ನಿಮ್ಮ ಕಣ್ಣಿನ ದೃಷ್ಟಿ ಯಾವಾಗಲೂ ಶಾರ್ಪ್‌ಆಗಿ ಇರ್ಬೇಕು ಅಂದ್ರೆ ನೀವು ನಿಮ್ಮ ಜೀವನದಲ್ಲಿ ಈ 5 ಬದಲಾವಣೆ ಮಾಡಿಕೊಳ್ಳಿ
ನೀವು ಇಡೀದಿನ ಸ್ಕ್ರೀನ್ ನೋಡಿ ಕಣ್ಣಿನ ಸಾಮರ್ಥ್ಯ ಕಳೆದುಕೊಂಡಿದ್ದೀರಾ? ಹಾಗಾದ್ರೆ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳು ಆಗಬೇಕಿದೆ ಎಂದರ್ಥ. ಈ ಬದಲಾವಣೆಗಳನ್ನು ಮಾಡಿಕೊಂಡರೆ ಕಣ್ಣಿನ ದೃಷ್ಟಿ ಶಾರ್ಪ್ ಆಗುತ್ತದೆ.
ಈ ಆಧುನಿಕ ಯುಗದಲ್ಲಿ ಎಲ್ಲರೂ ಕಂಪ್ಯೂಟರ್ ನೋಡುವವರೇ ಆಗಿದ್ದಾರೆ. ಡಿಜಿಟಲ್ ಯುಗದಲ್ಲಿ ಹಲವರ ಸ್ಕ್ರೀನ್ ಟೈಮಿಂಗ್ ಜಾಸ್ತಿಯಾಗಿದೆ. ಹೀಗಾಗಿ ಕಣ್ಣು ನೋವು ಒಂದು ಸಾಮಾನ್ಯ ಸಮಸ್ಯೆಯಾಗಿ ಎಲ್ಲರನ್ನು ಕಾಡುತ್ತಿದೆ. ಆದರೆ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಹೀಗೆ ಗಮನಕೊಟ್ಟಲ್ಲಿ ಮಾತ್ರ ಹೆಚ್ಚಿನ ದಿನ ನೀವು ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ತೊಂದರೆ ಆಗುತ್ತದೆ. ಹಾಗಾಗಿ ನೀವು ನಿಮ್ಮ ಕಣ್ಣಿನ ದೃಷ್ಟಿ ಸುಧಾರಿಸಿಕೊಳ್ಳಲು ಈ 5 ವಿಧಾನವನ್ನು ಪಾಲಿಸಿ. ನಾವು ನಿಮಗಿಲ್ಲಿ ಒಂದಷ್ಟು ತಿಳಿಸಿದ ವಿಧಾನವನ್ನೇ ಪಾಲಿಸಿ.
ಕಣ್ಣಿನ ವ್ಯಾಯಾಮ
ಕಣ್ಣಿನ ವ್ಯಾಯಾಮ ಮಾಡಿದರೆ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಕಣ್ಣಿಗೆ ತುಂಬಾ ಆಯಾಸವಾದಾಗ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ದುರ್ಬಲ ಕಣ್ಣಿನ ಸ್ನಾಯುಗಳಿಗೆ ಶಕ್ತಿಯನ್ನು ನೀಡಬೇಕು. ಈ ರೀತಿ ವ್ಯಾಯಾಮ ಮಾಡಿದರೆ ನಿಮ್ಮ ಕಣ್ಣಿನ ದೃಷ್ಟಿ ಶಾರ್ಪ್‌ಆಗುವಂತೆ ಮಾಡಬಹುದು. ವ್ಯಾಯಾಮ ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ. ವ್ಯಾಯಾಮ ಮಾಡಿದಾಗ ಮಾತ್ರ ಕಣ್ಣಿಗೆ ನಿರಾಳವಾಗುತ್ತದೆ. ದೂರದ ವಸ್ತುಗಳನ್ನು ನೋಡುವುದು, ಕಣ್ಣನ್ನು ಕಿರಿದಾಗಿಸಿ ನೋಡುವುದು ಮತ್ತು ಪ್ರದಕ್ಷಿಣಕಾರವಾಗಿ ಕಣ್ಣನ್ನು ತಿರುಗಿಸುವುದು. 8ರ ಅಂಕಿಯಲ್ಲಿ ಕಣ್ಣಿನ ನೋಟ ಇವೆಲ್ಲವೂ ಸಹ ಕಣ್ಣಿನಲ್ಲಿ ಮಾಡಬಹುದಾದ ವ್ಯಾಯಾಮವಾಗಿದೆ.
ಆಹಾರದಲ್ಲಿ ಬದಲಾವಣೆ
ದೈನಂದಿನ ಜೀವನ ಕ್ರಮದಲ್ಲಿ ಮುಖ್ಯವಾದ ಬದಲಾವಣೆ ಎಂದರೆ ಕಣ್ಣುಗಳಿಗೂ ಆಮ್ಲಜನಕ ಸಿಗುವಂತೆ ಮಾಡಬೇಕು. ಹೆಚ್ಚಿಗೆ ನೀರು ಕುಡಿಯಬೇಕು. ಉತ್ತಮ ಕಣ್ಣಿನ ಆರೋಗ್ಯಕ್ಕಾಗಿ ರಕ್ತದ ಒತ್ತಡವನ್ನು ನಿರ್ವಹಿಸುವ ವ್ಯಾಯಾಮ ಮಾಡಬೇಕು. ಆಹಾರದಲ್ಲಿ ಬದಲಾವಣೆ ಮಾಡಬೇಕು. ಇವುಗಳೆಲ್ಲವೂ ನಿಮ್ಮ ದೃಷ್ಟಿಯನ್ನು ಕಾಪಾಡಲು ಸಹಾಯ ಮಾಡುತ್ತದೆ. ತರಕಾರಿ, ಹಸಿರು ಸೊಪ್ಪು, ಕ್ಯಾರೇಟ್, ವಿಟಮಿನ್ ಸಿ ಇರುವ ಹಣ್ಣುಗಳನ್ನು ತಿನ್ನಿ.
ಸ್ಕ್ರೀನ್ ಟೈಮ್ ಕಡಿಮೆ ಮಾಡಿ
ನೀವು ಕೆಲಸ ಮಾಡುತ್ತಿದ್ದರೆ ಯಾವಾಗಲೂ ಸ್ಕ್ರೀನ್ ನೋಡುತ್ತಾ ಇರಬೇಡಿ. ಅದರ ಬದಲಾಗಿ ಬೇರೆ ಬೇರೆ ಕಡೆ ಆಗಾಗ ನೋಡಿ. ಒಂದು ಸ್ವಲ್ಪ ಸಮಯ ಹೊರಗಡೆ ಎದ್ದು ಹೋಗಿ ಬನ್ನಿ. ಹಸಿರು ಬಣ್ಣವನ್ನು ನೋಡಿದಷ್ಟು ನಿಮ್ಮ ಕಣ್ಣಿಗೆ ಶಾಂತಿ ಸಿಗುತ್ತದೆ. ಆದಷ್ಟು ಹಸಿರು ಬಣ್ಣವನ್ನು ನಿಮ್ಮ ಅಕ್ಕಪಕ್ಕದ ಗೋಡೆಗಳಿಗೆ ಇರುವಂತ ನೋಡಿಕೊಳ್ಳಿ. ಅಥವಾ ಇಂಡೋರ್ ಪ್ಲಾಂಟ್ ಬೆಳೆಸಿಕೊಳ್ಳಿ.
ಬ್ರೈಟ್ನೆಸ್ ಸೆಟ್ ಮಾಡಿ
ಯಾವಾಗಲೂ ಬ್ರೈಟ್ನೆಸ್ ಲೆವೆಲ್ ತುಂಬಾ ಕಡಿಮೆ ಮಾಡಿಟ್ಟುಕೊಂಡು ನೋಡುವುದು ಒಳ್ಳೆಯದಲ್ಲ. ಬ್ರೈಟ್ನೆಸ್ ಲೆವೆಲ್ ನಿಮ್ಮ ಕಣ್ಣಿಗೆ ಅತಿ ಹೆಚ್ಚಿದ್ದರು ಒಳ್ಳೆಯದಲ್ಲ. ಮಧ್ಯಮ ಬ್ರೈಟ್ನೆಸ್ ಇಟ್ಟುಕೊಂಡು ಕಂಪ್ಯೂಟರ್ ಆಪರೇಟ್ ಮಾಡಿ. ಇಡೀ ದಿನ ಮೊಬೈಲ್ ಅಥವಾ ಟಿವಿ ಕಂಪ್ಯೂಟರ್ ಗಳನ್ನು ನೋಡಬೇಡಿ. ಹೆಚ್ಚು ಹೊತ್ತು ನಿದ್ದೆಗೆಡಬೇಡಿ. ಹೆಚ್ಚು ಹೊತ್ತು ನಿದ್ದೆಗೆಟ್ಟರೂ ಕೂಡ ನಿಮ್ಮ ಕಣ್ಣಿಗೆ ಹಾಗೂ ಕಣ್ಣಿನ ಸ್ನಾಯುಗಳಿಗೆ ತುಂಬಾ ತೊಂದರೆ ಉಂಟಾಗುತ್ತದೆ.
ವಿಭಾಗ