ವಿಶ್ವ ಅಸ್ತಮಾ ದಿನ, ತಂಬಾಕು ವಿರೋಧಿ ದಿನ, ಚಹಾ ದಿನ; ಮೇ ತಿಂಗಳಲ್ಲಿ ಬರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಶೇಷ ದಿನಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವ ಅಸ್ತಮಾ ದಿನ, ತಂಬಾಕು ವಿರೋಧಿ ದಿನ, ಚಹಾ ದಿನ; ಮೇ ತಿಂಗಳಲ್ಲಿ ಬರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಶೇಷ ದಿನಗಳಿವು

ವಿಶ್ವ ಅಸ್ತಮಾ ದಿನ, ತಂಬಾಕು ವಿರೋಧಿ ದಿನ, ಚಹಾ ದಿನ; ಮೇ ತಿಂಗಳಲ್ಲಿ ಬರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಶೇಷ ದಿನಗಳಿವು

ಮೇ ತಿಂಗಳು ಎಂದರೆ ಬೇಸಿಗೆ ರಜೆಯ ಕಾಲ. ಮಕ್ಕಳಿಗೆಲ್ಲಾ ಮೇ ತಿಂಗಳ ಮೇಲೆ ವಿಶೇಷ ಪ್ರೀತಿ. ಈ ತಿಂಗಳಲ್ಲಿ ಹಲವು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಶೇಷ ದಿನಗಳಿವೆ. 2025ರ ಮೇ ತಿಂಗಳಲ್ಲಿ ಏನೆಲ್ಲಾ ವಿಶೇಷ ದಿನಗಳಿವೆ ಗಮನಿಸಿ.

ಮೇ ತಿಂಗಳಲ್ಲಿ ಬರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಶೇಷ ದಿನಗಳಿವು
ಮೇ ತಿಂಗಳಲ್ಲಿ ಬರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಶೇಷ ದಿನಗಳಿವು

ಮೇ ತಿಂಗಳು ಎಂದರೆ ವಸಂತಕಾಲದ ಸಮಯ. ಈ ಸಮಯದಲ್ಲಿ ಬಿರು ಬೇಸಿಗೆಯ ಜೊತೆ ಆಗಾಗ ಮಳೆಯ ಆಗಮನವೂ ಆಗುತ್ತದೆ. ಮಾವು, ಹಲಸಿನ ಘಮ ಎಲ್ಲೆಲ್ಲೂ ಹರಡಿರುವ ಕಾಲವಿದು. ಮಕ್ಕಳು ಬೇಸಿಗೆ ರಜೆಯ ಸಂತಸ ಅನುಭವಿಸುವ ಸುಂದರ ತಿಂಗಳು. ಈ ತಿಂಗಳಲ್ಲಿ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಶೇಷ ದಿನಗಳಿವೆ. ಮೇ 1ರ ಕಾರ್ಮಿಕರ ದಿನಾಚರಣೆಯಿಂದ ಮೇ 30ರ ತಾಂಬೂಕು ವಿರೋಧಿ ದಿನಾಚರಣೆಯ ಮಧ್ಯೆ ಏನೆಲ್ಲಾ ವಿಶೇಷ ದಿನಗಳು ಬರಲಿವೆ ಎನ್ನುವ ಪಟ್ಟಿ ಇಲ್ಲಿದೆ ಗಮನಿಸಿ.

ಮೇ ತಿಂಗಳಲ್ಲಿ ಬರುವ ರಾಷ್ಟ್ರೀಯ– ಅಂತರರಾಷ್ಟ್ರೀಯ ವಿಶೇಷ ದಿನಗಳು

ಮೇ 1–ವಿಶ್ವ ಕಾರ್ಮಿಕ ದಿನ: ಈ ದಿನವನ್ನು ಮೇ ಡೇ ಎಂದು ಕೂಡ ಕರೆಯುತ್ತಾರೆ. ಪ್ರಪಂಚದಾದ್ಯಂತ ಈ ದಿನವನ್ನು ಕಾರ್ಮಿಕ ದಿನವನ್ನಾಗಿ ಆಚರಿಸಲಾಗುತ್ತದೆ. ಹಲವು ದೇಶಗಳಲ್ಲಿ ಇದು ರಜಾದಿನವಾಗಿದೆ. ಮೇ 1 ಮಹಾರಾಷ್ಟ್ರ ದಿನ, ಗುಜರಾತ್ ದಿನ ಕೂಡ ಹೌದು.

ಮೇ 2–ವಿಶ್ವ ಟ್ಯೂನ ಡೇ: ಇದು ಟ್ಯೂನ ಎಂಬ ಮೀನಿನ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ. ಈ ಮೀನು ಮನುಷ್ಯ ಆರೋಗ್ಯಕ್ಕೆ ಬಹಳ ಉತ್ತಮ. ಇದು ಒಮೆಗಾ 3 ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ.

ಮೇ 3– ಪತ್ರಿಕಾ ಸ್ವಾತಂತ್ರ್ಯ ದಿನ: ಪ್ರತಿಕಾ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಪಂಚದಾದ್ಯಂತ ಮೇ 3 ರಂದು ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.

ಮೇ 4– ಕಲ್ಲಿದ್ದಲು ಗಣಿಗಾರರ ದಿನ: ಕಲ್ಲಿದ್ದಲ್ಲು ಗಣಿಗಾರರಿಗೆ ಅಥವಾ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಕಲ್ಲಿದ್ದಲು ಗಣಿಗಾರಿಕೆಯು ಭಾರತದಲ್ಲಿನ ಒಂದು ಅತ್ಯಂತ ಅಪಾಯಕಾರಿ ವೃತ್ತಿಯಾಗಿದೆ.

ಮೇ 4 – ಅಂತರರಾಷ್ಟ್ರೀಯ ಅಗ್ನಿಶಾಮಕ ದಳ ದಿನ: 1999 ಜನವರಿ 4 ರಿಂದ ಅಂತರರಾಷ್ಟ್ರೀಯ ಅಗ್ನಿಶಾಮಕ ದಳ ದಿನವನ್ನು ಆಚರಿಸಲಾಗುತ್ತಿದೆ. ಸಮುದಾಯಗಳು ಮತ್ತು ಪರಿಸರವನ್ನು ಸುರಕ್ಷಿತವಾಗಿರಿಸಲು ಅಗ್ನಿಶಾಮಕ ದಳದವರು ಮಾಡುವ ತ್ಯಾಗಗಳನ್ನು ಗುರುತಿಸಲು ಮತ್ತು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಮೇ 4– ವಿಶ್ವ ನಗು ದಿನ: ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರವನ್ನು ವಿಶ್ವ ನಗು ದಿನ ಎಂದು ಆಚರಿಸಲಾಗುತ್ತದೆ. 1998ರಲ್ಲಿ ಮೊದಲ ಬಾರಿಗೆ ಭಾರತದ ಮುಂಬೈನಲ್ಲಿ ಈ ದಿನವನ್ನು ಆಚರಿಸಲಾಯಿತು.

ಮೇ 6– ನೋ ಡಯೆಟ್ ಡೇ

ಮೇ 6 – ವಿಶ್ವ ಅಸ್ತಮಾ ದಿನ: ಪ್ರತಿವರ್ಷ ಮೇ ತಿಂಗಳ ಮೊದಲ ಮಂಗಳವಾರವನ್ನು ಅಂತರರಾಷ್ಟ್ರೀಯ ಅಸ್ತಮಾ ದಿನ ಎಂದು ಆಚರಿಸಲಾಗುತ್ತದೆ. ಅಸ್ತಮಾ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಮೇ 7– ವಿಶ್ವ ಅಥ್ಲೆಟಿಕ್ ದಿನ: ಯುವ ಜನರಲ್ಲಿ ಕ್ರೀಡೆಗಳು ಹಾಗೂ ಅವುಗಳ ‍ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮೇ 7 ರಂದು ವಿಶ್ವ ಅಥ್ಲೆಟಿಕ್ ದಿನವನ್ನು ಆಚರಿಸಲಾಗುತ್ತದೆ.

ಮೇ 8– ವಿಶ್ವ ರೆಡ್ ಕ್ರಾಸ್ ದಿನ: ರೆಡ್ ಕ್ರಾಸ್ ಸಂಸ್ಥೆಯನ್ನು ಸಂಸ್ಥಾಪಕರ ಜನ್ಮದಿನದ ಅಂಗವಾಗಿ ಮೇ 8 ರಂದು ವಿಶ್ವ ರೆಡ್ ಕ್ರಾಸ್ ದಿನ ಆಚರಿಸಲಾಗುತ್ತದೆ. ಹೆನ್ರಿ ಡ್ಯೂನಾಂಟ್ ರೆಡ್‌ ಕ್ರಾಸ್ ಸಂಸ್ಥೆಯ ಸಂಸ್ಥಾಪಕ. ವಿಶ್ವದ ಮೊದಲ ನೊಬೆಲ್ ಪ್ರಶಸ್ತಿ ಪುರಸ್ಕತರು ಇವರು.

ಮೇ 8–ವಿಶ್ವ ಥಲಸ್ಸೆಮಿಯಾ ದಿನ: ಥಲಸ್ಸೆಮಿಯಾ ರೋಗಿಗಳು ಹಾಗೂ ಅವರನ್ನು ಆರೈಕೆ ಮಾಡುವ ಪೋಷಕರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿವರ್ಷ ಮೇ 8 ರಂದು ವಿಶ್ವ ಥಲಸ್ಸೆಮಿಯಾ ದಿನವನ್ನು ಆಚರಿಸಲಾಗುತ್ತದೆ.

ಮೇ 10– ವಿಶ್ವ ಲೂಪಸ್ ದಿನ: ಲೂಪಸ್ ಎನ್ನುವ ವಿಚಿತ್ರ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 10 ರಂದು ವಿಶ್ವ ಲೂಪಸ್ ದಿನವನ್ನು ಆಚರಿಸಲಾಗುತ್ತದೆ.

ಮೇ 11– ರಾಷ್ಟ್ರೀಯ ತಂತ್ರಜ್ಞಾನ ದಿನ: ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಪಾತ್ರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ.

ಮೇ 11 – ತಾಯಂದಿರ ದಿನ: ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರವನ್ನು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ.

ಮೇ 12– ಅಂತರರಾಷ್ಟ್ರೀಯ ದಾದಿಗಳ ದಿನ: ಪ್ರತಿವರ್ಷ ಮೇ 12 ರಂದು ಅಂತರರಾಷ್ಟ್ರೀಯ ದಾದಿಗಳ ದಿನ ದಿನವನ್ನಾಗಿ ಆಚರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಪ್ರಪಂಚದಾದ್ಯಂತ ಸಮಾಜಕ್ಕೆ ದಾದಿಯರು ನೀಡಿದ ಕೊಡುಗೆಯನ್ನು ಆಚರಿಸುತ್ತದೆ.

ಮೇ 12– ಬುದ್ಧ ಪೂರ್ಣಿಮಾ: ವೈಶಾಖ ಮಾಸದ ಹುಣ್ಣಿಮೆ ದಿನ ಗೌತಮ ಬುದ್ಧ ಕಪಿಲವಸ್ತುವಿನ ಬಳಿಯ ಲುಂಬಿನಿಯಲ್ಲಿ ಜನಿಸಿದನೆಂದು ಹೇಳಲಾಗುತ್ತದೆ. ಅವರನ್ನು ‘ಏಷ್ಯಾದ ಬೆಳಕು‘ ಎಂದೂ ಕರೆಯುತ್ತಾರೆ. ಈ ವರ್ಷ, ಬುದ್ಧ ಜಯಂತಿ ಅಥವಾ ಬುದ್ಧ ಪೂರ್ಣಿಮೆಯನ್ನು ಮೇ 12 ರಂದು ಆಚರಿಸಲಾಗುತ್ತದೆ.

ಮೇ 15– ಅಂತರರಾಷ್ಟ್ರೀಯ ಕುಟುಂಬಗಳ ದಿನ: ಪ್ರತಿವರ್ಷ ಮೇ 15 ರಂದು ಅಂತರರಾಷ್ಟ್ರೀಯ ಕುಟುಂಬಗಳ ದಿನ ಎಂದು ಆಚರಿಸಲಾಗುತ್ತದೆ. ಸಮಾಜದಲ್ಲಿ ಕುಟುಂಬ ಪಾತ್ರವನ್ನು ತಿಳಿಸಲು ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಮೇ 16– ರಾಷ್ಟ್ರೀಯ ಡೆಂಗ್ಯೂ ದಿನ: ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರತಿವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸುತ್ತದೆ.

ಮೇ 16– ಅಂತರರಾಷ್ಟ್ರೀಯ ಬೆಳಕಿನ ದಿನ: ಪ್ರತಿವರ್ಷ ಮೇ 16 ರಂದು ಅಂತರರಾಷ್ಟ್ರೀಯ ಬೆಳಕಿನ ದಿನವನ್ನು ಆಚರಿಸಲಾಗುತ್ತದೆ. ಈ ದಿನವು 1960 ರಲ್ಲಿ ಭೌತಶಾಸ್ತ್ರಜ್ಞ ಮತ್ತು ಎಂಜಿನಿಯರ್ ಥಿಯೋಡರ್ ಮೈಮನ್ ಅವರ ಮೊದಲ ಉತ್ಪಾದಕ ಲೇಸರ್ ಕಾರ್ಯಾಚರಣೆಯ ದಿನಾಂಕವನ್ನು ಗೌರವಿಸುತ್ತದೆ.

ಮೇ 17– ವಿಶ್ವ ದೂರಸಂಪರ್ಕ ದಿನ: ಪ್ರತಿವರ್ಷ ಮೇ 17 ರಂದು ವಿಶ್ವ ದೂರಸಂಪರ್ಕ ದಿನವನ್ನು ಆಚರಿಸಲಾಗುತ್ತದೆ. 1969 ರಿಂದ ಆ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಮೇ 17– ಅಧಿಕ ರಕ್ತದೊತ್ತಡ ದಿನ: ಪ್ರತಿ ವರ್ಷ ಮೇ 17 ರಂದು ವಿಶ್ವ ಅಧಿಕ ರಕ್ತದೊತ್ತಡ ಲೀಗ್ (WHL) ಅಧಿಕ ರಕ್ತದೊತ್ತಡ ದಿನವನ್ನು ಆಚರಿಸುತ್ತದೆ. ಅಧಿಕ ರಕ್ತದೊತ್ತಡದ ಬಗ್ಗೆ ಜಾಗೃತಿ ಮೂಡಿಸುವ ದಿನ ಇದಾಗಿದೆ.

ಮೇ 17 – ಸಶಸ್ತ್ರ ಪಡೆಗಳ ದಿನ: ಪ್ರತಿವರ್ಷ ಮೇ ತಿಂಗಳ ಮೂರನೇ ಶನಿವಾರವನ್ನು ಸಶಸ್ತ್ರ ಪಡೆಗಳ ದಿನ ಎಂದು ಆಚರಿಸಲಾಗುತ್ತದೆ.

ಮೇ 18– ವಿಶ್ವ ಏಡ್ಸ್ ಲಸಿಕೆ ದಿನ: ಎಚ್‌ಐವಿ ಏಡ್ಸ್ ಲಿಸಿಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮೇ 18 ರಂದು ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಗುತ್ತದೆ.

ಮೇ 18– ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ: ಸಮಾಜದಲ್ಲಿ ವಸ್ತು ಸಂಗ್ರಹಾಲಯಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಮೇ 18 ರಂದು ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಎಂದು ಆಚರಿಸಲಾಗುತ್ತದೆ.

ಮೇ 21– ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ: ಭಯೋತ್ಪಾದಕರಿಂದ ಉಂಟಾಗುವ ಹಿಂಸಾಚಾರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ದಿನದಂದು ನಿಧನರಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸ್ಮರಣಾರ್ಥ ಮೇ 21 ರಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.

ಮೇ 21– ಅಂತರರಾಷ್ಟ್ರೀಯ ಚಹಾ ದಿನ: ಚಹಾ ಉದ್ಯಮದ ಕೊಡುಗೆಯನ್ನು ಗುರುತಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಮೇ 22– ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ: ಜೀವವೈವಿಧ್ಯತೆಯ ಸಮಸ್ಯೆಗಳ ಬಗ್ಗೆ ಅರಿವು ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಪ್ರತಿ ವರ್ಷ ಮೇ 22 ರಂದು ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆಯ ದಿನವನ್ನು ಆಚರಿಸಲಾಗುತ್ತದೆ.

ಮೇ 23– ವಿಶ್ವ ಆಮೆ ದಿನ: ಅಳಿವಿನಂಚಿನಲ್ಲಿರುವ ಆಮೆಗಳನ್ನು ರಕ್ಷಿಸುವ ಸಲುವಾಗಿ ಮೇ 23 ರಂದು ವಿಶ್ವ ಆಮೆಗಳ ದಿನವನ್ನು ಆಚರಿಸಲಾಗುತ್ತದೆ.

ಮೇ 24: ರಾಷ್ಟ್ರೀಯ ಸಹೋದರರ ದಿನ: ಅಮೆರಿಕದಲ್ಲಿ ಹೆಚ್ಚು ಆಚರಣೆಯಲ್ಲಿರುವ ರಾಷ್ಟ್ರೀಯ ಸಹೋದರರ ದಿನವನ್ನು ಇತ್ತೀಚೆಗೆ ಬೇರೆ ಬೇರೆ ದೇಶಗಳಲ್ಲೂ ಆಚರಿಸುತ್ತಿದ್ದಾರೆ.

ಮೇ 30– ಅಂತರಾಷ್ಟ್ರೀಯ ಆಲೂಗಡ್ಡೆ ದಿನ: ಬಡವರಿಗೂ ಸುಲಭವಾಗಿ ಕೈಗುಟವ, ಬಡವನ ಹೊಟ್ಟೆ ತುಂಬಿಸುವ ತರಕಾರಿಯಾಗಿರುವ ಆಲೂಗೆಡ್ಡೆಯನ್ನು ಗೌರವಿಸುವ ದಿನ ಇದಾಗಿದೆ.

ಮೇ 31 – ರಾಷ್ಟ್ರೀಯ ತಂಬಾಕು ವಿರೋಧಿ ದಿನ: ತಾಂಬೂಕು ವಿರೋಧಿ ದಿನ ಅಥವಾ ವಿಶ್ವ ತಂಬಾಕು ರಹಿತ ದಿನವನ್ನು ಪ್ರತಿ ವರ್ಷ ಮೇ 31 ರಂದು ಆಚರಿಸಲಾಗುತ್ತದೆ. ಇದು ತಂಬಾಕಿನಿಂದಾಗಿ ಆರೋಗ್ಯ, ಸಮಾಜಕ್ಕೆ ಆಗುವ ಹಾನಿಯ ಬಗ್ಗೆ ಅರಿವು ಮೂಡಿಸುವ ದಿನವಾಗಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.