ಕನ್ನಡ ಸುದ್ದಿ  /  ಜೀವನಶೈಲಿ  /  Mental Health: ಕಾಡುವ ಒತ್ತಡ, ಖಿನ್ನತೆ, ಆಂತಕಕ್ಕೆ ಆಯುರ್ವೇದದಲ್ಲಿದೆ ಪರಿಹಾರ; ಮಾನಸಿಕ ಸ್ವಾಸ್ಥ್ಯ ಹೆಚ್ಚಿಸುವ ಆಯುರ್ವೇದ ಗಿಡಮೂಲಿಕೆಗಳಿವು

Mental Health: ಕಾಡುವ ಒತ್ತಡ, ಖಿನ್ನತೆ, ಆಂತಕಕ್ಕೆ ಆಯುರ್ವೇದದಲ್ಲಿದೆ ಪರಿಹಾರ; ಮಾನಸಿಕ ಸ್ವಾಸ್ಥ್ಯ ಹೆಚ್ಚಿಸುವ ಆಯುರ್ವೇದ ಗಿಡಮೂಲಿಕೆಗಳಿವು

Ayurvedic Herbs To Boost Mental Wellness: ಒತ್ತಡ, ಖಿನ್ನತೆ, ಆತಂಕ, ಭಯದಂತಹ ಮಾನಸಿಕ ಸಮಸ್ಯೆಗಳು ಇತ್ತೀಚೆಗೆ ಜನರನ್ನು ಹೆಚ್ಚು ಕಾಡುತ್ತಿವೆ. ಆದರೆ ಅದಕ್ಕಾಗಿ ಚಿಂತಿಸಬೇಕಿಲ್ಲ. ಕೆಲವೊಂದು ಗಿಡಮೂಲಿಕೆಗಳಲ್ಲಿ ಮಾನಸಿಕ ಸ್ವಾಸ್ಥ್ಯ ವೃದ್ಧಿಸುವ ಗುಣವಿರುತ್ತದೆ. ಅಂತಹ ಗಿಡಮೂಲಿಕೆಗಳು ಇಲ್ಲಿವೆ.

ಮಾನಸಿಕ ಸ್ವಾಸ್ಥ್ಯ ಹೆಚ್ಚಿಸಲು ನೆರವಾಗುವ ಗಿಡಮೂಲಿಕೆಗಳು
ಮಾನಸಿಕ ಸ್ವಾಸ್ಥ್ಯ ಹೆಚ್ಚಿಸಲು ನೆರವಾಗುವ ಗಿಡಮೂಲಿಕೆಗಳು

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಯುರ್ವೇದ ವೈದ್ಯ ಪದ್ಧತಿ ರೂಢಿಯಲ್ಲಿತ್ತು. ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಗಿಡಮೂಲಿಕೆಗಳನ್ನು ಬಳಸಲಾಗುತಿತ್ತು. ಇವು ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳನ್ನು ಒದಗಿಸುತ್ತದೆ. ಒಟ್ಟಾರೆ ಕ್ಷೇಮವನ್ನು ಸಾಧಿಸಲು ದೇಹ ಮತ್ತು ಮನಸ್ಸಿನೊಳಗೆ ಸಮತೋಲನವನ್ನು ಕಾಪಾಡಿಕೊಳ್ಳಲು ಗಿಡಮೂಲಿಕೆಗಳ ಸೇವನೆ ಬಹಳ ಮುಖ್ಯ. ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ನೆರವಾಗುವ ಕೆಲವು ಗಿಡಮೂಲಿಕೆಗಳು ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಯಾವ ರೀತಿ ಕೆಲಸ ಮಾಡುತ್ತವೆ, ಎಂಬುದರ ವಿವರ ಇಲ್ಲಿದೆ.

ಅಶ್ವಗಂಧ

ಅಶ್ವಗಂಧ ಒಂದು ಜನಪ್ರಿಯ ಆಯುರ್ವೇದ ಮೂಲಿಕೆಯಾಗಿದ್ದು ಇದನ್ನು ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಹಿಂದಿನಿಂದಲೂ ಬಳಸಲಾಗುತ್ತಿದೆ. ದೇಹವು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುವ ಅಡಾಪ್ಟೋಜೆನಿಕ್ ಅಂಶವನ್ನು ಇದು ಹೊಂದಿದೆ. ಅಶ್ವಗಂಧವು ಖಿನ್ನತೆ ಶಮನಕಾರಿಯಾಗಿದೆ ಮತ್ತು ಇದು ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೂಲಿಕೆಯು ಒತ್ತಡದ ಹಾರ್ಮೋನ್ ಕಾರ್ಟಿಸೋಲ್‌ನ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.

ಬ್ರಾಹ್ಮಿ

ಬ್ರಾಹ್ಮಿ ಗ್ರಹಣಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಒಟ್ಟಾರೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಇದು ಅತ್ಯುತ್ತಮ ಮೂಲಿಕೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಶಂಖಪುಷ್ಪ

ಶಂಖಪುಷ್ಪ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುವುದು ಮಾತ್ರವಲ್ಲ, ಮಾನಸಿಕ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಆತಂಕ ಮತ್ತು ನಿದ್ರಾಹೀನತೆಗೂ ಇದು ಪರಿಹಾರ ಒದಗಿಸುತ್ತದೆ. ಶಂಖಪುಷ್ಪವು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ. ಇದು ಬುದ್ಧಿಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. 

ಜಟಾಮಾನ್ಸಿ

ಜಟಮಾನ್ಸಿ ಒಂದು ಆಯುರ್ವೇದ ಮೂಲಿಕೆ. ಇದು ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಾನಸಿಕ ಒತ್ತಡ ನಿವಾರಿಸಲು ಸಹಕಾರಿಯಾಗಿದೆ. ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜಟಮಾನ್ಸಿ ಮೆದುಳಿನಲ್ಲಿರುವ ಕೆಲವು ನರಗಳ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಇದು ನ್ಯೂರೋಪ್ರೊಟೆಕ್ಟಿವ್ ಪರಿಣಾಮವನ್ನು ಹೊಂದಿದ್ದು, ಆಕ್ಸಿಡೇಟಿವ್ ಹಾನಿಯಿಂದ ಮೆದುಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ತುಳಸಿ

ತುಳಸಿಯನ್ನು ಪವಿತ್ರ ತುಳಸಿ ಎಂದೂ ಕರೆಯುತ್ತಾರೆ, ಇದು ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾದ ಪ್ರಬಲವಾದ ಆಯುರ್ವೇದ ಮೂಲಿಕೆಯಾಗಿದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸುತ್ತದೆ. ತುಳಸಿ ದೇಹದಲ್ಲಿನ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. 

ಗುಡುಚಿ (ಅಮೃತಬಳ್ಳಿ)

ಗುಡುಚಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿಂದ ಹೆಸರು ಪಡೆದಿದೆ. ಇದು ಮಾನಸಿಕ ಸ್ವಾಸ್ಥ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಗುಡುಚಿಯಲ್ಲಿ ಅಡಾಪ್ಟೋಜೆನ್ ಅಂಶವಿದೆ. ಇದು ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ದೇಹದ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.

ಒಂದೇಗಲ

ಒಂದೇಗಲ, ಉರುಗು, ಮಂಡೂಕಪರ್ಣಿ, ಗೋಟು ಕೋಲ ಹೀಗೆ ಹಲವು ಹೆಸರುಗಳಿಂದ ಇದನ್ನು ಕರೆಯುತ್ತಾರೆ. ನೆನಪಿನ ಶಕ್ತಿ ಹೆಚ್ಚಿಸಲು ಇದು ಬಹಳ ಉಪಯುಕ್ತ, ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಉತ್ತಮ. ಇದು ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಒಟ್ಟಾರೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಅತ್ಯುತ್ತಮ ಮೂಲಿಕೆಯಾಗಿದೆ.

ಆಯುರ್ವೇದ ಗಿಡಮೂಲಿಕೆಗಳು ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಪ್ರಯೋಜನಕಾರಿಯಾಗಬಲ್ಲವು. ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಅರ್ಹ ಆಯುರ್ವೇದ ವೈದ್ಯರ ಮಾರ್ಗದರ್ಶನದಲ್ಲಿ ಬಳಸಬೇಕು ಎಂಬುದನ್ನು ಮರೆಯಬಾರದು.