸಕ್ಕರೆಯನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ರುಬ್ಬಿ. ನೀರು ಸೇರಿಸಬೇಡಿ, ಮಿಶ್ರಣ ದಪ್ಪವಾಗಿರಲಿ. ಈ ಮಿಶ್ರಣವನ್ನು ಒಂದು ಲೋಟದಲ್ಲಿ ಹಾಕಿ ಕುಡಿಯಿರಿ.
ಈ ಮಿಲ್ಕ್ ಶೇಕ್ ಅಥವಾ ಜ್ಯೂಸ್ ಕುಡಿಯಲು ತುಂಬಾ ರುಚಿಕರವಾಗಿರುತ್ತದೆ. ನೀರು ಬೆರೆಸದೆ ಈ ಜ್ಯೂಸ್ ತಯಾರಿಸಿ. ಈಗ ಚಳಿಗಾಲವಾಗಿರುವುದರಿಂದ ಐಸ್ ಕ್ಯೂಬ್‌ಗಳನ್ನು ಹಾಕುವ ಅಗತ್ಯವಿಲ್ಲ. ಸಕ್ಕರೆ ಬೆರೆಸಲು ಇಷ್ಟವಿಲ್ಲದಿದ್ದರೆ, ಜೇನುತುಪ್ಪ ಅಥವಾ ಬೆಲ್ಲವನ್ನು ಹಾಕಬಹುದು. ಇದು ಆರೋಗ್ಯಕ್ಕೆ ತುಂಬಾ ರುಚಿಕರವಾಗಿರುತ್ತದೆ.
ಸ್ಟ್ರಾಬೆರಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣನ್ನು ಹಾಗೆಯೇ ತಿನ್ನಬಹುದು ಅಥವಾ ಈ ರೀತಿ ಜ್ಯೂಸ್ ಮಾಡಿಕೊಂಡು ಕುಡಿಯಬಹುದು. ಮಕ್ಕಳು ಸ್ಟ್ರಾಬೆರಿ ಅಂದ್ರೆ ಬಹಳ ಇಷ್ಟಪಡುತ್ತಾರೆ. ಆದರೆ, ಈ ಹಣ್ಣನ್ನು ಹಾಗೆಯೇ ತಿನ್ನಲು ಇಷ್ಟಪಡುವುದಿಲ್ಲ. ಯಾಕೆಂದರೆ ಇದು ಸ್ವಲ್ಪ ಹುಳಿ, ಸಿಹಿ ರುಚಿಯನ್ನು ಹೊಂದಿರುತ್ತದೆ. ಆದರೆ, ಇದರ ಜ್ಯೂಸ್ ಮಾಡಿ ಕುಡಿಯಬಹುದು. ಮಕ್ಕಳಿಗೆ ಈ ಜ್ಯೂಸ್ ಮಾಡಿಕೊಡಿ, ಇಷ್ಟಪಟ್ಟು ಕುಡಿಯುತ್ತಾರೆ.
