ಕನ್ನಡ ಸುದ್ದಿ  /  Lifestyle  /  Mango Recipe Summer Season Mango Poori Juice Fruit Salad Children Special Best Mango Recipes In Kannada Rst

Mango Recipe: ಬಾಯಲ್ಲಿ ನೀರೂರಿಸುವ ಘಮ ಘಮ ಮಾವಿನಹಣ್ಣಿನ ಪೂರಿ; ನೀವೂ ಮನೆಯಲ್ಲಿ ಟ್ರೈ ಮಾಡಿ, ರುಚಿ ಸವಿಯಿರಿ

Mango Poori Recipe: ಹಣ್ಣುಗಳ ರಾಜ ಮಾವಿನಹಣ್ಣಿನಿಂದ ಜ್ಯೂಸ್‌, ಸೀಕರಣೆ, ಪ್ರೂಟ್‌ ಸಲಾಡ್‌ ತಯಾರಿಸಿ ತಿಂದಿದ್ದೇವೆ. ಆದರೆ ಮಾವಿನ ಹಣ್ಣಿನ ಪೂರಿ ತಿಂದಿದ್ದೀರಾ, ರುಚಿಯಾಗಿ ಘಮ ಘಮಿಸುವ ಪೂರಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ. ಇದು ಮಕ್ಕಳಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಮಾವಿನ ಹಣ್ಣಿನ ಪೂರಿ
ಮಾವಿನ ಹಣ್ಣಿನ ಪೂರಿ

ಈಗ ಮಾವಿನ ಹಣ್ಣಿನ ಸೀಸನ್ (Mango Season).‌ ಮಾವಿನ ಬೆಲೆಯೂ ಕಡಿಮೆಯಾಗುತ್ತಿದೆ. ಇನ್ನು ಸ್ವಲ್ಪ ದಿನ ಕಳೆದರೆ ಹಣ್ಣು ಕಡಿಮೆಯಾಗುತ್ತದೆ. ಈಗಲೇ ರುಚಿ ರುಚಿಯಾದ ವೈವಿಧ್ಯಮಯ ತಿಂಡಿ-ತಿನಿಸುಗಳನ್ನು ಮಾಡಿಕೊಂಡು ಸವಿಯಿರಿ.

ಮಾವು ಎಲ್ಲರಿಗೂ ಅಚ್ಚುಮೆಚ್ಚಿನ ಹಣ್ಣು. ಇದರಿಂದ ತಯಾರಿಸಿದ ಯಾವುದೇ ತಿನಿಸದರೂ ಸರಿಯೇ ಯಾರು ಬೇಡ ಅನ್ನುವುದಿಲ್ಲ. ಜ್ಯೂಸ್‌, ಸೀಕರಣೆ, ಫ್ರೂಟ್‌ ಸಲಾಡ್‌, ಸಿಹಿ ತಿಂಡಿಗಳು ಎಲ್ಲವನ್ನೂ ಸವಿದಿರುವ ನೀವು ಇದನ್ನು ಒಮ್ಮೆ ಟ್ರೈ ಮಾಡಿ.

ಈ ವಿಶೇಷ ತಿನಿಸು ಮಕ್ಕಳಿಂದ ಹಿರಿಯರ ತನಕ ಇಷ್ಟವಾಗದೇ ಇರದು. ಅದುವೇ ಮಾವಿನ ಹಣ್ಣಿನ ಪೂರಿ(Mango Poori). ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುವುದು ಖಂಡಿತ.

ಬೇಕಾಗುವ ಸಾಮಗ್ರಿಗಳು: ಸಣ್ಣದಾಗಿ ಕತ್ತರಿಸಿಕೊಂಡ ಮಾವಿನ ಹಣ್ಣು 1 ಅಥವಾ 2 ಮಧ್ಯಮ ಗಾತ್ರದ್ದು ಇರಲಿ. ನಿಮ್ಮ ಮನೆಯವರಿಗೆ ಬೇಕಾದಷ್ಟು ಅಳತೆಗೆ ಗೋಧಿ ಹಿಟ್ಟು, ಸಕ್ಕರೆ, ಏಲಕ್ಕಿ ಪುಡಿ, ಉಪ್ಪು ಸ್ವಲ್ಪ, ಕರಿಯಲು ಎಣ್ಣೆ.

ಮಾಡುವ ವಿಧಾನ : ಮೊದಲಿಗೆ ಸಕ್ಕರೆಯನ್ನು ಪುಡಿ ಮಾಡಿಕೊಳ್ಳಬೇಕು. ಅದಕ್ಕೆ, ಚಿಕ್ಕದಾಗಿ ಕತ್ತರಿಸಿದ ಮಾವಿನ ಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಅಗಲವಾದ ಪಾತ್ರೆಯಲ್ಲಿ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ರುಬ್ಬಿದ ಹಣ್ಣಿನ ಮಿಶ್ರಣ, ಏಲಕ್ಕಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಪೂರಿ ಹಿಟ್ಟನ್ನು ಕಲಿಸಿಕೊಳ್ಳಿ. ಸ್ವಲ್ಪ ಹೊತ್ತು ಹಿಟ್ಟನ್ನು ನೆನೆಯಲು ಬಿಡಬೇಕು. ಬಳಿಕ, ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿಕೊಳ್ಳಿ. ಈ ಉಂಡೆಯನ್ನು ಪೂರಿಯ ಹಾಗೆಯೇ ಲಟ್ಟಿಸಿಕೊಂಡು ಬಿಸಿಯಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಮಾವಿನ ಹಣ್ಣಿನ ರಸದೊಂದಿಗೆ ಸವಿಯಬಹುದು. ಈ ಅದ್ಭುತ ರುಚಿಯ ಪೂರಿಯನ್ನು ಮಕ್ಕಳು ಇಷ್ಟಪಟ್ಟು ತಿನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ರೆಸಿಪಿ: ಅಕ್ಷರ ಕಿರಣ್‌

ಈ ರೆಸಿಪಿಗಳನ್ನೂ ಓದಿ, ಮಾಡಿ ಸವಿಯಿರಿ

Ennegayi Gojju: ವಿಭಿನ್ನ ರೀತಿಯ ರುಚಿಕರ ಎಣ್ಣೆಗಾಯಿ ಗೊಜ್ಜು, ಒಮ್ಮೆ ಈ ಹೊಸ ರೆಸಿಪಿ ತಯಾರಿಸಿ ನಿಮ್ಮ ಮನೆಯವರನ್ನು ಇಂಪ್ರೆಸ್‌ ಮಾಡಿ

ದೋಸೆ, ಚಪಾತಿ, ರೊಟ್ಟಿ ಮಾಡಿದಾಗ ಅದರ ಜೊತೆ ನೆಂಚಿಕೊಳ್ಳಲು ಏನು ಮಾಡೋದು ಅನ್ನೋದೆ ಗೊಂದಲ. ಪ್ರತಿದಿನ ಚಟ್ನಿ ತಿಂದರೆ ನಾಲಿಗೆಗೆ ಸಾಕು ಸಾಕಾಗಿರುತ್ತದೆ. ಆಗ್ಗಾಗ್ಗೆ ಹೊಸತನ್ನು ಟ್ರೈ ಮಾಡಿದರೆ ಹೊಸ ರುಚಿ ಟೇಸ್ಟ್‌ ಮಾಡಿದಂತೆ ಆಗುತ್ತದೆ, ಜೊತೆಗೆ ನಿಮ್ಮ ಮನೆಯವರನ್ನು ಕೂಡಾ ಇಂಪ್ರೆಸ್‌ ಮಾಡಬಹುದು.

ನೀವೆಲ್ಲಾ ಎಣ್ಣೆಗಾಯಿ ಗೊಜ್ಜು ಟೇಸ್ಟ್‌ ಮಾಡಿದ್ದೀರ. ಆದರೆ ಇಂದೊಥರಾ ಹೊಸ ಶೈಲಿಯ ಎಣ್ಣೆಗಾಯಿ ಗೊಜ್ಜು. ನೀವು ಇದನ್ನು ದೋಸೆ, ಚಪಾತಿ ರೊಟ್ಟಿಗಾದರೂ ತಿನ್ನಬಹುದು, ಅನ್ನಕ್ಕಾದರೂ ಮಿಕ್ಸ್‌ ಮಾಡಿಕೊಳ್ಳಬಹುದು. ತಯಾರಿಸುವುದು ಕೂಡಾ ಸುಲಭ. ಎಣ್ಣೆಗಾಯಿ ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ಅನ್ನೋದನ್ನ ಚೈತ್ರಾಸ್‌ ಅಭಿರುಚಿ ಯೂಟ್ಯೂಬ್‌ ಚಾನೆಲ್‌ನ ಚೈತ್ರ ಹೇಳಿಕೊಡುತ್ತಿದ್ದಾರೆ.

ವಿಭಾಗ