Viral Post: ಹೌದು, ಮಹಿಳೆಯರು ಯಾವಾಗ್ಲೂ ಸರಿ, ಅದಿಕ್ಕೆ ಅಲ್ವೇ ಈ ಶತಮಾನದ ಮಾದರಿ ಹೆಣ್ಣು ಅನ್ನೋ ಹಾಡು ಫೇಮಸ್ ಆಗಿರೋದು
Social Media Post: ಅನೇಕ ಸಾರ್ವಜನಿಗೆ ಶೌಚಾಲಯಗಳ ಮೇಲೆ Men To The Left Because Women are always right ಎಂಬ ವಾಕ್ಯಗಳನ್ನು ನಾವು ನೋಡಬಹುದು. ಮೇಲ್ನೋಟಕ್ಕೆ ಇದು ತಮಾಷೆ, ವ್ಯಂಗ್ಯ ಎನಿಸಿದರೂ ಮಹಿಳೆಯರ ವಿಚಾರದಲ್ಲಿ ಆ ಮಾತು ನಿಜ ಅನ್ನೋದು ಅಧ್ಯಯನದಿಂದ ಸಾಬೀತಾಗಿದೆ.
Social Media Post: ಶಾಪಿಂಗ್ ಮಾಲ್, ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಹೀಗೆ ಅನೇಕ ಸ್ಥಳಗಳಲ್ಲಿ ನೀವು ಪಬ್ಲಿಕ್ ಟಾಯ್ಲೆಟ್ ಬಳಸಿದಲ್ಲಿ ಅಲ್ಲಿರುವ ಬೋರ್ಡನ್ನು ಎಂದಾದರೂ ಗಮನಿಸಿದ್ದೀರಾ? ಅಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಟಾಯ್ಲೆಟ್ ಇದ್ದಲ್ಲಿ ಪುರುಷರ ಶೌಚಾಲಯ ಸದಾ ಎಡಭಾಗ ಹಾಗೂ ಮಹಿಳೆಯರ ಶೌಚಾಲಯ ಬಲಭಾಗದಲ್ಲಿರುತ್ತದೆ.
ಫೇಸ್‌ಬುಕ್ ಯೂಸರ್ ಹಂಚಿಕೊಂಡ ಪೋಸ್ಟ್
Men To The Left Because Women are always right ಎಂಬ ಬೋರ್ಡನ್ನು ಅನೇಕ ಕಡೆ ನಾವು ಕಾಣಬಹುದು. ಹಾಗಂತ ಸುಖಾ ಸುಮ್ಮನೆ ಬೋರ್ಡ್‌ನಲ್ಲಿ ಇಂತ ಪದಗಳನ್ನು ಬರೆಯೋಲ್ಲ ಬಿಡಿ. ಅಲ್ಲಿ ಬರೆದಿರುವಂತೆ ಮಹಿಳೆಯರು ಯಾವಾಗಲೂ ರೈಟ್ ( Right)ಅಲ್ವೇನ್ರಿ. ಇದು ಎಲ್ಲರೂ ಒಪ್ಪುವಂತ ಮಾತೇ ಬಿಡಿ. ಶುಭಮಂಗಳ ಚಿತ್ರದ ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು ಅನ್ನೋ ಹಾಡಿನ ಸಾಲುಗಳನ್ನು ಸಾಹಿತಿ ವಿಜಯ ನಾರಸಿಂಹ ಅವರೂ ಮಹಿಳೆಯರು ಯಾವಾಗಲೂ ಸರಿ ಅನ್ನೋ ಮಾತನ್ನು ಮನಸ್ಸಿನಲ್ಲಿಟ್ಟು ಬರೆದರೋ ಏನೋ. ಮಧು ವೈಎನ್ ಎಂಬ ಫೇಸ್‌ಬುಕ್ ಯೂಸರ್ ಒಬ್ಬರು ಬೆಂಗಳೂರು ಇಂದಿರಾ ನಗರದ ಬಿಗ್ ಪಿಚ್ಚರ್‌ನ ಶೌಚಾಲಯದ ಬಳಿ ಬರೆದಿರುವ ವಾಕ್ಯಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ಗೆ ಅನೇಕರು ನಾನಾ ಕಾಮೆಂಟ್ ಮಾಡಿದ್ದಾರೆ. ಇದು ಸ್ತ್ರೀ ದ್ವೇಷದ ವಾಕ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, 10 ಪುರುಷರಲ್ಲಿ 9 ಪುರುಷರು ನಮ್ಮ ಹೆಂಡತಿಯರು ಸರಿ ಎಂದು ಒಪ್ಪಿಕೊಳ್ಳುತ್ತಾರೆ ಎಂದು ಮತ್ತೊಬ್ಬರು ಫೇಸ್‌ಬುಕ್ ಯೂಸರ್ ಕಾಮೆಂಟ್ ಮಾಡಿದ್ದಾರೆ. ಬಹಳ ಬಿಗ್ ಪಿಚರ್ ದೃಷ್ಠಿಯಲ್ಲಿ ಇಟ್ಕೊಂಡು ಬರೆಸಿದ್ದಾರೆ ವ್ಯವಹಾರಸ್ಥರು, ಬುದ್ದಿವಂತರು ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮೇಲ್ನೋಟಕ್ಕೆ ವ್ಯಂಗ್ಯ ಎನಿಸಿದರೂ ಈ ಮಾತು ಸತ್ಯ
ಹೆಂಡತಿ ಮುನಿಸಿಕೊಂಡರೆ ಮನೆ ಅಲ್ಲೋಲ ಕಲ್ಲೋಲವಾಗಿ ಬಿಡುತ್ತೆ ಆದ್ರಿಂದ ಹೆಂಡತಿ ಏನೇ ಹೇಳಿದ್ರೂ ನೀನೇ ಸರಿ ಅಂತ ತಲೆ ಆಡಿಸಬೇಕು ಎಂದು ಕೆಲವರು ಆಡುವ ಮಾತುಗಳನ್ನು ನಾವು ಕೇಳಿದ್ದೇವೆ. ಎಷ್ಟೋ ಸಾಮಾಜಿಕ ಸಂವಾದಗಳಲ್ಲಿ ಕೂಡಾ ಇದರ ಬಗ್ಗೆ ಚರ್ಚೆಯಾಗಿದೆ. Women are always right ಎಂಬ ವಾಕ್ಯ ಮೇಲ್ನೋಟಕ್ಕೆ ಕ್ಲೀಷೆ ಅಥವಾ ವ್ಯಂಗ್ಯ ಹೇಳಿಕೆ ಎನಿಸಬಹುದು. ಆದರೆ ಆಳಕ್ಕೆ ಇಳಿದು ನೋಡಿದರೆ ಈ ಮಾತು ಎಷ್ಟು ಸತ್ಯ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ಪುರುಷರಿಗಿಂತ ಮಹಿಳೆಯರು ಹೆಚ್ಚು ಜವಾಬ್ದಾರಿ ಇರುವವರು, ಹೆಚ್ಚು ಚಾಲೆಂಜಿಂಗ್ ಹಾಗೂ ರಿಸ್ಕ್ ತೆಗೆದುಕೊಳ್ಳುವವರು ಅನ್ನೋದು ಅಧ್ಯಯನದಿಂದ ಕೂಡಾ ಸಾಬೀತಾಗಿದೆ.
ಓದಿನಲ್ಲೂ ಹುಡುಗಿಯರೇ ಮುಂದು
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಆದ್ಯತೆಗೆ ತಕ್ಕಂತೆ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೆಚ್ಚು ತಿಳುವಳಿಕೆ ಹೊಂದಿರುತ್ತಾರೆ. ಅಷ್ಟೇ ಅಲ್ಲ ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ EQ ಅನ್ನು ಹೊಂದಿರುತ್ತಾರೆ. ಅಲ್ಲದೆ ಮಹಿಳೆಯರು, ಪುರುಷರಿಗಿಂತ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಯ್ದುಕೊಳ್ಳುತ್ತಾರೆ, ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಐಸಿಎಸ್ಇ, ಐಎಸ್‌ಸಿ ಫಲಿತಾಂಶ ಪ್ರಕಟ, ಹುಡುಗಿಯರೇ ಮೇಲುಗೈ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಹೆಣ್ಮಕ್ಳೇ ಮೇಲುಗೈ ಎಂದು ಪತ್ರಿಕೆಯಲ್ಲಿ ಬರುವ ಸುದ್ದಿಗಳು ಕೂಡಾ Women are always right ಎಂಬುದನ್ನು ಸಾಬೀತು ಮಾಡುತ್ತದೆ. ಇದರ ಬಗ್ಗೆಯೂ ನಡೆಸಿದ ಸಮೀಕ್ಷೆ ಪ್ರಕಾರ ಹುಡುಗಿಯರು ಓದುವುದರಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಅನೇಕ ಗಂಡು ಮಕ್ಕಳು ಓದಲು ಇಷ್ಟಪಡುವುದಿಲ್ಲ ಎಂದು ತಿಳಿದುಬಂದಿದೆ.
ಮಹಿಳೆಯರಿಗಿದೆ ಹೆಚ್ಚು ಗ್ರಹಿಸುವ ಸಾಮರ್ಥ್ಯ
ಕೆನಡಾದ ನ್ಯೂ ಬ್ರನ್ಸ್ ವಿಕ್ ವಿಶ್ವವಿದ್ಯಾನಿಲಯದ ಮನಃಶಾಸ್ತ್ರಜ್ಞರ ಅಧ್ಯಯನದ ಪ್ರಕಾರ ಹುಡುಗಿಯರು ಓದು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸುವಲ್ಲಿ ಉತ್ತಮ ಸಾಮರ್ಥ್ಯ ಹೊಂದಿರುತ್ತಾರೆ. ಆದರೆ ಪುರುಷರು ಆ ರೀತಿ ಅಲ್ಲ, ಅವರು ಯಾವುದೇ ವಿಚಾರದ ಬಗ್ಗೆ ಗಮನಹರಿಸುವ ಸಾಮರ್ಥ್ಯ ಹೊಂದಿರುವುದಿಲ್ಲ ಆದ್ದರಿಂದಲೇ ಪುರುಷರು ಓದಿನಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೆ ಉಳಿಯುತ್ತಾರೆ. ಒಟ್ಟಿನಲ್ಲಿ ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತ ಅಪ್ಪು ಹಾಡಿರೋ ಹಾಡನ್ನೂ ಕೂಡಾ ಈ ಸಮಯದಲ್ಲಿ ನೆನಪಿಸಿಕೊಳ್ಳಲೇಬೇಕು ಬಿಡಿ. ಖಂಡಿತ Women are always right.