Natikoli Sambar Recipe: ಮಂಡ್ಯ ಸ್ಟೈಲ್ ನಾಟಿ ಕೋಳಿ ಸಾಂಬಾರ್ ರೆಸಿಪಿ..ಈ ವಾರ ಮಿಸ್ ಆಯ್ತಾ, ನೆಕ್ಸ್ಟ್ ಸಂಡೇ ತಪ್ಪದೆ ಮಾಡಿ ತಿನ್ನಿ
ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗಗಳಲ್ಲಿ ಮುದ್ದೆ ನಾಟಿ ಕೋಳಿ ಸಾಂಬಾರ್ ಅಡುಗೆಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ಹುಚ್ಚೆಳ್ಳು ಬಳಸಿ ಮಾಡುವ ಸಾಂಬಾರ್ ಜೊತೆ ಮುದ್ದೆ ತಿನ್ನುತ್ತಿದ್ದರೆ, ಪ್ರತಿದಿನ ನೀವು ತಿನ್ನುವ ಊಟಕ್ಕಿಂತ ಎರಡು ಪಟ್ಟು ಹೆಚ್ಚು ತಿನ್ನೋದ್ರಲ್ಲಿ ಅನುಮಾನವೇ ಇಲ್ಲ.
ರಾಗಿ ಮುದ್ದೆ, ನಾಟಿ ಕೋಳಿ ಸಾರು ಎಂದರೆ ನಾನ್‌ವೆಜ್ ಪ್ರಿಯರಿಗೆ ಪ್ರಾಣ. ಎಷ್ಟೋ ಕಡೆಗಳಲ್ಲಿ ಮುದ್ದೆ ಕೋಳಿಸಾರು ತಿನ್ನುವ ಸ್ಪರ್ಧೆ ಕೂಡಾ ಆಯೋಜಿಸುತ್ತಾರೆ. ಕೆಲವರು ಕೋಳಿ ಸಾಂಬಾರ್ ಜೊತೆ 5-6ಮುದ್ದೆ ತಿಂದು ಬಹುಮಾನ ಗಳಿಸಿರುವುದನ್ನೂ ಕೇಳಿರುತ್ತೀರಿ. ಮುದ್ದೆ ಹಾಗೂ ಕೋಳಿ ಸಾಂಬಾರ್ ಎಷ್ಟು ಫೇಮಸ್ ಅನ್ನೋದು ಇದರಿಂದ್ಲೇ ತಿಳಿಯುತ್ತೆ.
ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗಗಳಲ್ಲಿ ಮುದ್ದೆ ನಾಟಿ ಕೋಳಿ ಸಾಂಬಾರ್ ಅಡುಗೆಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ಹುಚ್ಚೆಳ್ಳು ಬಳಸಿ ಮಾಡುವ ಸಾಂಬಾರ್ ಜೊತೆ ಮುದ್ದೆ ತಿನ್ನುತ್ತಿದ್ದರೆ. ಪ್ರತಿದಿನ ನೀವು ತಿನ್ನುವ ಊಟಕ್ಕಿಂತ ಎರಡು ಪಟ್ಟು ಹೆಚ್ಚು ತಿನ್ನೋದ್ರಲ್ಲಿ ಅನುಮಾನವೇ ಇಲ್ಲ. ಮಂಡ್ಯ ಶೈಲಿಯ ಮುದ್ದೆ ಹಾಗೂ ನಾಟಿ ಕೋಳಿ ಸಾಂಬಾರ್ ಮಾಡಲು ಏನೆಲ್ಲಾ ಸಾಮಗ್ರಿಗಳು ಬೇಕು, ಅದನ್ನು ಮಾಡುವ ವಿಧಾನ ಹೇಗೆ ಅನ್ನೋದನ್ನು ಇಲ್ಲಿ ತಿಳಿಸಲಾಗಿದೆ.
ನಾಟಿ ಕೋಳಿ ಸಾಂಬಾರ್‌ಗೆ ಬೇಕಾಗುವ ಸಾಮಗ್ರಿಗಳು
ನಾಟಿ ಕೋಳಿ ಚಿಕನ್ - 1 ಕಿಲೋ
ತೆಂಗಿನಕಾಯಿ - 2 ಕಪ್
ಎಣ್ಣೆ - 1 ಕಪ್
ಈರುಳ್ಳಿ - 5
ಟೊಮ್ಯಾಟೋ - 2 (ಚಿಕ್ಕದು)
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೇಬಲ್ ಸ್ಪೂನ್
ಅರಿಶಿನ - 1/2 ಟೀ ಸ್ಪೂನ್
ಕರಿಮೆಣಸಿನ ಪುಡಿ - 1 ಟೀ ಸ್ಪೂನ್
ಜೀರ್ಗೆ ಪುಡಿ - 1 ಟೀ ಸ್ಪೂನ್
ಖಾರದ ಪುಡಿ - 5 ಟೇಬಲ್ ಸ್ಪೂನ್
ಹುಚ್ಚೆಳ್ಳು/ಗುರ್ರೆಳ್ಳು - 1 ಕಪ್
ಗಸಗಸೆ - 1 ಟೇಬಲ್ ಸ್ಪೂನ್
ಹುರಿಗಡಲೆ - 1/2 ಕಪ್
ಕೊತ್ತಂಬರಿ ಸೊಪ್ಪು - 1 ಕಟ್ಟು
ಉಪ್ಪು - ರುಚಿಗೆ ತಕ್ಕಷ್ಟು
ನಾಟಿ ಕೋಳಿ ಸಾಂಬಾರ್ ತಯಾರಿಸುವ ವಿಧಾನ
ಮೊದಲು 3-4 ಬಾರಿ ಚಿಕನ್ ತೊಳೆದು ನೀರು ಸೋರಲು ಬಿಡಿ
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಣ್ಣಗೆ ಕತ್ತರಿಸಿಕೊಂಡ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಸೇರಿಸಿ ಹುರಿಯಿರಿ.
ಕರಿಮೆಣಸಿನ ಪುಡಿ, ಜೀರ್ಗೆ ಪುಡಿ ಸೇರಿಸಿ 30 ಸೆಕೆಂಡ್ ಫ್ರೈ ಮಾಡಿ 1 ಕಪ್ ನೀರು ಸೇರಿಸಿ ಕುದಿಯಲು ಬಿಡಿ
ಮಿಶ್ರಣ ಎಣ್ಣೆ ಬಿಟ್ಟ ನಂತರ ಚಿಕನ್, ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ 5-10 ನಿಮಿಷ ಹುರಿಯಿರಿ
ಸಾಂಬಾರ್ ಪುಡಿ ( ಅಚ್ಚಖಾರ ಪುಡಿ ಹಾಗೂ ಧನಿಯಾ ಪುಡಿ ಮಿಶ್ರಣ) ಸೇರಿಸಿ ಒಮ್ಮೆ ತಿರುವಿ, 1 ಲೀಟರ್‌ನಷ್ಟು ನೀರು ಸೇರಿಸಿ ಚಿಕನ್ ಪಾತ್ರೆಗೆ ಮುಚ್ಚಳ ಮುಚ್ಚಿ 20 ನಿಮಿಷ ಕುಕ್ ಆಗಲು ಬಿಡಿ
ಹುಚ್ಚೆಳ್ಳನ್ನು ಒಂದೆರಡು ನಿಮಿಷ ಹುರಿದು ಅದನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ,
ನಂತರ ಅದನ್ನು ಶೋಧಿಸಿ, ಆ ನೀರನ್ನು ಚಿಕನ್ ಮಿಶ್ರಣದೊಂದಿಗೆ ಸೇರಿಸಿ.
ಗಸಗಸೆ, ಹುರಿಕಡಲೆ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ, ಟೊಮ್ಯಾಟೋಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ
ಚಿಕನ್‌ಗೆ ಕಾಯಿ ಮಿಶ್ರಣ ಹಾಗೂ ಮತ್ತಷ್ಟು ಉಪ್ಪು ಸೇರಿಸಿ( ಮೊದಲೇ ಉಪ್ಪು ಸೇರಿಸಿರುವುದರಿಂದ ರುಚಿಗೆ ತಕ್ಕಷ್ಟು ಮತ್ತೆ ಉಪ್ಪು ಸೇರಿಸಿ) ಅವಶ್ಯಕತೆ ಇದ್ದರೆ ಮತ್ತಷ್ಟು ನೀರು ಸೇರಿಸಿ ಮತ್ತೆ 10-15 ನಿಮಿಷ ಕುದಿಸಿ. ಅಥವಾ ಕುಕ್ಕರ್‌ನಲ್ಲಿ 3-4 ಸೀಟಿ ಕೂಗಿಸಿ.
ಮುಚ್ಚಳ ತೆಗೆದು ಒಂದೆೆರಡು ಸ್ಪೂನ್ ತುಪ್ಪ ಸೇರಿಸಿ.
ಮುದ್ದೆ, ಚಪಾತಿ, ರೊಟ್ಟಿ, ಅನ್ನ ಯಾವುದರೊಂದಿಗಾದರೂ ನಾಟಿ ಕೋಳಿ ಸಾರನ್ನು ಎಂಜಾಯ್ ಮಾಡಿದರೆ ಈ ನಾಲಿಗೆ ಎಷ್ಟು ಪುಣ್ಯ ಮಾಡಿತ್ತೋ ಅಂತ ನೀವು ಅಂದುಕೊಳ್ಳೋದು ನಿಜ.
ಗಮನಿಸಿ: ಕೆಲವೆಡೆ ಚಿಕನ್ ಸಾಂಬಾರ್‌ಗೆ ಟೊಮ್ಯಾಟೋ ಬಳಸುವುದಿಲ್ಲ. ಅದು ನಿಮ್ಮ ಆಯ್ಕೆಗೆ ಬಿಟ್ಟದ್ದು.
ಖಾರದ ಪುಡಿ ನಿಮ್ಮ ಟೇಸ್ಟ್‌ಗೆ ತಕ್ಕಂತೆ ಬಳಸಿ, ಹೆಚ್ಚು ಖಾರ ಬೇಕೆಂದರೆ ಒಂದೆರಡು ಸ್ಪೂನ್ ಹೆಚ್ಚು, ಕಡಿಮೆ ಬೇಕೆಂದರೆ ಕಡಿಮೆ ಬಳಸಿ.
ಸಾಂಬಾರ್ ಅತಿ ಗಟ್ಟಿಯಾಗಿ, ಅತಿ ನೀರಿನಂತೆ ಮಾಡಬೇಡಿ, ಅವಶ್ಯಕತೆಗೆ ತಕ್ಕಂತೆ ನೀರು ಸೇರಿಸಿ.
ವಿಭಾಗ