Makeup Hack: ದಪ್ಪಗಿದ್ದರೂ ಮುಖದ ಶೇಪ್ ಸಣ್ಣಗೆ ಕಾಣಬೇಕು ಎಂದುಕೊಳ್ಳುವರಿಗೆ ಸಹಾಯ ಮಾಡುತ್ತೆ ಈ ಮೇಕಪ್; ಒಮ್ಮೆ ಪ್ರಯತ್ನಿಸಿ
Make Up: ಆಕರ್ಷಕವಾಗಿ ಕಾಣಬೇಕೆಂಬ ಆಸೆ ಬಹುತೇಕ ಮಹಿಳೆಯರಿಗೆ ಇದ್ದೇ ಇರುತ್ತದೆ. ಆದರೆ ಮುಖದಲ್ಲಿರುವ ಹೆಚ್ಚುವರಿ ಕೊಬ್ಬಿನಿಂದಾಗಿ ತಾನು ಚೆನ್ನಾಗಿ ಕಾಣುದಿಲ್ಲವಾ ಎಂಬ ಆತಂಕ ಕೂಡ ಮಹಿಳೆಯರಿಗೆ ಇರುತ್ತದೆ. ಆದರೆ ನೀವು ಈ ಮೇಕಪ್ ಉತ್ಪನ್ನಗಳನ್ನು ಬಳಸುವ ಮೂಲಕ ನಿಮ್ಮ ಮುಖವನ್ನು ಸಣ್ಣದಾಗಿ ಕಾಣುವಂತೆ ಮಾಡಲು ಸಾಧ್ಯವಿದೆ.
Make Up Tips: ತೆಳ್ಳಗೆ ಬೆಳ್ಳಗೆ ಆಕರ್ಷಕವಾಗಿ ಕಾಣಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಕೆಲವರು ಏನೂ ತಿಂದರೂ ದಪ್ಪವಾಗೋದಿಲ್ಲ. ಇನ್ನೂ ಕೆಲವರು ಜಿಮ್, ಡಯಟ್ ಎನ್ನುತ್ತಾ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬರುತ್ತಾರೆ. ಆದರೆ ಕೆಲವರ ಬಳಿ ಈ ಎರಡೂ ಸಾಧ್ಯವಿಲ್ಲ. ಇಂಥವರು ಎಲ್ಲರಂತೆ ತೆಳ್ಳಗೆ ಕಾಣಬೇಕು ಎಂದರೆ ಏನು ಮಾಡಬೇಕು ಎಂಬ ಯೋಚನೆ ಇರುತ್ತದೆ. ಇದಕ್ಕೆ ನಿಮಗೆ ಸರಿಯಾದ ಮೇಕಪ್ ಸಹಾಯ ಮಾಡುತ್ತದೆ.
ಮಹಿಳೆಯರು ಹೇಗಿದ್ದರೂ ಚಂದವೇ. ಆದರೆ ಕೆಲವು ಮಹಿಳೆಯರಿಗೆ ತಾವು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ. ಇಂಥವರು ಕೆಲವು ಮೇಕಪ್ ಪ್ರಾಡಕ್ಟ್‌ಗಳನ್ನು ಬಳಕೆ ಮಾಡುವ ಮೂಲಕ ಖಂಡಿತವಾಗಿಯೂ ನಿಮ್ಮ ಮುಖ ಸಪೂರವಾಗಿದೆ ಎನಿಸಿಕೊಳ್ಳಬಹುದು. ಮೇಕಪ್‌ನಿಂದ ನಿಮ್ಮ ಮುಖದಲ್ಲಿರುವ ಕೊಬ್ಬನ್ನು ಮರೆ ಮಾಚಲು ಹೇಗೆ ಸಾಧ್ಯ ಎಂದು ನೀವು ಯೋಚಿಸುತ್ತಿದ್ದರೆ ಇದಕ್ಕೆ ಮಾರ್ಗ ಇಲ್ಲಿದೆ ನೋಡಿ.
ಕಾಂಟೋರ್‌ಗಳ ಬಳಕೆ (contour): ಆನ್‌ಲೈನ್ ಮಾರುಕಟ್ಟೆಗಳಲ್ಲಿ ಅಷ್ಟೇ ಏಕೆ ವಿವಿಧ ಮೇಕಪ್ ಪ್ರಾಡಕ್ಟ್‌ಗಳು ದೊರೆಯುವ ಮಳಿಗೆಯಲ್ಲಿ ಕಾಂಟೋರ್‌ಗಳು ನಿಮಗೆ ಸುಲಭವಾಗಿ ಸಿಗುತ್ತದೆ. ಕಂದು ಬಣ್ಣದ ಈ ಮೇಕಪ್ ಪ್ರಾಡಕ್ಟ್ ಖರೀದಿಸುವಾಗ ಇದು ನಿಮ್ಮ ಚರ್ಮದ ಬಣ್ಣಕ್ಕೆ ಸರಿ ಹೊಂದುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇವುಗಳು ಗಾಢ ಬಣ್ಣದಲ್ಲಿ ಇರುತ್ತದೆ. ಎಲ್ಲೆಲ್ಲಿ ನಿಮಗೆ ಮುಖದಲ್ಲಿ ಹೆಚ್ಚಿನ ಫ್ಯಾಟ್ ಇದೆ ಎನಿಸುತ್ತದೆಯೋ ಅಲ್ಲೆಲ್ಲ ಇದನ್ನು ಹಚ್ಚಿ ಸರಿಯಾಗಿ ಬ್ಲೆಂಡ್ ಮಾಡಬೇಕು. ಉದಾಹರಣೆಗೆ ಕೆನ್ನೆಯ ಕೆಳಭಾಗ, ಗಲ್ಲದ ಕೆಳಗೆ ಇದನ್ನು ಹಚ್ಚಿ ನೀವು ಸರಿಯಾಗಿ ಬ್ಲೆಂಡ್ ಮಾಡಿದರೆ ಇದು ನಿಮ್ಮ ಮುಖಕ್ಕೆ ಸರಿಯಾದ ಆಕಾರ ನೀಡುತ್ತದೆ. ಹಣೆ ದೊಡ್ಡ ಎನಿಸುತ್ತಿದ್ದರೆ ಅಲ್ಲಿ ಕೂಡ ನೀವು ಕಾಂಟೋರ್ ಬಳಕೆ ಮಾಡಬಹುದು .
ಬ್ಲಶ್‌ಗಳು (Blush):ಕೆನ್ನೆಯನ್ನು ಕೆಂಪು ಕೆಂಪು ಮಾಡುವುದಷ್ಟೇ ಇದರ ಕೆಲಸ ಎಂದು ನೀವು ಎಂದುಕೊಂಡಿದ್ದರೆ ನಿಮ್ಮ ಭಾವನೆ ತಪ್ಪು, ನಿಮ್ಮ ಮುಖದ ಹೆಚ್ಚುವರಿ ಕೊಬ್ಬನ್ನು ಮರೆ ಮಾಚಲು ಅದರಲ್ಲೂ ವಿಶೇಷವಾಗಿ ಕೆನ್ನೆಯನ್ನು ಸಣ್ಣದಾಗಿ ಕಾಣುವಂತೆ ಮಾಡಲು ಬ್ಲಶ್ ಕೂಡ ಸಹಕಾರಿ. ಸರಿಯಾದ ರೀತಿಯಲ್ಲಿ ಬ್ಲಶ್ ಬಳಸುವ ಮೂಲಕ ನಿಮ್ಮ ಮುಖ ಸಣ್ಣದಾಗಿ ಕಾಣುವಂತೆ ಮಾಡಬಹುದಾಗಿದೆ.
ಕಣ್ಣಿನ ಹುಬ್ಬು : ಮುಖ ಸಣ್ಣದಾಗಿ ಕಾಣುವಂತೆ ಮಾಡುವುದಕ್ಕೂ ಕಣ್ಣಿನ ಹುಬ್ಬಿಗೂ ಏನು ಸಂಬಂಧ ಎಂಬ ಯೋಚನೆ ಬರುವುದು ಸಹಜ. ಆದರೆ ನಿಮ್ಮ ಕೂದಲಿನ ಬಣ್ಣಕ್ಕೆ ತಕ್ಕದಾದ ಬಣ್ಣದಿಂದ ನಿಮ್ಮ ಹುಬ್ಬಿಗೆ ಬಣ್ಣ ಹಚ್ಚಿಕೊಂಡರೆ ನಿಮ್ಮ ಮುಖದಲ್ಲಿ ಹುಬ್ಬು ಹೆಚ್ಚು ಹೈಲೈಟ್ ಆಗಿ ಕಾಣಿಸಿಕೊಳ್ಳುತ್ತದೆ. ನೋಡುಗರ ದೃಷ್ಟಿ ನೇರವಾಗಿ ನಿಮ್ಮ ಹುಬ್ಬಿನ ಮೇಲೆ ಹೋಗುವುದರಿಂದ ಮುಖ ಸಣ್ಣದಾಗಿ ಕಾಣಲಿದೆ.
ಕೇಶ ವಿನ್ಯಾಸ : ಕೇವಲ ಮೇಕಪ್ ಮಾತ್ರವಲ್ಲ ನಿಮ್ಮ ಕೇಶ ವಿನ್ಯಾಸದ ಮೂಲಕವೂ ನೀವು ನಿಮ್ಮ ಮುಖ ಸಪೂರ ಕಾಣುವಂತೆ ಸಾಧ್ಯವಿದೆ. ತುಂಬಾ ಬಿಗಿಯಾಗಿ ಬಾಚುವುದರಿಂದ ಮುಖ ದಪ್ಪದಾಗಿ ಕಾಣಬಹುದು. ಕೇಶ ವಿನ್ಯಾಸ ಮಾಡುವಾಗ ಹಣೆ ಭಾಗವನ್ನು ಸ್ವಲ್ಪ ಮುಚ್ಚಬೇಕು. ಹಾಗೂ ಕೂದಲನ್ನು ಹಾಗೆಯೇ ಬಿಟ್ಟರೆ ಮುಖ ಸ್ವಲ್ಪ ಕಿರಿದಾಗಿ ಕಾಣಲಿದೆ. ದಪ್ಪ ಮುಖ ಹೊಂದಿರುವವರಿಗೆ ತುರುಬು, ಗಟ್ಟಿಯಾಗಿ ಹೆಣೆದ ಜಡೆ ಇವೆಲ್ಲ ಅಷ್ಟೆಲ್ಲ ಸರಿಯಾಗಿ ಒಪ್ಪುವುದಿಲ್ಲ.
ವಿಭಾಗ