ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ರಂಗೋಲಿ ಪುಡಿ; ಈ 2 ವಸ್ತು ಇದ್ರೆ ಸಾಕು, ಬಣ್ಣ ಬಣ್ಣದ ರಂಗೋಲಿ ಪುಡಿ ತಯಾರಾಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ರಂಗೋಲಿ ಪುಡಿ; ಈ 2 ವಸ್ತು ಇದ್ರೆ ಸಾಕು, ಬಣ್ಣ ಬಣ್ಣದ ರಂಗೋಲಿ ಪುಡಿ ತಯಾರಾಗುತ್ತೆ

ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ರಂಗೋಲಿ ಪುಡಿ; ಈ 2 ವಸ್ತು ಇದ್ರೆ ಸಾಕು, ಬಣ್ಣ ಬಣ್ಣದ ರಂಗೋಲಿ ಪುಡಿ ತಯಾರಾಗುತ್ತೆ

ಹಿಂದೂ ಸಂಪ್ರದಾಯದಲ್ಲಿ ರಂಗೋಲಿಗೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಗೆ ಬಣ್ಣ ಬಣ್ಣದ, ವಿವಿಧ ಚಿತ್ತಾರದ ರಂಗೋಲಿ ಬಿಡಿಸುತ್ತಾರೆ. ನೀವು ಈ ಬಾರಿ ಸಂಕ್ರಾಂತಿಗೆ ರಂಗೋಲಿ ಹಾಕಬೇಕು ಅಂತಿದ್ದರೆ, ಮಾರುಕಟ್ಟೆಯಿಂದ ರಂಗೋಲಿ ಪುಡಿ ತರಬೇಕು ಅಂತಿಲ್ಲ. ಮನೆಯಲ್ಲಿ ಈ ಎರಡು ವಸ್ತು ಇದ್ದರೆ ಸಾಕು, ಬಣ್ಣ ಬಣ್ಣದ ರಂಗೋಲಿ ಪುಡಿ ತಯಾರಿಸಬಹುದು, ಹೇಗೆ ಅಂತ ಮುಂದೆ ನೋಡಿ.

ಈ ಎರಡು ವಸ್ತು ಇದ್ರೆ ಸಾಕು ಬಣ್ಣ-ಬಣ್ಣದ ರಂಗೋಲಿ ಪುಡಿ ಸಿದ್ಧವಾಗುತ್ತೆ
ಈ ಎರಡು ವಸ್ತು ಇದ್ರೆ ಸಾಕು ಬಣ್ಣ-ಬಣ್ಣದ ರಂಗೋಲಿ ಪುಡಿ ಸಿದ್ಧವಾಗುತ್ತೆ (Canva)

ಮಕರ ಸಂಕ್ರಾಂತಿ ಹಬ್ಬಕ್ಕೆ ಈಗಾಗಲೇ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಹಬ್ಬದ ಮೂರು ದಿನಗಳಲ್ಲಿ ಎಲ್ಲರೂ ತಮ್ಮ ಮನೆ ಮುಂದೆ ಸುಂದರ ರಂಗೋಲಿ ಬಿಡಿಸುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ರಂಗೋಲಿಗೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಗೆ ಬಣ್ಣ ಬಣ್ಣದ, ವಿವಿಧ ಚಿತ್ತಾರದ ರಂಗೋಲಿ ಬಿಡಿಸುತ್ತಾರೆ. ನೀವು ಈ ಬಾರಿ ಸಂಕ್ರಾಂತಿಗೆ ರಂಗೋಲಿ ಹಾಕಬೇಕು ಅಂತಿದ್ದರೆ, ಮಾರುಕಟ್ಟೆಯಿಂದ ರಂಗೋಲಿ ಪುಡಿ ತರಬೇಕು ಅಂತಿಲ್ಲ. ಮನೆಯಲ್ಲಿ ಈ ಎರಡು ವಸ್ತು ಇದ್ದರೆ ಸಾಕು, ಬಣ್ಣ ಬಣ್ಣದ ರಂಗೋಲಿ ಪುಡಿ ತಯಾರಿಸಬಹುದು, ಹೇಗೆ ಅಂತ ಮುಂದೆ ನೋಡಿ.

ಮನೆಯಲ್ಲೇ ರಂಗೋಲಿ ಬಣ್ಣ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಪಡಿತರ ಅಕ್ಕಿ, ಅಕ್ರಿಲಿಕ್ ಬಣ್ಣ.

ತಯಾರಿಸುವುದು ಹೇಗೆ: ಮೊದಲಿಗೆ, ಪಡಿತರ ಅಕ್ಕಿಯನ್ನು ತೆಗೆದುಕೊಂಡು ಅದನ್ನು ಕಡಾಯಿಯಲ್ಲಿ ಹಾಕಿ ಹುರಿಯಿರಿ. ಅಕ್ಕಿ ಸ್ವಲ್ಪ ತಣ್ಣಗಾದ ನಂತರ, ಅದನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಪುಡಿ ಮಾಡಿ. ಆದರೆ, ಅಕ್ಕಿ ಪುಡಿ ಮಾಡುವಾಗ ಅದು ಮೃದುವಾಗಲೂಬಾರದು ಹಾಗೆಯೇ ತುಂಬಾ ಒರಟಾಗಿರಬಾರದು, ಅದು ಮೃದುವಾಗಿದ್ದರೆ, ರಂಗೋಲಿ ಹಾಕುವುದು ಕಷ್ಟವಾಗುತ್ತದೆ. ಬಣ್ಣವು ಸುಂದರವಾಗಿ ಕಾಣುವುದಿಲ್ಲ.

ಮಿಕ್ಸಿಯಲ್ಲಿ ಪುಡಿ ಮಾಡಿದ ಅಕ್ಕಿಯನ್ನು ತಟ್ಟೆಗೆ ಹಾಕಿ. ನಿಮಗೆ ಬೇಕಾದಷ್ಟು ಬಣ್ಣಗಳಿಗೆ ಬಟ್ಟಲುಗಳು ಅಥವಾ ತಟ್ಟೆಗಳನ್ನು ತೆಗೆದುಕೊಳ್ಳಿ. ಅವುಗಳಲ್ಲಿ ಮಿಕ್ಸಿಯಲ್ಲಿ ಪುಡಿ ಮಾಡಿದ ಹಿಟ್ಟನ್ನು ಹಾಕಿ. ನಂತರ ಪೇಂಟಿಂಗ್‍ಗೆ ಬಳಸುವ ಅಕ್ರಿಲಿಕ್ ಪೇಂಟ್ ಅನ್ನು ಬಳಸಬೇಕು. ಇದಕ್ಕೆ ಸ್ವಲ್ಪ ನೀರು ಸೇರಿಸಿ, ಸಾಕಷ್ಟು ಗಾಢವಾಗುವವರೆಗೆ ಬಣ್ಣಗಳನ್ನು ಮಿಶ್ರಣ ಮಾಡಬೇಕು.

ಹಿಟ್ಟಿಗೆ ಬಣ್ಣಗಳನ್ನು ಸೇರಿಸಿ, ಮಿಶ್ರಣ ಮಾಡಿದ ನಂತರ ಸ್ವಲ್ಪ ಸಮಯ ಒಣಗಲು ಬಿಡಿ. ಹಿಟ್ಟು ಸಂಪೂರ್ಣವಾಗಿ ಒಣಗಿದ ನಂತರ, ಅದನ್ನು ಮತ್ತೊಮ್ಮೆ ಮಿಕ್ಸರ್‌ಗೆ ಹಾಕಿ ಒಂದು ಸುತ್ತು ತಿರುಗಿಸಿ. ಈ ರೀತಿ ಮಾಡುವುದರಿಂದ ಅಕ್ಕಿ ಹಿಟ್ಟಿಗೆ ಬಣ್ಣ ಉತ್ತಮವಾಗಿ ಬೆರೆಯಲು ಸುಲಭವಾಗುತ್ತದೆ.

ಈ ರೀತಿ ಮಾಡುವುದರಿಂದ ಸಂಕ್ರಾಂತಿ ಹಬ್ಬಕ್ಕೆ ರಂಗೋಲಿ ಬಿಡಿಸಲು ವಿವಿಧ ಬಣ್ಣಗಳು ಸಿದ್ಧ. ಇವುಗಳನ್ನು ಪಾತ್ರೆ ಅಥವಾ ಬಟ್ಟೆ ಚೀಲದಲ್ಲಿ ಸಂಗ್ರಹಿಸಿ, ವರ್ಷಪೂರ್ತಿ ಬಳಸಬಹುದು. ಇಲ್ಲಿ ಪಡಿತರ ಅಕ್ಕಿಯನ್ನೇ ಯಾಕೆ ಬಳಸಲಾಗಿದೆ ಅಂದರೆ, ಇದಕ್ಕಾಗಿ ನಿಮಗೆ ಯಾವುದೇ ಖರ್ಚು ಬೀಳುವುದಿಲ್ಲ ಎಂದು. ಬೇರೆ ಅಕ್ಕಿಯನ್ನು ಕೂಡ ಬಳಸಬಹುದು. ಮನೆಯಲ್ಲೇ ತಯಾರಿಸಿದ ಬಣ್ಣದಿಂದ ರಂಗೋಲಿ ಬಿಡಿಸುವುದೆಂದರೆ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆಬರುತ್ತದೆ.

Whats_app_banner