ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್; 39,827 ರೂ ಗಳವರೆಗೆ ಕೊಡುಗೆಗಳ ಪ್ರಯೋಜನ
ಅಹಮದಾಬಾದ್ ಮೂಲದ ನೂತನ ಎಲೆಕ್ಟ್ರಿಕ್ ಮೋಟಾರ್‌ಬೈಕ್ ಕಂಪನಿ ಮ್ಯಾಟರ್ ಮೋಟರ್ ವರ್ಕ್ಸ್ ಬಿಡುಗಡೆ ಮಾಡಿರುವ ಮ್ಯಾಟರ್ ಏರಾ 1.88 ಲಕ್ಷ ರೂ. ಎಕ್ಸ್ ಶೋರೂಂ ದರ ಹೊಂದಿದ್ದು, ಪ್ರಿ ಬುಕಿಂಗ್ ಆರಂಭವಾಗಿದೆ. ಇ ಕಾಮರ್ಸ್ ತಾಣದಲ್ಲೂ ಬೈಕ್ ಲಭ್ಯವಿದೆ.

ಬೆಂಗಳೂರು: ಇತ್ತೀಚೆಗಷ್ಟೇ ದೇಶದ ರಸ್ತೆಗೆ ಲಗ್ಗೆ ಇರಿಸಿರುವ ಅಹಮದಾಬಾದ್ ಮೂಲದ ಮ್ಯಾಟರ್ ಗ್ರೂಪ್ ತನ್ನ ನೂತನ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಮ್ಯಾಟರ್ ಏರಾ, ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ. ಕಂಪನಿಯು ಗೇರ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಎರಾವನ್ನು ಫ್ಲಿಪ್‌ಕಾರ್ಟ್‌ನಲ್ಲಿ ₹1,83,308ಗೆ ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ಮೂಲಕ ಮ್ಯಾಟರ್ ಎರಾ ಗ್ರಾಹಕರಿಗೆ ದೊರೆಯಲಿದೆ. ಮಾರಾಟದ ಸಮಯದಲ್ಲಿ ಕಂಪನಿಯು ಗ್ರಾಹಕರಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತಿದೆ.
ಮ್ಯಾಟರ್ ಎರಾ ಎಲೆಕ್ಟ್ರಿಕ್ ಮೋಟಾರ್ ಬೈಕ್ ಹಲವಾರು ರಿಯಾಯಿತಿಗಳು ಮತ್ತು ಆಫರ್‌ಗಳೊಂದಿಗೆ 39,827 ರೂ.ಗಳವರೆಗೆ ಪ್ರಯೋಜನಗಳನ್ನು ಪಡೆಯುತ್ತಿದೆ. ಇದರಲ್ಲಿ ಫ್ಲಿಪ್‌ಕಾರ್ಟ್‌ನಿಂದ ಪ್ಲಾಟ್‌ಫಾರ್ಮ್ ನಿರ್ದಿಷ್ಟ ರಿಯಾಯಿತಿಗಳು ಮತ್ತು ಸೀಮಿತ ಅವಧಿಯ ಕ್ರೆಡಿಟ್ ಕಾರ್ಡ್ ಕೊಡುಗೆಗಳು ಸೇರಿವೆ. ಹೈ ಸ್ಪೆಕ್ ಮ್ಯಾಟರ್ ಎರಾ 5000 ಪ್ಲಸ್ ಎಲೆಕ್ಟ್ರಿಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 1,93,826 ಗಳಾಗಿದೆ.
ಮ್ಯಾಟರ್ ಏರಾ ಹೈಪರ್ ಶಿಫ್ಟ್ ಮ್ಯಾನುವಲ್ ಗೇರ್ ಬಾಕ್ಸ್, ಲಿಕ್ವಿಡ್-ಕೂಲ್ಡ್ ಪವರ್ ಟ್ರೇನ್ ಮತ್ತು ಕನೆಕ್ಟ್ ಟೆಕ್ನಾಲಜಿ ವಿಶೇಷತೆ ಹೊಂದಿದೆ. ಮ್ಯಾಟರ್ ಏರಾ 4-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದ್ದು, ಇಕೋ, ಸಿಟಿ, ಸ್ಪೋರ್ಟ್ ಎಂಬ 3 ರೈಡ್ ಮೋಡ್‌ಗಳನ್ನು ಬೆಂಬಲಿಸುತ್ತದೆ. 7 ಇಂಚು ಸ್ಮಾರ್ಟ್ ಟಚ್‌ಸ್ಕ್ರೀನ್ ಡ್ಯಾಶ್‌ಬೋರ್ಡ್ ಇದ್ದು ನ್ಯಾವಿಗೇಷನ್, ರೈಡ್ ಡೇಟಾ, ಕಾಲ್‌ಗಳು, ಮ್ಯೂಸಿಕ್ ಮತ್ತು ಓಟಿಎ ಅಪ್‌ಡೇಟ್‌ಗಳೊಂದಿಗೆ ಕನೆಕ್ಟೆಡ್ ಕಾಕ್‌ಪಿಟ್ ವ್ಯವಸ್ಥೆ ಹೊಂದಿದೆ.
ಆನ್‌ಬೋರ್ಡ್ ಚಾರ್ಜರ್ 5 ಆಂಪಿಯರ್ ಕೇಬಲ್‌ನೊಂದಿಗೆ ಎಲ್ಲೆಡೆ ಸುಲಭವಾಗಿ ಪ್ಲಗ್-ಆ್ಯಂಡ್-ಚಾರ್ಜ್ ಸೌಲಭ್ಯ ಇದರಲ್ಲಿದ್ದು, ಲಿಕ್ವಿಡ್-ಕೂಲ್ಡ್ ಪವರ್‌ಟ್ರೇನ್ ಇದರಲ್ಲಿದ್ದು, ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್‌ನಲ್ಲಿ ಸುಧಾರಿತ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆ ಇದೆ, ಹೊರಗಿನ ತಾಪಮಾನ ಮತ್ತು ಟ್ರಾಫಿಕ್ ದಟ್ಟಣೆಯಲ್ಲಿ ಉಂಟಾಗುವ ಬಿಸಿಯನ್ನು ಸಹಿಸಿಕೊಂಡು ಅತ್ಯುತ್ತಮ ದಕ್ಷತೆ ಒದಗಿಸುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
5kWh ಹೈ-ಎನರ್ಜಿ ಬ್ಯಾಟರಿ ಮತ್ತು IP67 ಸರ್ಟಿಫೈಡ್ ಬ್ಯಾಟರಿಯಿದ್ದು, ಒಂದು ಚಾರ್ಜ್‌ಗೆ 172 ಕಿ.ಮೀ.ವರೆಗಿನ ಐಡಿಸಿ ರೇಂಜ್ ನೀಡುತ್ತದೆ. ಮ್ಯಾಟರ್ ಮೊಬೈಲ್ ಆ್ಯಪ್ ಮೂಲಕ ರಿಯಲ್-ಟೈಮ್ ಬೈಕ್ ಡೇಟಾ, ರಿಮೋಟ್ ಲಾಕ್, ಜಿಯೋ-ಫೆನ್ಸಿಂಗ್, ಮತ್ತು ಸರ್ವಿಸ್ ಅಲರ್ಟ್ ಮಾಡುವ ಸಂಪೂರ್ಣ ಕನೆಕ್ಟಿವಿಟಿ ಆಯ್ಕೆ ಹೊಂದಿದೆ.